• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Virat Kohli: ವಿರಾಟ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್​, ಬೇರ್ ಗ್ರಿಲ್ಸ್ ಜೊತೆ ಕಿಂಗ್​ ಕೊಹ್ಲಿ?

Virat Kohli: ವಿರಾಟ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್​, ಬೇರ್ ಗ್ರಿಲ್ಸ್ ಜೊತೆ ಕಿಂಗ್​ ಕೊಹ್ಲಿ?

ವಿರಾಟ್ ಕೊಹ್ಲಿ-ಬೇರ್ ಗ್ರಿಲ್ಸ್

ವಿರಾಟ್ ಕೊಹ್ಲಿ-ಬೇರ್ ಗ್ರಿಲ್ಸ್

ಬೇರ್ ಗ್ರಿಲ್ಸ್ ತನ್ನ ಶೋನಲ್ಲಿ ಭಾರತದ ವಿಶೇಷ ಸೆಲೆಬ್ರಿಟಿಯನ್ನು ಹೊಂದುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಆ ಸೆಲೆಬ್ರಿಟಿ ಟೀಂ ಇಂಡಿಯಾದ ಮಾಜಿ ನಾಯಕನೂ ಆಗಿದ್ದರು.

  • Share this:

ಅತ್ಯಂತ ಜನಪ್ರಿಯ (Famous) ಶೋ (Show) 'ಮ್ಯಾನ್ ವರ್ಸಸ್ ವೈಲ್ಡ್' (Man vs Wild) ನಿಂದ ವಿಶ್ವಾದ್ಯಂತ ಹೆಸರಾಗಿರುವ ಬೇರ್ ಗ್ರಿಲ್ಸ್ (Bear Grylls) ಹೆಸರು ಎಲ್ಲರಿಗೂ ಚಿರಪರಿಚಿತವಾಗಿದೆ. ಇನ್ನು, ಕಳೆದ ಕೆಲವು ವರ್ಷಗಳಲ್ಲಿ, 'ಇನ್ಟು ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್' ಮತ್ತು 'ರನ್ನಿಂಗ್ ವೈಲ್ಡ್ ವಿತ್ ಬೇರ್ ಗ್ರಿಲ್ಸ್' ಹೊಸ ಶೋಗಳಿಗೆ ಬೇರ್​ ಜೊತೆ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ, ಪ್ರಧಾನಿ ಮೋದಿ, ಅಕ್ಷಯ್ ಕುಮಾರ್, ರಣವೀರ್ ಸಿಂಗ್ ಸೇರಿದಂತೆ ಹಾಲಿವುಡ್ ಸೆಲೆಬ್ರಿಟಿಗಳು ಇವರ ಜೊತೆ ಶೋನಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೇರವಾಗಿ ಆಹ್ವಾನಿಸಿದಾಗ ಬೇರ್ ಗ್ರಿಲ್ಸ್ ಎಂಬ ಹೆಸರು ಭಾರತದಲ್ಲಿ ಬೆಳಕಿಗೆ ಬಂದಿತು. ಇವರ ಆಹ್ವಾನವನ್ನು ಸ್ವೀಕರಿಸಿದ ಮೋದಿ ಅವರೊಂದಿಗೆ ವಿಶೇಷ ಜಂಗಲ್ ಸಫಾರಿಗೆ ತೆರಳಿದ್ದರು. ಆದರೆ ಈಗ ಬೇರ್ ತನ್ನ ಶೋನಲ್ಲಿ ಭಾರತದ ವಿಶೇಷ ಸೆಲೆಬ್ರಿಟಿಯನ್ನು ಹೊಂದುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಆ ಸೆಲೆಬ್ರಿಟಿ ಟೀಂ ಇಂಡಿಯಾದ (Team India) ಮಾಜಿ ನಾಯಕನೂ ಆಗಿದ್ದರು.


ಬೇರ್ ಗ್ರಿಲ್ಸ್ ಜೊತೆ ಕಿಂಗ್​ ಕೊಹ್ಲಿ?:


ಹೌದು, ಈ ರೀತಿಯ ವಿಚಾರವೊಂದು ಇದೀಗ ಸಖತ್ ಸದ್ದು ಮಾಡುತ್ತಿದೆ. ವಿರಾಟ್ ಡ್ಯಾಶಿಂಗ್ ಬ್ಯಾಟ್ಸ್‌ಮನ್, ಭಾರತದ ಯಶಸ್ವಿ ನಾಯಕ, ಫಿಟ್‌ನೆಸ್ ಐಕಾನ್ ಎಂದು ಹೆಸರುವಾಸಿಯಾಗಿದ್ದಾರೆ. ಅನೇಕರು ಅವರನ್ನು ತಮ್ಮ ರೋಲ್ ಮಾಡೆಲ್ ಎಂದು ಪರಿಗಣಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲೂ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಮತ್ತು ಅದಕ್ಕಾಗಿಯೇ ವಿರಾಟ್ ತನ್ನ ಶೋಗೆ ಬರಬೇಕೆಂದು ಬೇರ್​ ಗ್ರಿಲ್ಸ್ ಬಯಸುತ್ತಿದ್ದಾರಂತೆ. ಇತ್ತೀಚೆಗಷ್ಟೇ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬೇರ್​, ಸಿಂಹದ ಹೃದಯ ಹೊಂದಿರುವ ವಿರಾಟ್ ಜೊತೆ ಸಾಹಸ ಮಾಡಿದರೆ ಅದ್ಭುತ ಎನಿಸುತ್ತದೆ‘ ಎಂದು ಹೇಳಿದ್ದಾರೆ. ಇದನ್ನು ಕೇಳಿದ ವಿರಾಟ್​ ಫ್ಯಾನ್ಸ್ ಸಖತ್ ಥ್ರಿಲ್​ ಆಗಿದ್ದಾರೆ. ಈ ಹಿಂದೆ, ಪ್ರಧಾನಿ ಮೋದಿ ಜೊತೆಗೆ, ರಜನಿಕಾಂತ್, ಅಕ್ಷಯ್ ಕುಮಾರ್, ಅಜಯ್ ದೇವಗನ್, ರಣವೀರ್​ ಸಿಂಗ್​ ಅವರು ಭಾರತೀಯ ಪ್ರಸಿದ್ಧ ಬೇರ್​ ಗ್ರಿಲ್ಸ್ ಜೊತೆ ಕಾಣಿಸಿಕೊಂಡಿದ್ದರು.


ವಿರಾಟ್‌ಗೆ ಬಿಸಿಸಿಐ ಅವಕಾಶ ನೀಡುವುದೇ ?


ಬೇರ್ ಗ್ರಿಲ್ಸ್ ಹೇಳಿಕೆ ಬಗ್ಗೆ ವಿರಾಟ್ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ವಿರಾಟ್ ಬಿಸಿಸಿಐ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಹಾಗಾದರೆ ಇಂತಹ ಶೋಗಳಲ್ಲಿ ಭಾಗವಹಿಸಲು ಬಿಸಿಸಿಐ ಅನುಮತಿ ನೀಡುವುದೇ? ಇದು ಕೂಡ ಪ್ರಶ್ನೆಯಾಗಿದೆ. ಆದರೆ ಕ್ರಿಕೆಟ್ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿರುವ ವಿರಾಟ್ ಬೇರ್ ಗ್ರಿಲ್ಸ್ ಜೊತೆ ಸಾಹಸ ಮಾಡುವುದನ್ನು ನೋಡಲು ಅಭಿಮಾನಿಗಳು ಖಂಡಿತ ಕಾತುರರಾಗಿದ್ದಾರೆ.


ಇದನ್ನೂ ಓದಿ: Asia Cup 2022: ಏಷ್ಯಾ ಕಪ್​ ವೇಳಾಪಟ್ಟಿ ಪ್ರಕಟ, ಇಂಡೋ-ಪಾಕ್​ ಕದನಕ್ಕೆ ಡೇಟ್ ಫಿಕ್ಸ್


ಜಿಂಬಾಬ್ವೆ ಪ್ರವಾಸದಿಂದ ಕೊಹ್ಲಿ ವಿಶ್ರಾಂತಿ:


ಸದ್ಯ ಕೊಹ್ಲಿ ಕಳಪೆ ಫಾರ್ಮ್​ ಗೆ ಒಳಗಾಗಿದ್ದು, ಸಾಲು ಸಾಲು ಸರಣಿಗಳಿಂದ ಹೊರಗುಳಿಯುತ್ತಿದ್ದಾರೆ. ಇಂಗ್ಲೆಂಡ್​ ನಂತರ ವೆಸ್ಟ್ ಇಂಡೀಸ್​ ಸರಣಿಯಿಂದ ದೂರವಾಗಿದ್ದ ವಿರಾಟ್​ ಕೊಹ್ಲಿ ಇದೀಗ ಜಿಂಬಾಬ್ವೆ ವಿರುದ್ಧದ 3 ಪಮದ್ಯಗಳ ಏಕದಿನ ಸರಣಿಯಿಂದಲೂ ದೂರ ಉಳಿಸಿದ್ದಾರೆ.


ಇದನ್ನೂ ಓದಿ: Ranveer Vs Wild: ಜುಲೈ 8ಕ್ಕೆ ರಣವೀರ್ ವರ್ಸಸ್ ವೈಲ್ಡ್ ಬಿಡುಗಡೆ, ಕುತೂಹಲ ಮೂಡಿಸಿದ ಟ್ರೈಲರ್


ಬೇರ್ ಗ್ರಿಲ್ಸ್ ಬಗ್ಗೆ ಮಾಹಿತಿ:


ಬೇರ್ ಗ್ರಿಲ್ಸ್ ಅವರ ನಿಜವಾದ ಹೆಸರು ಎಡ್ವರ್ಡ್ ಮೈಕೆಲ್ ಗ್ರಿಲ್ಸ್. ಅವರು ಲಂಡನ್ನಲ್ಲಿ 7 ಜೂನ್ 1974 ರಂದು ಜನಿಸಿದರು. ಇಂಗ್ಲಿಷ್, ಸ್ಪ್ಯಾನಿಷ್, ಫ್ರೆಂಚ್ ಮತ್ತು ಅಮೇರಿಕನ್ ಭಾಷೆ ಮಾತನಾಡುತ್ತಾರೆ. ಬಾಲ್ಯದಲ್ಲಿ ಬೇರ್ ಗ್ರಿಲ್ಸ್ ಸ್ಕೈಡೈವಿಂಗ್ ಕಲಿತರು. ಮತ್ತು ಕರಾಟೆಯಲ್ಲಿ ಕಪ್ಪು ಬೆಲ್ಟ್ ಪಡೆದರು. ಬೇರ್ ಗ್ರಿಲ್ಸ್ ಮೂರು ವರ್ಷ ಬ್ರಿಟಿಷ್ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು