ಹುಚ್ಚು ಅಭಿಮಾನಿಯಿಂದ Jennifer Lopezರನ್ನು ರಕ್ಷಿಸಿದ Ben Affleck: ವಿಡಿಯೋ ವೈರಲ್

ಇತ್ತೀಚೆಗೆ ಇಂಟರ್ನೆಟ್‌ನಲ್ಲಿ ಒಂದು ವಿಡಿಯೋ ಹೆಚ್ಚು ವೈರಲ್ ಆಗುತ್ತಿದ್ದು, ಇದರಲ್ಲಿ ಬೆನ್, ಜೆನ್ನಿಫರ್‌ ಅವರನ್ನು ಅಭಿಮಾನಿಗಳಿಂದ ರಕ್ಷಿಸುತ್ತಿರುವುದನ್ನು ಕಾಣಬಹುದಾಗಿದೆ. ವೆನೀಸ್‌ ವಿಮಾನ ನಿಲ್ದಾಣದಲ್ಲಿ ಜೆನ್ನಿಫರ್‌ನೊಂದಿಗೆ ಬೆನ್ ಜೊತೆಯಾಗಿ ನಡೆಯುತ್ತಿದ್ದಾಗ ಹುಚ್ಚು ಅಭಿಮಾನಿಯೊಬ್ಬ ಜೆನ್ನಿಫರ್‌ ಅವರ ಜೊತೆ ಸೆಲ್ಫಿ ತೆಗೆದುಕೊಕೊಳ್ಳಲು ದುಂಬಾಲು ಬೀಳುತ್ತಾನೆ.

ಹಾಲಿವುಡ್ ಸೆಲೆಬ್ರಿಟಿಗಳಾದ ಬೆನ್ ಅಫ್ಲೆಕ್ಸ್​ ಹಾಗೂ ಜೆನ್ನಿಫರ್ ಲೊಪೆಜ್​

ಹಾಲಿವುಡ್ ಸೆಲೆಬ್ರಿಟಿಗಳಾದ ಬೆನ್ ಅಫ್ಲೆಕ್ಸ್​ ಹಾಗೂ ಜೆನ್ನಿಫರ್ ಲೊಪೆಜ್​

  • Share this:
ಗಾಯಕಿ, ನಟಿ, ಮಹಿಳಾ ಉದ್ಯಮಿ ಹೀಗೆ ಹಾಲಿವುಡ್ ಅಂಗಳದಲ್ಲಿ ಖ್ಯಾತಿ ಹೊಂದಿರುವ ಜೆನ್ನಿಫರ್ ಲೊಪೆಜ್  (Jennifer Lopez)ಹಾಗೂ ಬೆನ್ ಅಫ್ಲೆಕ್  (Ben Affleck ) ಪುನಃ ಒಂದಾಗಿರುವುದು ಮನರಂಜನಾ ಲೋಕದಲ್ಲಿ ಹೆಚ್ಚು ಸದ್ದುಮಾಡುತ್ತಿರುವ ಸುದ್ದಿಯಾಗಿದೆ ಎಂದೇ ಹೇಳಬಹುದು. ಜೆನ್ನಿಫರ್ ಹಾಗೂ ಬೆನ್ ಜೊತೆಯಾಗಿ ರೆಡ್ ಕಾರ್ಪೆಟ್‌ ಒಟ್ಟಿಗೆ ಹೆಜ್ಜೆ ಹಾಕುತ್ತಾ ಕಾಣಿಸಿಕೊಂಡರು. ರಿಡ್ಲಿ ಸ್ಕಾಟ್‌ನ ದ ಲಾಸ್ಟ್ ಡ್ಯುಯಲ್‌ನ ಸ್ಕ್ರೀನಿಂಗ್ ಕಾರ್ಯಕ್ರಮದಲ್ಲಿ ಜೆನ್ನಿಫರ್ ಹಾಗೂ ಬೆನ್ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಜೆನ್ನಿಫರ್‌ ಅವರಿಗೆ ಬೆನ್ ಕೇವಲ ಗೆಳೆಯ ಮಾತ್ರವಲ್ಲ ಆಕೆಯ ರಕ್ಷಣಾತ್ಮಕ ಸಂಗಾತಿ ಎಂಬುದು ಇದರಿಂದ ತಿಳಿಯುತ್ತದೆ.

ಇತ್ತೀಚೆಗೆ ಇಂಟರ್ನೆಟ್‌ನಲ್ಲಿ ಒಂದು ವಿಡಿಯೋ ಹೆಚ್ಚು ವೈರಲ್ ಆಗುತ್ತಿದ್ದು, ಇದರಲ್ಲಿ ಬೆನ್, ಜೆನ್ನಿಫರ್‌ ಅವರನ್ನು ಅಭಿಮಾನಿಗಳಿಂದ ರಕ್ಷಿಸುತ್ತಿರುವುದನ್ನು ಕಾಣಬಹುದಾಗಿದೆ. ವೆನೀಸ್‌ ವಿಮಾನ ನಿಲ್ದಾಣದಲ್ಲಿ ಜೆನ್ನಿಫರ್‌ನೊಂದಿಗೆ ಬೆನ್ ಜೊತೆಯಾಗಿ ನಡೆಯುತ್ತಿದ್ದಾಗ ಹುಚ್ಚು ಅಭಿಮಾನಿಯೊಬ್ಬ ಜೆನ್ನಿಫರ್‌ ಅವರ ಜೊತೆ ಸೆಲ್ಫಿ ತೆಗೆದುಕೊಕೊಳ್ಳಲು ದುಂಬಾಲು ಬೀಳುತ್ತಾನೆ.

Beau Ben Affleck Protects Jennifer Lopez from Enthusiastic Fan stg ae
ಹುಚ್ಚು ಅಭಿಮಾನಿಯನ್ನು ತಡೆದ ಹಾಲಿವುಡ್​ ನಟ ಬೆನ್ ಅಫ್ಲೆಕ್ಸ್​ 


ಈ ಸಮಯದಲ್ಲಿ ಜೆನ್ನಿಫರ್‌ ರಕ್ಷಣೆಗೆ ನಿಂತ ಬೆನ್ ಅಭಿಮಾನಿಯನ್ನು ದೂರ ತಳ್ಳುತ್ತಾರೆ. ಭದ್ರತಾ ಸಿಬ್ಬಂದಿ ಕೂಡಲೇ ಎಚ್ಚೆತ್ತು ಅಭಿಮಾನಿಗಳಿಂದ ಜೋಡಿಯನ್ನು ರಕ್ಷಿಸುತ್ತಾರೆ. ಬೆನ್ ಅವರು ಜೆನ್ನಿಫರ್ ಅವರ ಕೈ ಹಿಡಿದುಕೊಂಡು ನಡೆಸಿದ್ದು, ಈ ವಿಡಿಯೋ ವೈರಲ್ ಆಗಿದೆ. ಇನ್ನು ಬೆನ್​ ಅವರು ಮಾಡಿದ ಕೆಲಸ ನೋಡಿದ ಮೇಲೆ ಜೆನ್ನಿಫರ್‌ ಅವರ ವಿಷಯದಲ್ಲಿ ಅವರು ಎಷ್ಟು ರಕ್ಷಣಾತ್ಮಕವಾಗಿ ಇದ್ದಾರೆ ಎಂಬುದನ್ನು ಅರಿತುಕೊಳ್ಳಬಹುದಾಗಿದೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದ್ದು, ಬೆನ್- ಜೆನ್ನಿಫರ್ ನಡುವಿನ ಹಿಂದಿನ ಬಾಂಧವ್ಯಕ್ಕೆ ಪುಷ್ಟಿ ನೀಡಿದೆ. ಈ ವಿಡಿಯೋವನ್ನು ಎಎಲ್‌ ನ್ಯೂಸ್ ಟ್ವಿಟ್ಟರ್‌ನಲ್ಲಿ ಹರಿಬಿಟ್ಟಿದೆ.
ಇದನ್ನೂ ಓದಿ: Stop Hindi Imposition: ಹಿಂದಿ ಹೇರಿಕೆ ಸಲ್ಲದು ಎಂದ ನಟ ಧನಂಜಯ್​-ನಿರ್ದೇಶಕ ಸಿಂಪಲ್​ ಸುನಿ..!

ಜೆನ್ನಿಫರ್ ಹಾಗೂ ಬೆನ್ ಬರೋಬ್ಬರಿ 20ವರ್ಷಗಳ ಬಳಿಕ ಮತ್ತೆ ತೆರೆ ಮೇಲೆ ಜೊತೆಯಾಗಿ ನಟಿಸಲಿದ್ದು, ಅಭಿಮಾನಿಗಳು ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾತರತೆಯಿಂದ ನಿರೀಕ್ಷಿಸುತ್ತಿದ್ದಾರೆ. ಜೆನ್ನಿಫರ್ ಈ ಹಿಂದೆ ಮಾಜಿ ವೃತ್ತಿಪರ ಬೇಸ್‌ಬಾಲ್ ಶಾರ್ಟ್‌ಸ್ಟಾಪ್,  ಬ್ಯುಸಿನೆಸ್​ಮೆನ್​ ಅಲೆಕ್ಸ್ ರೋಡ್ರಿಗಜ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಈ ಜೋಡಿ ಏಪ್ರಿಲ್‌ನಲ್ಲಿ ಬ್ರೇಕಪ್ ಘೋಷಿಸಿದ್ದರು.

ಇದೇ ಸಮಯದಲ್ಲಿ ಜೆನ್ನಿಫರ್ ಅವರು ಬೆನ್‌ ಅಫ್ಲೆಕ್ಸ್​ ಅವರ ಜತೆ ಕಾಣಿಸಿಕೊಂಡಿದ್ದು ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ. ನಟ ಬೆನ್ ಅವರು ಜೆನ್ನಿಫರ್ ಗಾರ್ನರ್ ಅನ್ನು ವಿವಾಹವಾಗಿದ್ದು, 2015 ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಇನ್ನು ನಟಿ ಜೆನ್ನಿಫರ್ ಅವರು ಗಾಯಕ ಮಾರ್ಕ್ ಆ್ಯಂಟನಿಯನ್ನು ವಿವಾಹವಾಗಿ 2014ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಇವರು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಜೆನ್ನಿಫರ್ ಹಾಗೂ ಬೆನ್ 2001ರಲ್ಲಿ ಗಿಗ್ಲಿ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಈ ಸಮಯದಲ್ಲಿಯೇ ಜೆನ್ನಿಫರ್ ಕ್ರಿಸ್ ಜಡ್ ಅನ್ನು ವಿವಾಹವಾಗಿದ್ದರೂ, ಬೆನ್ ಹಾಗೂ ಜೆನ್ನಿಫರ್ ನಡುವೆ ಏನೋ ಇದೆ ಎಂಬ ಸುದ್ದಿ ಹರಿದಾಡುತ್ತಿತ್ತು.

ಇದನ್ನೂ ಓದಿ: Defamation Case: ಬಂಧನದ ಭೀತಿಯಲ್ಲಿ ಬಾಲಿವುಡ್ ​ನಟಿ Kangana Ranaut

ನಂತರ ಕೂಡ ಹಲವಾರು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ಜೋಡಿಗಳು ಜೆನ್ನಿಫರ್‌ನ ಮ್ಯೂಸಿಕ್ ಆಲ್ಬಂ ಲಾಂಚ್‌ನಲ್ಲೂ ಕಾಣಿಸಿಕೊಂಡಿದ್ದರು. ಜೆನ್ನಿಫರ್ ಹಾಗೂ ಬೆನ್ ವಿವಾಹವಾಗುವುದಾಗಿ ಪ್ರಕಟಿಸಿದ್ದರೂ ಕೊನೆಗೆ ಇಬ್ಬರೂ ಬ್ರೇಕಪ್ ಹಾದಿ ತುಳಿದರು ಹಾಗೂ ಬೇರೆ ಬೇರೆ ನಟ ನಟಿಯರನ್ನು ವಿವಾಹವಾದರು.
Published by:Anitha E
First published: