• Home
  • »
  • News
  • »
  • entertainment
  • »
  • Badshah: ಬಾದ್‌ಶಾಗೆ ಮಾನಸಿಕ ಸಮಸ್ಯೆ ಇತ್ತಂತೆ, ಜೀವನದ ನೋವಿನ ಕಥೆ ಬಿಟ್ಟಿಟ್ಟ ರ್‍ಯಾಪರ್

Badshah: ಬಾದ್‌ಶಾಗೆ ಮಾನಸಿಕ ಸಮಸ್ಯೆ ಇತ್ತಂತೆ, ಜೀವನದ ನೋವಿನ ಕಥೆ ಬಿಟ್ಟಿಟ್ಟ ರ್‍ಯಾಪರ್

 ಬಾಲಿವುಡ್ ನ ಖ್ಯಾತ ರ್‍ಯಾಪರ್ ಬಾದ್‌ಶಾ

ಬಾಲಿವುಡ್ ನ ಖ್ಯಾತ ರ್‍ಯಾಪರ್ ಬಾದ್‌ಶಾ

ಬಾಲಿವುಡ್ ನ ಖ್ಯಾತ ರ್‍ಯಾಪರ್ ಬಾದ್‌ಶಾ ಅವರು ಹೇಗೆ ತಾವು ಮಾನಸಿಕ ಅನಾರೋಗ್ಯದಿಂದ ಬಳಲಿದ್ದರು ಮತ್ತು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಬಹಿರಂಗವಾಗಿ ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು ನಮಗೆಲ್ಲಾ ಗೊತ್ತೇ ಇದೆ. ಇವರು ಆತಂಕದ ಅಸ್ವಸ್ಥತೆಯೊಂದಿಗೆ ಹೋರಾಡಿದ್ದಾರೆ ಮತ್ತು ಸ್ಲೀಪ್ ಅಪ್ನಿಯಾದಂತಹ ರೋಗದಿಂದ ಸಹ ಬಳಲಿದ್ದಾರೆ ಎಂದು ಅವರೇ ಖುದ್ದು ಹೇಳಿ ಕೊಂಡಿದ್ದರು. ಆದರೆ ಈಗ ಅದೆಲ್ಲವನ್ನು ಕೇಳಿದ ಅವರ ಸ್ನೇಹಿತರು ಅವರಿಗೆ ಏನು ಹೇಳುತ್ತಿದ್ದಾರೆ ನೋಡಿ.

ಮುಂದೆ ಓದಿ ...
  • Share this:

ಹಿಂದೊಮ್ಮೆ ಬಾಲಿವುಡ್ ನ (Bollywood) ಖ್ಯಾತ ರ್‍ಯಾಪರ್ ಬಾದ್‌ಶಾ (famous rapper Badshah) ಅವರು ಹೇಗೆ ತಾವು ಮಾನಸಿಕ ಅನಾರೋಗ್ಯದಿಂದ (Mental illness) ಬಳಲಿದ್ದರು ಮತ್ತು ಮಾನಸಿಕ ಖಿನ್ನತೆಗೆ (Mental depression) ಒಳಗಾಗಿದ್ದರು ಎಂದು ಬಹಿರಂಗವಾಗಿ ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು ನಮಗೆಲ್ಲಾ ಗೊತ್ತೇ ಇದೆ. ಇವರು ಆತಂಕದ ಅಸ್ವಸ್ಥತೆಯೊಂದಿಗೆ (Disorder) ಹೋರಾಡಿದ್ದಾರೆ ಮತ್ತು ಸ್ಲೀಪ್ ಅಪ್ನಿಯಾದಂತಹ (Sleep apnea) ರೋಗದಿಂದ ಸಹ ಬಳಲಿದ್ದಾರೆ ಎಂದು ಅವರೇ ಖುದ್ದು ಹೇಳಿ ಕೊಂಡಿದ್ದರು. ಆದರೆ ಈಗ ಅದೆಲ್ಲವನ್ನು ಕೇಳಿದ ಅವರ ಸ್ನೇಹಿತರು ಅವರಿಗೆ ಏನು ಹೇಳುತ್ತಿದ್ದಾರೆ ನೋಡಿ.


ಮಾನಸಿಕ ರೋಗದ ಬಗ್ಗೆ ತಿಳಿದು ಆಘಾತಕ್ಕೊಳಗಾದ ಸ್ನೇಹಿತರು
ಇಂತಹ ಮಾನಸಿಕ ಕಾಯಿಲೆಗಳಿಂದ ಹೊರ ಬಂದಿರುವ ರ್‍ಯಾಪರ್ ಬಾದ್‌ಶಾ ಅವರು ಇತ್ತೀಚೆಗೆ ಮತ್ತೆ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ. ನ್ಯೂಸ್ 18 ಅವರೊಂದಿಗಿನ ಚಾಟ್ ನಲ್ಲಿ ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಮತ್ತಷ್ಟು ತೆರೆದಿಟ್ಟ ಬಾದ್‌ಶಾ ಅವರು ಮಾನಸಿಕ ರೋಗದಿಂದ ಬಳಲಿದ್ದರ ಬಗ್ಗೆ ತಿಳಿದು ತಮ್ಮ ಸ್ನೇಹಿತರು ಆಘಾತಕ್ಕೊಳಗಾಗಿದ್ದಾರೆ ಎಂದು ಬಹಿರಂಗಪಡಿಸಿದರು.


"ನಾನು ನನ್ನ ಮಾನಸಿಕ ಕಾಯಿಲೆಗಳ ಬಗ್ಗೆ ನನ್ನ ಸ್ನೇಹಿತರಿಗೆ ಹೇಳಿದಾಗ, ಅವರು ಮೊದಲಿಗೆ ಅದನ್ನು ನಂಬಲು ಸಿದ್ಧರಿರಲಿಲ್ಲ. ಅದಕ್ಕೆ ಅವರು ‘ಅರೇ, ನಿನಗೂ ಹೀಗೆಲ್ಲಾ ಆಗುತ್ತಾ" ಎಂದು ಕೇಳಿದ್ದುಂಟು ಎಂದು ಬಾದ್‌ಶಾ ಅವರು ಹೇಳಿದರು.


ಈ ಬಗ್ಗೆ ಬಾದ್‌ಶಾ ಹೇಳಿದ್ದು ಹೀಗೆ
ಮಾನಸಿಕ ಆರೋಗ್ಯ ಸಮಸ್ಯೆಗಳು ಎಂದಿಗೂ ದೈಹಿಕ ಗಾಯಗಳಂತೆ ಹೊರಗೆ ಕಾಣಿಸುವುದಿಲ್ಲ ಮತ್ತು ಜನರಿಗೆ ಅವು ಬೇಗನೆ ಅರ್ಥವಾಗುವುದಿಲ್ಲ ಎಂದು ರ್‍ಯಾಪರ್ ಗಮನ ಸೆಳೆದರು. ಜನರು ತಮ್ಮ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವುದು ಬಹಳ ಮುಖ್ಯ ಎಂದು ಅವರು ಹೇಳಿದರು. "ಮಾನಸಿಕ ಆರೋಗ್ಯ ಸಮಸ್ಯೆಯಿಂದ ಯಾರು ಹೋರಾಡುತ್ತಿದ್ದಾರೆ ಎಂದು ನಿಮಗೆ ಎಂದಿಗೂ ತಿಳಿಯುವುದಿಲ್ಲ, ಏಕೆಂದರೆ ಅದು ಹೊರಗೆ ಕಾಣಿಸುವುದಿಲ್ಲ. ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ತುಂಬಾನೇ ಮುಖ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ.


ಇದನ್ನೂ ಓದಿ: Salman Khan: ಸಲ್ಮಾನ್​ ಖಾನ್ ಕುಟುಂಬಕ್ಕೆ ಕಂಟಕ, ಅಪ್ಪ ಮಗನ ಕಥೆ ಮುಗಿಸ್ತಿವಿ ಅಂದಿದ್ದು ಯಾರು?


ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ನೀವು ನಿಜವಾಗಿಯೂ ಕಾಳಜಿ ವಹಿಸಬೇಕು ಎಂದು ನಾನು ಸಾಕಷ್ಟು ಒತ್ತಿ ಹೇಳಲು ಸಾಧ್ಯವಿಲ್ಲ" ಎಂದು ಬಾದ್‌ಶಾ ಅವರು ಹೇಳಿದರು.


ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳಲು ಈ ಕೆಲಸಗಳನ್ನು ಮಾಡಿ
"ನಿಮ್ಮ ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳಲು ನೀವು ಮಾಡಬಹುದಾದ ಕೆಲವು ಕೆಲಸಗಳೆಂದರೆ ನಿಮಗೆ ಸಂತೋಷವನ್ನುಂಟು ಮಾಡುವ ಕೆಲಸವನ್ನು ಹೆಚ್ಚಾಗಿ ಮಾಡುವುದು. ಪ್ರತಿದಿನವೂ ಒತ್ತಡಕ್ಕೆ ಒಳಗಾಗದಿರುವುದು ಬಹಳ ಮುಖ್ಯ. ನೀವು ಆ ಒತ್ತಡವನ್ನು ಹೊರ ಹಾಕಬೇಕು ಮತ್ತು ನೀವು ಅದನ್ನು ಸಾಧ್ಯವಾದಷ್ಟು ಬೇಗ ನಿಭಾಯಿಸಬೇಕು. ಒತ್ತಡವು ನಿಮ್ಮ ಮೇಲೆ ತುಂಬಾ ಪರಿಣಾಮ ಬೀರಲು ಬಿಡಬೇಡಿ, ಏಕೆಂದರೆ ಅದು ನಿಮ್ಮ ಆರೋಗ್ಯಕ್ಕೆ ತುಂಬಾನೇ ಹಾನಿಕಾರಕವಾಗಬಹುದು” ಎಂದು ಬಾದ್‌ಶಾ ಹೇಳಿದರು.


“ನೀವು ನಿಮ್ಮ ಜೀವನದಲ್ಲಿ ಬರೀ ಸಂತೋಷವಾಗಿರಲು ಪ್ರಯತ್ನಿಸಬೇಕು ಮತ್ತು ನಿಮಗೆ ಖುಷಿ ಕೊಡುವ ಕೆಲಸಗಳನ್ನೇ ನೀವು ಮಾಡಬೇಕು ಮತ್ತು ನಿಮ್ಮನ್ನು ಸಂತೋಷಪಡಿಸುವ ಜನರೊಂದಿಗೆ ಸಮಯವನ್ನು ಕಳೆಯಬೇಕು. ನಿಮ್ಮ ಸಂತೋಷದ ಬಗ್ಗೆ ನೀವು ಸ್ವಾರ್ಥಿಗಳಾಗಿರಬೇಕು. ಇಂದಿನ ಜಗತ್ತಿನಲ್ಲಿ ನಿಮ್ಮನ್ನು ನೀವು ಒತ್ತಡದಿಂದ ದೂರವಿಡಲು ಇದೊಂದೇ ಮಾರ್ಗವಾಗಿದೆ. ಕ್ಷಮಿಸಿ, ನಾನು ಇದನ್ನು ಹೇಳಬೇಕಾಗಿರುವುದರಿಂದಲೇ ಹೇಳುತ್ತಿದ್ದೇನೆ ಮತ್ತು ಇದು ಸತ್ಯ ಕೂಡ ಆಗಿದೆ" ಎಂದು ಅವರು ಹೇಳುತ್ತಾರೆ.


ಇದನ್ನೂ ಓದಿ:  Coronavirus: ಶಾರುಖ್ ಖಾನ್ - ಕತ್ರಿನಾಗೂ ಕೋವಿಡ್ ಕಂಟಕ, ಬಾಲಿವುಡ್ ಅಂಗಳದಲ್ಲಿ ಸಾಲು ಸಾಲು ಪಾಸಿಟಿವ್ ಕೇಸ್


ಇನ್ನೂ ಕೆಲಸದ ವಿಷಯಕ್ಕೆ ಬಂದಾಗ, ರ್‍ಯಾಪರ್ ಬಾದ್‌ಶಾ ಅವರು ಇತ್ತೀಚೆಗೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರೊಂದಿಗೆ ಪೆಪ್ಸಿಗಾಗಿ ರಚಿಸಲಾದ ‘ಚೆಕ್ ಮೈ ಫಿಝ್’ ಹಾಡಿನಲ್ಲಿ ಕೆಲಸ ಮಾಡಿದರು. ಇದಷ್ಟೇ ಅಲ್ಲದೆ ಬಾದ್‌ಶಾ ಅವರು ನಟಿ ಕಂಗನಾ ರಣಾವತ್ ಅವರ ಅಭಿನಯದ ಚಲನಚಿತ್ರವಾದ ‘ಧಾಕಡ್’ ನಲ್ಲಿ ಬರುವ ‘ಶೀ ಈಸ್ ಆನ್ ಫೈರ್’ ಎಂಬ ಶೀರ್ಷಿಕೆಯ ಹಾಡಿಗೆ ಕೆಲಸ ಮಾಡಿದ್ದಾರೆ.

Published by:Ashwini Prabhu
First published: