`ಅಖಂಡ’ನ ಆರ್ಭಟಕ್ಕೆ ಟಾಲಿವುಡ್​ ಬಾಕ್ಸಾಫೀಸ್​ ಧೂಳಿಪಟ: ಮಾಸ್​ ಪ್ರೇಕ್ಷಕರಿಗೆ ಮೃಷ್ಟಾನ್ನ ಭೋಜನ!

'ಅಖಂಡ' ಮೊದಲ ದಿನದ ಗಳಿಕೆ ಸುಮಾರು 29 ಕೋಟಿ ಎಂದು ಅಂದಾಜಿಸಲಾಗಿದೆ. ಇದು ಬಾಲಣ್ಣನ ವೃತ್ತಿ ಬದುಕಿನಲ್ಲೇ ಮೊದಲ ದಿನ ಅತೀ ಹೆಚ್ಚು ಗಳಿಸಿದ ಸಿನಿಮಾವೆಂದು ಅಂದಾಜಿಸಲಾಗಿದೆ. ಇನ್ನೂ ಶುಕ್ರವಾರ, ಶನಿವಾರ ಕೂಡ ಭರ್ಜರಿ ಕೆಲಕ್ಷನ್​ ಮಾಡಿದೆ. ಇಂದು ಭಾನುವಾರ ಹೆಚ್ಚಿನ ಕಲೆಕ್ಷನ್ ಆಗುವ ನಿರೀಕ್ಷೆಯಲ್ಲಿದೆ ಚಿತ್ರಂಡ.

ಅಖಂಡ ಸಿನಿಮಾದ ಪೋಸ್ಟರ್​

ಅಖಂಡ ಸಿನಿಮಾದ ಪೋಸ್ಟರ್​

  • Share this:
ಟಾಲಿವುಡ್​ ಸೂಪರ್​ ಸ್ಟಾರ್​ ಬಾಲಯ್ಯ(Balayya) ಸಿನಿಮಾಗಳು ಬಿಡುಗಡೆ ಅದರೆ ಅವರ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. ಅದರಲ್ಲೂ ಡಿಸೆಂಬರ್​ 2ರಂದು ಬಿಡುಗಡೆಯಾಗಿರುವ ‘ಅಖಂಡ’(Akhanda) ಸಿನಿಮಾ ನೋಡಿ ಪ್ರೇಕ್ಷಕರು ಥ್ರಿಲ್​ ಆಗಿದ್ದಾರೆ. ತೆಲುಗು ಚಿತ್ರರಂಗದಲ್ಲಿ ನಂದಮೂರಿ ಬಾಲಕೃಷ್ಣ(Nandamuri Balakrishna)ಸಿನಿಮಾ 'ಅಖಂಡ' ಸದ್ದು ಮಾಡುತ್ತಿದೆ. ಬಿಡುಗಡೆಯಾದ ದಿನದಿಂದಲೂ ಸಿನಿಮಾ ಬಗ್ಗೆ ಉತ್ತಮ ಪ್ರಕ್ರಿಯೆ ಕೇಳಿಬರುತ್ತಿದೆ. ಬಾಲಣ್ಣನ ಮಾಸ್(Mass) ಎಂಟರ್‌ಟೈನರ್‌ಗೆ ಮಾಸ್ ಪ್ರೇಕ್ಷಕರು ಮಸ್ತ್ ರೆಸ್ಪಾನ್ಸ್ ಕೊಟ್ಟಿದ್ದಾರೆ. 'ಅಖಂಡ' ಚಿತ್ರದ ಕಥೆ, ನಟನೆ ಎಲ್ಲವೂ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ಹಿಂದೆ ನಟಿಸಿರದ ಪಾತ್ರದಲ್ಲಿ, ಹೊಸ ಲುಕ್​ನಲ್ಲಿ ಬಾಲಯ್ಯನ ಆರ್ಭಟ ಅಬ್ಬಬ್ಬಾ...ಮಸ್ತ್​ ಇದೆ. ಸಿನಿಮಾ ನೋಡಿದ ಫ್ಯಾನ್ಸ್(Fans)​ ಮತ್ತೆ ಮತ್ತೆ ಸಿನಿಮಾ ನೋಡುತ್ತಿದ್ದಾರೆ. ಅದೇನ್​ ಲುಕ್​, ಅದೇನ್​ ಸ್ಟೈಲ್​, ಅದೇನ್​ ಮ್ಯಾನರಿಸಂ ಬಾಲಯ್ಯ ಅವರ ನಟನೆ ಕೇಳಲೇ ಬೇಡಿ ಅಂತಿದ್ದಾರೆ ಫ್ಯಾನ್ಸ್​. ಎಲ್ಲ ಚಿತ್ರಮಂದಿರಗಳಲ್ಲಿ ಅಖಂಡನದ್ದೇ ಸದ್ದು. ಬಿಡುಗಡೆಯಾದಗಿನಿಂದಲೂ ಎಲ್ಲ ಚಿತ್ರಮಂದಿರಗಳ ಮುಂದೆ ಹೌಸ್​​ಫುಲ್(Housefull)​ ಬೋಲ್ಡ್​ ಬಿದ್ದಿದ್ದೆ.  ಅಖಂಡ ಬ್ಲಾಕ್‌ಬಸ್ಟರ್ ಆಗುತ್ತೆ ಅನ್ನುವ ನಂಬಿಕೆಯಲ್ಲಿ ಅವರ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದರು. ಅವರ ನಿರೀಕ್ಷೆಯಂತೆಯೇ ಸಿನಿಮಾ ಬ್ಲಾಕ್ ಬಸ್ಟರ್(Block Bluster) ಲಿಸ್ಟ್ ಸೇರುವ ಎಲ್ಲಾ ಲಕ್ಷಣಗಳೂ ಇವೆ. ಈ ವಾರ ತೆರೆಕಂಡ ಮೋಹನ್ ಲಾಲ್ ಮರಕ್ಕರ್ ಅಂತಹ ಬಿಗ್ ಬಜೆಟ್ ಸಿನಿಮಾಗಳನ್ನೂ ಅಂಖಡ ಹಿಂದಿಕ್ಕಿದೆ. 

ಮೊದಲ ದಿನವೇ 29 ಕೋಟಿ ಕಲೆಕ್ಷನ್​!

ಬಾಲಯ್ಯ 'ಅಖಂಡ' ಸಿನಿಮಾ ಮೊದಲ ದಿನವೇ ತೆಲುಗು ಬಾಕ್ಸಾಫೀಸ್‌ ಅನ್ನು ಉಡೀಸ್ ಮಾಡಿದೆ. ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ನಂದಮೂರಿ ಬಾಲಕೃಷ್ಣ ಅಭಿಮಾನಿಗಳು ಮುಗಿಬಿದ್ದು 'ಅಖಂಡ' ಸಿನಿಮಾ ನೋಡುತ್ತಿದ್ದಾರೆ. ಬಾಕ್ಸಾಫೀಸ್ ಲೆಕ್ಕಾಚಾರದ ಪ್ರಕಾರ, 'ಅಖಂಡ' ಮೊದಲ ದಿನದ ಗಳಿಕೆ ಸುಮಾರು 29 ಕೋಟಿ ಎಂದು ಅಂದಾಜಿಸಲಾಗಿದೆ. ಇದು ಬಾಲಣ್ಣನ ವೃತ್ತಿ ಬದುಕಿನಲ್ಲೇ ಮೊದಲ ದಿನ ಅತೀ ಹೆಚ್ಚು ಗಳಿಸಿದ ಸಿನಿಮಾವೆಂದು ಅಂದಾಜಿಸಲಾಗಿದೆ. ಇನ್ನೂ ಶುಕ್ರವಾರ, ಶನಿವಾರ ಕೂಡ ಭರ್ಜರಿ ಕೆಲಕ್ಷನ್​ ಮಾಡಿದೆ. ಇಂದು ಭಾನುವಾರ ಹೆಚ್ಚಿನ ಕಲೆಕ್ಷನ್ ಆಗುವ ನಿರೀಕ್ಷೆಯಲ್ಲಿದೆ ಚಿತ್ರಂಡ.

ಇದನ್ನು ಓದಿ : ಈ 6 ಟಾಪ್​ ತಮಿಳು ನಟರ ಸಂಭಾವನೆ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್​ ಆಗ್ತೀರಾ..!

3 ದಿನದಲ್ಲಿ 44 ಕೋಟಿ ಬಾಚಿದ ‘ಅಖಂಡ’

ಇನ್ನೂ ಬಾಲಯ್ಯ ಅವರ ಅಖಂಡ ಸಿನಿಮಾ ಮೂರು ದಿನಗಳಲ್ಲಿ ಅಂದಾಜು 28.3 ಕೋಟಿ ಕಲೆಕ್ಷನ್​ ಮಾಡಿದೆ ಅಂದ ವರದಿಗಳು ಹೇಳಿವೆ. ಇಂದು ಭಾನುವಾರ ಆಗಿರುವ ಕಾರಣ ಇಂದು ಹೆಚ್ಚು ಕಲೆಕ್ಷನ್​ ಆಗುವ ಸಾಧ್ಯತೆಗಳಿದ್ದು, ಶೀಘ್ರವೇ ಅಖಂಡ ಸಿನಿಮಾ 50 ಕೋಟಿ ಕ್ಲಬ್​ ಸೇರಲಿದೆ ಅಂತ ಹೇಳಲಾಗುತ್ತಿದೆ. ಬಾಲಯ್ಯ ಅವರ ಸಿನಿಮಾಗಳಲ್ಲಿ ಇಷ್ಟು ಮಟ್ಟದ ದೊಡ್ಡ ಒಪೆನಿಂಗ್​ ಪಡೆದ ಸಿನಿಮಾ ಅಖಂಡ ಅಂತೆ. ಅದರಲ್ಲೂ ಈ ರೀತಿಯ ಲುಕ್​ನಲ್ಲಿ ಇದೇ ಮೊದಲ ಬಾರಿಗೆ ಬಾಲಯ್ಯ ಕಾಣಿಸಿಕೊಂಡಿದ್ದಾರೆ.

ಇದನ್ನು ಓದಿ : ಎಂ.ಎಸ್​. ಧೋನಿ ಎಂದಿಗೂ ನನ್ನ ಜೀವನದಲ್ಲಿ ಮಾಸದ ಕಲೆ: ಯಾಕ್​ ಹೀಗಂದ್ರು ಈ ನಟಿ!

ಅಮೆರಿಕದಲ್ಲೂ ಅಖಂಡ ಬಾಕ್ಸಾಫೀಸ್​ ಉಡೀಸ್​!

ಅಮೆರಿಕದಲ್ಲೂ ಬಾಕ್ಸಾಫೀಸ್‌ನಲ್ಲೂ ಬಾಲಣ್ಣನ 'ಅಖಂಡ' ಭರ್ಜರಿ ಕಲೆಕ್ಷನ್ ಮಾಡಿದೆ. ಬಾಲಣ್ಣನ ಸಿನಿಮಾ ವಿದೇಶದಲ್ಲಿ ಈ ಮಟ್ಟಿಗೆ ಪ್ರತಿಕ್ರಿಯೆ ಸಿಕ್ಕಿದ್ದು ಇದೇ ಮೊದಲು. 2021ರಲ್ಲಿ ಅಮೆರಿಕದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ತೆಲುಗು ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಯುಸ್‌ನಲ್ಲಿ 'ಅಖಂಡ' ಮೊದಲ ದಿನ ಗಳಿಸಿದ್ದು ಬರೋಬ್ಬರಿ 3.24 ಕೋಟಿ ಎನ್ನಲಾಗಿದೆ.


ಬಾಲಯ್ಯನ ಆ್ಯಕ್ಷನ್​ಗೆ ಜೂ.NTR ಫಿದಾ!

ಅಖಂಡ ಸಿನಿಮಾ ರಿಲೀಸ್‌ ಆದ ಮೊದಲ ದಿನವೇ ನಟ ಜೂನಿಯರ್‌ ಎನ್‌ ಟಿ ಆರ್‌ ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಜೂನಿಯರ್ ಎನ್‌ಟಿಆರ್ "ಅಖಂಡ ಈಗಷ್ಟೇ ನೋಡಿ ಮುಗಿಸಿದೆ. ಈ ಅದ್ಭುತ ಯಶಸ್ಸನ್ನು ಗಳಿಸಿದ ಬಾಲಾ ಬಾಬೈ ಮತ್ತು ಇಡೀ ತಂಡಕ್ಕೆ ಅಭಿನಂದನೆಗಳು" ಎಂದು ಬರೆದುಕೊಂಡಿದ್ದಾರೆ.
Published by:Vasudeva M
First published: