Beats Of Radhe Shyam: ಪ್ರಭಾಸ್​ ಹುಟ್ಟುಹಬ್ಬಕ್ಕೆ ಭರ್ಜರಿ ಉಡುಗೊರೆ ಕೊಟ್ಟ ರಾಧೆ ಶ್ಯಾಮ್​ ಚಿತ್ರತಂಡ: ಇಲ್ಲಿದೆ ವಿಶೇಷ ವಿಡಿಯೋ..!

Happy Birthday Prabhas: ಚಲಿಸುತ್ತಿರುವ ರೈಲಿನಲ್ಲಿ ಪೂಜಾ ಹೆಗ್ಡೆ ಹಾಗೂ ಪ್ರಭಾಸ್​ ಅವರ ರೊಮ್ಯಾಂಟಿಕ್​ ಪೋಸ್ ಜೊತೆ ಇತರೆ ಹಳೇ ಲವ್​ ಸ್ಟೋರಿಗಳ ಕತೆಯೂ ಇದೆ. ಇನ್ನು ಜಸ್ಟಿನ್​ ಪ್ರಭಾಕರ್​ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಇದು ಪ್ರಭಾಸ್​ ಅಭಿನಯದ 20ನೇ ಚಿತ್ರವಾಗಿದ್ದು, ಪ್ರಭಾಸ್​ ವಿಕ್ರಮಾದಿತ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಾಧೆ ಶ್ಯಾಮ್​ ಸಿನಿಮಾದ ಹೊಸ ಪೋಸ್ಟರ್​

ರಾಧೆ ಶ್ಯಾಮ್​ ಸಿನಿಮಾದ ಹೊಸ ಪೋಸ್ಟರ್​

  • Share this:
ಟಾಲಿವುಡ್​ ಡಾರ್ಲಿಂಗ್ ಪ್ರಭಾಸ್​ ಇಂದು 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪ್ರಭಸ್​ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಇನ್ನು ಸೆಲೆಬ್ರಿಟಿಗಳೂ ಪ್ರಭಾಸ್​ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಿದ್ದಾರೆ. ಇದರ ಜೊತೆಗೆ ಪ್ರಭಾಸ್​ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ರಾಧೆ ಶ್ಯಾಮ್​ ತಂಡದ ಕಡೆಯಿಂದ ಎರಡು ದಿನ ಮೊದಲೇ ಬರ್ತ್​ ಡೇ ಗಿಫ್ಟ್​ ಆಗಿ ಹೊಸ ಪೋಸ್ಟರ್​ ರಿಲೀಸ್ ಮಾಡಲಾಗಿದೆ. ಇದರ ಜೊತೆಗೆ ಹುಟ್ಟುಹಬ್ಬದ ದಿನವಾದ ಇಂದು ಸಹ ಭರ್ಜರಿ ಸರ್ಪ್ರೈಸ್​ ಪ್ಲಾನ್​ ಮಾಡಿದೆ ಈ ಚಿತ್ರತಂಡ. ನಿರ್ದೇಶಕ ರಾಧಾಕೃಷ್ಣ ಕುಮಾರ್​ ಅವರ ಚಿತ್ರತಂಡ ಪ್ರಕಟಿಸಿದಂತೆಯೇ ಹೇಳಿದ ಸಮಯಕ್ಕೆ ಸರಿಯಾಗಿ ಡಾರ್ಲಿಂಗ್​ ಪ್ರಭಾಸ್​ಗೆ ಉಡುಗೊರೆ ನೀಡಿದ್ದಾರೆ. ಇನ್ನು ಪ್ರಭಾಸ್​ ಅವರ ದೊಡ್ಡಮ್ಮಸಹ ಪ್ರಭಾಸ್​ ಅವರ ಬಾಲ್ಯದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ನಟನಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. 

ಇಂದು ಸರಿಯಾಗಿ 12-02 ನಿಮಿಷಕ್ಕೆ ರಾಧೆ ಶ್ಯಾಮ್​ ಚಿತ್ರತಂಡ ಈ ವಿಶೇಷ ವಿಡಿಯೋವನ್ನು ರಿಲೀಸ್ ಮಾಡಿದೆ. ಇದರಲ್ಲಿ ಸಿನಿಮಾದ ಟೈಟಲ್​ ಹಾಡಿನ ಆಡಿಯೋ ಜೊತೆಗೆ ಪುಟ್ಟ ವಿಡಿಯೋ ಸಹ ಇದೆ.ಇದರಲ್ಲಿ ಸಿನಿಮಾ ಕಥೆ ಕುರಿತಂತೆ ಸಣ್ಣ ಸುಳಿವು ಸಹ ಸಿಕ್ಕಿದೆ. ಚಲಿಸುತ್ತಿರುವ ರೈಲಿನಲ್ಲಿ ಪೂಜಾ ಹೆಗ್ಡೆ ಹಾಗೂ ಪ್ರಭಾಸ್​ ಅವರ ರೊಮ್ಯಾಂಟಿಕ್​ ಪೋಸ್ ಸಹ ಇದೆ. ಇನ್ನು ಜಸ್ಟಿನ್​ ಪ್ರಭಾಕರ್​ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಇದು ಪ್ರಭಾಸ್​ ಅಭಿನಯದ 20ನೇ ಚಿತ್ರವಾಗಿದ್ದು, ಪ್ರಭಾಸ್​ ವಿಕ್ರಮಾದಿತ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಈ ವಿಶೇಷ ವಿಡಿಯೋದಲ್ಲಿ ರೊಮಿಯೋ ಜೂಲಿಯೇಟ್​, ಸಲೀಂ ಅನಾರ್ಕಲಿ, ದೇವದಾಸ್​ ಪಾರ್ವತಿಯ ಪ್ರೇಮಕತೆಯ ನಂತರ ಬರುವುದೇ ಪ್ರೇರಣಾ ಹಾಗೂ ವಿಕ್ರಮಾಧಿತ್ಯನ ರಾಧೆಶ್ಯಾಮ್​ ಪ್ರೇಮಕತೆಯ ಸ್ಟಿಲ್​. ಇದು ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತಿದೆ.
Published by:Anitha E
First published: