ಕ್ರಿಸ್ಮಸ್ (Christmas) ಬರುತ್ತಿದೆ ಮತ್ತು ಮುಂದಿನ ವಾರಗಳಲ್ಲಿ ನೆಟ್ಫ್ಲಿಕ್ಸ್ (Netflix) ನಮಗೆ ಅನೇಕ ಭರವಸೆಯ ಚಲನಚಿತ್ರಗಳನ್ನು ಬಿಡುಗಡೆ ಮಾಡುತ್ತಿದೆ. ಯುಕೆಯಲ್ಲಿ (UK) ಗಿಲ್ಲೆರ್ಮೊ ಡೆಲ್ ಟೊರೊ ಅವರ ಪಿನೋಚ್ಚಿಯೋ, ಗ್ಲಾಸ್ ಆನಿಯನ್, ಎ ನೈವ್ಸ್ ಔಟ್ ಮಿಸ್ಟರಿ. ನೋಹ್ ಸೆಂಟಿನಿಯೊ ನಟಿಸಿದ ಹೊಸ ಬೇಹುಗಾರಿಕೆ ಥ್ರಿಲ್ಲರ್ ದಿ ರಿಕ್ರೂಟ್ ಅಥವಾ ದಿ ವಿಚರ್, ಬ್ಲಡ್ ಒರಿಜಿನ್, ಜನಪ್ರಿಯ ಫ್ಯಾಂಟಸಿ ಸರಣಿ ಬಿಡುಗಡೆ ಆಗಲಿದೆ. ಬೆಂಗಳೂರಿನ ಭಯಾನಕ ಸ್ಟೋರಿ ಆಧಾರಿತ ಚಿತ್ರ ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿದೆ. ಬೀಸ್ಟ್ ಆಫ್ ಬೆಂಗಳೂರು (Beast of Bengaluru) ಎಂಬ ಕಥೆ ನೆಟ್ಫ್ಲಿಕ್ಸ್ ನಲ್ಲಿ ಬರಲಿದೆ. ಇದು ಬೆಂಗಳೂರಿನಲ್ಲಿ ಇರುವ ಭಯಾನಕ ವ್ಯಕ್ತಿತ್ವ ಹೊಂದಿರು ವ್ಯಕ್ತಿಯ ಕಥೆ ಆಗಿದೆ.
ಬೀಸ್ಟ್ ಆಫ್ ಬೆಂಗಳೂರು ಸ್ಟೋರಿ
ಒಬ್ಬ ವಿಚಿತ್ರ ಅಸಾಮಿಯ ಸ್ಟೋರಿ ಇದು. ಆತ ಈಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ. ದೊಡ್ಡವರರು ಹೇಳೋ ಪ್ರಕಾರ ಅವನು ಒಂಟಿ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡ್ತಾನಂತೆ. ಅವರು ಹೋಗ್ತಿದ್ರೆ ಹೊಂಚು ಹಾಕಿ ಕಿಡ್ನ್ಯಾಪ್ ಮಾಡ್ತಾನಂತೆ. ಕೊಲೆ ಮಾಡ್ತಾನಂತೆ. ಮೇನ್ ಡೋರ್ ಗೆ ಗ್ರಿಲ್ಸ್ ಹಾಕೋದು ಬಂದಿದ್ದೇ ಅವನಿಂದಂತೆ.
ಡೇಂಜರ್ ಬೆಂಗಳೂರು
ಭಯನಾಕ ವ್ಯಕ್ತಿಯಿಂದ ಬೆಂಗಳೂರ ಸಡನ್ ಆಗಿ ಡೇಂಜರ್ ರೀತಿ ಕಾಣಲು ಶುರು ಆಯ್ತು. ಹೆಣ್ಣು ಮಕ್ಕಳು ಒಬ್ಬರೇ ಓಡಾಡಲು ಭಯ ಪಡುವ ಸ್ಥಿತಿ ಎದುರಾಯ್ತು. ಅವನೊಬ್ಬ ವಿಕೃತ ಕಾಮಿ. ಅವನು ಮನೆಗೆ ಪೊಲೀಸರು ಎಂಟ್ರಿ ಕೊಟ್ಟಾಗ ಶಾಕ್ ಆಗಿತ್ತು. ಯಾಕಂದ್ರೆ ಅವನ ರೂಮ್ ನಲ್ಲಿ ಬರೀ ಹೆಣ್ಣು ಮಕ್ಕಳ ಒಳ ಉಡುಪು ಇದ್ದವು.
ಇದನ್ನೂ ಓದಿ: Kannadathi: ನೀರಿಗೆ ಬಿದ್ದಿದ್ಯಾಕೆ ಭುವಿ? ಹೀರೋ ಪತ್ನಿಗೆ ಏನಾಯ್ತು?
ರೇಪ್ ಅಂಡ ಮರ್ಡರ್
ಈ ಭಯನಾಕ ವ್ಯಕ್ತಿ ಹೆಣ್ಣು ಮಕ್ಕಳನ್ನು ಕಿಡ್ನ್ಯಾಪ್ ಮಾಡಿ, ರೇಪ್ ಅಂಡ್ ಮರ್ಡರ್ ಮಾಡ್ತಾನಂತೆ. ಎಷ್ಟೋ ಬಾರಿ ಇವನು ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದಾನೆ. ಇವನನ್ನು ಹಿಡಿಯಲು ಪೊಲೀಸರು ಹರಸಾಹಸ ಅಷ್ಟಿಷ್ಟಲ್ಲ. ಆದ್ರೂ ಈತ ಸಿಗಲ್ಲ. ಸಿಕ್ಕಿ ಹಾಕಿಕೊಂಡ್ರೆ ಹೇಗೆ ಎಸ್ಕೇಪ್ ಆಗೋದು. ಮುಂದಿನ ಪ್ಲ್ಯಾನ್ ಏನು ಎನ್ನುವುದು ಇವನ ತಲೆಯಲ್ಲಿ ಓಡ್ತಾ ಇರುತ್ತೆ.
View this post on Instagram
ರಾಕ್ಷಸ ಇವನು
ಬೀಸ್ಟ್ ಆಫ್ ಬೆಂಗಳೂರು ನಲ್ಲಿ ಬರುವ ವ್ಯಕ್ತಿ ರಾಕ್ಷಸ ಗುಣ ಹೊಂದಿರುವವನು. ಮೃಗದ ರೀತಿ ವರ್ತನೆ ಮಾಡ್ತಾನೆ. ಇವನ ಕೈಗೆ ಸಿಕ್ಕಿ ಹಾಕಿಕೊಂಡ್ರೆ ಕಥೆ ಗೋವಿಂದಾ. ಪೊಲೀಸರು ಅವರಿಗೆ ಬೇಕಾಗುವಷ್ಟು, ಸಿಕ್ಕ ಸಾಕ್ಷಿ ಬರೆದುಕೊಂಡಿರುತ್ತಾರೆ. ಆದ್ರೆ ತಲೆ ಕೆಡಿಸಿಕೊಂಡು ಹಿಡಿಯಲ್ಲ.
ಇದನ್ನೂ ಓದಿ: Kannadathi Ranjani Raghavan: 'ಕತೆ ಡಬ್ಬಿ' ಬಳಿಕ ಕಾದಂಬರಿ ಬರೆದ ಕನ್ನಡತಿ, 'ಸ್ವೈಪ್ ರೈಟ್' ಎಂದ ರಂಜನಿ ರಾಘವನ್
ಡಿಸೆಂಬರ್ 16 ರಂದು ಬಿಡುಗಡೆ
ಬೆಂಗಳೂರಿನ ಭಯಾನಕ ಸ್ಟೋರಿ ಆಧಾರಿತ ಚಿತ್ರ ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿದೆ. ನೆಟ್ಫ್ಲಿಕ್ಸ್ ನಲ್ಲಿ ಡಿಸೆಂಬರ್ 16 ರಂದು ಬೀಸ್ಟ್ ಆಫ್ ಬೆಂಗಳೂರು ಬಿಡುಗಡೆ ಆಗಲಿದೆ. ಒಬ್ಬ ವಿಚಿತ್ರ ಅಸಾಮಿಯ ಸ್ಟೋರಿ ಇದು. ಮಿಸ್ ಮಾಡದೇ ರೋಚಕ ತಿರುವು, ಬೆಂಗಳೂರಿನ ಭಯಾನಕ ಸ್ಟೋರಿ ನೋಡಿ. ಪ್ರೋಮೋ ನೋಡ್ತಿದ್ರೆ ಭಯ ಆಗುತ್ತೆ. ಅದಕ್ಕೆ ಪೂರ ಸಿನಿಮಾ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ