Puneeth Rajkumar: ಸಕ್ರೆಬೈಲಿನಲ್ಲಿ ಅಪ್ಪು ನೋಡೋಕೆ ಪ್ರತಿದಿನ ಸಾವಿರಾರು ಜನ!

Puneeth Rajkumar : ಸಕ್ರೆ ಬೈಲು ಆನೆ ಬಿಡಾರದಲ್ಲಿರುವ ಎರಡೂವರೆ ವರ್ಷದ ಆನೆ ಮರಿ(Baby Elephant)ಗೆ ಪುನೀತ್‌ ರಾಜಕುಮಾರ್‌ ಎಂದು ನಾಮಕರಣ ಮಾಡಿದ ಬಳಿಕ ಇದನ್ನು ನೋಡುವುದಕ್ಕಾಗಿ ರಾಜ್ಯದ ನಾನಾ ಕಡೆಗಳಿಂದ ಜನರು ಆಗಮಿಸುತಿದ್ದಾರೆ.

ಶೂಟಿಂಗ್​ ವೇಳೆ ಸಕ್ರೆಬೈಲಿಗೆ ಭೇಟಿ ನೀಡಿದ್ದ ಅಪ್ಪು

ಶೂಟಿಂಗ್​ ವೇಳೆ ಸಕ್ರೆಬೈಲಿಗೆ ಭೇಟಿ ನೀಡಿದ್ದ ಅಪ್ಪು

  • Share this:
‘ಮುತ್ತುರಾಜ ಹೆತ್ತ ಮುತ್ತೆ.. ಎತ್ತ ಹೋದೆಯೋ.. ಅತ್ತು, ಕರೆದರೂ ಮತ್ತೆ ಬಾರದಾದೆಯೂ.. ಮರೆಯಲಾರೆವೂ ಎಂದು ನಿಮ್ಮ ಅಪ್ಪುಗೆ.. ನೆನೆಪೆ ತುಂಬಿ ಹೋದೆ.. ದೂರದೂರಿಗೆ..’ಹೌದು, ಅಪ್ಪು(Appu) ನಮ್ಮನ್ನು ಬಿಟ್ಟು ಹೋಗಿರುವುದನ್ನು ಇಂದಿಗೂ ಯಾರು ನಂಬಲು ಸಾಧ್ಯವಾಗುತ್ತಿಲ್ಲ. ಅಪ್ಪು ನಮ್ಮೊಂದಿಗೆ ಇದ್ದಾರೆ. ಅಭಿಮಾನಿಗಳ(Fans) ಹೃದಯದಲ್ಲಿದ್ದಾರೆ. ಎಲ್ಲಿವರೆಗೂ ಅಭಿಮಾನಿಗಳು ಇರುತ್ತಾರೋ ಅಲ್ಲಿವರೆಗೂ ಅಪ್ಪು ಜೀವಂತವಾಗಿರುತ್ತಾರೆ. ಅಪ್ಪು ಅವರ ಪರಮಾತ್ಮ(Paramathma) ಸಿನಿಮಾದ ಕ್ಲೈಮ್ಯಾಕ್ಸ್(Climax)​​ನಲ್ಲಿ ಒಂದು ಸ್ಲೋಗನ್​ ಇದೆ. ‘ಜೊತೆಗಿರದ ಜೀವ ಎಂದಿಗಿಂತ ಜೀವಂತ’ ಅಪ್ಪು(Appu) ದೈಹಿಕವಾಗಿ ನಮ್ಮ ಜೊತೆ ಇಲ್ಲ. ಆದರೆ ಮಾನಸಿಕವಾಗಿ ಎಲ್ಲರ ಜೊತೆ ಇದ್ದಾರೆ. ಬುದಕಿದ ಅಷ್ಟೂ ದಿನ ಅಪ್ಪು ಮಾದರಿಯಾಗುವಂತೆ ಜೀವನ ನಡೆಸಿದವರು, ಸಾಮಾಜಿಕ ಕೆಲಸಗಳು, ವ್ಯಕ್ತಿತ್ವ, ಸರಳತೆ ಎಲ್ಲವೂ ಇವರನ್ನು ನೋಡಿ ಕಲಿಯಬೇಕು. ಮೊನ್ನೆ ಅಪ್ಪು ಅವರ ಫೋಟೋವನ್ನು ಹಿಡಿದು ಅಭಿಮಾನಿಯೊಬ್ಬರು ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದಿದ್ದರು. ಹೀಗೆ ಎಲ್ಲಾ ಕಡೆ ಅಪ್ಪು ಅವರನ್ನು ಹುಡುಕುವ ಕೆಲಸಕ್ಕೆ ಫ್ಯಾನ್ಸ್(Fans)​ ಮುಂದಾಗಿದ್ದಾರೆ. ಇದೀಗ ಸಕ್ರೆ ಬೈಲು ಆನೆ ಬಿಡಾರದಲ್ಲಿರುವ ಎರಡೂವರೆ ವರ್ಷದ ಆನೆ ಮರಿ(Baby Elephant)ಗೆ ಪುನೀತ್‌ ರಾಜಕುಮಾರ್‌ ಎಂದು ನಾಮಕರಣ ಮಾಡಿದ ಬಳಿಕ ಇದನ್ನು ನೋಡುವುದಕ್ಕಾಗಿ ರಾಜ್ಯದ ನಾನಾ ಕಡೆಗಳಿಂದ ಜನರು ಆಗಮಿಸುತಿದ್ದಾರೆ.

ಮರಿ ಆನೆಗೆ ‘ಪುನೀತ್​’ ಹೆಸರು ಇಟ್ಟ ಅರಣ್ಯ ಇಲಾಖೆ

ಅಪ್ಪು ಸದಾ ಸಕ್ರಬೈಲು ಆನೆ ಬಿಡಾರಕ್ಕೆ ಬರುತ್ತಿದ್ದರು. ಇಲ್ಲಿದ್ದ ಆನೆಗಳ ಕಂಡು ಖುಷಿಪಡುತ್ತಿದ್ದರು. ಅಪ್ಪುಕೊನೆಯಾದಾಗಿ ಇಲ್ಲಿ ಭೇಟಿ  ನೀಡಿದ್ದ ಸಂದರ್ಭದಲ್ಲಿ ಇದೇ ಆನೆಮರಿಯನ್ನು ಮುದ್ದಾಡಿದ್ದರಂತೆ. ಪುನೀತ್​ ರಾಜ್​ಕುಮಾರ್​ ನಮ್ಮನ್ನೆಲ್ಲ ಬಿಟ್ಟು ಹೋದ ಮೇಲೆ. ಅರಣ್ಯ ಇಲಾಖೆ ಗೌರವಾರ್ಥ ಈ ಮರಿಗೆ ಪುನೀತ್‌ ಹೆಸರು ಇಟ್ಟಿದ್ದಾರೆ. ಇದಾದ ಬಳಿಕ ಇಲ್ಲಿಗೆ ಅಪ್ಪು ಅಭಿಮಾನಿಗಳು ಈ ಆನೆ ನೋಡಲೆಂದೇ ಬರುತ್ತಿದ್ದಾರಂತೆ. ಅದು ದೂರದ ಊರುಗಳಿಂದ ಸಕ್ರಬೈಲು ಆನೆ ಬಿಡಾರಕ್ಕೆ  ಬಂದು , ಈ ಆನೆಯ ಮರಿಯನ್ನು ನೋಡಿಕೊಂಡು ಹೋಗುತ್ತಿದ್ದಾರೆ. ಈ ಮುಂದೆ ಇಲ್ಲಿಗೆ ಪ್ರವಾಸಿಗರು ಬೇರೆ  ವಿಚಾರಕಕ್ಕೆ ಬರುತ್ತಿದ್ದರು. ಆದರೆ ಈಗ ಅಪ್ಪು ಹೆಸರು ಇಟ್ಟಿರುವ ಈ ಆನೆ ಮರಿಯನ್ನು ನೋಡಲೆಂದು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ಆನೆ ಮರಿಯಲ್ಲಿ ಅಪ್ಪು ಅವರನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ.

ಇದನ್ನು ಓದಿ : ಅಪ್ಪು ಕನಸು ನನಸು ಮಾಡುತ್ತಿರೋ ಅಶ್ವಿನಿ: ಪುನೀತ್​ ಪತ್ನಿ ಕಡೆಯಿಂದ ಬಿಗ್​ ಅನೌನ್ಸ್​​ಮೆಂಟ್​!

‘ಗಂಧದಗುಡಿ’ ಶೂಟಿಂಗಾಗಿ ಇಲ್ಲಿ ಬಂದಿದ್ದ ಅಪ್ಪು!

ಅಪ್ಪು ಗಂಧದಗುಡಿ ಹೆಸರಿನಲ್ಲಿ ಡಾಕ್ಯುಮೆಂಟರಿಯೊಂದನ್ನು ಮಾಡಿದ್ದರು ಎಂಬುಂದು ಅವರು ನಿಧನರಾದ ಮೇಲೆ ಎಲ್ಲರಿಗೂ ತಿಳಿಯಿತು. ನವೆಂಬರ್​ 1ರಂದು ಅಪ್ಪು ಈ ಬಗ್ಗೆ ಅನೌನ್ಸ್​ ಮಾಡಬೇಕಿತ್ತು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಆದರೆ ಮೊನ್ನೆ ಅಪ್ಪು ಅವರ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಗಂಧದಗುಡಿ ಡಾಕ್ಯುಮೆಂಟ್​ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಈ ಡಾಕ್ಯುಮೆಂಟ್​ ಶೂಟಿಂಗ್ ವೇಳೆ ಸಕ್ರೆಬೈಲು ಆನೆ ಬಿಡಾರಕ್ಕೆ ಬಂದಿದ್ದರು. ಒಂದೆರೆಡು ದಿನ ಇಲ್ಲಿನ ಆನೆಗಳ ಜೊತೆ ಆರಾಮಾಗಿ ಕಾಲಕಳೆದಿದ್ದರಂತೆ. ಹೀಗಾಗಿ ಇಲ್ಲಿನ ಆನೆ ಮರಿಗೆ ಪುನೀತ್​ ಎಂದು ಹೆಸರಡಿಲಾಗಿದೆ.

ಇದನ್ನು ಓದಿ : ಫೈಟ್ ಸೀನ್​ಗೆ ಎಂದೂ Dupe ಬಳಸೇ ಇಲ್ಲ ಪವರ್ ಸ್ಟಾರ್, ಅವರ ಆಕ್ಷನ್ ನೋಡಿ Allu Arjun ಕೂಡಾ ಶಾಕ್ ಆಗಿದ್ರಂತೆ

ಸಕ್ರೆಬೈಲಿಗೆ ಆಗಮಿಸಲಿದ್ದಾರಂತೆ ಶಿವಣ್ಣ!

ಪ್ರೀತಿಯ ತಮ್ಮನನ್ನು ಕಳೆದುಕೊಂಡು ಶಿವಣ್ಣ ನೊಂದಿದ್ದಾರೆ. ಅಪ್ಪು ಬಗ್ಗೆ ನೆನದು ಪ್ರತಿದಿನ ಕಣ್ಣೀರು ಹಾಕುತ್ತಿದ್ದಾರೆ. ಕೆಲ ದಿನಗಳ ಬಳಿಕ ಶಿವಣ್ಣ ಸಕ್ರೆಬೈಲು ಆನೆ ಬಿಡಾರಕ್ಕೆ ಭೇಟಿ ನೀಡಲಿದ್ದಾರಂತೆ. ಪುನೀತ್ ಹೆಸರು ಇಟ್ಟಿರುವ ಆನೆ ಮರಿಯನ್ನು ಶಿವಣ್ಣ ನೋಡಲಿದ್ದಾರೆ ಅಂತ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
Published by:Vasudeva M
First published: