KGF Star Yash: ಫೇಸ್​ಬುಕ್​ನಲ್ಲಿ ಚಾಲೆಂಜ್ ಹಾಕಿ ಸುದ್ದಿಯಾದ ರಾಕಿಂಗ್ ಸ್ಟಾರ್ ಯಶ್!

Actor Yash: 2ನೇ ಮಗುವಿನ ಆಗಮನವಾಗಿರುವುದರಿಂದ ಆ ಸಂಭ್ರಮದಲ್ಲಿ ನಟ ಯಶ್​ ತೇಲಾಡುತ್ತಿದ್ದಾರೆ. ಇದರ ಜೊತೆಗೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ರಾಷ್ಟ್ರಕವಿ ಕುವೆಂಪು ರಚಿಸಿರುವ ವಿಶ್ವಮಾನವ ಗೀತೆಯನ್ನು ಓದುವ ಮೂಲಕ ರಾಕಿಂಗ್ ಸ್ಟಾರ್ ಯಶ್ ಕನ್ನಡ ಪ್ರೇಮ ಪಸರಿಸಿದ್ದಾರೆ.

Sushma Chakre | news18-kannada
Updated:November 12, 2019, 11:29 AM IST
KGF Star Yash: ಫೇಸ್​ಬುಕ್​ನಲ್ಲಿ ಚಾಲೆಂಜ್ ಹಾಕಿ ಸುದ್ದಿಯಾದ ರಾಕಿಂಗ್ ಸ್ಟಾರ್ ಯಶ್!
ಯಶ್​
Sushma Chakre | news18-kannada
Updated: November 12, 2019, 11:29 AM IST
ಸಿನಿಮಾ ಶೂಟಿಂಗ್, ಡಬ್ಬಿಂಗ್, ಪ್ರಮೋಷನ್ ಎಂದೆಲ್ಲ ಸದಾ ಬ್ಯುಸಿಯಾಗಿರುವ ರಾಕಿಂಗ್ ಸ್ಟಾರ್ ಯಶ್ 2ನೇ ಮಗುವಿನ ಆಗಮನಕ್ಕೆ ಕಾಯುತ್ತಿದ್ದುದರಿಂದ 2 ತಿಂಗಳಿಂದ ಪತ್ನಿ ರಾಧಿಕಾ ಪಂಡಿತ್ ಜೊತೆಗೆ ಹೆಚ್ಚು ಸಮಯ ಕಳೆದಿದ್ದರು. ಇದೀಗ 2ನೇ ಮಗುವಿನ ಆಗಮನವಾಗಿರುವುದರಿಂದ ಆ ಸಂಭ್ರಮದಲ್ಲಿ ಯಶ್​ ತೇಲಾಡುತ್ತಿದ್ದಾರೆ. ಇದರ ಜೊತೆಗೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ  ರಾಷ್ಟ್ರಕವಿ ಕುವೆಂಪು ರಚಿಸಿರುವ 'ವಿಶ್ವಮಾನವ' ಗೀತೆಯನ್ನು ಓದುವ ಮೂಲಕ ರಾಕಿಂಗ್ ಸ್ಟಾರ್ ಯಶ್ ಕನ್ನಡ ಪ್ರೇಮವನ್ನು ಪಸರಿಸಿದ್ದಾರೆ. ಅಷ್ಟೇ ಅಲ್ಲ... ತಮ್ಮ ಐವರು ಆತ್ಮೀಯರಿಗೆ ಸವಾಲನ್ನೂ ಹಾಕಿದ್ದಾರೆ!

ಪ್ರತಿ ವರ್ಷ ನ. 1ರಂದು ಕನ್ನಡ, ಕರ್ನಾಟಕದ ಬಗ್ಗೆ ಬಣ್ಣನೆ ಇರುವ ಸಂದೇಶಗಳನ್ನು ವಾಟ್ಸಾಪ್​, ಫೇಸ್​ಬುಕ್​ನಲ್ಲಿ ಕಳುಹಿಸುವ ಮೂಲಕ, ಅಲ್ಲಲ್ಲಿ ಕನ್ನಡ ಧ್ವಜವನ್ನು ಹಾರಿಸುವ ಮೂಲಕ, ಬೀದಿಗಳಲ್ಲಿ ಮೈಕ್ ಹಾಕಿ ಕನ್ನಡ ಗೀತೆಗಳನ್ನು ಮೊಳಗಿಸುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಿ ಆ ದಿನವನ್ನು ಅಲ್ಲಿಗೇ ಬಿಡಲಾಗುತ್ತದೆ.

KGF Chapter 2: ಕೆಜಿಎಫ್ ಸಂಗೀತ ನಿರ್ದೇಶಕ ರವಿ ಬಸ್ರೂರ್ ಕಿಡ್ನಾಪ್; ವಿಡಿಯೋ ಹರಿಬಿಟ್ಟ ಆಗಂತುಕರು

ಆದರೆ, ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ವಿಭಿನ್ನವಾಗಿ ಮತ್ತು ಅರ್ಥಗರ್ಭಿತವಾಗಿ ಆಚರಿಸಲು ಕೆಲವು ಸಾಹಿತಿಗಳು, ನಟರು, ಕನ್ನಡಪ್ರೇಮಿಗಳು ಮುಂದಾಗಿದ್ದರು. ಕನ್ನಡದ ಯಾವುದಾದರೂ ಒಂದು ಗೀತೆಯನ್ನು ವಾಚನ ಮಾಡಿ ಆ ಸವಾಲನ್ನು ಇನ್ನೂ 5 ಜನರಿಗೆ ವರ್ಗಾಯಿಸುವ ಮೂಲಕ ಫೇಸ್​ಬುಕ್​ನಲ್ಲಿ ಕನ್ನಡದ ಕಂಪು ಪಸರಿಸುವ ಮತ್ತು ಕನ್ನಡ ಕಾವ್ಯಗಳನ್ನು ಮತ್ತೊಮ್ಮೆ ಮೆಲುಕು ಹಾಕುವ ಉದ್ದೇಶ ಈ ಸವಾಲಿನದ್ದಾಗಿತ್ತು.


ಪತ್ರಕರ್ತ ಹಾಗೂ ಸಾಹಿತಿ ಜೋಗಿ ಅವರಿಗೆ ನಟ ಪ್ರಕಾಶ್ ಬೆಳವಾಡಿ ಕವಿತೆ ಓದುವ ಸವಾಲು ಹಾಕಿದ್ದರು. ಆ ಸವಾಲನ್ನು ಸ್ವೀಕರಿಸಿ ಸಂಧ್ಯಾ ರಾಣಿ ಅವರ 'ಪಯಣ' ಕವಿತೆಯನ್ನು ಓದಿದ್ದ ಜೋಗಿ ರಾಕಿಂಗ್ ಸ್ಟಾರ್ ಯಶ್, ಪ್ರಕಾಶ್ ರೈ, ಯೋಗರಾಜ್ ಭಟ್ ಸೇರಿದಂತೆ ಐವರಿಗೆ ಈ ಸವಾಲನ್ನು ನೀಡಿದ್ದರು.


Loading...

ಅದರಂತೆ ತಮಗೆ ಬಂದ ಸವಾಲನ್ನು ಸ್ವೀಕರಿಸಿರುವ ನಟ ಯಶ್ ಕುವೆಂಪು ಬರೆದಿರುವ ಓ ನನ್ನ ಚೇತನ ಕವಿತೆಯನ್ನು ಓದಿದ್ದಾರೆ. ಅಷ್ಟೇ ಅಲ್ಲ, ಕನ್ನಡ ಕವಿತೆ ಓದುವ ಸವಾಲನ್ನು ತಮ್ಮ ಗುರುಗಳಾದ ನಿರ್ದೇಶಕ ಟಿ.ಎಸ್. ನಾಗಾಭರಣ, ಚಿತ್ರಸಾಹಿತಿಗಳಾದ ನಾಗೇಂದ್ರ ಪ್ರಸಾದ್, ನಟರಾದ ಚಿಕ್ಕಣ್ಣ, ಆರ್ಮುಗಂ ಖ್ಯಾತಿಯ ರವಿಶಂಕರ್, ಹಾಗೂ ಸಿಲ್ಲಿ ಲಲ್ಲಿ ಖ್ಯಾತಿಯ ರವಿಶಂಕರ್​ ಅವರಿಗೆ ಕನ್ನಡ ಕವಿತೆ ಓದುವ ಸವಾಲನ್ನು ಹಸ್ತಾಂತರಿಸಿದ್ದಾರೆ.

 
First published:November 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...