• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Pathaan: ಇವರಿಗೆ ಹಿಜಾಬ್​ ಧರಿಸಿದ್ರೂ ಆಗಲ್ಲ, ಬಿಕಿನಿ ಹಾಕಿದ್ರೂ ಸಹಿಸಲ್ಲ: 'ಪಠಾಣ್​'ಗೆ ಸಂಸದೆ ನುಸ್ರತ್ ಬೆಂಬಲ!

Pathaan: ಇವರಿಗೆ ಹಿಜಾಬ್​ ಧರಿಸಿದ್ರೂ ಆಗಲ್ಲ, ಬಿಕಿನಿ ಹಾಕಿದ್ರೂ ಸಹಿಸಲ್ಲ: 'ಪಠಾಣ್​'ಗೆ ಸಂಸದೆ ನುಸ್ರತ್ ಬೆಂಬಲ!

ಪಢಾಣ್ ಸಿನಿಮಾ ವಿವಾದ

ಪಢಾಣ್ ಸಿನಿಮಾ ವಿವಾದ

Nussrat Jahan On Pathaan Controversy: ಶಾರುಖ್ ಖಾನ್ ಅವರ ಮುಂಬರುವ ಚಿತ್ರ ಪಠಾಣ್‌ನ ಬೇಷರಂ ರಂಗ್ ಹಾಡಿಗೆ ಸಂಬಂಧಿಸಿದಂತೆ ಸದ್ಯ ಭಾರೀ ವಿವಾದ ಸೃಷ್ಟಿಯಾಗಿದೆ. ದೀಪಿಕಾ ಪಡುಕೋಣೆ ಅವರ ಕೇಸರಿ ಬಣ್ಣದ ಬಿಕಿನಿ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಭುಗಿಲೆದ್ದಿದೆ.

  • Share this:

ಮುಂಬೈ(ಡಿ.17): ಶಾರುಖ್ ಖಾನ್ ಅಭಿನಯದ ಪಠಾಣ್ (Pathaan) ಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ಬಗ್ಗೆ ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಬಂಗಾಳಿ ನಟಿ ನುಸ್ರತ್ ಜಹಾನ್ (Bengali Actress Nusrat Jahan) ಹೇಳಿಕೆ ನೀಡಿದ್ದಾರೆ. ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, "ಜನರಿಗೆ ಎಲ್ಲದರಲ್ಲೂ ಸಮಸ್ಯೆ ಇದೆ, ಮಹಿಳೆಯರು ಹಿಜಾಬ್ (Hijab) ಧರಿಸಿದರೆ ಅವರಿಗೆ ಸಮಸ್ಯೆ, ಮಹಿಳೆಯರು ಬಿಕಿನಿ ತೊಟ್ಟರೂ ಅವರಿಗೆ ಸಮಸ್ಯೆಯಾಗುತ್ತದೆ" ಎಂದು ಖಾರವಾಗೇ ಪ್ರತಿಕ್ರಿಯಿಸಿದ್ದಾರೆ.


ಪಠಾಣ್ ವಿವಾದಕ್ಕೆ ನುಸ್ರತ್ ಪ್ರತಿಕ್ರಿಯೆ


ಶಾರುಖ್ ಖಾನ್ ಅಭಿನಯದ ಮುಂಬರುವ ಚಿತ್ರ 'ಪಠಾಣ್' ಚಿತ್ರದ ಹಾಡೊಂದು ಭಾರೀ ಸಂಚಲನ ಸೃಷ್ಟಿಸಿರುವ ಸಂದರ್ಭದಲ್ಲಿ ನುಸ್ರತ್ ಜಹಾನ್ ಹೇಳಿಕೆ ಭಾರೀ ಸದ್ದು ಮಾಡಿದೆ. ಪಠಾಣ್​ ಚಿತ್ರದ ‘ಬೇಷರಂ ರಂಗ್’ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ತೊಟ್ಟಿದ್ದಕ್ಕೆ ಬಿಜೆಪಿಯ ಕೆಲ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ #pathanboycott ಭಾರೀ ಟ್ರೆಂಡ್​ ಆಗಿದೆ. ಏತನ್ಮಧ್ಯೆ, ಅನೇಕ ಸೆಲೆಬ್ರಿಟಿಗಳು ಚಿತ್ರಕ್ಕೆ ತಮ್ಮ ಬೆಂಬಲವನ್ನು ನೀಡಿದ್ದಾರೆ, ಇದರಲ್ಲಿ ನುಸ್ರತ್ ಜಹಾನ್ ಕೂಡ ಸೇರ್ಪಡೆಯಾಗಿದ್ದಾರೆ.


PHOTOS: ಮೇಕಪ್ ಇಲ್ಲದೇ ಕಾಣಿಸಿಕೊಂಡ ನುಸ್ರತ್ ಜಹಾನ್, ಸರ್ಜರಿ ಬಗ್ಗೆ ಪ್ರಶ್ನಿಸಿದ ನೆಟ್ಟಿಗರು!


ಚಿತ್ರಕ್ಕೆ ಸಂಪೂರ್ಣ ಬೆಂಬಲ


ನುಸ್ರತ್ ಜಹಾನ್, "ಇದು ಯಾರೊಬ್ಬರ ಸಿದ್ಧಾಂತದ ವಿಚಾರವಲ್ಲ. ಬದಲಾಗಿ ಇದು ಅಧಿಕಾರದಲ್ಲಿರುವ ಪಕ್ಷವೊಂದು ಜನರ ಮನಸ್ಸಿನಲ್ಲಿ ಇಂತಹ ತಪ್ಪು ವಿಚಾರ ಹಾಕಲು ಯತ್ನಿಸುತ್ತಿದೆ. ಅಂತಹ ಚಿತ್ರವನ್ನು ರಚಿಸಲು ಪ್ರಯತ್ನಿಸುತ್ತಿದೆ. ಹೀಗಾಗಿ ಅವರು ಮಾಡುತ್ತಿರುವುದು ಆಧ್ಯಾತ್ಮಿಕ, ಧಾರ್ಮಿಕ ಕಾಳಜಿಯಿಂದಲ್ಲ. ಬದಲಾಗಿ ಇದೊಂದು ಕೇವಲ ಯೋಜಿತ ಪಿತೂರಿ. ಅದಕ್ಕಾಗಿಯೇ ಅವರು ಸಂಸ್ಕೃತಿ ಹಾಗೂ ಬಿಕಿನಿ ಧರಿಸಿದ ಮಹಿಳೆಯರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹಣಿದಿದ್ದಾರೆ.




Pathaan Controversy: ಕೇಸರಿ ಬಿಕಿನಿ ವಿವಾದ, ನಟಿ ದೀಪಿಕಾ ಪಡುಕೋಣೆ ಪರ ರಮ್ಯಾ ಟ್ವೀಟ್


ಅವರು ನಮ್ಮ ಜೀವನವನ್ನು ನಿಯಂತ್ರಿಸಲು ಬಯಸುತ್ತಾರೆ


ಚಿತ್ರ ವಿರೋಧಿಸುವವರ ವಿರುದ್ಧ ಮಾತನಾಡಿದ ನಟಿ, "ಅವರಿಗೆ ಎಲ್ಲದರಲ್ಲೂ ಸಮಸ್ಯೆ ಇದೆ, ಹೆಂಗಸರು ಹಿಜಾಬ್ ತೊಟ್ಟರೆ ಅವರಿಗೆ ಸಮಸ್ಯೆ ಇದೆ, ಮಹಿಳೆಯರು ಬಿಕಿನಿ ತೊಟ್ಟರೆ ಅವರಿಗೆ ಸಮಸ್ಯೆ ಇದೆ. ಇವರೆಲ್ಲರೂ ಭಾರತದ ಆಧುನಿಕ ಮಹಿಳೆಯರಿಗೆ ಏನು ಧರಿಸಬೇಕೆಂದು ಹೇಳುತ್ತಿದ್ದಾರೆ. ನಾವೇನು ಮಾಡಬೇಕೆಂದು ಹೇಳುವ ಮೂಲಕ ನಮ್ಮ ಜೀವನವನ್ನು ನಿಯಂತ್ರಿಸುತ್ತಾರೆ. ಏನು ಧರಿಸಬೇಕು, ಏನು ತಿನ್ನಬೇಕು, ಹೇಗೆ ಮಾತನಾಡಬೇಕು, ಹೇಗೆ ನಡೆಯಬೇಕು, ಶಾಲೆಯಲ್ಲಿ ಏನನ್ನು ಕಲಿಯಬೇಕು, ಟಿವಿಯಲ್ಲಿ ಏನನ್ನು ನೋಡಬೇಕು ಎಂದು ಹೇಳಿ ನಿಯಂತ್ರಿಸಲು ಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಯಾವುದನ್ನು ಹೊಸ, ಅಭಿವೃದ್ಧಿ ಹೊಂದಿದ ಭಾರತ ಎಂದು ಕರೆಯುತ್ತಾರೋ ಅದು ಬಹಳ ಭಯಾನಕವಾಗಿದೆ, ಮುಂದಿನ ದಿನಗಳಲ್ಲಿ ಅದು ನಮ್ಮೆಲ್ಲರನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ಎಂದು ಯೀಚಿಸಿ ನನಗೆ ಭಯವಾಗುತ್ತಿದೆ" ಎಂದಿದ್ದಾರೆ.

First published: