Balayya-Duniya Vijay ನಟಿಸ್ತಿರೋ ಸಿನಿಮಾ `ಮಫ್ತಿ’ ರಿಮೇಕ್​ ಅಂತೆ, ಥೇಟ್​ ಶಿವಣ್ಣನ ಗೆಟಪ್​ನಲ್ಲಿರೋ ಫೋಟೋ ವೈರಲ್​!

ಬಾಲಯ್ಯ ಅವರ 107ನೇ ಸಿನಿಮಾದ ಚಿತ್ರೀಕರಣದ ಫೋಟೋ ಲೀಕ್ ಆಗಿದೆ. ಇದರಲ್ಲಿ ಬಾಲಯ್ಯ ಸೇಮ್​ ಮಫ್ತಿ ಸಿನಿಮಾದ ಶಿವಣ್ಣ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಬಾಲಯ್ಯ, ಶಿವಣ್ಣ

ಬಾಲಯ್ಯ, ಶಿವಣ್ಣ

  • Share this:
    ನಂದಮೂರಿ ಬಾಲಕೃಷ್ಣ(Nandamuri Balakrishna) ಅವರ 107ನೇ ಸಿನಿಮಾ ಅನೌನ್ಸ್ ಆದಾಗಿನಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಸದ್ದು ಮಾಡುತ್ತಲೇ ಇದೆ. ‘ಅಖಂಡ’(Akhanda)ನ ಯಶಸ್ಸಿನಲ್ಲಿದ್ದ ಬಾಲಯ್ಯ ಅವರ ಮುಂದಿನ ಸಿನಿಮಾ ಘೋಷಣೆಯಾಗುತ್ತೆ. ಇಷ್ಟೇ ಆಗಿದ್ದರೆ ಇಷ್ಟೊಂದು ಹೈಪ್(Hype)​ ಕ್ರಿಯೇಟ್​ ಆಗುತ್ತಿರಲಿಲ್ಲ. ಈ ಸಿನಿಮಾದಲ್ಲಿ ಬಾಲಯ್ಯ(Balayya)ನ ಎದುರು ದುನಿಯಾ ವಿಜಯ್(Duniya Vijay) ತೊಡೆ ತಟ್ಟಲಿದ್ದಾರೆ ಎಂಬ ಮಾಹಿತಿ ಹೊರಬರುತ್ತಿದ್ದಂತೆ ಅಭಿಮಾನಿಗಳು ಥ್ರಿಲ್(Thrill)​ ಆಗಿದ್ದಾರೆ. ಕೊನೆಗೂ ಈ ವಿಚಾರವನ್ನು ದುನಿಯಾ ವಿಜಯ್​ ಸ್ಪಷ್ಟ ಪಡಿಸಿದ್ದಾರೆ. ಈ ಸಿನಿಮಾದ ಶೂಟಿಂಗ್(Shooting)​ ಇದೀಗ ನಡೆಯುತ್ತಿದ್ದು, ದುನಿಯಾ ವಿಜಯ್​ ಕೂಡ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಆದರೆ, ಹೊಸ ವಿಷಯ ಏನಪ್ಪಾ ಅಂದರೆ, ಮೊದಲ ದಿನದ ಚಿತ್ರೀಕರಣದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಅದಲ್ಲದೇ ಈ ಸಿನಿಮಾ ಕನ್ನಡದ ಸೂಪರ್ ಹಿಟ್(Super Hit) ಸಿನಿಮಾ ‘ಮಫ್ತಿ’(Mufti) ರಿಮೇಕ್​(Remake) ಅನ್ನುವ ಅನುಮಾನ ಕೂಡ ಹುಟ್ಟಿಸಿದೆ. ಕಾರಣ ಬಾಲಯ್ಯ ಅವರ 107ನೇ ಸಿನಿಮಾದ ಚಿತ್ರೀಕರಣದ ಫೋಟೋ ಲೀಕ್(Photo Leak) ಆಗಿದೆ. ಇದರಲ್ಲಿ ಬಾಲಯ್ಯ ಸೇಮ್​ ‘ಮಫ್ತಿ’ ಸಿನಿಮಾದ ಶಿವಣ್ಣ(Shivanna) ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಇದು ಮಫ್ತಿ ರಿಮೇಕ್​ ಅಂತ ಹೇಳುತ್ತಿದ್ದಾರೆ.

    ಮಫ್ತಿಯಲ್ಲಿ ಶಿವಣ್ಣ ಮಾಡಿದ್ದ ಪಾತ್ರದಲ್ಲಿ ಬಾಲಯ್ಯ?

    ಲೀಕ್​ ಆಗಿ ವೈರಲ್​ ಆಗುತ್ತಿರುವ ಫೋಟೋದಲ್ಲಿ ಥೇಟ್​ ಶಿವಣ್ಣನ ಗೆಟಪ್​ನಲ್ಲಿ ಬಾಲಯ್ಯ ಕಾಣಿಸಿಕೊಂಡಿದ್ದಾರೆ. ಕಪ್ಪು ಪಂಚೆ, ಕಪ್ಪು ಶರ್ಟ್, ಕಪ್ಪು ಕಾರು, ಬಿಳಿ ಗಡ್ಡ, ಎಲ್ಲವೂ ಶಿವಣ್ಣ ಅವರ ರೀತಿಯಲ್ಲಿ ಇದೆ. ಮಫ್ತಿಯಲ್ಲಿ  ಶಿವಣ್ಣ ಬೈರತಿ ರಣಗಲ್ಲು ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಕಪ್ಪು ಪಂಚೆ, ಕಪ್ಪು ಶರ್ಟ್, ಬಿಳಿ ಗಡ್ಡ ಶಿವಣ್ಣ ಪಾತ್ರದ ಟ್ರೆಡ್​ ಮಾರ್ಕ್​. ಬಾಲಯ್ಯ ಅವರ ಸಿನಿಮಾದಲ್ಲಿ ಇದು ಎದ್ದು ಕಾಣಿಸುತ್ತಿದೆ. ಇನ್ನೂ ಮಫ್ತಿಯಲ್ಲಿ ಶಿವಣ್ಣ ಎಂಟ್ರಿಯಾಗುವ ದೃಶ್ಯದಂತೆ, ಬಾಲಯ್ಯ ಸಿನಿಮಾದಲ್ಲೂ ಶೂಟ್​ ಮಾಡಲಾಗುತ್ತಿದೆ. ಚೇರ್​ ಮೇಲೆ ಕುಳಿತು ಬಾಲಯ್ಯ ಘರ್ಜಿಸಿದ್ದಾರೆ.

    ವೈರಲ್​ ಆಗುತ್ತಿರುವ ಫೋಟೋ


    ಇದನ್ನೂ ಓದಿ: 12 ವರ್ಷಗಳ ಬಳಿಕ ಒಂದಾಗ್ತಾರಾ `ಎಂಥಿರನ್​’ ಜೋಡಿ? ಕಾಲಿವುಡ್​ ಅಂಗಳದಲ್ಲಿ ಏನಿದು ಗುಸುಗುಸು?

    ಶ್ರೀ ಮುರುಳಿ ಪಾತ್ರದಲ್ಲಿ ದುನಿಯಾ ವಿಜಯ್?

    ಹೌದು, ಬಾಲಯ್ಯ ಸಿನಿಮಾ ಮಫ್ತಿ ರಿಮೇಕ್​ ಆದರೆ, ಶ್ರೀ ಮುರುಳಿ ನಟಿಸಿದ್ದ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ದುನಿಯಾ ವಿಜಯ್ ಕೂಡ ತಂಡದಲ್ಲಿದ್ದಾರೆ, ಇವರು ಈ ಸಿನಿಮಾದಲ್ಲಿ ವಿಲನ್​ ಪಾತ್ರದಲ್ಲಿ ನಟಿಸುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಮಫ್ತಿ ಸಿನಿಮಾದಲ್ಲಿ ಮುಖ್ಯ ವಿಲನ್​ ರೀತಿಯ ಪಾತ್ರಗಳು ಇರಲಿಲ್ಲ. ಸಿನಿಮಾದಲ್ಲಿ ಎರಡೇ ಪಾತ್ರಗಳು ಹೈಲೆಟ್​, ಅದು ಶಿವಣ್ಣ ಹಾಗೂ ಶ್ರೀ ಮುರುಳಿ ಪಾತ್ರಗಳು. ಇದೀಗ ಶಿವಣ್ಣನ ಗೆಟಪ್​​ನಲ್ಲಿ ಬಾಲಯ್ಯ ಕಾಣಿಸಿಕೊಂಡಿದ್ದು. ಶ್ರೀ ಮುರುಳಿ ನಟಿಸಿದ್ದ ಪಾತ್ರವನ್ನೇ ದುನಿಯಾ ವಿಜಯ್​ ಮಾಡ್ತಾರಾ? ಎಂಬ ಪ್ರಶ್ನೆ ಮೂಡಿದೆ.

    ಇದನ್ನೂ ಓದಿ: ಅನೂಪ್ ಭಂಡಾರಿ ಜೊತೆ ಮತ್ತೊಂದು ಸಿನಿಮಾ ಮಾಡ್ತಾರಾ ಕಿಚ್ಚ? ಟೇಕ್ ಆಫ್​ ಆಗುತ್ತಾ `ಬಿಲ್ಲ ರಂಗ ಬಾಷಾ’?

    ದೇವರಾಜ್​ ನಟಿಸಿದ್ದ ಪಾತ್ರದಲ್ಲಿ ಸ್ಯಾಂಡಲ್​ವುಡ್​ ಸಲಗ?

    ಹೌದು, ದುನಿಯಾ ವಿಜಯ್ ವಿಲನ್​ ಎಂದು ಈಗಾಗಲೇ ಅನೌನ್ಸ್ ಮಾಡಲಾಗಿದೆ, ಹೀಗಾಗಿ ಶ್ರೀ ಮುರುಳಿ ನಟಿಸಿದ್ದ ಪಾತ್ರದಲ್ಲಿ ದುನಿಯಾ ವಿಜಯ್​ ನಟಿಸುತ್ತಿಲ್ಲ ಎಂದು ಅಭಿಮಾನಿಗಳೇ ನಿರ್ಧಾರ ಮಾಡಿದ್ದಾರೆ. ಮಫ್ತಿ ಸಿನಿಮಾದಲ್ಲಿ ದೇವರಾಜ್​ ಅಭಿನಯಿಸಿದ್ದ ಪಾತ್ರದಲ್ಲಿ ದುನಿಯಾ ವಿಜಯ್​ ನಟಿಸುವುದು ಕನ್ಫರ್ಮ್ ಅಂತ ಅಭಿಮಾನಿಗಳು ಹೇಳುತ್ತಿದ್ದಾರೆ. ಅದೇನೆ ಇರಲಿ, ಕನ್ನಡದಲ್ಲಿ ಸೂಪರ್​ ಡೂಪರ್ ಹಿಟ್​ ಆಗಿದ್ದ ‘ಮಫ್ತಿ’, ಟಾಲಿವುಡ್​ನಲ್ಲಿ ಯಾವ ರೀತಿ ಕಮಾಲ್​ ಮಾಡುತ್ತೆ ಅಂತ ಕಾದುನೋಡಬೇಕು.
    Published by:Vasudeva M
    First published: