Sahdev Dirdo: ತನ್ನದೇ NFT ಕಲೆಕ್ಷನ್ ಲಾಂಚ್ ಮಾಡಲಿರುವ 'ಬಚ್ಪನ್ ಕಾ ಪ್ಯಾರ್' ಖ್ಯಾತಿಯ ಸಹದೇವ್!

10ರ ಹರೆಯದ ಸಹದೇವ್ ತನ್ನದೇ ಆದ ಎನ್‌ಎಫ್‌ಟಿ (NFT) ಕಲೆಕ್ಶನ್ ಅನ್ನು ಲಾಂಚ್ ಮಾಡುವ ಯೋಜನೆಯಲ್ಲಿದ್ದಾರೆ. ಈ ಸುದ್ದಿಯನ್ನು ದಿರ್ಡೊ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಒಂದರಲ್ಲಿ ತನ್ನ ಅಭಿಮಾನಿಗಳಿಗೆ ಮಾಹಿತಿ ನೀಡಿರುವ ಸಹದೇವ್ ತಾನೀಗ ಚೇತರಿಕೆ ಹೊಂದುತ್ತಿದ್ದು ತನ್ನ ಅಭಿಮಾನಿಗಳ ಪ್ರಾರ್ಥನೆ ಹಾಗೂ ಶುಭಾಶಯಗಳಿಂದಲೇ ಹುಷಾರಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಸಹದೇವ್​ ದಿರ್ಡೊ

ಸಹದೇವ್​ ದಿರ್ಡೊ

  • Share this:

‘ಬಚ್‌ಪನ್ ಕಾ ಪ್ಯಾರ್’('Bachpan Ka Pyar') ಖ್ಯಾತಿಯ ಸಹದೇವ್ ದಿರ್ಡೊ(Sahdev Dirdo) ಇದೀಗ ತಾನೇ ಅಪಘಾತ(Accident)ದಿಂದ ಚೇತರಿಸಿಕೊಳ್ಳುತ್ತಿದ್ದರೂ ತನ್ನ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. 10ರ ಹರೆಯದ ಸಹದೇವ್ ತನ್ನದೇ ಆದ ಎನ್‌ಎಫ್‌ಟಿ (NFT) ಕಲೆಕ್ಶನ್ ಅನ್ನು ಲಾಂಚ್(Launch) ಮಾಡುವ ಯೋಜನೆಯಲ್ಲಿದ್ದಾರೆ. ಈ ಸುದ್ದಿಯನ್ನು ದಿರ್ಡೊ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಒಂದರಲ್ಲಿ ತನ್ನ ಅಭಿಮಾನಿಗಳಿಗೆ ಮಾಹಿತಿ ನೀಡಿರುವ ಸಹದೇವ್ ತಾನೀಗ ಚೇತರಿಕೆ ಹೊಂದುತ್ತಿದ್ದು ತನ್ನ ಅಭಿಮಾನಿಗಳ ಪ್ರಾರ್ಥನೆ ಹಾಗೂ ಶುಭಾಶಯಗಳಿಂದಲೇ ಹುಷಾರಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಈ ಸಮಯದಲ್ಲಿ ವೈದ್ಯರು(Doctors) ಹಾಗೂ ದಾದಿಗಳು(Nurse) ಕೂಡ ಸಹದೇವ್ ಚೇತರಿಕೆಗೆ ಸಹಕಾರ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಇನ್‌ಸ್ಟಾಗ್ರಾಮ್(Instagram) ವಿಡಿಯೋದಲ್ಲಿ ಈ ಕುರಿತು ಶೀರ್ಷಿಕೆ ಬರೆದುಕೊಂಡಿರುವ ಸಹದೇವ್, ನನ್ನ ಚೇತರಿಕೆಗೆ ಸಹಕಾರಿಸಿರುವ ಅಭಿಮಾನಿಗಳಿಗೆ ಹಾಗೂ ಚಿಕಿತ್ಸೆ ನೀಡಿದ ವೈದ್ಯರಿಗೆ ಹಾಗೂ ದಾದಿಗಳಿಗೆ ನಾನು ಚಿರಋಣಿ ಎಂದು ಬರೆದುಕೊಂಡಿದ್ದಾರೆ.


ಮೆಟಾವರ್ಸ್​ನಲ್ಲಿ ಉದ್ಯಮ ಆರಂಭಿಸಲಿರುವ ದಿರ್ಡೋ!

ಸೆಲೆಬ್ರಿಟಿ ಎನ್‌ಎಫ್‌ಟಿ ಮಾರ್ಕೆಟ್‌ ಪ್ಲೇಸ್ nOFTENನಿಂದ ಇನ್ನೊಂದು ಪೋಸ್ಟ್ ಅನ್ನು ಅವರು ಹಂಚಿಕೊಂಡಿದ್ದಾರೆ. ಮೆಟಾವರ್ಸ್‌ನಲ್ಲಿ ಉದ್ಯಮವನ್ನು ಆರಂಭಿಸಲು ದಿರ್ಡೊ ಮುಂದಾಗಿದ್ದು ತನ್ನ ಸ್ಟೋರ್‌ನಲ್ಲಿ ಏನೆಲ್ಲಾ ಲಭ್ಯವಿದೆ ಎಂಬುದನ್ನು ನೋಡಲು ಜನರನ್ನು ಆಹ್ವಾನಿಸಿದ್ದಾರೆ.ಇನ್‌ಸ್ಟಾಗ್ರಾಮ್‌ನಲ್ಲಿನ nOFTEN ಪೋಸ್ಟ್ ಈ ರೀತಿ ಉಲ್ಲೇಖಿಸಿದೆ. ಸಹದೇವ್ ದಿರ್ಡೊ, 10 ರ ಹರೆಯದ ಹಾಡುಗಾರನಾಗಿದ್ದು ಇಂಟರ್ನೆಟ್‌ನಲ್ಲಿ ಹೊಸ ಹವಾ ಸೃಷ್ಟಿಸಿದ್ದಾರೆ. ಬಚ್‌ಪನ್ ಕಾ ಪ್ಯಾರ್ ಹಾಡಿನಿಂದ ಖ್ಯಾತಿ ಗಳಿಸಿರುವ ಪುಟ್ಟ ಹುಡುಗ @nOFTEN_NFT ಭಾರತದ ಸೆಲೆಬ್ರಿಟಿ ಮೆಟಾವರ್ಸ್ ಮಾರ್ಕೆಟ್‌ಪ್ಲೇಸ್ ಮೂಲಕ ಮೆಟಾವರ್ಸ್‌ ಅನ್ನು ಪ್ರವೇಶಿಸುತ್ತಿದ್ದಾರೆ. ಆವರ ಸ್ಟೋರ್‌ನಲ್ಲಿ ಏನೆಲ್ಲಾ ಲಭ್ಯವಿದೆ ಎಂಬುದನ್ನು ನೋಡಲು ಬಯಸುತ್ತೀರಾ? nOFTEN.com ನಲ್ಲಿ ಚೆಕ್​ ಮಾಡಿ.


ಇದನ್ನು ಓದಿ: ದೀಪಿಕಾ ಪಡುಕೋಣೆಗಿಂತ ಹೈಟ್​ ಇದ್ದಾರೆ ಈ ನಟಿ.. ಸೇಮ್ ಟು ಸೇಮ್ ಪ್ರಭಾಸ್​ ಎತ್ತರ!ಕಳೆದ ತಿಂಗಳು ಗಾಯಗೊಂಡಿದ್ದ ಸಹದೇವ್​!

ಸಾಮಾಜಿಕ ತಾಣದಲ್ಲಿ ಖ್ಯಾತಿಗಳಿಸಿರುವ ಸಹದೇವ್ ಬಾದ್‌ಶಾ ಅವರೊಂದಿಗೆ ಸಹಯೋಗ ಕೂಡ ಮಾಡಿದ್ದು, ಇಂಡಿಯನ್ ಐಡಲ್ 12ಗೆ ಆಹ್ವಾನವನ್ನು ಪಡೆದುಕೊಂಡು ಟ್ರೋಲ್‌ಗೆ ಒಳಗಾಗಿದ್ದರು. ಕಳೆದ ತಿಂಗಳು ಸಹದೇವ್ ಅಪಘಾತಕ್ಕೊಳಪಟ್ಟು ತಲೆಗೆ ಗಾಯ ಮಾಡಿಕೊಂಡಿದ್ದರು. ಈ ಸಮಯದಲ್ಲಿ ಸೆಲೆಬ್ರಿಟಿ ಸಿಂಗರ್ ಬಾದ್‌ಶಾ ಸೇರಿದಂತೆ ಹೆಚ್ಚಿನವರು ಸಹದೇವ್ ಚೇತರಿಕೆಗಾಗಿ ಪ್ರಾರ್ಥನೆ ಮಾಡಿಕೊಂಡಿದ್ದರು. ಶಬರಿ ನಗರ್ ಪ್ರದೇಶದಲ್ಲಿ ಸಂಜೆ 6: 30 ಕ್ಕೆ ಅಪಘಾತ ನಡೆದಿತ್ತು ಹಾಗೂ ಈ ಸಮಯದಲ್ಲಿ ದಿರ್ದೊ ತಲೆಗೆ ಹೆಲ್ಮೇಟ್ ಹಾಕಿರಲಿಲ್ಲ. ಇದರಿಂದ ರಸ್ತೆಗೆ ಬಿದ್ದ ಸಹದೇವ್ ತಲೆಗೆ ತೀವ್ರವಾಗಿ ಗಾಯಮಾಡಿಕೊಂಡಿದ್ದರು. ಕೂಡಲೇ ಜಿಲ್ಲಾ ಆಸ್ಪತ್ರೆಗೆ ಹುಡುಗನನ್ನು ದಾಖಲಿಸಲಾಗಿತ್ತು.


ಇದನ್ನು ಓದಿ: Samantha ಬರೀ ಚೆಂದುಳ್ಳಿ ಚೆಲುವೆಯಲ್ಲ, ತುಂಬಾ ಶಕ್ತಿಶಾಲಿ ಕೂಡ! ಯಾಕೆ ಅಂತ ಈ ವಿಡಿಯೋ ನೋಡಿ...

ಸಖತ್  ಸೌಂಡ್​ ಮಾಡಿತ್ತು ‘ಬಚ್​ಪನ್​ ಕಾ ಪ್ಯಾರ್​’ ವಿಡಿಯೋ

ದಿರ್ಡೊ ಸುಕ್ಮ ಜಿಲ್ಲೆಯ ಸ್ಥಳೀಯ ನಿವಾಸಿಯಾಗಿದ್ದು, ಕಳೆದ ವರ್ಷದ ಮಧ್ಯಭಾಗದಲ್ಲಿ ಇಂಟರ್ನೆಟ್‌ನಲ್ಲಿ ಸುದ್ದಿಯಾಗಿದ್ದಾರೆ. ದಿರ್ಡೊ ಶಾಲಾ ಸಮವಸ್ತ್ರದಲ್ಲಿ ಶಿಕ್ಷಕರ ಮುಂದೆ ‘ಬಚ್‌ಪನ್ ಕಾ ಪ್ಯಾರ್’ ಹಾಡುವ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಪ್ರಸಾರ  ಮಾಡಿ ನಂತರ ದಿರ್ಡೋ ವೈರಲ್ ಆದರು. ದಿರ್ಡೊ ಹಾಡನ್ನು ಶಾಲಾ ಸಮವಸ್ತ್ರದಲ್ಲಿ ತರಗತಿಯಲ್ಲಿ ನೇರವಾಗಿ ನಿಂತ ಭಂಗಿಯಲ್ಲಿ ಹಾಡು ಹೇಳುತ್ತಿದ್ದ ದೃಶ್ಯ ವಿಡಿಯೋದಲ್ಲಿ ಕಂಡುಬಂದಿದೆ. ಅಂತೂ ಎನ್‌ಎಫ್‌ಟಿ ಮಾರ್ಕೆಟ್‌ಪ್ಲೇಸ್ nOFTEN ನೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ ಇನ್ನೊಂದು ರೀತಿಯ ಸೆನ್ಸೇಶನ್ ಅನ್ನು ಸಹದೇವ್ ಸೃಷ್ಟಿಸಿದ್ದಾರೆ.


Published by:Vasudeva M
First published: