Sushmita Sen: 15 ವರ್ಷದ ಬಾಲಕನಿಂದ ಕಿರುಕುಳಕ್ಕೆ ಒಳಗಾಗಿದ್ರಾ ಸುಶ್ಮಿತಾ ಸೇನ್? ಏನಿದು ಶಾಕಿಂಗ್ ನ್ಯೂಸ್!

ಚಪಲ ತೀರಿಸಿಕೊಳ್ಳುವ ಪುಂಡರು, ಹೆಣ್ಣು ಮಕ್ಕಳಿಗೆ ಬಹಿರಂಗವಾಗಿ ಕೂಡ ಕಸಿವಿಸಿ ಉಂಟಾಗುವ ರೀತಿ ವರ್ತಿಸುತ್ತಾರೆ. ಇದೇ ರೀತಿಯ ಘಟನೆಯೊಂದು ಮಾಜಿ ಭುವನಸುಂದರಿಯ ಜೀವನದಲ್ಲೂ ಆಗಿತ್ತಂತೆ. ಅಚ್ಚರಿ ಎಂದರೆ ಇಲ್ಲಿ ಕಿರುಕುಳ ನೀಡಿದ್ದು ಕೇವಲ 15 ವರ್ಷದ ಬಾಲಕ ಎಂದು ಸುಶ್ಮಿತಾ ಸೇನ್ ಮುಕ್ತವಾಗಿ ಹೇಳಿದ್ದಾರೆ.

ಸುಶ್ಮಿತಾ ಸೇನ್

ಸುಶ್ಮಿತಾ ಸೇನ್

  • Share this:
ಭಾರತದ ಮೊಟ್ಟಮೊದಲ ಭುವನಸುಂದರಿ ಸುಶ್ಮಿತಾ ಸೇನ್ (Sushmita Sen) ಎಲ್ಲರಿಗೂ ಚಿರಪರಿಚಿತ. ತನ್ನ ಗ್ಲ್ಯಾಮರ್, ಲುಕ್, ನಟನೆ, ವೈಯಕ್ತಿಕ ಬದುಕು ಹೀಗೆ ಎಲ್ಲದಕ್ಕೂ ಹೆಸರುವಾಸಿಯಾದ ಜನಪ್ರಿಯ ನಟಿ (Actress) ತಮ್ಮ ಬದುಕಿನಲ್ಲಾದ ಒಂದು ಕಹಿ ಘಟನೆ ಬಗ್ಗೆ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಸುಶ್ಮಿತಾ ಸೇನ್ ಅವರು ಈಗೀಗ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳದಿದ್ದರೂ ಸಹ ಅವರ ವರ್ಚಸ್ಸು ಮಾತ್ರ ಹಾಗೆ ಇದೆ. ಕೇವಲ ಸಿನಿಮಾಗಳಿಗೆ (Cinema) ಒತ್ತು ಕೊಡದ ಸೇನ್ ಮಹಿಳೆಯರ ಸಮಾನ ಹಕ್ಕುಗಳ ಬಗ್ಗೆ ಮತ್ತು ಮಹಿಳೆ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆಯೂ ಧ್ವನಿ ಎತ್ತುತ್ತಲೇ ಇರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲೂ (Social Media) ಸಕ್ರೀಯವಾಗಿರುವ ಸುಶ್ಮಿತಾ ಸೇನ್ ಅಭಿಮಾನಿಗಳಿಗಾಗಿ ಹಲವಾರು ಫೋಟೋಗಳನ್ನು (Photo) ಪೋಸ್ಟ್ ಮಾಡುತ್ತಲೇ ಇರುತ್ತಾರೆ.

ಪುರುಷರಿಂದ ಕಿರುಕುಳಕ್ಕೊಳಗಾಗುವ ಪ್ರಕರಣಗಳು ಸಮಾಜದಲ್ಲಿ ಸ್ಟಾರ್ ಎಂದು ಬಿಂಬಿಸಿಕೊಂಡವರಿಗೂ ತಪ್ಪಿದ್ದಲ್ಲ ಎಂದು ಕಾಣಿಸುತ್ತದೆ. ಲೈಂಗಿಕ ಕಿರುಕುಳ ಸೇರಿ ಇತರೆ ಕಿರುಕುಳಗಳ ಬಗ್ಗೆ ಎಷ್ಟೇ ಪ್ರವಚನ ಮಾಡಿದರೂ ಸಹ ಕೆಲ ಗಂಡುಜಾತಿ ಬಗ್ಗುವಂತೆ ತೋರುವುದಿಲ್ಲ. ಚಪಲ ತೀರಿಸಿಕೊಳ್ಳಲು ಹೆಣ್ಣು ಮಕ್ಕಳಿಗೆ ಬಹಿರಂಗವಾಗಿ ಕೂಡ ಕಸಿವಿಸಿ ಉಂಟಾಗುವ ರೀತಿ ವರ್ತಿಸುತ್ತಾರೆ. ಇದೇ ರೀತಿಯ ಘಟನೆಯೊಂದು ಮಾಜಿ ಭುವನಸುಂದರಿಯ ಜೀವನದಲ್ಲೂ ಆಗಿತ್ತಂತೆ. ಅಚ್ಚರಿ ಎಂದರೆ ಇಲ್ಲಿ ಸೇನ್ ಗೆ ಕಿರುಕುಳ ನೀಡಿದ್ದು ಕೇವಲ 15 ವರ್ಷದ ಬಾಲಕ ಎಂದು ಆರ್ಯ ವೆಬ್ ಸೀರೀಸ್ ಖ್ಯಾತಿಯ ನಟಿ ಸುಶ್ಮಿತಾ ಸೇನ್ ಮುಕ್ತವಾಗಿ ಹೇಳಿದ್ದಾರೆ.

15 ವರ್ಷದ ಬಾಲಕನಿಂದ ಮಾಜಿ ಭುವನಸುಂದರಿಗೆ ಕಿರುಕುಳ
ಮಾಧ್ಯಮವೊಂದರೊಂದಿಗಿನ ಸಂವಾದದ ಸಮಯದಲ್ಲಿ, ಸುಶ್ಮಿತಾ ಸೇನ್ 15 ವರ್ಷದ ಹುಡುಗನಿಂದ ಕಿರುಕುಳಕ್ಕೊಳಗಾಗಿರುವ ಬಗ್ಗೆ ಮಾತನಾಡಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭವೊಂದರಲ್ಲಿ, ಹದಿಹರೆಯದ ಹುಡುಗನೊಬ್ಬ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದನು ಎಂದು ಸೇನ್ ಹೇಳಿದ್ದಾರೆ. ಹೀಗೆ ಯುವಕ ಅಸಭ್ಯವಾಗಿ ವರ್ತಿಸುವಾಗ ನಾನು ಹಿಂದಿನಿಂದ ಅವನ ಕೈಯನ್ನು ಹಿಡಿದುಕೊಂಡೆ ಮತ್ತು ನನಗೆ ಆ ಹುಡುಗನಿಗೆ ಅಂದಾಜು 15 ವರ್ಷ ಇರಬಹುದು ಎಂದು ಊಹಿಸಿದೆ. ಈ ಘಟನೆ ನನಗೆ ನಿಜಕ್ಕೂ ಆಘಾತ ಉಂಟು ಮಾಡಿತು ಎಂದಿದ್ದಾರೆ ಮಾಜಿ ಬಾಲಿವುಡ್ ನಟಿ ಸುಶ್ಮಿತಾ.

ಇದನ್ನೂ ಓದಿ: Sushmita Sen: ಅಕ್ಕನ ಪ್ರೇಮ್​ ಕಹಾನಿ ಬಗ್ಗೆ ತಮ್ಮನ ಶಾಕಿಂಗ್​ ಹೇಳಿಕೆ! ಹುಡುಗನ್ನ ಬಿಟ್ಟು ಅಂಕಲ್​ ಹಿಂದೆ ಯಾಕ್​ ಹೋದ್ರು ಅಂತ ಟ್ರೋಲ್

ಅಲ್ಲಿ ಸುಮಾರು ಪುರುಷರು ನೆರೆದಿದ್ದರಿಂದ ಆ ಹುಡುಗ ನನಗೆ ಕಂಡುಹಿಡಿಯಲು ಆಗುವುದಿಲ್ಲ ಎಂದು ಭಾವಿಸಿರಬೇಕು ಎಂದು ಸುಶ್ಮಿತಾ ಹೇಳಿದ್ದಾರೆ. ನಾನು ಅವನ ಕೈಯನ್ನು ಹಿಡಿದು ಅವನನ್ನು ಎಳೆದು ಮುಂದಕ್ಕೆ ಕರೆತಂದಾಗ ನನಗೆ ನಿಜಕ್ಕೂ ಅವನ ವಯಸ್ಸು ಅಚ್ಚರಿ ಉಂಟು ಮಾಡಿತು. ಅಂತಹ ತಪ್ಪು ನಡವಳಿಕೆಗಾಗಿ, ನಾನು ಆತನ ಮೇಲೆ ಸಾಕಷ್ಟು ಇತರ ಕ್ರಮಗಳನ್ನು ತೆಗೆದುಕೊಳ್ಳಬಹುದಿತ್ತು. ಆದರೆ ಆತ ಇನ್ನೂ 15 ವರ್ಷದ ಹುಡುಗನಾಗಿದ್ದರಿಂದ, ಮಾತಿನಲ್ಲಿ ಬುದ್ಧಿವಾದ ಹೇಳಿದೆ. ಬಾಲಕನಿಗೆ ಗದರಿ ವಿಷಯ ಕೇಳಿದಾಗ ಆತ ತನ್ನ ತಪ್ಪು ಒಪ್ಪಿಕೊಂಡ ಮತ್ತು ತನ್ನ ತಪ್ಪಿಗೆ ಕ್ಷಮೆ ಯಾಚಿಸಿದ ಎಂದು ತಮ್ಮ ಜೀವನದ ಕಹಿ ಘಟನೆ ಬಗ್ಗೆ ಮಾತನಾಡಿದ್ದಾರೆ ಸುಶ್ಮಿತಾ ಸೇನ್.

ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ ಲಲಿತ್ ಮೋದಿ ಜೊತೆಗಿನ ಸಂಬಂಧ
ಸದ್ಯ ಸಿನಿಮಾ ಬಿಟ್ಟು ವೈಯಕ್ತಿಕ ವಿಚಾರಗಳಿಂದ ಸುದ್ದಿಯಾಗುತ್ತಿರುವ ಸೇನ್ ಲಲಿತ್ ಮೋದಿ ಜೊತೆಗಿನ ಸಂಬಂಧದಲ್ಲಿ ತಳುಕು ಹಾಕಿಕೊಂಡಿದ್ದಾರೆ. ಮಾಜಿ ಗೆಳೆಯ ರೋಹ್ಮನ್ ಶಾಲ್ ಜೊತೆಗಿನ ಬ್ರೇಕ್ ಅಪ್ ಬಳಿಕ ಸುಶ್ಮಿತಾ ಸೇನ್ ಅವರು ಉದ್ಯಮಿ ಮತ್ತು ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಲಲಿತ್ ಮೋದಿ ಹಂಚಿಕೊಂಡ ಕೆಲವು ಫೋಟೋಗಳು ಈ ಎಲ್ಲಾ ಗಾಸಿಪ್ ಗೆ ತೆರೆ ಎಳೆದಿದ್ದು, ಇವರಿಬ್ಬರು ಶೀಘ್ರದಲ್ಲಿಯೇ ಮದುವೆ ಕೂಡ ಆಗಲಿದ್ದಾರೆ.

ಇದನ್ನೂ ಓದಿ:  Sushmita Sen: ಅಕ್ಕನ ಪ್ರೇಮ್​ ಕಹಾನಿ ಬಗ್ಗೆ ತಮ್ಮನ ಶಾಕಿಂಗ್​ ಹೇಳಿಕೆ! ಹುಡುಗನ್ನ ಬಿಟ್ಟು ಅಂಕಲ್​ ಹಿಂದೆ ಯಾಕ್​ ಹೋದ್ರು ಅಂತ ಟ್ರೋಲ್​

ಇನ್ನೂ ಸಿನಿಮಾ ವಿಚಾರಕ್ಕೆ ಬಂದರೆ ಸುಶ್ಮಿತಾ ಸೇನ್ ಕೊನೆಯದಾಗಿ ಆರ್ಯ 2 ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಈ ಸರಣಿಯ ಎರಡೂ ಸೀಸನ್ ಗಳೂ ಸೂಪರ್ ಹಿಟ್ ಆಗಿದ್ದವು. ಮತ್ತು ಸುಶ್ಮಿತಾ ವೃತ್ತಿ ಜೀವನಕ್ಕೆ ಮತ್ತೊಂದು ತಿರುವು ನೀಡಿತು.
Published by:Ashwini Prabhu
First published: