ಗಾಯಕ ಬಾಲಸುಬ್ರಹ್ಮಣ್ಯಂ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​..!

ಕನ್ನಡದಲ್ಲಿ ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸುವ ಬಾಲಸುಬ್ರಹ್ಮಣ್ಯಂ ಅವರು ತೆಲುಗಿನಲ್ಲಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತನಿಕೆಳ್ಳ ಭರಣಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಮಿಥುನಂ ಸಿನಿಮಾ ಈಗ ಹಿಂದೆಯಲ್ಲಿ ರಿಮೇಕ್​ ಆಗಲಿದೆಯಂತೆ. ಈ ಚಿತ್ರದಲ್ಲಿ ಬಾಲಸುಬ್ರಹ್ಮಣ್ಯಂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಾಲು ಅವರಿಗೆ ಜೊತೆಯಾಗಿ ಲಕ್ಷ್ಮಿ ನಟಿಸಿದ್ದಾರೆ.

ಅಮಿತಾಭ್​ ಹಾಗೂ ಬಾಲಸುಬ್ರಹ್ಮಣ್ಯಂ

ಅಮಿತಾಭ್​ ಹಾಗೂ ಬಾಲಸುಬ್ರಹ್ಮಣ್ಯಂ

  • Share this:
ಭಾರತ ಚಿತ್ರರಂಗ ಕಂಡ ಮಹಾನ್ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ. ಕೊರೋನಾ ಸೋಂಕಿನಿಂದಾಗಿ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಸೆ.25ರಂದು ನಿಧನರಾದರು. ಅವರು ಅಗಲಿ ಎರಡು ತಿಂಗಳು ಕಳೆದಿದೆ. ಇನ್ನೂ ಅವರು ಜೀವದಿಂದ ಇಲ್ಲ ಎಂದು ನಂಬಲು ಅಭಿಮಾನಿಗಳಿಗೆ ಕಷ್ಟವಾಗುತ್ತಿದೆ. ತಮ್ಮ ಮಧುರವಾದ ಕಂಠದಿಂದ ಹರಿಸಿದ ಗಾನಸುಧೆ ಕೋಟ್ಯಂತರ ಅಭಿಮಾನಿಗಳನ್ನು ಮೋಡಿ ಮಾಡಿದೆ. ಬಾಲಸುಬ್ರಹ್ಮಣ್ಯಂ ಕೇವಲ ಗಾಯಕರಾಗಿರಲಿಲ್ಲ. ಸಂಗೀತ ನಿರ್ದೇಶಕ, ನಟ, ನಿರೂಪಕ, ನಿರ್ಮಾಪಕ ಹಾಗೂ ಡಬ್ಬಿಂಗ್​ ಆರ್ಟಿಸ್ಟ್​ ಸಹ ಆಗಿದ್ದರು. ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ಅವರಿಗೆ ಸಿನಿಮಾದಲ್ಲಿ ನಾಯಕನಾಗಿಯೂ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಕನ್ನಡ, ತೆಲುಗು ಸೇರಿದಂತೆ ಇತರೆ ಭಾಷೆಗಳಲ್ಲಿ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈಗ ಅವರ ನಟನೆಯ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್​ ಮಾಡಲಾಗುತ್ತಿದ್ದು, ಅದರಲ್ಲಿ ಅಮಿತಾಭ್​ ಬಚ್ಚನ್​ ಬಾಲಸುಬ್ರಹ್ಮಣ್ಯಂ ನಟಿಸಿದ್ದ ಪಾತ್ರಕ್ಕೆ ಜೀವತುಂಬಲಿದ್ದಾರಂತೆ. 

ಕನ್ನಡದಲ್ಲಿ ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸುವ ಬಾಲಸುಬ್ರಹ್ಮಣ್ಯಂ ಅವರು ತೆಲುಗಿನಲ್ಲಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತನಿಕೆಳ್ಳ ಭರಣಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಮಿಥುನಂ ಸಿನಿಮಾ ಈಗ ಹಿಂದೆಯಲ್ಲಿ ರಿಮೇಕ್​ ಆಗಲಿದೆಯಂತೆ. ಈ ಚಿತ್ರದಲ್ಲಿ ಬಾಲಸುಬ್ರಹ್ಮಣ್ಯಂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಾಲು ಅವರಿಗೆ ಜೊತೆಯಾಗಿ ಲಕ್ಷ್ಮಿ ನಟಿಸಿದ್ದಾರೆ.

SP Balasubrahmanyam passed away, SPB Health, RIP SPB, SPB Rare Photos, SPB Health Bulletin, GetwellsoonSPB, SP Charan, SP Balasubrahmanyam, SP Bala Subrahmanyam health update, wishes for SP Balasubrahmanyam speedy recovery, SP Bala Subrahmanyam on ventilator, SP Bala Subrahmanyam, SPB latest news, SPB in Hospital, SPB in MGM healthcare,
ಬಾಲಸುಬ್ರಹ್ಮಣ್ಯಂ ಅವರ ಅಪರೂಪದ ಚಿತ್ರ


ಇನ್ನು, ಬಾಲಿವುಡ್​ನಲ್ಲಿ ಈ ಸಿನಿಮಾವನ್ನು ನಿರ್ಮಿಸಲು ರಿಮೇಕ್​ ಹಕ್ಕನ್ನು ಪ್ರಮುಖ ನಿರ್ಮಾಣ ಸಂಸ್ಥೆಯೊಂದು ಖರೀದಿಸಿದೆಯಂತೆ. ಇನ್ನು ಬಾಲಿವುಡ್ ಪ್ರೇಕ್ಷಕರ ಟೇಸ್ಟ್​ಗೆ ತಕ್ಕಂತೆ ಕೆಲ ಬದಲಾವಣೆಯನ್ನೂ ಮಾಡಲು ನಿರ್ಧರಿಸಲಾಗಿದೆಯಂತೆ.ಈ ರಿಮೇಕ್​ ಸಿನಿಮಾದಲ್ಲಿ ಅಮಿತಾಭ್ ಅವರಿಗೆ ನಾಯಕಿಯಾಗಿ ರೇಖಾ ಅವರನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮತ್ತೊಂದು ಕಡೆ ಜಯಾ ಬಚ್ಚನ್​ ಅವರ ಹೆಸರು ಕೇಳಿಬರುತ್ತಿದೆ.

Amitabh and Jaya Bachchan celebrating 47th wedding anniversary here are the few old and rare photos of celebrity couple  
ಅಮಿತಾಭ್​ ಹಾಗೂ ಜಯಾ ಅವರ ಮದುವೆ ಫೋಟೋ


2012ರಲ್ಲಿ ಮಿಥುನಂ ಸಿನಿಮಾ ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಬಾಲ ಸುಬ್ರಹ್ಮಣ್ಯಂ ಅವರ ಅಭಿನಯಕ್ಕೆ ವಿಮರ್ಶಕರು ಫಿದಾ ಆಗಿದ್ದರು. ಆದರೆ ಹಿಂದಿ ರಿಮೇಕ್​ ಅನ್ನು ಯಾರು ನಿರ್ದೇಶನ ಮಾಡುತ್ತಿದ್ದಾರೆ ಅನ್ನೋದು ಇನ್ನೂ ಬಹಿರಂಗವಾಗಿಲ್ಲ.
Published by:Anitha E
First published: