ಬದಲಾಗು ನೀನು.... ಬದಲಾಯಿಸು ನೀನು ಹಾಡು ಬಿಡುಗಡೆ; ಕನ್ನಡಿಗರಿಂದ ಭಾರೀ ಮೆಚ್ಚುಗೆ

ಇಂದು ಸಂಜೆ ಯೂ ಟ್ಯೂಬ್​ನಲ್ಲಿ ಹಾಡು ಬಿಡುಗಡೆ ಆಗಿದ್ದು ಸಖತ್ ವೈರಲ್ ಆಗುತ್ತಿದೆ. ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆ ಕಂಡಿದೆ.

ಬದಲಾಗು ನೀನು… ಬದಲಾಯಿಸು ನೀನು

ಬದಲಾಗು ನೀನು… ಬದಲಾಯಿಸು ನೀನು

 • Share this:
  ಸ್ಯಾಂಡಲ್​ವುಡ್ ಅನೇಕ​ ತಾರೆಯರು ಮಾಹಾಮಾರಿ ಕೊರೋನಾ ವಿರುದ್ಧ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ. ಇದೀಗ ಹಾಡೊಂದರ ಮೂಲಕ ಜಾಗೃತಿ ಮೂಡಿಸಲು ಸ್ಯಾಂಡಲ್​ವುಡ್​ ನಟ-ನಟಿಯರು ಕೈಜೋಡಿಸಿದ್ದಾರೆ. ‘ಬದಲಾಗು ನೀನು… ಬದಲಾಯಿಸು ನೀನು' ಎಂಬ ಹಾಡಿನ ಮೂಲಕ  ಕೋವಿಡ್​ ವಿರುದ್ಧ ಎಚ್ಚರಿಕೆ ಸಾರಲು ಮುಂದಾಗಿದ್ದಾರೆ.

  ವೈದ್ಯಕೀಯ ಶಿಕ್ಷಣ ಇಲಾಖೆ ಈ ವಿಡಿಯೋವನ್ನು ನಿರ್ಮಿಸಿದ್ದು, ನಿರ್ದೇಶಕ ಪವನ್​ ಒಡೆಯರು ನಿರ್ದೇಶನ ಮಾಡಿದ್ದಾರೆ. ಚಂದನವನದ ನಟ ದರ್ಶನ್​, ಯಶ್​​,  ರಮೇಶ್​ ಅರವಿಂದ್​, ರಕ್ಷಿತ್​ ಶೆಟ್ಟಿ, ಶಿವರಾಜ್​ ಕುಮಾರ್​, ಪುನೀತ್​ ರಾಜ್​ ಕುಮಾರ್​, ರವಿಚಂದ್ರನ್, ಉಪೇಂದ್ರ, ಧ್ರುವ ಸರ್ಜಾ, ಅನುಶ್ರೀ, ಸುಮಲತಾ​​ ಅಂಬರೀಶ್​​​​,  ಅಭಿಷೇಕ್​​ ಅಂಬರೀಶ್​ ಸೇರಿದಂತೆ ರಾಜಕೀಯ ನಾಯಕರುಗಳಾದ ಮುಖ್ಯಮಂತ್ರಿ ಯಡಿಯರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಆರೋಗ್ಯ ಮತ್ತು ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಈ ಹಾಡಿನಲ್ಲಿ ಇದ್ದಾರೆ. ಜೊತೆಗೆ ಟೀಂ ಇಂಡಿಯಾದ ಮಾಜಿ ಆಟಗಾರರಾದ ರಾಹುಲ್​ ದ್ರಾವಿಡ್​ ಹಾಗೂ ಅನಿಲ್​ ಕುಂಬ್ಳೆ ಕೂಡ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

  ‘ಬದಲಾಗು ನೀನು.... ಬದಲಾಯಿಸು ನೀನು‘ ಹಾಡಿಗೆ ಪ್ರದ್ಯಮ್ನ ಸಾಹಿತ್ಯ ಬರೆದರೆ. ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಇಮ್ರಾನ್​ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಿದ್ದಾರೆ.

  ಪವನ್​ ಒಡೆಯರ್​ ಮತ್ತು ಇಮ್ರಾನ್​ ಸರ್ದಾರಿಯಾ ಕಲಾವಿದರನ್ನು ಭೇಟಿ ಮಾಡಿ ಚಿತ್ರೀಕರಣ ಮಾಡಿದ್ದಾರೆ. ಇನ್ನು ಕೆಲವರು ಮನೆಯಲ್ಲಿಯೇ ದೃಶ್ಯಗಳನ್ನು ಶೂಟ್​ ಮಾಡಿದ್ದಾರೆ. ಇಂದು ಸಂಜೆ ಯೂ ಟ್ಯೂಬ್​ನಲ್ಲಿ ಹಾಡು ಬಿಡುಗಡೆ ಆಗಿದ್ದು ಸಖತ್ ವೈರಲ್ ಆಗುತ್ತಿದೆ. ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆ ಕಂಡಿದೆ.

  First published: