ಗುಟ್ಟು ರಟ್ಟಾಯಿತು: 'ಬಾಹುಬಲಿ' ಬಾಲ್ಯದಲ್ಲಿ ಹುಡುಗಿಯಾಗಿದ್ದು ಗೊತ್ತಾ?

news18
Updated:July 11, 2018, 2:53 PM IST
ಗುಟ್ಟು ರಟ್ಟಾಯಿತು: 'ಬಾಹುಬಲಿ' ಬಾಲ್ಯದಲ್ಲಿ ಹುಡುಗಿಯಾಗಿದ್ದು ಗೊತ್ತಾ?
news18
Updated: July 11, 2018, 2:53 PM IST
ನ್ಯೂಸ 18 ಕನ್ನಡ

ಭಾರತೀಯ ಸಿನಿಮಾದಲ್ಲೇ ದಾಖಲೆ ಹಾಗೂ ಇತಿಹಾಸ ಸೃಷ್ಟಿಸಿದ ಸಿನಿಮಾ ರಾಜಮೌಳಿ ನಿರ್ದೇಶನದ 'ಬಾಹುಬಲಿ'. 2015ರ ಜುಲೈ 10ರಂದು ತೆರೆ ಕಂಡಿದ್ದ ಈ ಸಿನಿಮಾ ಗಳಿಕೆ ಸೇರಿದಂತೆ ಎಲ್ಲ ವಿಷಯದಲ್ಲೂ ವಿಶ್ವದ ಗಮನ ಸೆಳೆದಿತ್ತು.

ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾಗಿದ್ದ ನಟ ಪ್ರಭಾಸ್​ ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟ ಸಿನಿಮಾ ಇದು. ಗಳಿಕೆ ವಿಷಯದಲ್ಲೂ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ದಾಖಲೆಗಳನ್ನು ಮುರಿದಿತ್ತು.

ಪ್ರಭಾಸ್​ಗೆ ಎದುರಾಗಿ ಖಳನಾಗಿ ನಟಿಸಿದ್ದ ರಾಣಾ ದಗ್ಗುಬಾಟಿ ಬಲ್ಲಾಳದೇವನ ಪಾತ್ರಕ್ಕಾಗಿ 33 ಕೆ.ಜಿ. ತೂಕವನ್ನು ಹೆಚ್ಚಿಸಿಕೊಂಡಿದ್ದರು. ಇಂದಿಗೂ ಬಾಲಿವುಡ್​ ಸೇರಿದಂತೆ ಎಲ್ಲ ಭಾಷೆಯ ಸಿನಿ ರಂಗದಲ್ಲಿ 'ಬಾಹುಬಲಿ'  ಸಿನಿಮಾ ಕುರಿತಾಗಿ ಚರ್ಚೆಗಳು ನಡೆಯುತ್ತವೆ. ಹೀಗಿರುವಾಗ ಈ ಸಿನಿಮಾ ತೆರೆಕಂಡು ಮೂರು ವರ್ಷಗಳ ನಂತರ ಇದರ ಕುರಿತಾಗಿ ನಂಬಲಸಾಧ್ಯವಾದ  ಐದು ವಿಷಯಗಳನ್ನು ನಿಮಗೆ ತಿಳಿಸಲಿದ್ದೇವೆ.

ಮೊದಲನೇ ವಿಷಯ: ಬಾಲ್ಯದಲ್ಲಿ ಬಾಹುಬಲಿ ಹುಡುಗಿಯಾಗಿದ್ದು!

ಇಂತಹ ಸಿನಿಮಾದಲ್ಲಿ ತೆರೆ ಮೇಲೆ ಬಾಹುಬಲಿಯಾಗಿ ರಾರಾಜಿಸಿದ ಕಲಾವಿದ ಬಾಲ್ಯದಲ್ಲಿ ಹುಡುಗಿಯಾಗಿದ್ದ ಎಂದರೆ ನಂಬುತ್ತೀರಾ. ಹೌದು ನಂಬಲೇಬೇಕು.

'ಬಾಹುಬಲಿ' ಸಿನಿಮಾದಲ್ಲಿ ಶಿವಗಾಮಿ ಪಾತ್ರದಲ್ಲಿ ಅಭಿನಯಿಸಿರುವ ನಟಿ ರಮ್ಯಾ ತನ್ನ ಎರಡೂ ಕೈಗಳಲ್ಲಿ ಇಬ್ಬರು ಮಕ್ಕಳನ್ನು ಎತ್ತಿಕೊಂಡು ಬರುವ ದೃಶ್ಯವನ್ನು  ನೋಡಿರುತ್ತೀರಿ. ಅದರಲ್ಲಿ ಬಾಹುಬಲಿಯಾಗಿ ತೋರಿಸುವ ಮಗು ಗಂಡು ಮಗುವಲ್ಲ ಅನ್ನೋ ಸತ್ಯವನ್ನು ಸಿನಿಮಾದ ಪ್ರಚಾರದ ತಂಡದಲ್ಲಿದ್ದವರಲ್ಲಿ ಒಬ್ಬರು ಬಾಯಿಬಿಟ್ಟಿದ್ದಾರೆ.
Loading...

ಪ್ರಚಾರ ತಂಡದಲ್ಲಿದ್ದ ಸದಸ್ಯರೊಬ್ಬರಿಗೆ ಆಗಷ್ಟೆ ಹೆಣ್ಣು ಮಗುವೊಂದು ಆಗಿತ್ತು.   ಆ ಮಗುವನ್ನು ಆಗಲೇ ಸಿನಿಮಾದಲ್ಲಿ ಬಾಹುಬಲಿಯಾಗಿ ಅಭಿನಯಿಸಲು ಕರೆತರಲಾಗಿತ್ತು. ಈ ಸಿನಿಮಾದ ಸೆಟ್​ನಲ್ಲೇ ಬೇಬಿ ಬಾಹುಬಲಿಯೊಂದಿಗೆ ಸಿನಿಮಾದ ರಿಯಲ್​ ಬಾಹುಬಲಿ ಇರುವ ಚಿತ್ರ ನಿಮಗಾಗಿ.#throwback #cutenessoverload #prabhas #withcutebaby #baahubali2 #onsets


A post shared by Prabhas Raju Uppalapati (@prabhas_raju) on


ಎರಡೂ ಸಿನಿಮಾಗಳ ಚಿತ್ರೀಕರಣ ಒಟ್ಟಿಗೆ ಆಗಿತ್ತು: 

'ಬಾಹುಬಲಿ: ದ ಬಿಗಿನಿಂಗ್​' ಹಾಗೂ 'ಬಾಹುಬಲಿ 2: ದ ಕನ್​ಕ್ಲೂಷನ್​' ಸಿನಿಮಾಗಳ ಚಿತ್ರೀಕರಣದ ಮೊದಲೇ ಮುಗಿಸಲಾಗಿತ್ತು. ಮೊದಲ ಭಾಗದ ಚಿತ್ರೀಕರಣದೊಂದಿಗೆ ಎರಡನೇ ಭಾಗದ ಶೇ 40ರಷ್ಟು ಚಿತ್ರೀಕರಣ ಪೂರ್ಣಗೊಂಡಿತ್ತು. ಕೇವಲ ಗ್ರಾಫಿಕ್ಸ್​ ಹಾಗೂ ತಾಂತ್ರಿಕ ಕೆಲಸಗಳನ್ನು ಮಾತ್ರ ಒಂದೇ ಭಾಗ ತೆರೆ ಕಂಡ ನಂತರ ಮಾಡಲಾಗಿತ್ತು. ಮೊದಲ ಸಿನಿಮಾಗೆ ಸಿಗುವ ಪ್ರತಿಕ್ರಿಯೆ ನಂತರ ಎರಡನೇ ಸಿನಿಮಾದ ಪ್ರಚಾರ ಆರಂಭಿಸುವ ಯೋಜನೆ ರಾಜಮವಳಿಯವರದಾಗಿತ್ತು. ಅದಕ್ಕಾಗಿಯೇ ಸಿನಿಮಾದ ಸ್ವಲ್ಪ ಭಾಗದ ಚಿತ್ರೀಕರಣವನ್ನು ಭಾಗ ಒಂದು ತೆರೆಕಂಡ ನಂತರ ಸ್ವಲ್ಪ ದಿನ ನಿಲ್ಲಿಸಲಾಗಿತ್ತು.

ಈ ಸಿನಿಮಾಗಾಗಿಯೇ ಹೊಸ ಭಾಷೆಯ ಸೃಷ್ಟಿ: 

ಮೊದಲ ಭಾಗದ ಸಿನಿಮಾದಲ್ಲಿ ಬರುವ ಖಳನಾಯಕ ಕಾಲಕೇಯ. ಇದು ತುಂಬಾ ಹೆಸರು ಮಾಡಿದ ಪಾತ್ರ. ಅದಕ್ಕೂ ಮಿಗಿಲಾಗಿ ಕಾಲಕೇಯನ ಭಾಷೆ ಪ್ರೇಕ್ಷರನ್ನು ಚಕಿತಗೊಳಿಸಿತ್ತು. ಹೌದು ಕಾಲಕೇಯನಿಗೆಂದೇ 'ಕಿಲಿಕಿಲ್​' ಎಂಬ ಹೊಸ ಭಾಷೆಯನ್ನು ರಾಜಮೌಳಿ ಹುಟ್ಟುಹಾಕಿದ್ದರು. ಈ ಭಾಷೆಯಲ್ಲಿ 748 ಶಬ್ದ ಹಾಗೂ ವ್ಯಾಕರಣದ 40 ನಿಯಮಗಳಿದ್ದವು. ಈ ಭಾಷೆ ಕೇಳಿ? ನಿಮಗೆ ಅರ್ಥವಾದರೆ ನಮಗೂ ತಿಳಿಸಿ?'ಬಾಹುಬಲಿ'ಗೂ ಸಲ್ಮಾನ್​ಗೂ ಇರುವ ಸಂಬಂಧ: 

'ಬಾಹುಬಲಿ' ಸಿನಿಮಾದ ಕಥೆ ಬರೆವರು ವಿಜಯೇಂದ್ರ ಪ್ರಸಾದ್​. ಇವರು 'ಬಾಹುಬಲಿ'ಯ ನಿರ್ದೇಶಕ ಎ.ಎಸ್​. ರಾಜಮೌಳಿ ಅವರ ತಂದೆ. ಇದರಲ್ಲಿ ವಿಶೇಷ ಎಂದರೆ ಬಾಹುಬಲಿ ತೆರೆಕಂಡ ವಾರದ ನಂತರ ರಿಲೀಸ್​ ಆದ ಸಲ್ಮಾನ್​ ಖಾನ್​ ಅವರ 'ಭಜರಂಗಿ ಭಾಯಿಜಾನ್​' ಸಿನಿಮಾದ ಕಥೆಯನ್ನೂ ವಿಜಯೇಂದ್ರ ಅವರೇ ಬರೆದಿದ್ದರು.  ಇಷ್ಟೇ ಅಲ್ಲ 2012ರಲ್ಲಿ ತೆರೆಕಂಡಿದ್ದ ಸಲ್ಮಾನ್​ ಅವರ ಸಿನಿಮಾ 'ದಬಂಗ್​ 2'ನ ಕ್ಯಾಮೆರಾ ಮೆನ್​ ಸೆಂತಿಲ್​ ಕುಮಾರ್​ ಸಹ ಬಾಹುಬಲಿಗಾಗಿ ಕೆಲಸ ಮಾಡಿದ್ದಾರೆ.

ನಿರ್ದೇಶಕ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್​


ಈ ಸಿನಿಮಾದಲ್ಲಿ ನಿರ್ದೇಶಕ ರಾಜಮೌಳಿ ಸಹ ಕಾಣಿಸಿಕೊಂಡಿದ್ದಾರೆ

'ಬಾಹುಬಲಿ' ಒಂದರಲ್ಲಿ ಬರುವ ಹೆಂಡದ 'ವೀರಾ ವೀರಾ....' ಹಾಡಿನಲ್ಲಿ ನಿರ್ದೇಶಕ ರಾಜಮೌಳಿ ಹೆಂಡ ಮಾರುವವನ ಪಾತ್ರದಲ್ಲಿ ಪ್ರತ್ಯಕ್ಷರಾಗುತ್ತಾರೆ. 
First published:July 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ