KGF vs Beast: ಸ್ಟಾರ್​​​ ವಾರ್​ ಯಾಕೆ, ನಾವೂ ಒಂದೇ ಇಲ್ಲಿ ಎಂಬ ಸಂದೇಶ! ಕೆಜಿಎಫ್​ 2 vs ಬೀಸ್ಟ್​​ ಗುದ್ದಾಟ ಅಂತ್ಯ

ಬೀಸ್ಟ್​ ಸಿನಿಮಾ ಏಪ್ರಿಲ್​ 13ಕ್ಕೆ ರಿಲೀಸ್​ ಆಗುತ್ತಿದೆ. ಈ ಬಗ್ಗೆ ಈಗಾಗಲೇ ಅಭಿಮಾನಿಗಳು ನಡುವೆ ವಾರ್​ ಶುರುವಾಗಿದೆ. ಈ ಬಗ್ಗೆ ಯಶ್​ ಕೆಜಿಎಫ 2 ಟ್ರೈಲರ್​ ರಿಲೀಸ್ ಸಂದರ್ಭದಲ್ಲಿ ಬೀಸ್ಟ್​ ಸಿನಿಮಾ ಬಗ್ಗೆ ಮಾತನಾಡಿದ್ದರು. ಇದೀಗ ಈ ಬೀಸ್ಟ್​ ವರ್ಸಸ್​  ಕೆಜಿಎಫ್​ 2 ವಾರ್​ ಅಂತ್ಯವಾಗಿದೆ ಎಂದು ಹೇಳಬಹುದು

ವಿಜಯ್​, ಯಶ್​

ವಿಜಯ್​, ಯಶ್​

  • Share this:
ಒಬ್ಬರು ಬೆಳಿತಾ ಇದ್ದಾರೆ ಅಂದರೆ ಅದನ್ನು ಹಾಳು ಮಾಡಲು ಸಾವಿರಾರು ಜನ ಕಾಯುತ್ತಾ ಇರುತ್ತಾರಂತೆ. ಅದು ರಾಕಿಂಗ್​ ಸ್ಟಾರ್​ ಯಶ್​(Rocking Star Yash)ಗೆ ಎದುರು ತೊಡೆ ತಟ್ಟುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ರಾಕಿ ಭಾಯ (Raki Bhai)​ ಎದುರು ಸವಾಲೆಸೆದಿದ್ದ ಬಾಲಿವುಡ್ (Bollywood)​ ಸೂಪರ್​ ಸ್ಟಾರ್​ ಆಮಿರ್​ ಖಾನ್ (Aamir Khan)​ ರೇಸ್​ನಿಂದ ಹಿಂದೆ ಸರಿದಿದ್ದಾರೆ. ಆದರೆ, ಯಾಕೋ ತಮಿಳು ಇಳಯದಳಪತಿ ಮಾತ್ರ ರಾಕಿ ಭಾಯ್​ ಎದುರು ಬಂದೇ ಬರುತ್ತೀನಿ ಅನ್ನುವಂತಿದೆ. ಸ್ವತಃ ವಿಜಯ್ ​(Vijay) ಫ್ಯಾನ್ಸ್​ ಅವರೇ ಬೇಡ ಬೇಡ ಅಂದರೂ ವಿಜಯ್​ ಹಾಗೂ ಅವರ ಬೀಸ್ಟ್ (Beast)​ ಸಿನಿಮಾ ತಂಡ ಮಾತು ಕೇಳಿಲ್ಲ.

ಬೀಸ್ಟ್​ ಬಗ್ಗೆ ಕ್ಲಾರಿಟಿ ಕೊಟ್ಟ ರಾಕಿಂಗ್​ ಸ್ಟಾರ್​!

ಬೀಸ್ಟ್​ ಸಿನಿಮಾ ಏಪ್ರಿಲ್​ 13ಕ್ಕೆ ರಿಲೀಸ್​ ಆಗುತ್ತಿದೆ. ಈ ಬಗ್ಗೆ ಈಗಾಗಲೇ ಅಭಿಮಾನಿಗಳು ನಡುವೆ ವಾರ್​ ಶುರುವಾಗಿದೆ. ಈ ಬಗ್ಗೆ ಯಶ್​ ಕೆಜಿಎಫ 2 ಟ್ರೈಲರ್​ ರಿಲೀಸ್ ಸಂದರ್ಭದಲ್ಲಿ ಬೀಸ್ಟ್​ ಸಿನಿಮಾ ಬಗ್ಗೆ ಮಾತನಾಡಿದ್ದರು. ಇದೀಗ ಈ ಬೀಸ್ಟ್​ ವರ್ಸಸ್​  ಕೆಜಿಎಫ್​ 2 ವಾರ್​ ಅಂತ್ಯವಾಗಿದೆ ಎಂದು ಹೇಳಬಹುದು. ಹೌದು, ಕೆಜಿಎಫ್ ಹಾಗೂ ಬೀಸ್ಟ್​ ಸಿನಿಮಾಗಳ ನಿರ್ದೇಶಕರು ಇದೀಗ ಈ ವಾರ್​​ಗೆ ಫುಲ್​ಸ್ಟಾಪ್​ ಇಟ್ಟಿದ್ದಾರೆ. ’ಬೀಸ್ಟ್’ ರಿಲೀಸ್ ದಿನಾಂಕ ಘೋಷಣೆಯಾದಂತೆಯೆ ಸಾಮಾಜಿಕ ಜಾಲತಾಣಗಳಲ್ಲಿ ‘ಕೆಜಿಎಫ್ 2’ ಹಾಗೂ ’ಬೀಸ್ಟ್’ ಬಾಕ್ಸಾಫೀಸ್ ಪೈಪೋಟಿಯ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಪ್ರಾರಂಭವಾಗಿದೆ.


ಕೆಜಿಎಫ್​ ಗತ್ತು ಎಲ್ಲರಿಗೂ ಗೊತ್ತು!

‘ಕೆಜಿಎಫ್​2’ ಹವಾ ಎಲ್ಲಾ ಕಡೆಯಲ್ಲೂ ಜೋರಾಗಿದೆ. ಈ ಹಿನ್ನೆಲೆಯಲ್ಲಿ ‘ಬೀಸ್ಟ್’ ಎದುರಿನ ಬಾಕ್ಸಾಫೀಸ್ ಸ್ಪರ್ಧೆಯಲ್ಲಿ ‘ಕೆಜಿಎಫ್ 2’ ಜಯಭೇರಿ ಬಾರಿಸಲಿದೆ ಎಂದು ಫ್ಯಾನ್ಸ್ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಈ ಬಗ್ಗೆ ಪರ ವಿರೋಧ ಮಾತನಾಡಿದ್ದರು. ‘ಬೀಸ್ಟ್’ ಚಿತ್ರ ‘ಕೆಜಿಎಫ್​2’ ಆಡಿಯನ್ಸ್‌ಗಳನ್ನು ತನ್ನೆಡೆ ಸೆಳೆಯಲಿದೆ, ಇದರಿಂದ ಕೆಜಿಎಫ್‌ಗೆ ಆಡಿಯನ್ಸ್ ಕಮ್ಮಿ ಆಗಲಿದ್ದಾರೆ ಎಂಬೆಲ್ಲಾ ವಾದ ವಿವಾದಗಳ ನಡುವೆ ಇದೆಲ್ಲದಕ್ಕು ಇತ್ಯರ್ಥ ಹಾಡಿದ್ದಾರೆ ‘ಕೆಜಿಎಫ್​2’ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ‘ಬೀಸ್ಟ್’ ನಿರ್ದೇಶಕ ನೆಲ್ಸನ್ ದಿಲಿಪ್ ಕುಮಾರ್.

ಇದನ್ನೂ ಓದಿ: ಬೀಸ್ಟ್​ ಬಗ್ಗೆ ಖಡಕ್​ ಉತ್ತರ ಕೊಟ್ಟ ರಾಕಿ ಭಾಯ್​! ಒಬ್ಬ ನಾಯಕನಿಗೆ ಬೇಕಿರೋ ಗಟ್ಸ್​ ಅಂದ್ರೆ ಇದೇ..

ಕೆಜಿಎಫ್​ 2 ನೋಡಲು ಕಾಯ್ತಿದ್ದೀನಿ ಎಂದ ನೆಲ್ಸನ್​!

‘ಕೆಜಿಎಫ್ 2’ ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಈ ಟ್ರೈಲರ್ ಅನ್ನು ನೋಡಿರುವ 'ಬೀಸ್ಟ್' ಚಿತ್ರದ ನಿರ್ದೇಶಕ ನೆಲ್ಸನ್ ದಿಲಿಪ್ ಕುಮಾರ್ ಟ್ವೀಟ್ ಮಾಡಿದ್ದಾರೆ. ‘ಕೆಜಿಎಫ್ 2’ ಟ್ರೈಲರ್ ಗೆ ಟ್ವೀಟ್ ಮಾಡಿರುವ ಅವರು ‘ಟ್ರೇಲರ್ ತುಂಬ ಮಾಸ್ ಆಗಿ ಮೂಡಿ ಬಂದಿದೆ. 'ಕೆಜಿಎಫ್ 2' ಚಿತ್ರವನ್ನು ನೋಡಲು ಕಾಯುತ್ತಿದ್ದೇನೆ’ಎಂದು ಬರೆದುಕೊಂಡಿದ್ದಾರೆ.

ನೆಲ್ಸನ್​ ಟ್ವೀಟ್​​ಗೆ ಧನ್ಯವಾದ ಹೇಳಿದ ಪ್ರಶಾಂತ್ ನೀಲ್​!

ನೆಲ್ಸನ್ ದಿಲಿಪ್ ಕುಮಾರ್ ಟ್ವೀಟ್‌ಗೆ ಪ್ರತಿಕ್ರೀಯಿಸಿರುವ ಪ್ರಶಾಂತ್ ನೀಲ್ " ಧನ್ಯವಾದಗಳು ನೆಲ್ಸನ್ ದಿಲಿಪ್ ಕುಮಾರ್. 'ಬೀಸ್ಟ್' ಚಿತ್ರ ನೋಡಲು ನನಗೂ ಕಾಯಲು ಸಾಧ್ಯವಾಗುತ್ತಿಲ್ಲ. ನಟ ವಿಜಯ್ ಅವರ ಸಿನಿಮಾವನ್ನು ಬಿಗ್ ಸ್ಕ್ರೀನ್ ಮೇಲೆ ನೋಡಲು ನಾನು ಯಾವತ್ತು ಕಾಯುತ್ತೇನೆ’ ಎಂದು ಪ್ರಶಾಂತ್ ನೀಲ್​ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಕೆಜಿಎಫ್ 2​ ಟಿವಿ ರೈಟ್ಸ್​ ಎಷ್ಟು ಹಣಕ್ಕೆ ಸೇಲ್​ ಆಯ್ತು ಗೊತ್ತಾ? ಊಹೆನೂ ಮಾಡಿರಲ್ಲ ನೀವು..
ಒಟ್ಟಿನಲ್ಲಿ ರಾಕಿಂಗ್​ ಸ್ಟಾರ್​ ಯಶ್ ಹೇಳಿದ ಹಾಗೇ ಬೀಸ್ಟ್​ ವರ್ಸಸ್​ ಕೆಜಿಎಫ್​ 2 ಆಗಬಾರದು. ಬೀಸ್ಟ್​ ಮತ್ತು ಕೆಜಿಎಫ್​ ಆಗಬೇಕು ಎಂದು ಹೇಳಿದ್ದು ಅವರ ಅಭಿಮಾನಿಗಳು ಇದನ್ನು ಫಾಲೋ ಮಾಡುತ್ತಿದ್ದಾರೆ.
Published by:ವಾಸುದೇವ್ ಎಂ
First published: