• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • ಅಮೆರಿಕದಲ್ಲಿ ನೆಲೆಸಿರುವ ಬೆಂಗಳೂರು ವ್ಯಕ್ತಿಯ ಸಂಗೀತ ಪ್ರೇಮಕ್ಕೆ ಅಭಿಮಾನಿಗಳು ಫಿದಾ

ಅಮೆರಿಕದಲ್ಲಿ ನೆಲೆಸಿರುವ ಬೆಂಗಳೂರು ವ್ಯಕ್ತಿಯ ಸಂಗೀತ ಪ್ರೇಮಕ್ಕೆ ಅಭಿಮಾನಿಗಳು ಫಿದಾ

ಸಿಡ್​ ತಮ್ಮ ಸಂಗೀತ ಜರ್ನಿ ಬಗ್ಗೆ ವಿಶೇಷ ಹಾಡೊಂದನ್ನು ರಚನೆ ಮಾಡಿದ್ದಾರೆ. ಈ ಹಾಡನ್ನು ಕ್ಯಾಲಿಫೋರ್ನಿಯಾದ ಲಾಂಗ್​ ಬೀಚ್​ನಲ್ಲಿ ಇದನ್ನು ಶೂಟ್​ ಮಾಡಲಾಗಿದೆ. ಕಾರ್ವಾನ್​ ಎಂದು ಈ ಹಾಡಿಗೆ ಹೆಸರಿಟ್ಟಿದ್ದಾರೆ.

ಸಿಡ್​ ತಮ್ಮ ಸಂಗೀತ ಜರ್ನಿ ಬಗ್ಗೆ ವಿಶೇಷ ಹಾಡೊಂದನ್ನು ರಚನೆ ಮಾಡಿದ್ದಾರೆ. ಈ ಹಾಡನ್ನು ಕ್ಯಾಲಿಫೋರ್ನಿಯಾದ ಲಾಂಗ್​ ಬೀಚ್​ನಲ್ಲಿ ಇದನ್ನು ಶೂಟ್​ ಮಾಡಲಾಗಿದೆ. ಕಾರ್ವಾನ್​ ಎಂದು ಈ ಹಾಡಿಗೆ ಹೆಸರಿಟ್ಟಿದ್ದಾರೆ.

ಸಿಡ್​ ತಮ್ಮ ಸಂಗೀತ ಜರ್ನಿ ಬಗ್ಗೆ ವಿಶೇಷ ಹಾಡೊಂದನ್ನು ರಚನೆ ಮಾಡಿದ್ದಾರೆ. ಈ ಹಾಡನ್ನು ಕ್ಯಾಲಿಫೋರ್ನಿಯಾದ ಲಾಂಗ್​ ಬೀಚ್​ನಲ್ಲಿ ಇದನ್ನು ಶೂಟ್​ ಮಾಡಲಾಗಿದೆ. ಕಾರ್ವಾನ್​ ಎಂದು ಈ ಹಾಡಿಗೆ ಹೆಸರಿಟ್ಟಿದ್ದಾರೆ.

  • Share this:

    ಕರ್ನಾಟಕ ಮೂಲದ ಅನೇಕ ಗಾಯಕರು ವಿದೇಶದಲ್ಲಿ ನೆಲೆಯೂರಿದ್ದಾರೆ. ಇದರಲ್ಲಿ ಸಿಡ್​ ಫಿಲಾರ್​ ಕೂಡ ಒಬ್ಬರು. ಬೆಂಗಳೂರು ಮೂಲದವರೇ ಆದ ಸಿಡ್ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ. ಲಾಕ್​ಡೌನ್​ ಅವಧಿಯಲ್ಲಿ ಯೂಟ್ಯೂಬ್​ನಲ್ಲಿ ಲೈವ್​ ಶೋ ಕೊಟ್ಟಿದ್ದಾರೆ. ಇದರಿಂದ ಬಂದ ಹಣವನ್ನು ಭಾರತದಲ್ಲಿ ಬಡವರಿಗೆ ಸಹಾಯ ಮಾಡಲು ಬಳಕೆ ಮಾಡಿದ್ದಾರೆ. ಸಿಡ್​ ತಮ್ಮ ಸಂಗೀತ ಜರ್ನಿ ಬಗ್ಗೆ ವಿಶೇಷ ಹಾಡೊಂದನ್ನು ರಚನೆ ಮಾಡಿದ್ದಾರೆ. ಈ ಹಾಡನ್ನು ಕ್ಯಾಲಿಫೋರ್ನಿಯಾದ ಲಾಂಗ್​ ಬೀಚ್​ನಲ್ಲಿ ಇದನ್ನು ಶೂಟ್​ ಮಾಡಲಾಗಿದೆ. ಕಾರ್ವಾನ್​ ಎಂದು ಈ ಹಾಡಿಗೆ ಹೆಸರಿಟ್ಟಿದ್ದಾರೆ.


    ತಮ್ಮ ಸಂಗೀತ ಜರ್ನಿ ಬಗ್ಗೆ ನ್ಯೂಸ್​18 ಕನ್ನಡದ ಜೊತೆ ಮಾತನಾಡಿದ ಸಿಡ್, "ನಾನು ಬೆಂಗಳೂರು ಮೂಲದವನೇ ಆದರೂ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದೇನೆ. ನನ್ನ ಪಯಣದಲ್ಲಿ ಸಾಕಷ್ಟು ಜನರನ್ನು ಭೇಟಿ ಮಾಡಿದ್ದೇನೆ. ಇದರಿಂದ ನನ್ನ ಆಲೋಚನೆಗೆ ಹೊಸ ರೂಪ ಸಿಕ್ಕಿದೆ. ನಾನು ಗಾಯಕನಾಗಲು ಅನೇಕರು ಸಹಾಯ ಮಾಡಿದ್ದಾರೆ," ಎಂದಿದ್ದಾರೆ.


    "ಕ್ಯಾಲಿ ಫೋರ್ನಿಯಾದಲ್ಲಿ ಡಾ.ರೋಸ್ ಮುರಳಿ ಕೃಷ್ಣ ಅವರಿಂದ ನಾನು ಕರ್ನಾಟಕ​ ಸಂಗೀತ ಕಲಿತಿದ್ದೇನೆ. ಇದೇ ಸಮಯದಲ್ಲಿ ನಾನು ಸಾಕಷ್ಟು ಬಾಲಿವುಡ್​ ಕಲಾವಿದರು ಹಾಗೂ ಹಿಂದುಸ್ತಾನಿ ಸಂಗೀತ ಹಿನ್ನೆಲೆ ಹೊಂದಿರುವವರ ಜೊತೆ ಕೆಲಸ ಮಾಡಿದ್ದೇನೆ. ಎಸ್​ಪಿ ಬಾಲಸುಬ್ರಮಣಿಯಂ ಮಗ ಚರಣ್​ ಶ್ರೀಪತಿ ಹಾಗೂ ಹರೀಶ್​ ರಾಘವೇಂದ್ರ ಅವರ ಜೊತೆ ನಾನು ಕೆಲಸ ಮಾಡಿದ್ದೇನೆ. ಹೀಗೆ ಬೇರೆ ಬೇರೆಯವರ ಜೊತೆ ಕೆಲಸ ಮಾಡಿದ್ದರಿಂದ ನಾನು ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ," ಎಂದಿದ್ದಾರೆ.




    ತಮ್ಮ ಸಂಗೀತ ಜರ್ನಿಯನ್ನು ಹಾಡಿನ ರೂಪದಲ್ಲಿ ನೀಡಿದ ಬಗ್ಗೆ ಅವರು ಮಾತನಾಡಿದ್ದಾರೆ. "ನನ್ನದೇ ಹಾಡನ್ನು ಸಿದ್ಧಪಡಿಸಬೇಕು ಎನ್ನುವ ಆಲೋಚನೆ ನನ್ನದಾಗಿತ್ತು. ಅದಕ್ಕಾಗಿಯೇ ನಾನು ಈ ಹಾಡನ್ನು ಸಿದ್ಧಪಡಿಸಿದ್ದೇನೆ. ಈ ಹಾಡಿನಲ್ಲಿ ನನ್ನ ಜರ್ನಿ ಹಾಗೂ ಒಂದೊಳ್ಳೆಯ ಸಂದೇಶ ಇದೆ," ಎನ್ನುತ್ತಾರೆ ಅವರು.


    ಬಡವರಿಗಾಗಿ ತಮ್ಮ ಹಾಡಿನ ಮೂಲಕ ಹಣ ಸಂಗ್ರಹ ಮಾಡಿದ್ದರ ಬಗ್ಗೆ ಮಾತನಾಡಿರುವ ಸಿಡ್, "ನನ್ನ ಹಾಡಿನ ಮೂಲಕ ಒಂದಷ್ಟು ಜನರಿಗೆ ಸಹಾಯ ಆಗಿರುವ ಬಗ್ಗೆ ನನಗೆ ಖುಷಿ ಇದೆ. ಪ್ರೇಕ್ಷಕರು ಬುದ್ಧಿವಂತರಿದ್ದಾರೆ. ಸರಿಯಾದ ರೀತಿಯಲ್ಲಿ ಹಾಗೂ ಸತ್ಯವಾದ ಮಾರ್ಗದಲ್ಲಿ ನಡೆದರೆ ಅವರು ಬೆಂಬಲ ಸೂಚಿಸುತ್ತಾರೆ," ಎನ್ನುತ್ತಾರೆ.

    Published by:Rajesh Duggumane
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು