HOME » NEWS » Entertainment » BAGHEERA FIRST LOOK POSTER SRI MURALI HOMBALE FILMS ANNOUNCED NEXT MOVIE WITH SRI MURALI VB

Bagheera Poster: ಪ್ರಶಾಂತ್ ನೀಲ್ ಚಿತ್ರಕಥೆಯಲ್ಲಿ ಬಘೀರನಾಗಿ ಬಂದ ಶ್ರೀಮುರಳಿ: ಹೊಂಬಾಳೆ ಫಿಲಂಸ್​ನಿಂದ ಹೊಸ ಸಿನಿಮಾ ಘೋಷಣೆ

Bagheera First Look Poster: ಹೊಂಬಾಳೆ ಫಿಲಂಸ್​ನಿಂದ ಶ್ರೀಮುರಳಿ ನಾಯಕತ್ವದಲ್ಲಿ ಬಘೀರ ಎಂಬ ಮತ್ತೊಂದು ಸಿನಿಮಾವನ್ನು ಘೋಷಣೆ ಆಗಿದೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಚಿತ್ರಕಥೆ ಇರಲಿದೆ.

news18-kannada
Updated:December 17, 2020, 12:41 PM IST
Bagheera Poster: ಪ್ರಶಾಂತ್ ನೀಲ್ ಚಿತ್ರಕಥೆಯಲ್ಲಿ ಬಘೀರನಾಗಿ ಬಂದ ಶ್ರೀಮುರಳಿ: ಹೊಂಬಾಳೆ ಫಿಲಂಸ್​ನಿಂದ ಹೊಸ ಸಿನಿಮಾ ಘೋಷಣೆ
Bagheera First Look
  • Share this:
ಸ್ಯಾಂಡಲ್​ವುಡ್​ ಕಡೆ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡುವ ಸಿನಿಮಾಗಳನ್ನು ಮಾಡಿದ್ದು ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲಂಸ್​ ಸಂಸ್ಥೆ. ಇಂತಹ ಪ್ರತಿಷ್ಠಿತ ಸಂಸ್ಥೆ ಹಾಗೂ ನಿರ್ದೇಶಕ ಕೆಜಿಎಫ್​ ನಂತರ ಇತ್ತೀಚೆಗಷ್ಟೆ ಪ್ರಭಾಸ್ ಜೊತೆಗೆ ಸಲಾರ್ ಎಂಬ ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾವನ್ನು ಪ್ರಕಟಿಸಿತ್ತು. ಸದ್ಯ ಇಂದು ಈ ಜೋಡಿ ಶ್ರೀಮುರಳಿ ನಾಯಕತ್ವದಲ್ಲಿ ಬಘೀರ ಎಂಬ ಮತ್ತೊಂದು ಸಿನಿಮಾವನ್ನು ಘೋಷಣೆ ಮಾಡಿದೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಚಿತ್ರಕಥೆ ವರೆದರೆ, ಡಾಕ್ಟರ್ ಸೂರಿ ನಿರ್ದೇಶನ ಮತ್ತು ಸ್ಕ್ರೀನ್ ಪ್ಲೇ ಇರಲಿದೆ. ವಿಜಯ್ ಕಿರಂಗದೂರು ನಿರ್ಮಾಣ ಮಾಡುತ್ತಿದ್ದಾರೆ. ಇಂದು ಶ್ರೀಮುರಳಿ ಹುಟ್ಟುಹಬ್ಬದ ಪ್ರಯುಕ್ತ ಈ ಘೋಷಣೆಯಾಗಿದೆ. ಟೈಟರ್ ಪೋಸ್ಟರ್ ರಿಲೀಸ್ ಆಗಿದ್ದು ಮುರಳಿ ಪೊಲೀಸ್ ಗೆಟಪ್​ನಲ್ಲಿ ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.ಇಂದು ರೋರಿಂಗ್ ಸ್ಟಾರ್ ಮುರಳಿ ಅವರ ಹುಟ್ಟುಹಬ್ಬ. ಈ ಪ್ರಯುಕ್ತ ಚಿತ್ರತಂಡ ಬೆಳಿಗ್ಗೆ ಮದಗಜ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಿತ್ತು. ಫಸ್ಟ್ ನೋಡಿ ಥ್ರಿಲ್ ಆದ ರೋರಿಂಗ್ ಅಭಿಮಾನಿಗಳು ಫಿದಾ ಆಗಿದ್ದಾರೆ.

ಈ ಸುದ್ದಿ ತಣ್ಣಗಾಗುವಷ್ಟರಲ್ಲಿ ರೋರಿಂಗ್ ಸ್ಟಾರ್ ಮುರಳಿಯವರ ಮತ್ತೊಂದು ಚಿತ್ರ ಅನೌನ್ಸ್ ಆಗಿದೆ. ವಿಜಯ್ ಕಿರಂಗದೂರು ಅವರ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ. ಪ್ರಶಾಂತ್ ಕಥೆ ಆಧಾರಿತ, ಡಾಕ್ಟರ್ ಸೂರಿ ನಿರ್ದೇಶನದಲ್ಲಿ “ಬಘೀರ” ಚಿತ್ರ ಇಂದು ಅನೌನ್ಸ್ ಆಗಿದೆ.

ಚಿತ್ರದ ಪೋಸ್ಟರ್ ನೋಡಿದರೆ ಮುರಳಿ ಈ ಚಿತ್ರದಲ್ಲಿ ಒಬ್ಬ ಪೋಲಿಸ್ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಿರುವುದು ಗೊತ್ತಾಗುತ್ತದೆ. ಪೋಸ್ಟರ್ ನಲ್ಲಿ ‘ವೆನ್ ಸೊಸೈಟಿ ಬಿಕಮ್ಸ್ ಜಂಗಲ್.. ಅಂಡ್ ಓನ್ಲಿ ಒನ್ ಪ್ರಿಡೇಟರ್ ರೋರ್ಸ್ ಫಾರ್ ಜಸ್ಟಿಸ್ ಅನ್ನೋ ಕ್ಯಾಪ್ಶನ್ ಕೂಡ ಇದೆ. ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ಇಲ್ಲದಿದ್ದರೂ, ಇದೊಂದು ಪಕ್ಕ ಕಮರ್ಷಿಯಲ್ ಆಕ್ಷನ್ ಚಿತ್ರ ಎಂದು ಪೋಸ್ಟರ್ ನೋಡಿದರೆ ಅನಿಸುತ್ತದೆ.

ಇದು ಹೊಂಬಾಳೆ ಫಿಲಂಸ್ ನ 8ನೇ ಚಿತ್ರ. ಇತ್ತೀಚೆಗಷ್ಟೇ, ಹೊಂಬಾಳೆ ಫಿಲಂಸ್, ಪ್ರಶಾಂತ್ ನೀಲ್ ನಿರ್ದೇಶನದಲ್ಲಿ, ಪ್ರಭಾಸ್ ಅಭಿನಯದಲ್ಲಿ ಪ್ಯಾನ್ ಇಂಡಿಯನ್ ಸಿನಿಮಾ ಸಾಲಾರ್ ಅನ್ನು ಅನೌನ್ಸ್ ಮಾಡಿದ್ದರು. ಹೊಂಬಾಳೆ ಫಿಲಂಸ್ ನ ಈ ನಡೆಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಬಂದಿತ್ತು.
Published by: Vinay Bhat
First published: December 17, 2020, 12:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories