• Home
 • »
 • News
 • »
 • entertainment
 • »
 • BBC ಸಾಕ್ಷ್ಯಚಿತ್ರಕ್ಕೆ ಬೀಳುತ್ತಾ ಬ್ರೇಕ್? ಈವರೆಗೆ ಭಾರತ ಸರ್ಕಾರ ಬ್ಯಾನ್ ಮಾಡಿದ ಸಿನಿಮಾಗಳ ಲಿಸ್ಟ್ ಇಲ್ಲಿದೆ

BBC ಸಾಕ್ಷ್ಯಚಿತ್ರಕ್ಕೆ ಬೀಳುತ್ತಾ ಬ್ರೇಕ್? ಈವರೆಗೆ ಭಾರತ ಸರ್ಕಾರ ಬ್ಯಾನ್ ಮಾಡಿದ ಸಿನಿಮಾಗಳ ಲಿಸ್ಟ್ ಇಲ್ಲಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಈ ಹಿಂದೆ ಭಾರತದಲ್ಲಿ ಅನೇಕ ಚಲನಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳನ್ನು ನಿಷೇಧಿಸಲಾಗಿದೆ, ಈ ರೀತಿಯ ನಿಷೇಧವು ಒಂದಲ್ಲ ಒಂದು ವಿಚಿತ್ರ ಕಾರಣವನ್ನು ಆಧರಿಸಿದೆ ಅಂತ ಹೇಳಬಹುದು.

 • Trending Desk
 • 2-MIN READ
 • Last Updated :
 • New Delhi, India
 • Share this:

ನವದೆಹಲಿ: ಯುಕೆಯ ರಾಷ್ಟ್ರೀಯ ಚಾನೆಲ್ ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ British Broadcasting Corporation-BBC) ಇತ್ತೀಚೆಗೆ 2002 ರ ಗುಜರಾತ್ ಗಲಭೆಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು(PM Narendra Modi) ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯನ್ನು ಟೀಕಿಸುವ ಎರಡು ಭಾಗಗಳ ಸರಣಿ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿತ್ತು.


ಇದರ ಹಿನ್ನಲೆಯಲ್ಲಿ ಈಗ ಬಿಬಿಸಿಯ ಸಾಕ್ಷ್ಯಚಿತ್ರ 'ಇಂಡಿಯಾ: ದಿ ಮೋದಿ ಕ್ವಷನ್' ನ ಲಿಂಕ್ ಗಳನ್ನು ಹಂಚಿಕೊಳ್ಳುವ ಅನೇಕ ಯೂಟ್ಯೂಬ್ ವೀಡಿಯೋಗಳು ಮತ್ತು ಟ್ವಿಟರ್ ಪೋಸ್ಟ್ ಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರವು ನಿರ್ದೇಶನ ನೀಡಿದೆ.


ಈ ಹಿಂದೆ ಭಾರತದಲ್ಲಿ ಅನೇಕ ಚಲನಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳನ್ನು ನಿಷೇಧಿಸಲಾಗಿದೆ, ಈ ರೀತಿಯ ನಿಷೇಧವು ಒಂದಲ್ಲ ಒಂದು ವಿಚಿತ್ರ ಕಾರಣವನ್ನು ಆಧರಿಸಿದೆ ಅಂತ ಹೇಳಬಹುದು.


ಅಸ್ಪಷ್ಟವಾದ ವಿಷಯ, ಲೈಂಗಿಕ ದೃಶ್ಯಗಳು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ವಿಷಯಗಳು ಮತ್ತು ಘಟನೆಯನ್ನು ನಾಟಕೀಯವಾಗಿ ತೋರಿಸಿ ವ್ಯಕ್ತಿಯ ವ್ಯಕ್ತಿತ್ವಕ್ಕೆ, ಸಮುದಾಯದ ಜನರ ಭಾವನೆಗೆ ಧಕ್ಕೆ ತರುವ ವಿಷಯಗಳಿರುವ ಕಾರಣದಿಂದ ಅನೇಕ ಚಲನಚಿತ್ರಗಳನ್ನು ನಿಷೇಧಿಸಲಾಗಿದೆ.


ಇದುವರೆಗೆ ಭಾರತ ಸರ್ಕಾರವು ನಿಷೇಧಿಸಿದ 7 ಭಾರತೀಯ ಚಲನಚಿತ್ರಗಳು ಇಲ್ಲಿವೆ ನೋಡಿ..


1. ಬ್ಯಾಂಡಿಟ್ ಕ್ವೀನ್


ಶೇಖರ್ ಕಪೂರ್ ಅವರ ಈ ಚಲನಚಿತ್ರವನ್ನು 'ಆಕ್ರಮಣಕಾರಿ', 'ಅಶ್ಲೀಲ', ಮತ್ತು 'ಅಸಭ್ಯ' ಎಂದು ಟ್ಯಾಗ್ ಮಾಡಲಾಗಿದೆ. ಅಶ್ಲೀಲ ಲೈಂಗಿಕ ವಿಷಯ, ನಗ್ನತೆ ಮತ್ತು ಕಠೋರ ಭಾಷೆಯ ಕಾರಣದಿಂದಾಗಿ ಈ ಚಲನಚಿತ್ರವನ್ನು ಭಾರತದಲ್ಲಿ ಬಿಡುಗಡೆ ಮಾಡದಂತೆ ನಿಷೇಧಿಸಲಾಯಿತು.


ಭಾರತೀಯ ಸೆನ್ಸಾರ್ ಮಂಡಳಿ ಕೂಡ ವಿಷಯವನ್ನು ಅನುಮೋದಿಸಲಿಲ್ಲ. ಜನವರಿ 1996 ರಲ್ಲಿ ಚಿತ್ರದ ಬಿಡುಗಡೆಯ ದಿನಾಂಕದ ಮೊದಲೇ ಈ ಚಲನಚಿತ್ರವನ್ನು ನಿಷೇಧಿಸಲಾಯಿತು.


2. ಬ್ಲ್ಯಾಕ್ ಫ್ರೈಡೇ


ಅನುರಾಗ್ ಕಶ್ಯಪ್ ಅವರ ಈ ಚಿತ್ರವು 1993 ರಲ್ಲಿ ನಡೆದ ಬಾಂಬೆ ಗಲಭೆ ಮತ್ತು ನಂತರದ ತನಿಖೆಯನ್ನು ಆಧರಿಸಿದೆ. ಹುಸೇನ್ ಜೈದಿ ಅವರ ಪುಸ್ತಕವನ್ನು ಆಧರಿಸಿದ ಈ ಚಿತ್ರದಲ್ಲಿ ಕೇ ಕೇ ಮೆನನ್, ಪವನ್ ಮಲ್ಹೋತ್ರಾ, ಗಜರಾಜ್ ರಾವ್, ಆದಿತ್ಯ ಶ್ರೀವಾಸ್ತವ್ ಮತ್ತು ಇತರರು ನಟಿಸಿದ್ದಾರೆ.


1993ರ ಬಾಂಬೆ ಸ್ಫೋಟ ಮತ್ತು ಸ್ಫೋಟದ ಪಿತೂರಿಯನ್ನು ಉಲ್ಲೇಖಿಸಿದ್ದಕ್ಕಾಗಿ ಭಾರತೀಯ ಸೆನ್ಸಾರ್ ಮಂಡಳಿಯು 2004ರಲ್ಲಿ ಬಾಂಬೆ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ಪಡೆಯಿತು.


ಇದನ್ನೂ ಓದಿ: Kareena Kapoor: ಬಾಯ್ಕಾಟ್ ಅಂತ ಕಿರುಚಿ ಆಮೇಲೆ ಮನರಂಜನೆಗೆ ಏನ್ಮಾಡ್ತೀರಾ ಎಂದ ಕರೀನಾ


3. ಫೈರ್


ದೀಪಾ ಮೆಹ್ತಾ ಅವರ ಈ ಚಿತ್ರವು ಜಾಗತಿಕವಾಗಿ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿತು, ಆದರೆ ಭಾರತದಲ್ಲಿ, ಇದು ಕೋಪ ಮತ್ತು ಚರ್ಚೆಯ ವಿಷಯವಾಯಿತು.


ಫೈರ್ ಹಿಂದೂ ಕುಟುಂಬದಲ್ಲಿ ಇಬ್ಬರು ಅತ್ತಿಗೆಯರ ನಡುವಿನ ಸಲಿಂಗಕಾಮಿ ಸಂಬಂಧದ ಬಗ್ಗೆ ತೋರಿಸಿತ್ತು. ಚಿತ್ರದ ವಿಷಯದಿಂದ ಹಿಂದೂ ಗುಂಪುಗಳು ಆಕ್ರೋಶಗೊಂಡವು.


ಶಬಾನಾ ಅಜ್ಮಿ, ನಂದಿತಾ ದಾಸ್ ಮತ್ತು ಚಿತ್ರದ ನಿರ್ದೇಶಕಿ ದೀಪಾ ಮೆಹ್ತಾ ಅವರಿಗೆ ಕೊಲೆ ಬೆದರಿಕೆಗಳು ಬಂದಿವೆ. ಈ ಚಿತ್ರವು ಚಿತ್ರಮಂದಿರಗಳಿಗೆ ಬರಲೇ ಇಲ್ಲ.


4. ಕಾಮಸೂತ್ರ - ಎ ಟೇಲ್ ಆಫ್ ಲವ್


16ನೇ ಶತಮಾನದಲ್ಲಿ ನಾಲ್ಕು ಪ್ರೇಮಿಗಳ ಜೀವನದ ಸುತ್ತ ಸುತ್ತುವ ಮೀರಾ ನಾಯರ್ ಚಲನಚಿತ್ರವನ್ನು ಅದರ ಲೈಂಗಿಕ ವಿಷಯದಿಂದಾಗಿ ಭಾರತದಲ್ಲಿ ನಿಷೇಧಿಸಲಾಯಿತು. ಕಾಮಸೂತ್ರದ ಪರಿಕಲ್ಪನೆಗೆ ಜನ್ಮ ನೀಡಿದ ಭಾರತದಲ್ಲಿ ಈ ಚಲನಚಿತ್ರವನ್ನು ನಿಷೇಧಿಸಲಾಯಿತು.


5. ಪಾಂಚ್


ಅನುರಾಗ್ ಕಶ್ಯಪ್ ಅವರ ನಿರ್ದೇಶನದ ಮೊಟ್ಟಮೊದಲ ಚಲನಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿಲ್ಲ. ಕೇ ಕೇ ಮೆನನ್, ಆದಿತ್ಯ ಶ್ರೀವಾಸ್ತವ್, ವಿಜಯ್ ಮೌರ್ಯ, ಶರತ್ ಸಕ್ಸೇನಾ ಮತ್ತು ಜಾಯ್ ಫರ್ನಾಂಡಿಸ್ ನಟಿಸಿದ ಚಿತ್ರವನ್ನು 2006 ರಲ್ಲಿ ಅಸಭ್ಯ ಭಾಷೆ ಮತ್ತು ಮಾದಕ ದ್ರವ್ಯ ಸೇವನೆಯಿಂದಾಗಿ ಭಾರತದಲ್ಲಿ ಬಿಡುಗಡೆಯಾಗದಂತೆ ನಿಷೇಧಿಸಲಾಯಿತು. ಈ ಚಿತ್ರವು 1976-77ರಲ್ಲಿ ಪುಣೆಯಲ್ಲಿ ನಡೆದ ಜೋಶಿ-ಅಭಯಂಕರ್ ಸರಣಿ ಕೊಲೆಗಳ ಘಟನೆಗಳನ್ನು ಆಧರಿಸಿತ್ತು.


6. ಅನ್ಫ್ರೀಡಂ


ರಾಜ್ ಅಮಿತ್ ಕುಮಾರ್ ನಿರ್ದೇಶನದ ಈ ಚಿತ್ರವು ಸಲಿಂಗಕಾಮಿ ದಂಪತಿಗಳ ಕಥೆಯನ್ನು ಹೇಳುತ್ತದೆ ಮತ್ತು ಈ ಕಥೆಯು ಭಯೋತ್ಪಾದನೆಯ ವಿಷಯವನ್ನು ಸಹ ಹೊಂದಿತ್ತು, ಇದನ್ನು 2014 ರಲ್ಲಿ ನಿಷೇಧಿಸಲಾಯಿತು.
ಆದಿಲ್ ಹುಸೇನ್, ಪ್ರೀತಿ ಗುಪ್ತಾ, ಭವಾನಿ ಲೀ ಮತ್ತು ವಿಕ್ಟರ್ ಬ್ಯಾನರ್ಜಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಎಂದಿಗೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿಲ್ಲ, ಆದರೆ ಇದು ಈಗ ನೆಟ್‌ಫ್ಲಿಕ್ಸ್ ನಲ್ಲಿ ಲಭ್ಯವಿದೆ.


7. ಪರ್ಝಾನಿಯಾ


ರಾಹುಲ್ ಡೋಲಕಿಯಾ ನಿರ್ದೇಶನದ ಈ ಚಿತ್ರವು 2002 ರ ಗುಜರಾತ್ ಗಲಭೆಯ ಸಮಯದಲ್ಲಿ ಕಾಣೆಯಾದ ಅಜರ್ ಎಂಬ ಹುಡುಗನ ಜೀವನದ ಸುತ್ತ ಸುತ್ತುತ್ತದೆ.


ಈ ಚಿತ್ರದಲ್ಲಿ ನಾಸಿರುದ್ದೀನ್ ಶಾ, ಕೋರಿನ್ ನೆಮೆಕ್, ಶೀಬಾ ಚಡ್ಡಾ, ಆಸಿಫ್ ಬಸ್ರಾ, ಸಾರಿಕಾ ಠಾಕುರಾ ಮತ್ತು ರಾಜ್ ಜುಟ್ಶಿ ನಟಿಸಿದ್ದಾರೆ. ಈ ಚಿತ್ರವು ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದುಕೊಂಡಿತು, ಆದರೆ ಭಜರಂಗದಳವು ಈ ಚಿತ್ರದ ಪ್ರದರ್ಶನವನ್ನು ನಿಲ್ಲಿಸುವಂತೆ ಚಿತ್ರಮಂದಿರ ಮಾಲೀಕರನ್ನು ಒತ್ತಾಯಿಸಿದ ನಂತರ ಅನಧಿಕೃತ ನಿಷೇಧವನ್ನು ಎದುರಿಸಬೇಕಾಯಿತು. 

Published by:Latha CG
First published: