Pushpa Release: ಮತ್ತೆ 'ಪುಷ್ಪ' ರಿಲೀಸ್ ಡೇಟ್ ಚೇಂಜ್? ಮೆಗಾಸ್ಟಾರ್ ಗಾಗಿ ಮುಂದಕ್ಕೆ ಹೋಗ್ತಾರಾ Allu Arjun?

Tollywood: ದಸರಾ, ದೀಪಾವಳಿ, ಕ್ರಿಸ್ ಮಸ್, ಸಂಕ್ರಾಂತಿ ಹೀಗೆ ಸಾಲು ಸಾಲು ಹಬ್ಬಗಳು ಇರುವ ಹಿನ್ನೆಲೆ ಸ್ಟಾರ್ ನಟರು ತಮ್ಮ ಸಿನಿಮಾಗಳನ್ನು ರಿಲೀಸ್ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ. ಹೀಗಾಗಿ ದೊಡ್ಡ ದೊಡ್ಡ ಚಿತ್ರಗಳು ಮುಖಾಮುಖಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಇಲ್ಲಿಯವರೆಗೂ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಆಚಾರ್ಯ ಸಿನಿಮಾ ತಂಡ ಬಿಡುಗಡೆ ದಿನಾಂಕವನ್ನು ಖಚಿತಗೊಳಿಸಿಲ್ಲ.

ಪುಪ್ಷ ಚಿತ್ರದ ಪೋಸ್ಟರ್

ಪುಪ್ಷ ಚಿತ್ರದ ಪೋಸ್ಟರ್

  • Share this:
    ಮೊನ್ನೆಯಷ್ಟೇ ಟಾಲಿವುಡ್ ನ(Tollywood) ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ "ಪುಷ್ಪ"(Pushpa) ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿತ್ತು. ಡಿಸೆಂಬರ್ 17ಕ್ಕೆ ಸಿನಿಮಾ ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಈ ಹಿಂದೆ ಪುಷ್ಪ ಸಿನಿಮಾ ಕ್ರಿಸ್ ಮಸ್(Christmas) ಹಬ್ಬದಂದು ತೆರೆಕಾಣುತ್ತಿದೆ ಅಂತ ಹೇಳಲಾಗುತ್ತಿತ್ತು. ಆದರೆ ಕ್ರಿಸ್ ಮಸ್ ಹಬ್ಬದಂದು ಬಾಲಿವುಡ್ ನ(Bollywood) ಮೋಸ್ಟ್ ಎಕ್ಸ್ ಪೆಕ್ಟೆಡ್, ರಣವೀರ್ ಸಿಂಗ್(Ranveer Singh) ಅಭಿನಯದ "83" ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಹೀಗಾಗಿ ಒಂದೇ ದಿನ ಇಬ್ಬರು ದಿಗ್ಗಜ ನಟರ ಚಿತ್ರಗಳು ಬಿಡುಗಡೆಯಾದರೆ, ತೊಂದರೆಯಾಗುತ್ತೆ ಅನ್ನುವ ಉದ್ದೇಶದಿಂದ ಪುಷ್ಪ ಸಿನಿಮಾವನ್ನ ಡಿಸೆಂಬರ್ 17ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಆದರೆ ಈಗ ಮತ್ತೆ ಪುಷ್ಪಾ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುವ ಲಕ್ಷಣಗಳು ಕಾಣುತ್ತಿವೆ. ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಆಚಾರ್ಯ ಸಿನಿಮಾ ಡಿಸೆಂಬರ್ 17ರಂದು ಬಿಡುಗಡೆಯಾಗುವ ಗಾಸಿಪ್ ಹರಿದಾಡುತ್ತಿವೆ.

    ದಸರಾ, ದೀಪಾವಳಿ, ಕ್ರಿಸ್ ಮಸ್, ಸಂಕ್ರಾಂತಿ ಹೀಗೆ ಸಾಲು ಸಾಲು ಹಬ್ಬಗಳು ಇರುವ ಹಿನ್ನೆಲೆ ಸ್ಟಾರ್ ನಟರು ತಮ್ಮ ಸಿನಿಮಾಗಳನ್ನು ರಿಲೀಸ್ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ. ಹೀಗಾಗಿ ದೊಡ್ಡ ದೊಡ್ಡ ಚಿತ್ರಗಳು ಮುಖಾಮುಖಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಇಲ್ಲಿಯವರೆಗೂ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಆಚಾರ್ಯ ಸಿನಿಮಾ ತಂಡ ಬಿಡುಗಡೆ ದಿನಾಂಕವನ್ನು ಖಚಿತಗೊಳಿಸಿಲ್ಲ. ಸಾಲು ಸಾಲು ಹಬ್ಬಗಳು ಬಂದಿರುವುದರಿಂದ ಈಗಲೇ ಸಿನಿಮಾ ಬಿಡುಗಡೆ ಮಾಡುವ ಯೋಚನೆ ಮಾಡಿದೆಯಂತೆ ಆಚಾರ್ಯ ಚಿತ್ರತಂಡ.

    ಈ ಸಮಯದಲ್ಲಿ ಆಚಾರ್ಯ ಸಿನಿಮಾ ಬಿಡುಗಡೆ ಯಾಗದಿದ್ದರೆ, ಮುಂದಿನ ವರ್ಷ ಜನವರಿ ಮಧ್ಯಭಾಗದ ನಂತರ ಬಿಡುಗಡೆ ಮಾಡಬೇಕು. ಹೀಗಾಗಿ ಈಗಿರುವ ಡೇಟ್ ಗಳಲ್ಲೇ ಯಾವುದಾದರೂ ದಿನಾಂಕವನ್ನು ಆಯ್ಕೆ ಮಾಡಿ ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಿದೆ. ಡಿಸೆಂಬರ್ 17ರಂದು ಸಿನಿಮಾವನ್ನ ಬಿಡುಗಡೆಗೊಳಿಸಲು ಚಿತ್ರತಂಡ ಈಗಾಗಲೇ ಪ್ಲಾನ್ ಮಾಡಿಕೊಂಡಿದೆಯಂತೆ. ಈಗಾಗಲೇ ಪುಷ್ಪ ಸಿನಿಮಾವೂ ಇದೇ ದಿನಾಂಕದಂದು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದೇ ದಿನಾಂಕದಂದು ಆಚಾರ್ಯ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ.

    ಇದನ್ನೂ ಓದಿ: ಹೈದರಾಬಾದಲ್ಲೇ ಬೇರೆ ಮನೆಗೆ ಶಿಫ್ಟ್ ಆಗಲಿರುವ ಸಮಂತಾ- ನಾಗಚೈತನ್ಯ ಮನೆಯಿಂದ ಎಷ್ಟು ದೂರ?

    ಮೊದಲೇ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಗೆ, ಮೆಗಾಸ್ಟಾರ್ ಚಿರಂಜೀವಿ ಕಂಡರೆ ಅತಿಯಾದ ಗೌರವ. ಒಂದು ವೇಳೆ ಆಚಾರ್ಯ ಸಿನಿಮಾ ಡಿಸೆಂಬರ್ 17ರಂದು ಬಿಡುಗಡೆಯಾಗಲು ನಿರ್ಧರಿಸಿದರೆ, ಪುಷ್ಪ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಲು ಅಲ್ಲು ಅರ್ಜುನ್ ಮನಸ್ಸು ಮಾಡಲಿದ್ದಾರೆ. ಒಂದು ವೇಳೆ ಪುಷ್ಪ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿದರೆ, ಮಾರ್ಚ್ ನಲ್ಲಿ ಚಿತ್ರ ಅದ್ಧೂರಿ ಬಿಡುಗಡೆಗೆ ಪ್ಲಾನ್ ಮಾಡಬಹುದು. ಈಗಾಗಲೇ ಪುಷ್ಪಾ ಸಿನಿಮಾದ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಬಾಕಿ ಉಳಿದಿರುವ ಕೆಲ ದೃಶ್ಯಗಳನ್ನು ಚಿತ್ರೀಕರಿಸಬೇಕಿದೆ ಜೊತೆಗೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಉಳಿದಿವೆ. ಹೀಗಾಗಿ ಡಿಸೆಂಬರ್ 17ರಂದು ಆಚಾರ್ಯ ಸಿನಿಮಾಗೆ ದಿನಾಂಕ ನೀಡುವುದು ಬಹುತೇಕ ಖಚಿತವಾಗಿದೆ.

    ಆಚಾರ್ಯ ಸಿನಿಮಾಗೆ ರಾಮ್ ಚರಣ್ ತೇಜ ಬಂಡವಾಳ ಹೂಡಿದ್ದಾರೆ. ಕೊರಟಾಲ ಶಿವ ನಿರ್ದೇಶನದಲ್ಲಿ ಚಿತ್ರ ಮೂಡಿ ಬರುತ್ತಿದೆ. ಮೆಗಾಸ್ಟಾರ್ ಚಿರಂಜೀವಿ, ಕಾಜಲ್ ಅಗರ್ ವಾಲ್, ಸೋನು ಸೂದ್ ಸೇರಿ ಹಲವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಮ್ ಚರಣ್ ಹಾಗೂ ಪೂಜಾ ಹೆಗ್ಡೆ ಆಚಾರ್ಯ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಒಟ್ಟಿನಲ್ಲಿ ಎರಡು ಸಿನಿಮಾಗಳು ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದ್ದು, ಅಭಿಮಾನಿಗಳು ಕಾತರದಿಂದ ಸಿನಿಮಾ ನೋಡಲು ಕಾಯುತ್ತಿದ್ದಾರೆ.

    (ವರದಿ- ವಾಸುದೇವ್ ಎಂ)
    Published by:Sandhya M
    First published: