news18-kannada Updated:April 8, 2021, 8:16 PM IST
ಚೈತ್ರಾ ಕೋಟೂರ್
ಕೋಲಾರ (ಏ. 8): ನಿನ್ನ ನಂಬಿ ಮದುವೆಯಾಗಿ ನಾನು ದೊಡ್ಡ ತಪ್ಪು ಮಾಡಿದೆ ಎಂದು ಬಿಗ್ ಬಾಸ್ ಚೈತ್ರಾ ಕೋಟೂರ್ ಕಣ್ಣೀರಾಗಿದ್ದಾರೆ. ಆತ್ಮಹತ್ಯೆ ಪ್ರಯತ್ನಕ್ಕೂ ಮುನ್ನ ಮಾತನಾಡಿರುವ ಅವರ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ನಾಗರ್ಜುನ್ ನೀನು ನನ್ನ ಪ್ರೀತಿಸಿಲ್ಲ ಎಂದಿದ್ದರೆ ಯಾಕೆ ನೀನು ನನ್ನ ಹತ್ತಿರ ಬರುತ್ತಿದ್ದೆ. ನಿನಗೆ ಪ್ರೀತಿ ಇಲ್ಲ ಎಂದರೆ ಯಾಕೆ ನನಗೆ ಪ್ರೀತಿ, ಮದುವೆ ಬಗ್ಗೆ ನಂಬಿಕೆ ಹುಟ್ಟಿಸಿ, ನನ್ನ ಬಾಳಿನಲ್ಲಿ ಆಟವಾಡಿದೆ ಎಂದು ಪ್ರಶ್ನಿಸಿದ್ದಾರೆ. ನಿನ್ನ ಪ್ರೀತಿಸಿದ್ದು, ನಿನ್ನ ನಂಬಿದ್ದೆ ತಪ್ಪಾ, ನೀನು ಇಲ್ಲದೇ ಹೇಗೆ ಬದುಕಲಿ. ನಿನ್ನ ನಂಬಿ ನನ್ನ ಜೀವನವೇ ಹಾಳಾಗಿ ಹೋಯಿತಲ್ಲಾ ಎಂದು ಗೋಳಾಡಿದ್ದಾರೆ. ನಿನ್ನ ಹತ್ತಿರ ಏನಿದೆ ಎಂದು ಕೇಳಿಲ್ಲ. ನೀನು ಏನು ಕೆಲಸ ಮಾಡುತ್ತಿದ್ದೇಯಾ. ನಿನಗೆ ಎಷ್ಟು ಆಸ್ತಿ ಇದೆ ಎಂದು ಎಂದಾದರೂ ಕೇಳಿದ್ದೇನಾ. ನಿನಗೆ ಸಾಲ ಇದ್ದರೆ ಹೇಳು ನಾನು ನಿನ್ನ ಜೊತೆ ನಿಲ್ಲುತ್ತೇನೆ. ಇಬ್ಬರು ಮದುವಯಾಗಿ ಜೊತೆಯಲ್ಲಿರೋಣ ಎಂದಿದ್ದೆ. ಮದುವೆ ಬಗ್ಗೆ ಗಂಭೀರವಾಗಿ ಚರ್ಚೆ ಕೂಡ ನಿನ್ನ ಬಳಿ ಮಾಡಿದ್ದೆ. ಆದರೂ ಯಾಕೆ ಈ ರೀತಿ ಅನ್ಯಾಯ ಮಾಡಿದೆ ಎಂದು ಪ್ರಶ್ನಿಸಿದ್ದಾರೆ.
ನಾಗರ್ಜುನ್ ನಮ್ಮಿಬ್ಬರ ವಿಷಯದಲ್ಲಿ ಎಲ್ಲರೂ ಆಟ ಆಡುತ್ತಿದ್ದಾರೆ. ನಿನ್ನ ಮಧ್ಯೆ, ನನ್ನ ಮಧ್ಯೆ ಬರುವವರು ಎಲ್ಲರೂ ಆಟವಾಡುತ್ತಿದ್ದಾರೆ. ನಿನ್ನ ನಂಬಿದ್ದು ನನ್ನ ದೊಡ್ಡ ತಪ್ಪಾ? ನನ್ನ ನಿನ್ನ ಬದುಕನ್ನು ಯಾರು ಕಟ್ಟಿಕೊಡಲು ಆಗುವುದಿಲ್ಲ. ಎಷ್ಟು ಸುಲಭವಾಗಿ ನನ್ನ ಮೋಸ ಮಾಡಿದೆ. ಬಹುಶಃ ನೀನು ಸಾಮಾನ್ಯ ಹುಡುಗರಂತೆ ನಾನು ಸಿನಿಮಾ ಉದ್ಯಮದಲ್ಲಿದ್ದೇನೆ. ಸರಿ ಇರುವುದಿಲ್ಲ ಎಂದು ನನ್ನನ್ನು ಬಳಸಿಕೊಳ್ಳಲು ನೋಡಿದೆ ಎನ್ನಿಸುತ್ತದೆ. ಈ ಹಂತಕ್ಕೆ ಬರಲು ನಾನು ತುಂಬಾ ಕಷ್ಟ ಪಟ್ಟಿದ್ದೇನೆ. ಯಾರ ಬೆಂಬಲವಿಲ್ಲದೆ, ನನ್ನ ಪ್ರತಿಭೆ, ಶಕ್ತಿ ಯಿಂದ ಈ ಹಂತಕ್ಕೆ ಬಂದಿದ್ದೇನೆ.
ಇದನ್ನು ಓದಿ: ಮದುವೆ ವಿವಾದ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬಿಗ್ಬಾಸ್ ಅಭ್ಯರ್ಥಿ ಚೈತ್ರಾ ಕೋಟೂರು
ಕಡೆಯದಾಗಿ ನನ್ನ ಮುಂದೆ ಈಗಿರುವ ಆಯ್ಕೆ ಒಂದೇ ನಿನ್ನ ಜೊತೆ ಬದುಕುವುದು, ಸತ್ತು ಹೋಗುವುದು. ಹೀಗೆ ನಿನ್ನ ಬಳಿ ಹೇಳುತ್ತಿದ್ದಾಗ ಸಾಯುವುದು ಮೇಲು ಎನ್ನುತ್ತಿದ್ದೆ. ಆಯಿತು ಎಂದು ಈ ನಿರ್ಧಾರ ಮಾಡುತ್ತಿರುವುದಾಗಿ ವಿಡಿಯೋದಲ್ಲಿ ಹೇಳಿದ್ದಾರೆ.
ಮತ್ತೊಂದು ವಿಡಿಯೋದಲ್ಲಿ ನಾನು ಈಗ ನನ್ನ ಗಂಡ ನಾಗಾರ್ಜುನನ ಮೇಲೆ ಕೇಸ್ ಹಾಕಿ ಪರೀಕ್ಷೆಗಳ ಮೂಲಕ ನಮ್ಮ ಮಧ್ಯೆ ಎಲ್ಲಾ ರೀತಿಯ ಸಂಬಂಧ ಇತ್ತು ಎಂದು ಸಾಬೀತುಪಡಿಸಬಹುದು. ಆತನಿಗೆ ಶಿಕ್ಷೆಯನ್ನೂ ಮಾಡಿಸಬಹುದು. ಆದರೆ ಅದರಿಂದ ನನಗೆ ದೊರೆಯುವುದು ಏನು? ನಾನು ಅತೀವವಾಗಿ ನಂಬಿ ಪ್ರೀತಿಸಿದ ಹುಡುಗನಿಗೆ ನೋವು, ಶಿಕ್ಷೆ ನೀಡಿ ನಾ ಗಳಿಸುವುದಾದರೂ ಏನು ಎಂದು ಪ್ರಶ್ನೆ ಮಾಡಿದ್ದಾರೆ. ನೀನೆ ನನ್ನ ಜೀವ, ನನ್ನ ಪ್ರಾಣ, ನನ್ನ ಕನಸ್ಸು, ನನ್ನ ಉಸಿರು. ‘ನೀನು ಅಥವಾ ಸಾವು’ ನನ್ನ ಮುಂದೆ ಎರಡೇ ಆಯ್ಕೆ ಇದೆ. ಎಲ್ಲವೂ ಸಾಕಾಗಿದೆ. ಪ್ರಪಂಚ, ಜನ, ಜಗತ್ತು. ಈ ಪ್ರಕ್ರಿಯೆಯಲ್ಲಿ ಎಲ್ಲವನ್ನೂ ನೋಡಿಬಿಟ್ಟೆ. ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ
Published by:
Seema R
First published:
April 8, 2021, 8:16 PM IST