Corona Song: ‘ಬದಲಾಗು ನೀನು.. ಬದಲಾಯಿಸು ನೀನು‘; ಕೊರೋನಾ ವಿರುದ್ಧ ಹಾಡಿನ ಮೂಲಕ ದನಿಗೂಡಿಸಿದ ಸ್ಯಾಂಡಲ್​ವುಡ್ ತಾರೆಯರು

ವೈದ್ಯಕೀಯ ಶಿಕ್ಷಣ ಇಲಾಖೆ ಈ ವಿಡಿಯೋವನ್ನು ನಿರ್ಮಿಸಿದ್ದು, ನಿರ್ದೇಶಕ ಪವನ್​ ಒಡೆಯರು ನಿರ್ದೇಶನ ಮಾಡಿದ್ದಾರೆ. ಚಂದನವನದ ಅನೇಕ ತಾರೆಯರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

news18-kannada
Updated:May 23, 2020, 4:44 PM IST
Corona Song: ‘ಬದಲಾಗು ನೀನು.. ಬದಲಾಯಿಸು ನೀನು‘; ಕೊರೋನಾ ವಿರುದ್ಧ ಹಾಡಿನ ಮೂಲಕ ದನಿಗೂಡಿಸಿದ ಸ್ಯಾಂಡಲ್​ವುಡ್ ತಾರೆಯರು
ಬದಲಾಗು ನೀನು… ಬದಲಾಯಿಸು ನೀನು
  • Share this:
ಸ್ಯಾಂಡಲ್​ವುಡ್ ಅನೇಕ​ ತಾರೆಯರು ಮಾಹಾಮಾರಿ ಕೊರೋನಾ ವಿರುದ್ಧ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ. ಇದೀಗ ಹಾಡೊಂದರ ಮೂಲಕ ಜಾಗೃತಿ ಮೂಡಿಸಲು ಸ್ಯಾಂಡಲ್​ವುಡ್​ ನಟ-ನಟಿಯರು ಕೈಜೋಡಿಸಿದ್ದಾರೆ. ‘ಬದಲಾಗು ನೀನು… ಬದಲಾಯಿಸು ನೀನು' ಎಂಬ ಹಾಡಿನ ಮೂಲಕ  ಕೋವಿಡ್​ ವಿರುದ್ಧ ಎಚ್ಚರಿಕೆ ಸಾರಲು ಮುಂದಾಗಿದ್ದಾರೆ.

ವೈದ್ಯಕೀಯ ಶಿಕ್ಷಣ ಇಲಾಖೆ ಈ ವಿಡಿಯೋವನ್ನು ನಿರ್ಮಿಸಿದ್ದು, ನಿರ್ದೇಶಕ ಪವನ್​ ಒಡೆಯರು ನಿರ್ದೇಶನ ಮಾಡಿದ್ದಾರೆ. ಚಂದನವನದ ನಟ ದರ್ಶನ್​, ರಮೇಶ್​ ಅರವಿಂದ್​, ರಕ್ಷಿತ್​ ಶೆಟ್ಟಿ, ಶಿವರಾಜ್​ ಕುಮಾರ್​, ಪುನೀತ್​ ರಾಜ್​ ಕುಮಾರ್​, ರವಿಚಂದ್ರನ್​ ಸೇರಿದಂತೆ ಅನೇಕರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

‘ಬದಲಾಗು ನೀನು.... ಬದಲಾಯಿಸು ನೀನು‘ ಹಾಡಿಗೆ ಪ್ರದ್ಯಮ್ನ ಸಾಹಿತ್ಯ ಬರೆದರೆ. ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಇಮ್ರಾನ್​ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಿದ್ದಾರೆ.

ಬದಲಾಗು ನೀನು… ಬದಲಾಯಿಸು ನೀನು




ಈಗಾಗಲೇ ಪವನ್​ ಒಡೆಯರ್​ ಮತ್ತು ಇಮ್ರಾನ್​ ಸರ್ದಾರಿಯಾ ಕಲಾವಿದರನ್ನು ಭೇಟಿ ಮಾಡಿ ಚಿತ್ರೀಕರಣ ಮಾಡಿಕೊಂಡು ಬಂದಿದ್ದಾರೆ. ಇನ್ನು ಕೆಲವರು ಮನೆಯಲ್ಲಿಯೇ ದೃಶ್ಯಗಳನ್ನು ಶೂಟ್​ ಮಾಡಿ ಕಳುಹಿಸಿದ್ದಾರೆ. ಮೇ 25 ರಂದು ಸಂಜೆ 5 ಗಂಟೆಗೆ ಈ ಹಾಡು ಯೂಟ್ಯೂಬ್​ನಲ್ಲಿ ಡಿಬೀಟ್ಸ್​​ ಚಾನಲ್​​​ನಲ್ಲಿ ಬಿಡುಗಡೆಯಾಗಲಿದೆ.

ಟಾಲಿವುಡ್​​ ಸಿನಿ ರಂಗಕ್ಕೆ ಸಿಹಿ ಸುದ್ದಿ; ಶೀಘ್ರದಲ್ಲೇ ಶೂಟಿಂಗ್​ಗೆ ಅವಕಾಶ
First published: May 23, 2020, 2:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading