ನಿರೀಕ್ಷೆ ಹುಟ್ಟಿಸಿದೆ 'ಬಜಾರ್​'ನ 2ನೇ ಟೀಸರ್​

news18
Updated:July 3, 2018, 3:59 PM IST
ನಿರೀಕ್ಷೆ ಹುಟ್ಟಿಸಿದೆ 'ಬಜಾರ್​'ನ 2ನೇ ಟೀಸರ್​
news18
Updated: July 3, 2018, 3:59 PM IST
ನ್ಯೂಸ್​ 18 ಕನ್ನಡ
'ಸಿಂಪಲ್​ ಆಗೊಂದ್​ ಲವ್​ ಸ್ಟೋರಿ' ಸಿನಿಮಾ ಮಾಡಿದ್ದೇ ಮಾಡಿದ್ದು.. ನಿರ್ದೇಶಕ ಸುನಿ ಅವರ ಹೆಸರು ಎಲ್ಲರ ಮನಸಲ್ಲೂ ಅಚ್ಚೊತ್ತಿಬಿಟ್ಟಿತು. ಬಳಿಕ ನಿರ್ದೇಶನ ಮಾಡಿದ 'ಬಹುಪರಾಕ್​', 'ಸಿಂಪಲ್​ ಆಗಿ ಇನ್ನೊಂದ್​ ಲವ್​​ಸ್ಟೋರಿ', 'ಆಪರೇಷನ್​ ಅಲಮೇಲಮ್ಮ', 'ಚಮಕ್​' ಸಿನಿಮಾಗಳಲ್ಲಿ ಸುನಿ ಅವರ ಡೈಲಾಗ್​ಗಳು ಗಮನಸೆಳೆದಿತ್ತು.

ಮೊದಲ ಸಿನಿಮಾದಿಂದಲೂ ಸರಳವಾದ ಮತ್ತು ಲಘುವಾದ ಕತೆಯನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿರುವ ಸುನಿ ಇದೀಗ 'ಬಜಾರ್'​ ಎಂಬ ಹೊಸಬಗೆಯ ಸಿನಿಮಾ ಮಾಡುತ್ತಿದ್ದಾರೆ. ನೋಡಲು ಪಕ್ಕಾ ಕಮರ್ಷಿಯಲ್​ ಸಿನಿಮಾದಂತೆ ಕಾಣುತ್ತಿರುವ ಈ ಸಿನಿಮಾದ 2ನೇ ಟೀಸರ್​ ನಿನ್ನೆಯಷ್ಟೇ ಬಿಡುಗಡೆಯಾಗಿದೆ.ಧನವೀರ್ ಗೌಡ ಎಂಬ ಹೊಸ ನಾಯಕನನ್ನು ಪರಿಚಯಿಸುತ್ತಿರುವ ಸುನಿಯ 'ಬಜಾರ್'​ ಸಿನಿಮಾದ ಟೀಸರ್​ ಸಂತೋಷ್​ ರೈ ಪಾತಾಜೆ ಅವರ ಕ್ಯಾಮೆರಾ ವರ್ಕ್​ನಿಂದ ಗಮನಸೆಳೆಯುವಂತಿದೆ. ರವಿ ಬಸ್ರೂರ್​ ಸಂಗೀತ ನೀಡುರುವ ಈ ಸಿನಿಮಾದ ನಾಯಕಿಯಾಗಿ 'ಧೈರ್ಯಂ' ಖ್ಯಾತಿಯ ಅದಿತಿ ಪ್ರಭುದೇವ ಕಾಣಿಸಿಕೊಳ್ಳಲಿದ್ದಾರೆ.
First published:July 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...