‘ಪೊಗರು‘ ಸಿನಿಮಾ ಪೋಸ್ಟರ್​ ಬಳಸಿಕೊಂಡು ಕೊರೋನಾ ಜಾಗೃತಿ ಮೂಡಿಸುತ್ತಿರುವ ಬೆಂಗಳೂರು ಸಿಟಿ ಪೊಲೀಸರು

Bangalore City Police: ಸ್ಯಾಂಡಲ್​ವುಡ್​ ಸಿನಿಮಾಗಳ ಹೆಸರನ್ನು ಬಳಸಿಕೊಂಡು ಕೊರೋನಾ ಬಗ್ಗೆ ವಿಶೇಷವಾದ ಪೋಸ್ಟರ್​ ಚಿತ್ರಿಸಿ ಅವುಗಳ ಮೂಲಕ ಜನರಿಗೆ ಜಾಗೃತಿ ಸಂದೇಶ ರವಾನಿಸುತ್ತಿದ್ದಾರೆ. ಕೊರೋನಾ ಲಾಕ್​ಡೌನ್​ ಶುರುವಾಗಿನಿಂದ ಜಾಗೃತಿ ಕುರಿತಾದ ಕಾರ್ಯವನ್ನು ಬೆಂಗಳೂರು ಪೊಲೀಸರು ಮಾಡುತ್ತಾ ಬಂದಿದ್ದಾರೆ.

ಪೊಗರು

ಪೊಗರು

 • Share this:
  ಕೊರೋನಾ ವಿರುದ್ಧ ಜಾಗೃತಿ ಮೂಡಿಸಲು ಬೆಂಗಳೂರು ಪೊಲೀಸರು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಹಗಲು ರಾತ್ರಿ ದುಡಿಯುತ್ತಿದ್ದಾರೆ. ಜೊತೆಗೆ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಕೇಳಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಪೋಸ್ಟರ್​​ಗಳ್ನು ಬಳಸಿ ವಿಶೇಷವಾಗಿ ಜಾಗೃತಿ ಮೂಡಿಸುವ ಮೊರೆಹೋಗಿದ್ದಾರೆ.

  ಸ್ಯಾಂಡಲ್​ವುಡ್​ ಸಿನಿಮಾಗಳ ಹೆಸರನ್ನು ಬಳಸಿಕೊಂಡು ಕೊರೋನಾ ಬಗ್ಗೆ ವಿಶೇಷವಾದ ಪೋಸ್ಟರ್​ ಚಿತ್ರಿಸಿ ಅವುಗಳ ಮೂಲಕ ಜನರಿಗೆ ಜಾಗೃತಿ ಸಂದೇಶ ರವಾನಿಸುತ್ತಿದ್ದಾರೆ. ಕೊರೋನಾ ಲಾಕ್​ಡೌನ್​ ಶುರುವಾಗಿನಿಂದ ಜಾಗೃತಿ ಕುರಿತಾದ ಕಾರ್ಯವನ್ನು ಬೆಂಗಳೂರು ಪೊಲೀಸರು ಮಾಡುತ್ತಾ ಬಂದಿದ್ದಾರೆ.

  ಇದೀಗ ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ‘ಪೊಗರು‘ ಸಿನಿಮಾದ ಪೋಸ್ಟರ್​ ಬಳಸಿಕೊಂಡು ‘ ಲಾಕ್​ಡೌನ್​ ರಿಲ್ಯಾಕ್ಸಾಗಿದೆ ಅಂತ ಸುಮ್ಮೆ ಹೊರಗಡೆ ಹೋಗ್ಬೇಡ, ಹೋದ್ರೂ ಮಾಸ್ಕ್​​ ಇಲ್ಲೇ ಹೋಗ್ಬೇಡ..ಶೇಕ್​ ಆಗಿ ಹೋಗ್ತಿಯಾ' ಎಂದು ಬರೆದಿರುವ ಪೋಸ್ಟರ್​​ ಅನ್ನು ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.

   

  ಮೇ 18 ರಂದು ಶಿವರಾಜ್​ ಕುಮಾರ್​ ನಟನೆಯ ಕವಚ ಸಿನಿಮಾದ ಪೋಸ್ಟರ್​ ಅನ್ನು ಹಂಚಿಕೊಳ್ಳುವ ಮೂಲಕ ಬೆಂಗಳೂರು ಸಿಟಿ ಪೋಲಿಸರು ಜಾಗೃತಿ ಮೂಡಿಸಿದ್ದರು. ಪೋಸ್ಟರ್​ನಲ್ಲಿ ಹೊರಗೆ ಹೋಗುತ್ತಿದ್ದೀರಾ ಮರೆಯ ಬೇಡಿ ನಿಮ್ಮ ಸುರಕ್ಷತಾ ಕವಚ ಎಂಬ ಪೋಸ್ಟರ್​ ಅನ್ನು ಟ್ವಿಟ್ಟರ್​ನಲ್ಲಿ ಶೇರ್​​​ ಮಾಡಿದ್ದರು.

  ಅದರಂತೆ ಕಿಚ್ಚ ಸುದೀಪ್​ ಪೈಲ್ವಾನ್​ ಸಿನಿಮಾ, ರಿಯಲ್​ ಸ್ಟಾರ್​ ಉಪೇಂದ್ರ ಅವರ ಬುದ್ಧಿವಂತ ಸಿನಿಮಾ, ರಕ್ಷಿತ್​ ಶೆಟ್ಟಿ ಅವನೇ ಶ್ರೀಮನ್ನಾರಾಯಣ ಸಿನಿಮಾದ ಪೋಸ್ಟರ್​ಗಳನ್ನು ಬಳಸಿಕೊಂಡು ಈ ಮೂಲಕ ಕೊರೋನಾ ಜಾಗೃತಿ ಮೂಡಿಸಿದ್ದರು.
  First published: