Bachpan Ka Pyaar ವಿಡಿಯೋ ಖ್ಯಾತಿಯ ಸಹದೇವ್ ಡಿರ್ಡೊಗೆ ಅಪಘಾತ: ಚೇತರಿಕೆಗೆ ಪ್ರಾರ್ಥನೆ

ಸಹದೇವ್ ಡಿರ್ಡೊ ಆಸ್ಥಾ ಗಿಲ್ ಹಾಗೂ ರಿಕೊ ಜೊತೆಗೂಡಿ ರ‍್ಯಾಪರ್‌ ಬಾದ್‌ಶಾ ಈ ಹಾಡಿನ ಸಂಪೂರ್ಣ ಆವೃತ್ತಿ ಹಾಡಿದರು ಈ ಹಾಡು ಅಭಿಮಾನಿಗಳನ್ನು ರಂಜಿಸುವುದರೊಂದಿಗೆ ವೈರಲ್ ಆಯಿತು

ಸಹದೇವ್ ಡಿರ್ಡೊ

ಸಹದೇವ್ ಡಿರ್ಡೊ

  • Share this:
'ಬಚ್ಪನ್ ಕಾ ಪ್ಯಾರ್' ವಿಡಿಯೋ ಮೂಲಕ ರಾತ್ರೋರಾತ್ರಿ ಜನಪ್ರಿಯವಾಗಿದ್ದ ಛತ್ತೀಸ್‌ಗಢ (Chhattisgarh) ಮೂಲದ ಪುಟ್ಟ ಬಾಲಕ ಸಹದೇವ್ ಡಿರ್ಡೊ (Sahadev Dirdo) ರಸ್ತೆ ಅಪಘಾತಕ್ಕೀಡಾಗಿದ್ದಾನೆ (Road accident). ಈ ವಿಡಿಯೋದಲ್ಲಿ ಆತನೊಂದಿಗೆ ಕಾಣಿಕೊಂಡಿದ್ದ ರ‍್ಯಾಪರ್ ಬಾದ್‌ಶಾ (Rapper Badshaw) ಅಪಘಾತದ ಸುದ್ದಿಯನ್ನು ಟ್ವೀಟ್ (Tweet's) ಮಾಡುವ ಮೂಲಕ ದೃಢೀಕರಿಸಿದ್ದಾರೆ. ತನ್ನ ಇತ್ತೀಚಿನ ಟ್ವೀಟ್‌ಗಳಲ್ಲಿ ಈ ವಿಷಯ ಬಹಿರಂಗಪಡಿಸಿರುವ ರ‍್ಯಾಪರ್‌ ಬಾದ್‌ಶಾ, 10 ವರ್ಷದ ಸಹದೇವ್ ಡಿರ್ಡೊ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆತನನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ನಾನು ಅವರ ಕುಟುಂಬದ (Family) ಸಂಪರ್ಕದಲ್ಲಿದ್ದೇನೆ ಎಂದು ಹೇಳಿದ್ದಾರೆ. ಇದರೊಂದಿಗೆ ತಾನು ಸಹದೇವ್ ಜೊತೆಯಲ್ಲಿರುವ ವಿಷಯವನ್ನೂ ಬಹಿರಂಗಗೊಳಿಸಿದ್ದಾರೆ.

ಸಹದೇವ್ ತಲೆಗೆ ಪೆಟ್ಟು

ವರದಿಗಳ ಪ್ರಕಾರ, ತನ್ನ ತಂದೆಯೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ಸಹದೇವ್ ಡಿರ್ಡೊ ರಸ್ತೆ ಅಪಘಾತದಲ್ಲಿ ಬೈಕ್‌ನಿಂದ ಕೆಳಕ್ಕೆ ಬಿದ್ದಿದ್ದಾನೆ. ಈ ಸಂದರ್ಭದಲ್ಲಿ ಆತನ ತಲೆಗೆ ಪೆಟ್ಟಾಗಿದೆ. ಕೂಡಲೇ ಆತನನ್ನು ಸುಕ್ಮಾ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಜಗ್ದಲ್‌ಪುರದಲ್ಲಿರುವ ವೈದ್ಯಕೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಆತನನ್ನು ವೈದ್ಯಕೀಯ ನಿಗಾದಲ್ಲಿರಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಲೈವ್ ಕಾರ್ಯಕ್ರಮದಲ್ಲೇ ಖ್ಯಾತ ಹಾಡುಗಾರನ ಕೊಲೆ! ಭಯಾನಕ ದೃಶ್ಯ ಕಂಡು ಬೆಚ್ಚಿಬಿದ್ದ ಅಭಿಮಾನಿಗಳು

ಸುದ್ದಿ ತಿಳಿಯುತ್ತಿದ್ದಂತೆಯೇ ಸಹದೇವ್ ಡಿರ್ಡೊ ಆರೋಗ್ಯ ಸ್ಥಿತಿಯ ಮಾಹಿತಿ ಪಡೆಯಲು ಜಿಲ್ಲಾಧಿಕಾರಿ ವಿನೀತ್ ಬಂದನ್ವರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ಶರ್ಮ ಆಸ್ಪತ್ರೆಗೆ ಭೇಟಿ ನೀಡಿದ್ದರು. ಸಹದೇವ್ ಡಿರ್ಡೊ ಆರೋಗ್ಯ ಸ್ಥಿತಿಯ ಮೇಲೆ ವೈದ್ಯರು ನಿರಂತರವಾಗಿ ನಿಗಾ ವಹಿಸಿದ್ದಾರೆ.

ಶೀಘ್ರ ಚೇತರಿಕೆಗೆ ಪ್ರಾರ್ಥನೆ

ಸಹದೇವ್ ಡಿರ್ಡೊ ರಸ್ತೆ ಅಪಘಾತಕ್ಕೀಡಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೆ ಸಹಸ್ರಾರು ಟ್ವೀಟಿಗರು ಆತನ ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ. ಸಹದೇವ್ ಡಿರ್ಡೊನ ವೈರಲ್ ಆಗಿದ್ದ 'ಬಚ್ಪನ್ ಕಾ ಪ್ಯಾರ್' ವಿಡಿಯೋವನ್ನು ಆತನ ಶಿಕ್ಷಕಿ ಚಿತ್ರೀಕರಿಸಿದ್ದರು. ಆತನಿಗೆ ಹಾಡು ಹೇಳುವಂತೆ ಸೂಚಿಸಿ, ಆತನ ಹಾಡುಗಾರಿಕೆಯನ್ನು ಚಿತ್ರಿಸಿದ್ದ ಶಿಕ್ಷಕಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದಾದ 2 ವರ್ಷಗಳ ನಂತರವಷ್ಟೇ ಆ ವಿಡಿಯೋ ವೈರಲ್ ಆಗಿ ಎಲ್ಲರೂ ಆತನ ಹಾಡುಗಾರಿಕೆಗೆ ತಲೆದೂಗತೊಡಗಿದ್ದು.

ಬಚ್ಪನ್ ಕಾ ಪ್ಯಾರ್' ವಿಡಿಯೋ ಹವಾ

2019ರಲ್ಲಿ ಬಿಡುಗಡೆಯಾದ 'ಬಚ್ಪನ್ ಕಾ ಪ್ಯಾರ್' ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಸಹದೇವ್ ಡಿರ್ಡೊ ಅಂತರ್ಜಾಲ ತಾಣಗಳಲ್ಲಿ ಮನೆಮಾತಾಗಿದ್ದ. ಆತನ ಜನಪ್ರಿಯತೆ ಯಾವ ಮಟ್ಟದಲ್ಲಿತ್ತೆಂದರೆ ಸ್ವತಃ ರ‍್ಯಾಪರ್‌ ಬಾದ್‌ಶಾ ಅದೇ ಹೆಸರಿನಲ್ಲಿ ಮತ್ತೊಂದು ಹಾಡಿನಲ್ಲಿ ಆತನ ಜೊತೆಯಾಗಿದ್ದರು.

'ಬಚ್ಪನ್ ಕಾ ಪ್ಯಾರ್' ವಿಡಿಯೋ ವೈರಲ್ ಆಗುತ್ತಿದ್ದಂತೆಯೆ ಸಹದೇವ್ ಡಿರ್ಡೊ ಎಷ್ಟು ಜನಪ್ರಿಯನಾದನೆಂದರೆ ಇಂಡಿಯನ್ ಐಡಲ್ 12ನಲ್ಲಿ ಪಾಲ್ಗೊಳ್ಳುವಂತೆ ಸಂಘಟಕರು ಆತನಿಗೆ ಆಹ್ವಾನ ನೀಡಿದ್ದರು. ಇದಾದ ನಂತರ ರ‍್ಯಾಪರ್‌ ಬಾದ್‌ಶಾ ಜೊತೆಗೂ ಹಾಡು ಹಾಡಿದ್ದರು.





ಭಾರಿ ಜನಪ್ರಿಯ

ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಟ್ರೆಂಡ್ ಆಗುವುದರೊಂದಿಗೆ ಇಡೀ ದೇಶ ಆ ಹಾಡಿಗೆ ತಲೆದೂಗತೊಡಗಿತು. ಇನ್ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಈ ಹಾಡು ಸಾಮಾನ್ಯರಿಂದ ಹಿಡಿದು ತಾರೆಗಳವರೆಗೆ ಭಾರಿ ಜನಪ್ರಿಯವಾಯಿತು. ಇದಾದ ನಂತರ ಸಹದೇವ್ ಡಿರ್ಡೊ, ಆಸ್ಥಾ ಗಿಲ್ ಹಾಗೂ ರಿಕೊ ಜೊತೆಗೂಡಿ ರ‍್ಯಾಪರ್‌ ಬಾದ್‌ಶಾ ಈ ಹಾಡಿನ ಸಂಪೂರ್ಣ ಆವೃತ್ತಿ ಹಾಡಿದರು. ಈ ಹಾಡು ಅಭಿಮಾನಿಗಳನ್ನು ರಂಜಿಸುವುದರೊಂದಿಗೆ ವೈರಲ್ ಆಯಿತು.



ಇದನ್ನೂ ಓದಿ: Salman Khan: `ಪವನ ಪುತ್ರ ಭಾಯ್​ಜಾನ್’​ ಅವತಾರದಲ್ಲಿ ಸಲ್ಲು: ಮುಂದಿನ 5 ಸಿನಿಮಾಗಳ ಡೀಟೆಲ್ಸ್​​ ಇಲ್ಲಿದೆ..

340 ಮಿಲಿಯನ್‌ಗೂ ಹೆಚ್ಚು ಮಂದಿ ವೀಕ್ಷಣೆ

ರ‍್ಯಾಪರ್‌ ಬಾದ್‌ಶಾ ಹಾಗೂ ಸಹದೇವ್ ಡಿರ್ಡೊ ಜೊತೆಗೂಡಿ ಹಾಡಿರುವ 'ಬಚ್ಪನ್ ಕಾ ಪ್ಯಾರ್' ಆವೃತ್ತಿಯ ಹಾಡು ಭಾರಿ ಯಶಸ್ಸು ಗಳಿಸಿದ್ದು, ಯೂಟ್ಯೂಬ್‌ನಲ್ಲಿ 340 ಮಿಲಿಯನ್‌ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಸಣ್ಣ ವಯಸ್ಸಿನಲ್ಲೇ ಅಪಾರ ಜನಪ್ರಿಯತೆ ಗಳಿಸಿರುವ ಸಹದೇವ್ ಡಿರ್ಡೊ ಶೀಘ್ರ ಗುಣಮುಖವಾಗಲೆಂದು ಹಾರೈಸುತ್ತೇವೆ.
Published by:vanithasanjevani vanithasanjevani
First published: