Beast Movie: ರೋಲ್ಸ್ ರಾಯ್ಸ್ ಕಾರಿನಲ್ಲಿ 'ಬೀಸ್ಟ್' ತಂಡದ ಜಾಲಿ ರೈಡ್! ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದರಲ್ಲಿ ದಳಪತಿ ವಿಜಯ್ ಅವರು ಖುದ್ದು ತಾವೇ ಅವರ ರೋಲ್ಸ್ ರಾಯ್ಸ್ ಕಾರನ್ನು ಚಾಲನೆ ಮಾಡುತ್ತಿದ್ದರೆ, ಸತೀಶ್, ಪೂಜಾ, ನೆಲ್ಸನ್ ಮತ್ತು ಅಪರ್ಣಾ ದಾಸ್ ಅವರೊಂದಿಗೆ ಕಾರಿನಲ್ಲಿ ಕುಳಿತಿರುವುದನ್ನು ನಾವು ನೋಡಬಹುದು.

ಬೀಸ್ಟ್ ತಂಡದ ಜಾಲಿ ರೈಡ್

ಬೀಸ್ಟ್ ತಂಡದ ಜಾಲಿ ರೈಡ್

 • Share this:
  ತಮಿಳು ಚಿತ್ರರಂಗದ (Tamil Film Industry) ಸೂಪರ್​ ಸ್ಟಾರ್ (Super Star) ದಳಪತಿ ವಿಜಯ್ (Vijay Thalapathy) ಅಭಿನಯದ ಬಹು ನಿರೀಕ್ಷಿತ ಸಿನಿಮಾ ಎಂದರೆ ಅದು ‘ಬೀಸ್ಟ್’ (Beast) ಅಂತ ಎಲ್ಲರಿಗೂ ಗೊತ್ತಿದೆ. ಅದರಲ್ಲೂ ನಟ ವಿಜಯ್ ಅವರ ಸಿನಿಮಾ (Movie) ಬಿಡುಗಡೆ ಎಂದರೆ ಅದು ಅವರ ಅಭಿಮಾನಿಗಳಿಗೆ (Fans) ಒಂದು ಹಬ್ಬವಿದ್ದಂತೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ದಳಪತಿ ವಿಜಯ್ ಅವರಿಗೆ ಯಾವುದೇ ರೀತಿಯ ಪರಿಚಯದ ಅಗತ್ಯವಿಲ್ಲ, ಏಕೆಂದರೆ ಸಿನಿಪ್ರಿಯರನ್ನು ತನ್ನ ಅದ್ಭುತ ನಟನಾ ಕೌಶಲ್ಯಗಳಿಂದ ಮಂತ್ರ ಮುಗ್ಧರನ್ನಾಗಿಸುವ ನಟ. ಇವರು ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋವನ್ನು(Video)  ಹಂಚಿಕೊಂಡಿದ್ದು, ಅವರ ಅಭಿಮಾನಿಗಳು ಆ ವಿಡಿಯೋ ನೋಡಿ ಫುಲ್ ಖುಷ್ ಆಗಿದ್ದಾರೆ.

  ರೋಲ್ಸ್ ರಾಯ್ಸ್ ಕಾರಿನಲ್ಲಿ ಜಾಲಿ ರೈಡ್

  ಈ ವಿಡಿಯೋದಲ್ಲಿ ನಟ ವಿಜಯ್ ಅವರು ನಟಿ ಪೂಜಾ ಹೆಗ್ಡೆ, ನೆಲ್ಸನ್ ದಿಲೀಪ್ ಕುಮಾರ್, ಅಪರ್ಣಾ ದಾಸ್ ಮತ್ತು ಸತೀಶ್ ಅವರನ್ನು ತಮ್ಮ ರೋಲ್ಸ್ ರಾಯ್ಸ್ ಕಾರಿನಲ್ಲಿ ಕೂರಿಸಿಕೊಂಡು ಕರೆದೊಯ್ದದ್ದನ್ನು ನಾವು ನೋಡಬಹುದಾಗಿದೆ. ಈಗ ಈ ವಿಡಿಯೋ ಅಂತರ್ಜಾಲದಲ್ಲಿ ಜೋರಾಗಿಯೇ ಹರಿದಾಡುತ್ತಿದೆ.

  ತಾವೇ ಕಾರು ಓಡಿಸಿದ ವಿಜಯ್

  ಇದರಲ್ಲಿ ದಳಪತಿ ವಿಜಯ್ ಅವರು ಖುದ್ದು ತಾವೇ ಅವರ ರೋಲ್ಸ್ ರಾಯ್ಸ್ ಕಾರನ್ನು ಚಾಲನೆ ಮಾಡುತ್ತಿದ್ದರೆ, ಸತೀಶ್, ಪೂಜಾ, ನೆಲ್ಸನ್ ಮತ್ತು ಅಪರ್ಣಾ ದಾಸ್ ಅವರೊಂದಿಗೆ ಕಾರಿನಲ್ಲಿ ಕುಳಿತಿರುವುದನ್ನು ನಾವು ನೋಡಬಹುದು. ಸತೀಶ್ ಅವರು ಮುಂದಿನ ಸೀಟಿನಲ್ಲಿ ಕುಳಿತುಕೊಂಡು ವೀಡಿಯೋ ರೆಕಾರ್ಡ್ ಮಾಡುತ್ತಿರುವುದು ಕಂಡು ಬಂದಿದೆ ಮತ್ತು ದಳಪತಿ ವಿಜಯ್ ಅವರನ್ನು ಮಾಲೀಕರು ಎಂದು ಪರಿಚಯಿಸಿದರು. ಆದರೆ ಅಭಿಮಾನಿಗಳ ಗಮನ ಸೆಳೆದದ್ದು ಮಾತ್ರ ಅವರ ನೆಚ್ಚಿನ ನಟ ವಿಜಯ್ ಕ್ಯೂಟ್ ಆಗಿ ನಗುತ್ತಾ ಕೈ ಬೀಸಿದ್ದು ಎಂದು ಹೇಳಬಹುದು.

  ಇದನ್ನೂ ಓದಿ: Anupama Gowda: 'ನಮ್ಮಮ್ಮ ಸೂಪರ್‌ ಸ್ಟಾರ್' ಮುಗೀತಿದ್ದಂತೆ ಕೂದಲಿಗೆ ಕತ್ತರಿ ಹಾಕಿದ ಅನುಪಮಾ! 'ಅಕ್ಕ' ಇದ್ಯಾಕಕ್ಕಾ ಅಂತ ಕೇಳ್ತಿದ್ದಾರೆ ಫ್ಯಾನ್ಸ್

   ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ

  ಈ ವಿಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿಯೂ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ರೋಲ್ಸ್ ರಾಯ್ಸ್ ಘೋಸ್ಟ್, ಮಿನಿ ಕೂಪರ್‌ನಿಂದ ಹಿಡಿದು ಆಡಿ ಎ8 ರವರೆಗೆ ಅನೇಕ ಕಾರುಗಳ ಒಂದು ಸಂಗ್ರಹವನ್ನು ವಿಜಯ್ ಹೊಂದಿದ್ದಾರೆ. ಈ 6.6 ಲೀಟರ್ ಟ್ವಿನ್ ಟರ್ಬೋ ವಿ12 ಎಂಜಿನ್ ಹೊಂದಿರುವ ರೋಲ್ಸ್ ರಾಯ್ಸ್ ಕಾರಿನ ಬೆಲೆ ಎಷ್ಟು ಅಂತ ನೀವು ತಿಳಿದುಕೊಂಡರೆ ಬೆಚ್ಚಿ ಬೀಳುವುದಂತೂ ಗ್ಯಾರಂಟಿ. ಈ ರೋಲ್ಸ್ ರಾಯ್ಸ್ ಕಾರಿನ ಬೆಲೆ 6.95 ರಿಂದ 7.95 ಕೋಟಿ ರೂಪಾಯಿ ಅಂತೆ.  ಏಪ್ರಿಲ್ 13ರಂದು ಬೀಸ್ಟ್ ರಿಲೀಸ್

  ಇನ್ನು ವಿಜಯ್ ಅಭಿನಯದ ‘ಬೀಸ್ಟ್’ ಚಿತ್ರದ ಬಗ್ಗೆ ಹೇಳಬೇಕು ಎಂದರೆ ಅದು ಏಪ್ರಿಲ್ 13 ರಂದು ದೇಶಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ನೆಲ್ಸನ್ ನಿರ್ದೇಶನದ ಸನ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರದಲ್ಲಿ ವಿಜಯ್ ಮತ್ತು ಪೂಜಾ ಹೆಗ್ಡೆ ಮುಖ್ಯವಾದ ಪಾತ್ರಗಳಲ್ಲಿ ನಟಿಸಿದ್ದರೆ, ಸೆಲ್ವ ರಾಘವನ್, ಯೋಗಿ ಬಾಬು ಮತ್ತು ರೆಡಿನ್ ಕಿಂಗ್ಸ್ ಲೇ ಅವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಭಯೋತ್ಪಾದಕರು ಶಾಪಿಂಗ್ ಮಾಲ್‌ನಲ್ಲಿ ಒತ್ತೆಯಾಳುಗಳಾಗಿ ಇರಿಸಿಕೊಂಡಿರುವ ಜನರನ್ನು ರಕ್ಷಿಸಲು ಬರುವ ಗೂಢಚಾರನ ಸುತ್ತಲೂ ಹೆಣೆದಿರುವ ಕಥೆಯಾಗಿದೆ ಎಂದು ಹೇಳಲಾಗುತ್ತಿದೆ.

  ಇದನ್ನೂ ಓದಿ: Weekend Planner: ಥಿಯೇಟರ್ ನಲ್ಲಿ ಮಿಸ್ ಮಾಡ್ಕೊಂಡವ್ರು ಟಿವಿಯಲ್ಲೇ ಜೇಮ್ಸ್ ನೋಡಿ, ಉಳಿದ ಚಿತ್ರಗಳ ಲಿಸ್ಟ್ ಇಲ್ಲಿದೆ

  ಕುವೈತ್ ಮತ್ತು ಕತಾರ್‌ನಲ್ಲಿ ಬೀಸ್ಟ್  ಬ್ಯಾನ್!

  ಈ ಚಿತ್ರವು ಒತ್ತೆಯಾಳುಗಳ ಕಥೆಯನ್ನು ಹೊಂದಿದ್ದು, ಇದರಲ್ಲಿ ಸ್ಟಾರ್ ಹೀರೋ ವಿಜಯ್ ರಾ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ, ಮತ್ತು ಚಿತ್ರವು ಇಸ್ಲಾಮಿಕ್ ಭಯೋತ್ಪಾದನೆಯ ಸುತ್ತ ಸುತ್ತುತ್ತದೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕಾಗಿ ಈ ಹಿಂದೆ ಕುವೈತ್‌ನಲ್ಲಿ ಈ ಚಿತ್ರವನ್ನು ನಿಷೇಧಿಸಲಾಗಿತ್ತು, ಈಗ ಅದನ್ನು ಕತಾರ್‌ನಲ್ಲಿ ನಿಷೇಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಎಷ್ಟರ ಮಟ್ಟಿಗೆ ಹಣ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
  Published by:Annappa Achari
  First published: