Bajrangi Bhaijaan: ‘ಡಾ. ಅಂಬೇಡ್ಕರ್​ ರಾಷ್ಟ್ರ ಪ್ರಶಸ್ತಿ’ ಪಡೆದ ‘ಬಜರಂಗಿ ಭಾಯಿಜಾನ್​’ ಮುನ್ನಿ: ಸಲ್ಮಾನ್​ ಖಾನ್​ಗೆ ಧನ್ಯವಾದ ಹೇಳಿದ ಬಾಲನಟಿ!

ಈ ಬಾಲನಟಿಗೆ ‘ಭಾರತ ರತ್ನ ಡಾ. ಅಂಬೇಡ್ಕರ್​ ರಾಷ್ಟ್ರ ಪ್ರಶಸ್ತಿ’ ಸಿಕ್ಕಿದೆ. ‘ಬಜರಂಗಿ ಭಾಯಿಜಾನ್​’ ಸಿನಿಮಾದಲ್ಲಿನ ನಟನೆಗಾಗಿ ಈ ಗೌರವ ಸಂದಿದೆ. ಟ್ರೋಫಿ ಹಿಡಿದು ಖುಷಿಯಿಂದ ಪೋಸ್​​ ನೀಡಿರುವ ಹರ್ಷಾಲಿಯ ಫೋಟೋಗಳು ವೈರಲ್​ ಆಗಿವೆ.

ಹರ್ಷಾಲಿ ಮಲ್ಹೋತ್ರಾ, ಸಲ್ಮಾನ್​ ಖಾನ್​

ಹರ್ಷಾಲಿ ಮಲ್ಹೋತ್ರಾ, ಸಲ್ಮಾನ್​ ಖಾನ್​

  • Share this:

ಸಲ್ಮಾನ್ ಖಾನ್ (Salman Khan) ನಟನೆಯ ‘ಬಜರಂಗಿ ಭಾಯಿಜಾನ್​’ (Bajrangi Bhaijaan) ಚಿತ್ರದಲ್ಲಿ ಮುನ್ನಿಯಾಗಿ ನಟಿಸಿದ್ದ ಹರ್ಷಾಲಿ ಮಲ್ಹೋತ್ರಾ (Harshaali Malhotra) ಭಾರತ ರತ್ನ ಡಾ. ಅಂಬೇಡ್ಕರ್​ ಪ್ರಶಸ್ತಿ (Bharat Ratna Dr Ambedkar National Award)ಗೆ ಪಾತ್ರರಾಗಿದ್ದಾರೆ. 2015ರಲ್ಲಿ ಬಿಡುಗಡೆಯಾದ ‘ಬಜರಂಗಿ ಭಾಯಿಜಾನ್​’ ಸಿನಿಮಾ ಎಲ್ಲ ಸಿನಿಮಾಗಳ ರೆಕಾರ್ಡ್​ಗಳನ್ನು ಬ್ರೇಕ್​ ಮಾಡಿತ್ತು. ಸಲ್ಮಾನ್​ ಖಾನ್​ ಅವರ ಕೆರಿಯರ್​ ಮುಗಿದೇ ಹೋಯ್ತು ಅಂದುಕೊಳ್ಳುವಾಗಲೇ ಈ ಚಿತ್ರ ಬಾಕ್ಸಾಫೀಸ್​ನಲ್ಲಿ ಕಮಾಲ್​ ಮಾಡಿತ್ತು. ಬಾಲಿವುಡ್​​ ನಟ ಸಲ್ಮಾನ್ ಖಾನ್ ಅಭಿನಯದ 'ಬಜರಂಗಿ ಭಾಯಿಜಾನ್​' ಚಿತ್ರದಲ್ಲಿ ಮುನ್ನಿಯಾಗಿ ಕಾಣಿಸಿಕೊಂಡಿದ್ದ ನಟಿ ಹರ್ಷಾಲಿ ಮಲ್ಹೋತ್ರಾಗೆ ಭಾರತ ರತ್ನ ಡಾ. ಅಂಬೇಡ್ಕರ್​ ಪ್ರಶಸ್ತಿ ಒಲಿದು ಬಂದಿದೆ. ಕಬೀರ್​ ಖಾನ್ ನಿರ್ದೇಶಿಸಿದ್ದ ಆ ಚಿತ್ರದಲ್ಲಿ ಸಲ್ಮಾನ್​ ಖಾನ್​ (Salman Khan) ಅವರು ಡಿಫರೆಂಟ್​ ಪಾತ್ರ ಮಾಡಿದ್ದರು. ಅವರ ಜೊತೆ ಬಾಲನಟಿ ಹರ್ಷಾಲಿ ಮಲ್ಹೋತ್ರಾ (Harshaali Malhotra) ಗಮನ ಸೆಳೆದಿದ್ದಳು. ಮಹಾರಾಷ್ಟ್ರ ರಾಜ್ಯಪಾಲ ಭಗತ್​​ ಸಿಂಗ್​​​ ಕೋಶಿಯಾರಿ ಈ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಪ್ರಶಸ್ತಿ ಸ್ವೀಕರಿಸಿರುವ ಫೋಟೋವನ್ನು ಹರ್ಷಾಲಿ ತನ್ನ ಇನ್​​ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ, ಪ್ರಶಸ್ತಿಯನ್ನು ಸಲ್ಮಾನ್ ಖಾನ್​ಗೆ ಅರ್ಪಿಸಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.


 ಮುನ್ನಿ ಪಾತ್ರದ ಅಭಿನಯಕ್ಕಾಗಿ ಸಿಕ್ಕ ಗೌರವ!

ಈ ಬಾಲನಟಿಗೆ ‘ಭಾರತ ರತ್ನ ಡಾ. ಅಂಬೇಡ್ಕರ್​ ರಾಷ್ಟ್ರ ಪ್ರಶಸ್ತಿ’ ಸಿಕ್ಕಿದೆ. ‘ಬಜರಂಗಿ ಭಾಯಿಜಾನ್​’ ಸಿನಿಮಾದಲ್ಲಿನ ನಟನೆಗಾಗಿ ಈ ಗೌರವ ಸಂದಿದೆ. ಟ್ರೋಫಿ ಹಿಡಿದು ಖುಷಿಯಿಂದ ಪೋಸ್​​ ನೀಡಿರುವ ಹರ್ಷಾಲಿಯ ಫೋಟೋಗಳು ವೈರಲ್​ ಆಗಿವೆ. ಆಕೆಗೆ ಎಲ್ಲರೂ ಶುಭಕೋರುತ್ತಿದ್ದಾರೆ. ‘ಬಜರಂಗಿ ಭಾಯಿಜಾನ್​’ ಸಿನಿಮಾದಿಂದ ಹರ್ಷಾಲಿಗೆ ಸಖತ್​ ಜನಪ್ರಿಯತೆ ಸಿಕ್ಕಿತ್ತು. ಪಾಕಿಸ್ತಾನದಿಂದ ಬಂದು ಭಾರತದಲ್ಲಿ ಕಳೆದುಹೋಗುವ ಮುನ್ನಿ ಎಂಬ ಮೂಕ ಹುಡುಗಿಯ ಪಾತ್ರದಲ್ಲಿ ಹರ್ಷಾಲಿ ಅಭಿನಯ ಎಲ್ಲರ ಗಮನ ಸೆಳೆದಿತ್ತು. ಆ ಚಿತ್ರದ ನಟನೆಗಾಗಿ ಈಗ ‘ಭಾರತ ರತ್ನ ಡಾ. ಅಂಬೇಡ್ಕರ್​ ರಾಷ್ಟ್ರ ಪ್ರಶಸ್ತಿ’ ಸಿಕ್ಕಿರುವುದು ಆಕೆಯ ಸಂಭ್ರಮಕ್ಕೆ ಕಾರಣ ಆಗಿದೆ.ಇದನ್ನು ಓದಿ: ಮಾಲ್ಡೀವ್ಸ್​ನಲ್ಲಿ ಮೈಚಳಿ ಬಿಟ್ಟು ಮೈಮಾಟ ತೋರಿದ ಸನ್ನಿ.. ಕೊಲ್ಲೇ ನನ್ನನ್ನೇ ಅಂತಿದ್ದಾರೆ ಫ್ಯಾನ್ಸ್​!

ಪ್ರಶಸ್ತಿಯನ್ನು ಸಲ್ಮಾನ್​ ಖಾನ್​​ಗೆ ಅರ್ಪಿಸಿದ ಮುನ್ನಿ!

ಹೌದು, ಪ್ರಶಸ್ತಿ ಪಡೆದ ಚಿತ್ರವನ್ನು ಹರ್ಷಾಲಿ ಮಲ್ಹೋತ್ರಾ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಧನ್ಯವಾದ ಎಂದು ಬಾಲನಟಿ ಬರೆದುಕೊಂಡಿದ್ದಾರೆ. ‘ಬಜರಂಗಿ ಭಾಯಿಜಾನ್​’ ಸಿನಿಮಾ ತೆರಕಂಡಾಗ ಹರ್ಷಾಲಿಗೆ ಕೇವಲ 7 ವರ್ಷ ವಯಸ್ಸು. ಈಗ ಆಕೆಗೆ 13ರ ಪ್ರಾಯ. 6 ವರ್ಷದ ಬಳಿಕ ಮುನ್ನಿ ಪಾತ್ರಕ್ಕೆ ಪ್ರಶಸ್ತಿ ಸಿಕ್ಕಿರುವುದು ನಿಜಕ್ಕೂ ಖುಷಿಯ ವಿಚಾರ. ಈ ಸಿನಿಮಾದಲ್ಲಿ ಪಾಕಿಸ್ತಾನದ ಮಾತುಬಾರದ ಹುಡುಗಿಯಲ್ಲಿ ಪಾತ್ರದಲ್ಲಿ ಹರ್ಷಾಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಕರೀನಾ ಕಪೂರ್ ಕೂಡ ನಟಿಸಿದ್ದಾರೆ. ಕಬೀರ್ ಖಾನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಬಾಲಿವುಡ್‌ನಲ್ಲಿ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ ಇದಾಗಿದೆ.

ಇದನ್ನು ಓದಿ : ಬ್ರೇಕಪ್ ನಂತರ ಮೂರನೇ ಮಗುವನ್ನು ದತ್ತು ಪಡೆದ ನಟಿ.. ನಿಜವಾಗಿಯೂ ನೀವು ದೇವತೆ ಅಂದಿದ್ಯಾಕೆ ನೆಟ್ಟಿಗರು?

ಡ್ಯಾನ್ಸ್, ಗಾಯನದಲ್ಲಿ ಹರ್ಷಾಲಿಗೆ ಇಂಟ್ರೆಸ್ಟ್​!

ಹರ್ಷಾಲಿಗೆ ಈಗ 13 ವರ್ಷ. ಆಗಾಗ ಫೋಟೋ, ವಿಡಿಯೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಕಳೆದ ತಿಂಗಳು ಹುಟ್ಟುಹಬ್ಬ ಆಚರಿಸಿಕೊಂಡ ಫೋಟೋವನ್ನು ಕೂಡ ಹರ್ಷಾಲಿ ಹಂಚಿಕೊಂಡಿದ್ದರು. ಇನ್ನು ನಟನೆ, ಗಾಯನವನ್ನು ಇಷ್ಟಪಡುವ ಹರ್ಷಾಲಿಗೆ ಸಲ್ಮಾನ್ ಖಾನ್‌ರಂತೆ ಸೂಪರ್ ಸ್ಟಾರ್ ಆಗಬೇಕಂತೆ. ಇನ್ನು ಕೆಲ ಡ್ಯಾನ್ಸ್ ವಿಡಿಯೋಗಳನ್ನು ಕೂಡ ಹರ್ಷಾಲಿ ಶೇರ್ ಮಾಡಿಕೊಂಡಿದ್ದಾರೆ. 2017ರಿಂದ ಹರ್ಷಾಲಿ ಅವರು ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿದಲ್ಲ. ‘ಪವನ್​ ಪುತ್ರ ಭಾಯಿಜಾನ್’​ ಸಿನಿಮಾದಲ್ಲಿ ಈಕೆಯ ಪಾತ್ರ ಇರಲಿದೆಯಾ ಎಂಬ ಪ್ರಶ್ನೆ ಕೂಡ ಎದ್ದಿದೆ.

Published by:Vasudeva M
First published: