Bangaraaju Movie Review: ಕೊಟ್ಟ ಕಾಸಿಗೆ ಮೋಸ ಮಾಡಲ್ಲ ಅಪ್ಪ-ಮಗ: ಮಾಸ್‌ಗೆ ಮಾಸ್..‌ ಕ್ಲಾಸ್​ಗೆ ಕ್ಲಾಸ್​ ಬಂಗಾರ್​ರಾಜು..

ಬಂಗಾರರಾಜು ಚಿತ್ರದ ನಿರ್ದೇಶಕ ಕಲ್ಯಾಣ್ ಕೃಷ್ಣ ನಾಗ ಚೈತನ್ಯ ಹಾಗೂ ನಾಗಾರ್ಜುನ ಅವರ ಜೋಡಿ ಅಭಿನಯವನ್ನು ಚಿತ್ರದಲ್ಲಿ ಹಾಗೆಯೇ ತರಲು ಕಷ್ಟಪಟ್ಟಿರುವುದು ಅರಿವಾಗುತ್ತದೆ. ಸೊಗ್ಗಡೆ ಚಿನ್ನಿ ನಯನದಂತಹ ಗ್ರಾಮೀಣ ಅಂಶವನ್ನು ತೆರೆಯ ಮೇಲೆ ಮೂಡಿಸುವುದು ಕೊಂಚ ಸವಾಲಿನ ಕೆಲಸವೇ ಆಗಿದೆ.

ಬಂಗಾರ ರಾಜು ಚಿತ್ರದ ಪೋಸ್ಟರ್

ಬಂಗಾರ ರಾಜು ಚಿತ್ರದ ಪೋಸ್ಟರ್

  • Share this:
ಸೊಗ್ಗಾಡೆ ಚಿನ್ನಿನಯನ ಮುಂದಿನ ಭಾಗವಾದ ಬಂಗಾರ ರಾಜು (Bangarrajuu) ಚಿತ್ರಕಥೆ ಅತ್ಯಂತ ಮನೋರಂಜನೀಯವಾಗಿದ್ದು ಒಂದು ರೀತಿ ಹಾಸ್ಯ ಮಿಶ್ರಿತ ಕಥಾ ಹಂದರವನ್ನು ಹೊಂದಿದೆ. ನಾಗಾರ್ಜನ ಅಕ್ಕಿನೇನಿ (Nagarjuna Akkineni) ಹಿರಿಯ ಬಂಗಾರ ರಾಜುವಾಗಿ ಚಿತ್ರದಲ್ಲಿ ನಟಿಸಿದ್ದು ಅವರ ಮೊಮ್ಮಗ ಬಂಗಾಗ ರಾಜು (ನಾಗ ಚೈತನ್ಯ) (Naga Chaitanya) ಆತ್ಮವನ್ನು ಪ್ರವೇಶಿಸಿದಾಗ(Spirit Enters) ಏನಾಗುತ್ತದೆ ಎಂಬುದನ್ನೇ ಚಿತ್ರ ರಸಿಕರ ಮುಂದೆ ಪ್ರದರ್ಶಿಸುತ್ತದೆ. ಅಜ್ಜನಂತೆಯೇ ಮೊಮ್ಮಗ ಕೂಡ ಅದೇ ರೀತಿಯ ಲೌಕಿಕ ಬುದ್ಧಿವಂತಿಕೆಯನ್ನು ಪಡೆದವನಾಗಿರುತ್ತಾನೆ.

80 ರ ದಶಕದ ಚಿತ್ರಕಥೆ
ಬಂಗಾರರಾಜು ಚಿತ್ರದ ನಿರ್ದೇಶಕ ಕಲ್ಯಾಣ್ ಕೃಷ್ಣ ನಾಗ ಚೈತನ್ಯ ಹಾಗೂ ನಾಗಾರ್ಜುನ ಅವರ ಜೋಡಿ ಅಭಿನಯವನ್ನು ಚಿತ್ರದಲ್ಲಿ ಹಾಗೆಯೇ ತರಲು ಕಷ್ಟಪಟ್ಟಿರುವುದು ಅರಿವಾಗುತ್ತದೆ. ಸೊಗ್ಗಡೆ ಚಿನ್ನಿ ನಯನದಂತಹ ಗ್ರಾಮೀಣ ಅಂಶವನ್ನು ತೆರೆಯ ಮೇಲೆ ಮೂಡಿಸುವುದು ಕೊಂಚ ಸವಾಲಿನ ಕೆಲಸವೇ ಆಗಿದೆ. ಚಿತ್ರದ ಸಂವೇದನೆಗಳು ಪುಷ್ಪ ಅಥವಾ ರಂಗಸ್ಥಳದಷ್ಟು ಕಚ್ಚಾ ಆಗಿರಲು ಸಾಧ್ಯವಿಲ್ಲ.

ಲವ್ ಸ್ಟೋರಿ ಚಿತ್ರದಲ್ಲಿ ಪರಿಣಾಮಕಾರಿಯಾಗಿ ನಟಿಸಿದ್ದ ನಾಗ ಚೈತನ್ಯ ಗ್ರಾಮೀಣ ಪಾತ್ರದಲ್ಲಿ ನಟಿಸಲು ಕೊಂಚ ಕಷ್ಟಪಟ್ಟಿರುವುದು ಕಂಡುಬಂದಿದೆ. 80 ರ ದಶಕದ ಚಿತ್ರಕಥೆಯನ್ನು ಯಥಾವತ್ತಾಗಿ ಪ್ರೇಕ್ಷಕರ ಮುಂದೆ ಉಣಬಡಿಸಲು ನಿರ್ದೇಶಕರು ಶ್ರಮ ಪಟ್ಟಿದ್ದರೂ ಕೊಂಚ ಮಸಾಲೆಗಳನ್ನು ಸೇರಿಸಿ ಸಿನಿ ರಸಿಕರನ್ನು ಹಿಡಿದಿಡಲು ಪ್ರಯತ್ನಿಸಿರುವುದು ಕಂಡುಬಂದಿದೆ.

ಕುಟುಂಬ ಸ್ನೇಹಿ
ನಾಯಕ ನಟಿಯರ ಪಾತ್ರಗಳಲ್ಲಿ ಮಿಂಚಿರುವ ಕೃತಿ ಶೆಟ್ಟಿ ಹಾಗೂ ರಮ್ಯಾ ಕೃಷ್ಣ ಅಜ್ಜ ಮೊಮ್ಮಗನ ಜುಗಲ್‌ಬಂಧಿಗೆ ಸಾಕ್ಷಿಯಾಗಿದ್ದು ಇಬ್ಬರ ಹಾಸ್ಯಗಳಿಗೆ ಸ್ಪಂದಿಸುವ ಪಾತ್ರದಲ್ಲಿ ಮಿಂಚಲು ಪ್ರಯತ್ನಿಸಿರುವುದು ಬಾಹ್ಯರೂಪದಲ್ಲಿ ಕಂಡುಬಂದಿದೆ. ಸೊಕ್ಕಿನ ಪಾತ್ರಧಾರಿಯಲ್ಲಿ ಮಿಂಚಿರುವ ಕೃತಿ ಶೆಟ್ಟಿ ತಮ್ಮ ಪಾತ್ರಕ್ಕೆ ಜೀವ ತುಂಬುವನ್ನು ಸಾಕಷ್ಟು ಕಷ್ಟಪಟ್ಟಿದ್ದಾರೆ. ಇನ್ನು ರಮ್ಯ ಕೃಷ್ಣ ಕೂಡ ಹಳೆಯ ತಲೆಮಾರಿನ ಪಾತ್ರದಲ್ಲಿ ಮಿಂಚಿದ್ದಾರೆ.

ಇದನ್ನೂ ಓದಿ: Rachita Ram: ನೆಲಕಚ್ಚಿದ ರಚ್ಚು ಮೊದಲ ತೆಲುಗು ಚಿತ್ರ ‘ಸೂಪರ್​ ಮಚ್ಚಿ’.. ಒಂದು ರೂಪಾಯಿನೂ ಕಲೆಕ್ಷನ್​ ಮಾಡಿಲ್ವಂತೆ!

ಮುರಾರಿ ಚಿತ್ರದಂತೆ , ಅವರು ಕುಟುಂಬ ಸ್ನೇಹಿ, ಫೀಲ್-ಗುಡ್ ಚಲನಚಿತ್ರವನ್ನು ನೀಡಬೇಕು, ಆದರೆ ಕಥೆಯಲ್ಲಿನ ಅಸ್ತಿತ್ವವಾದದ ಉದ್ವೇಗ ಮತ್ತು ಮನುಷ್ಯ-ವಿರುದ್ಧ-ಸಾವಿನ ಥೀಮ್ ಅನ್ನು ಬಿಡುವಂತಿಲ್ಲ . ಬಂಗಾರ ರಾಜು ಹಬ್ಬದ ಕೊಡುಗೆಯಾಗಿದ್ದು, ಸರಳ ಹಾಗೂ ಹಾಸ್ಯದ ಕಥಾ ಹಂದರಗಳನ್ನು ನಿರೀಕ್ಷಿಸುವ ಕುಟುಂಬಕ್ಕೆ ಈ ಚಿತ್ರ ರಸದೌತಣವಾಗಿದೆ. ಒಟ್ಟಿನಲ್ಲಿ ಚಿತ್ರದ ತಾರಾಗಣ ಸೌಮ್ಯವಾದ ಕಥೆಯನ್ನು ತೆರೆಯಲ್ಲಿ ತರಲು ಕಷ್ಟಪಟ್ಟಿರುವುದು ನಿಚ್ಚಳವಾಗಿ ಕಂಡುಬಂದಿದೆ.

ಪೆದ್ದ ಬಂಗಾರರಾಜು
ಚಿತ್ರದಲ್ಲಿ ಅಪ್ಯಾಯಮಾನವಾಗಿರುವ ಇನ್ನೊಂದು ಅಂಶವೆಂದರೆ ಸ್ವರ್ಗ ಮತ್ತು ನರಕವನ್ನು ಪ್ರತಿನಿಧಿಸಲಾದ ವಿಧಾನವಾಗಿದೆ. ಅನಿಮೇಷನ್‌ನಲ್ಲಿ ದೃಶ್ಯಗಳನ್ನು ಪ್ರದರ್ಶಿಸಿದ ರೀತಿ ಮತ್ತು ಸ್ಥಳಗಳನ್ನು ಪುನರಾವರ್ತಿಸಿದ ವಿಧಾನದಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ .ಆಂಧ್ರಪ್ರದೇಶದ ಕರಾವಳಿಯ ಸುಂದರವಾದ ಹಳ್ಳಿಯಲ್ಲಿ ಚಿನ್ನ ಬಂಗಾರರಾಜು (ನಾಗ ಚೈತನ್ಯ) ಎಂಬ ಅನಾಥ ಹುಡುಗ ವಾಸಿಸುತ್ತಿರುತ್ತಾನೆ .

ತಾಯಿಯ ಪ್ರೀತಿ ಮತ್ತು ತಂದೆಯ ಆರೈಕೆ ಇಲ್ಲದೆ ಬೆಳೆದ ಅವನನ್ನು ಸತ್ಯಮ್ಮ (ರಮ್ಯಾ ಕೃಷ್ಣನ್) ಬೆಳೆಸುತ್ತಾಳೆ. ಅವಳು ಸತ್ತ ನಂತರ ಚಿನ್ನ ಬಂಗಾರರಾಜುವಿನ ಸಂಪತ್ತಿಗೆ ನಿರ್ಲಜ್ಜ ಸಂಬಂಧಿಕರು ಮತ್ತು ದುಷ್ಟರು ದಾಳಿ ಮಾಡುತ್ತಾರೆ. ಪೆದ್ದ ಬಂಗಾರರಾಜು (ನಾಗಾರ್ಜುನ) ಮತ್ತು ಸತ್ಯಮ್ಮ ಅವರ ಆತ್ಮಗಳು ಅವನ ಜೀವನದಲ್ಲಿ ಮಧ್ಯಪ್ರವೇಶಿಸಿ ಅವನನ್ನು ಜವಾಬ್ದಾರಿ ಮತ್ತು ಪ್ರೀತಿಯ ಹಾದಿಯಲ್ಲಿ ಮುನ್ನಡೆಸುತ್ತವೆ.

ಉಪಕಥಾವಸ್ತುವು ನಾಗಲಕ್ಷ್ಮಿ (ಕೃತಿ ಶೆಟ್ಟಿ), ಅವರ ಸೋದರ ಸಂಬಂಧಿ ಮತ್ತು ಸರಪಂಚರನ್ನು ಒಳಗೊಂಡಿದೆ. ಅವರೊಂದಿಗೆ ದ್ವೇಷ-ಪ್ರೇಮ ಸಂಬಂಧವನ್ನು ಚಿನ್ನ ಬಂಗಾರರಾಜು ಹೊಂದಿರುವುದಲ್ಲದೆ, ಅವನು ತನ್ನ ಸ್ನೇಹಿತ ಆದಿ (ಗೋವಿಂದ ಪದ್ಮಸೂರ್ಯ) ಮೂಲಕ ದೈವಿಕ ರೀತಿಯಲ್ಲಿ ಬಂಗಾರರಾಜು ಅವರೊಂದಿಗೆ ಸಂಪರ್ಕ ಹೊಂದುತ್ತಾನೆ.

ನಾಟಕೀಯ ಮತ್ತು ಭಾವನಾತ್ಮಕ ದೃಶ್ಯ
ಬಂಗಾರರಾಜು ಪ್ರವೇಶ ಸಮಯಕ್ಕೆ ಮುಂಚೆಯೇ ಆಗುವುದರಿಂದ , ಕಲ್ಯಾಣ ಕೃಷ್ಣ ಅವರ ಚಿತ್ರಕಥೆಯು ಚಿನ್ನ ಬಂಗಾರರಾಜುಗೆ ಏನಾಗುತ್ತದೆ ? ಎಂಬ ಉದ್ವೇಗವನ್ನು ಎಂದಿಗೂ ನಿರ್ಮಿಸುವುದಿಲ್ಲ. ಕಿರಿಯ ಬಂಗಾರರಾಜು ವ್ಯಥೆಪಡುವ ಸಂದರ್ಭಗಳಾಗಲೀ ಅಥವಾ ಆತನಿಗೆ ನಿಜವಾದ ಬೆದರಿಕೆಗಳಾಗಲೀ ಕಥೆಯಲ್ಲಿ ಗೋಚರಿಸುವುದಿಲ್ಲ.

ಮುರಾರಿಯಲ್ಲಿ ಮಹೇಶ್ ಬಾಬು ಅವರ ಜೀವಕ್ಕೆ ಕಂಟಕವಿತ್ತು ಮತ್ತು ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಅವಘಡ ಸಂಭವಿಸುವ ಸಾಧ್ಯತೆ ಇತ್ತು. ಈ ಚಿತ್ರವನ್ನು ಇನ್ನಷ್ಟು ಕಥೆಯ ವಿವರಗಳಿಂದ ವಿಸ್ತರಿಸಬಹುದಿತ್ತು ಎಂಬುದು ಒಂದು ರೀತಿಯ ಅನಿಸಿಕೆಯಾಗಿದ್ದು ಇದರ ಪರಿಣಾಮವಾಗಿಯೇ ನಾಟಕೀಯ ಮತ್ತು ಭಾವನಾತ್ಮಕ ದೃಶ್ಯಗಳು ಹೆಚ್ಚಾದವು ಎಂಬುದು ಅನ್ನಿಸುತ್ತದೆ.

ಇದನ್ನೂ ಓದಿ: Mahesh Babu: ಮಗುವಿನ ಹೃದಯ ಶಸ್ತ್ರಚಿಕಿತ್ಸೆಗೆ ನೆರವಾದ ಮಹೇಶ್ ಬಾಬು... ನೀವು ನಿಜವಾಗಲೂ ಹೀರೋ ಸರ್​..!

ಆದರೂ ಚಿತ್ರವು ಕಥಾವಸ್ತುವನ್ನು ಮುಂದಕ್ಕೆ ತಳ್ಳುವ ಅಂಶವನ್ನು ತಡೆದಿದ್ದು, ಮತ್ತು ಕಥಾವಸ್ತುವನ್ನು ಪ್ರದರ್ಶಿಸುವುದಕ್ಕಿಂತ ಹೆಚ್ಚಾಗಿ ನಾಗಾರ್ಜುನ ಮತ್ತು ನಾಗ ಚೈತನ್ಯರನ್ನು ಒಟ್ಟಿಗೆ ತೋರಿಸಿರುವ ದೃಶ್ಯಗಳ ಕಡೆಗೆ ಹೆಚ್ಚಿನ ಗಮನಹರಿಸುತ್ತದೆ. ಹಲವಾರು ಸ್ಲೋ-ಮೋಷನ್ ಶಾಟ್‌ಗಳು ಈ ಚಿತ್ರದಲ್ಲಿ ತುಂಬಿದ್ದು ಅವರು ನಡೆಯುವುದು, ತಮ್ಮ ಶರ್ಟ್‌ಗಳನ್ನು ಎಳೆಯುವುದು ಮತ್ತು ಒಂದೇ ರೀತಿಯ ಸಾಲುಗಳನ್ನು ಒಟ್ಟಿಗೆ ಹೇಳುವುದು ಹೀಗೆ ಮೊದಲಾದ ಅಂಶಗಳನ್ನು ಕಾಣಬಹುದು, ಇಲ್ಲಿ ಇನ್ನೊಂದು ಅಂಶವೆಂದರೆ ಏಕೆಂದರೆ ಹಿರಿಯ ಬಂಗಾರರಾಜು ಕಿರಿಯ ಬಂಗಾರ ರಾಜುವಿನ ದೇಹದೊಳಗೆ ಮತ್ತು ಹೊರಗೆ ಪರಾಕಾಯ ಪ್ರವೇಶವನ್ನು ಮಾಡುತ್ತಲೇ ಇರುತ್ತಾರೆ.
Published by:vanithasanjevani vanithasanjevani
First published: