Bahubali Prabhas​ ಈಗ ಅಂಕಲ್​ ಎಂದು ಟ್ರೋಲ್​ ಮಾಡಿದ ನೆಟ್ಟಿಗರು..!

ಪ್ರಭಾಸ್​ ಅವರ ಈ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದನ್ನು ನೋಡಿದ ಟ್ರೋಲಿಗರು ಪ್ರಭಾಸ್​ ಅವರಿಗೆ ವಯಸ್ಸಾಯಿತು, ಅಂಕಲ್​, ವಡಾ ಪಾವ್​ ತರ ಇದ್ದಾರೆ ಎಂದೆಲ್ಲ ಕಮೆಂಟ್​ ಮಾಡುವ ಮೂಲಕ ಟ್ರೋಲ್​ ಮಾಡುತ್ತಿದ್ದಾರೆ. 

ನಟ ಪ್ರಭಾಸ್​

ನಟ ಪ್ರಭಾಸ್​

  • Share this:
ಬಾಹುಬಲಿ ಪ್ರಭಾಸ್ (Prabhas)​ ಎಂದೇ ಖ್ಯಾತರಾಗಿರವ ನಟ ರಾಜಮೌಳಿ ನಿರ್ದೇಶನ ಬಾಹುಬಲಿ (Bahubali) ಸಿನಿಮಾ ರಿಲೀಸ್​ ಆಗಿ ಹಿಟ್ ಆಗುತ್ತಿದ್ದಂತೆಯೇ ಪ್ಯಾನ್​ ಇಂಡಿಯಾ ಸ್ಟಾರ್​ ಆದರು. ನಂತರ ಸಾಹೋ ಸಿನಿಮಾ ಹೇಳಿಕೊಳ್ಳುವಷ್ಟು ಸದ್ದು ಮಾಡದೇ ಹೋದರೂ ಪ್ರಭಾಸ್​ ಅವರ ಜನಪ್ರಿಯತೆ ಮಾತ್ರ ಕಡಿಮೆಯಾಗಲಿಲ್ಲ. ಸಾಹೋ ನಂತರ ಪ್ರಭಾಸ್​ ಸಾಲು ಸಾಲು ಪ್ಯಾನ್​ ಇಂಡಿಯಾ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಬಾಲಿವುಡ್​ನ ನಿರ್ದೇಶಕ ಹಾಗೂ ಸ್ಟಾರ್​ ಕಲಾವಿದರ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಪ್ರಭಾಸ್​ ಅವರನ್ನು ಟಾಲಿವುಡ್​ನಲ್ಲಿ ಡಾರ್ಲಿಂಗ್ ಎಂದೇ ಕರೆಯಲಾಗುತ್ತದೆ. ಅದರಲ್ಲೂ ಹುಡುಗಿಯರು ಪ್ರಭಾಸ್​ ಎಂದರೆ  ಜೀವ ಬಿಡುತ್ತಾರೆ. ಇಷ್ಟರ ಮಟ್ಟಿಗೆ ಅಭಿಮಾನಿಗಳಲ್ಲಿ ಕ್ರೇಜ್​ ಇರುವ ನಟ ಪ್ರಭಾಸ್​ ಸದ್ಯ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದ್ದಾರೆ. ಅದರಲ್ಲೂ ಮೇಕಪ್​ ಇಲ್ಲದ ಪ್ರಭಾಸ್​ ಅವರ ಲುಕ್ ನೋಡಿದ ಟ್ರೋಲಿಗರು ಅವರನ್ನು ನಾನಾ ರೀತಿ ಕರೆಯುವ ಮೂಲಕ ಟ್ರೋಲ್​ ಮಾಡುತ್ತಿದ್ದಾರೆ.

ಪ್ರಭಾಸ್​ ಅವರು ಸದ್ಯ ಆದಿಪುರುಷ್​ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದಾರೆ. ಅವರು ಹಾಡಿನ ಚಿತ್ರೀಕರಣ ಆರಂಭವಾಗುವ ಮೊದಲು ಕೃತಿ ಸನೋನ್​ ಜತೆ ಡ್ಯಾನ್ಸ್​ ಅಭ್ಯಾಸ ಮಾಡಲು ಇತ್ತೀಚೆಗೆ ಕಾಣಿಸಿಕೊಂಡಿದ್ದರು. ಈ ವೇಳೆ ಪಾಪರಾಜಿಗಳ ಕ್ಯಾಮೆರಾಗೆ ಸೆರೆ ಸಿಕ್ಕಿದ್ದಾರೆ.

Prabhas looking uncle, Bollywood Audience Troll Prabhas New Look , Nentizens slam Prabhas no makeup look, prabhas trolled by bollywood, bollywood auditions trolled Prabhas, ಬಾಹುಬಲಿ ನಟನ ನೋ ಮೇಕಪ್ ಲುಕ್ ವೈರಲ್,ತೂಕ ಹೆಚ್ಚಿಸಿಕೊಂಡ ನಟ ಹಿಗ್ಗಾಮುಗ್ಗ ಟ್ರೋಲ್, ಪ್ರಭಾಸ್, ಪ್ರಭಾಸ್ ಅಂಕಲ್ ಹಾಗೆ ಕಾಣಿಸುತ್ತಿದ್ದಾರೆ ಎಂದ ನೆಟ್ಟಿಗರು, ಬಾಲಿವುಡ್ ಪ್ರೇಕ್ಷಕರಿಂದ ಟ್ರೋಲಿಗೆ ಗುರಿಯಾದ ಪ್ರಭಾಸ್, ಪ್ರಭಾಸ್ ಗೆ ವಯಸ್ಸಾಗಿದೆ ಎಂದು ಬಾಲಿವುಡ್ ಮಂದಿ, Bahubali Prabhas trolled for his no make up look and called him uncle ae
ನಟ ಪ್ರಭಾಸ್


ಪ್ರಭಾಸ್​ ಅವರು ಆದಿಪುರುಷ್​ ಸಿನಿಮಾದಲ್ಲಿ ರಾಮನ ಪಾತ್ರಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ಪ್ರಭಾಸ್​ ಸದ್ಯ ಮೀಸೆ ಬಿಟ್ಟಿದ್ದು, ಕೊಂಚ ತೂಕ ಹೆಚ್ಚಿಸಿಕೊಂಡಿದ್ದಾರೆ. ಡ್ಯಾನ್ಸ್​ ಪ್ರಾಕ್ಟೀಸ್​ಗೆ ಬಂದಾಗ ಪ್ರಭಾಸ್​ ಅವರು ಮೇಕಪ್​ ಇಲ್ಲದೆ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Vikrant Rona Glimpse: ಕಿಚ್ಚ ಸುದೀಪ್​ ಹುಟ್ಟುಹಬ್ಬದಂದು ವಿಕ್ರಾಂತ್​ ರೋಣನ ಕಡೆಯಿಂದ ಸಿಗಲಿದೆ ಅಭಿಮಾನಿಗಳಿಗೆ ದೊಡ್ಡ ಗಿಫ್ಟ್​

ಪ್ರಭಾಸ್​ ಅವರ ಈ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದನ್ನು ನೋಡಿದ ಟ್ರೋಲಿಗರು ಪ್ರಭಾಸ್​ ಅವರಿಗೆ ವಯಸ್ಸಾಯಿತು, ಅಂಕಲ್​, ವಡಾ ಪಾವ್​ ತರ ಇದ್ದಾರೆ ಎಂದೆಲ್ಲ ಕಮೆಂಟ್​ ಮಾಡುವ ಮೂಲಕ ಟ್ರೋಲ್​ ಮಾಡುತ್ತಿದ್ದಾರೆ.

ಒಂದು ಕಡೆ ಟ್ರೋಲಿಗರು ಹೀಗೆಲ್ಲ ಹಿಗ್ಗಾಮುಗ್ಗಾ ಟ್ರೋಲ್​ ಮಾಡುತ್ತಿದ್ದರೆ, ಅಭಿಮಾನಿಗಳು ಮಾತ್ರ ಪ್ರಭಾಸ್ ಪರ ನಿಂತಿದ್ದಾರೆ. ಈಗ ಟ್ರೋಲ್ ಮಾಡುವವರು ರಾಧೆ ಶ್ಯಾಮ್​ ರಿಲೀಸ್ ಆದ ನಂತರ ಬಾಯಿ ಮುಚ್ಚಿಕೊಳ್ಳುತ್ತಾರೆ ಎಂದೆಲ್ಲ ಹೇಳುವ ಮೂಲಕ ನೆಚ್ಚಿನ ನಟನ ಬೆಂಬಲಕ್ಕೆ ನಿಂತಿದ್ದಾರೆ.

ಇದನ್ನೂ ಓದಿ: Kantara Muhurtha: ರಿಷಭ್​ ಶೆಟ್ಟಿ ಹುಟ್ಟೂರಿನಲ್ಲಿ ನೆರವೇರಿತು ಕಾಂತಾರ ಚಿತ್ರದ ಮುಹೂರ್ತ..!

ಪ್ರಭಾಸ್​ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಪೂಜೆ ಹೆಗ್ಡೆ ಜೊತೆ ನಟಿಸುತ್ತಿರುವ ಹಾಗೂ ರಾಧಾಕೃಷ್ಣ ಕುಮಾರ್ ನಿರ್ದೇಶನದ ರಾಧೆ ಶ್ಯಾಮ್​ ತೆರೆಗೆಪ್ಪಳಿಸಲು ಸಿದ್ಧವಾಗಿದೆ. ದೀಪಿಕಾ ಪಡುಕೋಣೆ ಹಾಗೂ ಅಮಿತಾಭ್​ ಅವರ ಜೊತೆಗಿನ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಪ್ರಶಾಂತ್​ ನೀಲ್​ ನಿರ್ದೇಶನದಲ್ಲಿ ಹೊಂಬಾಳೆ ಫಿಲಂಸ್​ ನಿರ್ಮಿಸುತ್ತಿರುವ ಸಲಾರ್​ ಚಿತ್ರೀಕರಣ ಸಹ ನಡೆಯುತ್ತಿದೆ. ಈ ಸಿನಿಮಾದಲ್ಲಿ ಪ್ರಭಾಸ್​ಗೆ ನಾಯಕಿಯಾಗಿ ಶ್ರುತಿ ಹಾಸನ್​ ನಟಿಸಿದ್ದಾರೆ.

ಇದನ್ನೂ ಓದಿ: Mysuru Gang Rape: ಮೈಸೂರು ಅತ್ಯಾಚಾರ ಪ್ರಕರಣ: ಆಕ್ರೋಶ ವ್ಯಕ್ತಪಡಿಸಿದ ನಟಿಯರಾದ ರಮ್ಯಾ-ಶ್ರುತಿ

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Anitha E
First published: