ವಿವಾದಾತ್ಮಕ ಟ್ವೀಟ್ (Controversial Tweet), ಹೇಳಿಕೆಗಳಿಂದ (Statement) ಕಾಶ್ಮೀರ್ ಫೈಲ್ಸ್ (Kashmir Files) ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಆಗಾಗ ಟೀಕೆಗೆ ಗುರಿಯಾಗುತ್ತಾರೆ. ಅವರ ಹೇಳಿಕೆ, ಮಾತುಗಳು ಪ್ರತಿ ಬಾರಿಯೂ ಚರ್ಚೆಗೆ ದಾರಿ ಮಾಡಿಕೊಡುತ್ತದೆ. ಇದೀಗ ನಟ (Actor) ಮತ್ತೊಮ್ಮೆ ಅಂಥದ್ದೇ ಹೇಳಿಕೆ ಕೊಟ್ಟು ಟೀಕೆಗೆ ಗುರಿಯಾಗಿದ್ದಾರೆ. ನಟ ಇತ್ತೀಚೆಗೆ ಪಶ್ಚಿಮ ಬಂಗಾಳದ (West Bengal) ಬಗ್ಗೆ ಟ್ವೀಟ್ ಮಾಡಿದ್ದಾರೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮಾಡಿರುವ ಟ್ವೀಟ್ಗೆ ಭಾರೀ ಖಂಡನೆ ವ್ಯಕ್ತವಾಗಿದ್ದು ಎಲ್ಲರೂ ಅವರನ್ನು ಟೀಕಿಸುತ್ತಿದ್ದಾರೆ.
ಮುಸ್ಲಿಂ ಏರಿಯಾ ಸೇಫ್ ಅಲ್ಲ
ಭದ್ರತಾ ಕಾರಣಗಳಿಂದಾಗಿ ಬುಕ್ ಸೈನಿಂಗ್ ಇವೆಂಟ್ನ ಸ್ಥಳವನ್ನು ಬದಲಾಯಿಸಲಾಗಿದೆ. ಅರ್ಬನ್ನಕ್ಸಲ್ಸ್ ಬುಕ್ ಸೈನಿಂಗ್ ಇವೆಂಟ್ನ್ನು ಕ್ವೆಸ್ಟ್ ಮಾಲ್ನಿಂದ ಸ್ಟಾರ್ ಮಾರ್ಕ್ ಬುಕ್ ಶಾಪ್, ಸೌತ್ ಸಿಟಿ ಮಾಲ್ಗೆ ಬದಲಾಯಿಸಲಾಗಿದೆ. ಕ್ವೆಸ್ಟ್ ಮಾಡಲ್ ಮುಸ್ಲಿಂ ಏರಿಯಾ ಆಗಿರುವುದರಿಂದ ಅದು ಸೇಫ್ ಅಲ್ಲ ಎಂದು ಹೇಳಲಾಯಿತು. ಆಧುನಿಕ ಬಂಗಾಳದ ದುರಂತ ಎಂದು ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದಾರೆ.
ಇದು ದುರಂತ ಎಂದ ವಿವೇಕ್
ಮುಸ್ಲಿಮರನ್ನು ಅಕ್ರಮವಾಗಿ ಮಾಲ್ ಹೈಜಾಕ್ ಮಾಡಲು ಬಿಟ್ಟಿದ್ದಕ್ಕಾಗಿ ವಿವೇಕ್ ಅಗ್ನಿಹೋತ್ರಿ ಪಶ್ಚಿಮ ಬಂಗಾದ ಮುಖ್ಯಮಂತ್ರಿಯನ್ನು ದೂಷಿಸಿದ್ದಾರೆ. ಸ್ನೇಹಿತರೇ ಇದು ನಿಜಕ್ಕೂ ದುರಂತ. ಹಾಗೆಯೇ ಇದೊಂದು ಮುನ್ನೆಚ್ಚರಿಕೆಯ ಪರಿಸ್ಥಿತಿ. ಭಾರತೀಯ ಮಾಲ್ ಒಂದಕ್ಕೆ ಭಾರತೀಯ ಬರಹಗಾರನಿಗೇ ಎಂಟ್ರಿ ಇಲ್ಲ.
Friends,
It’s a very tragic and alarming situation that in India, an Indian author isn’t allowed in an Indian mall because that area is dominated by Muslim Indians. @MamataOfficial has officially allowed them to illegally hijack a mall.
Ironically, the book is #UrbanNaxals. https://t.co/DffSr9VAaa
— Vivek Ranjan Agnihotri (@vivekagnihotri) April 20, 2023
ವಿವೇಕ್ ಅಗ್ನಿಹೋತ್ರಿ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿದ ಸುಪ್ರಿಯೋ ಇದು ಸರಿಯಲ್ಲ ಎಂದಿದ್ದಾರೆ. ನಾನು ಬಾಲಿಗಂಜ್ನ ಶಾಸಕ. ಕ್ವೆಸ್ಟ್ ಮಾಲ್ ಇದೇ ಏರಿಯಾದಲ್ಲಿ ಇದೆ ಎಂದು ಅವರು ಉತ್ತರಿಸಿದ್ದಾರೆ.
ಇದನ್ನೂ ಓದಿ: Shalini Pandey: ಅಯ್ಯೋ ಇದೇನ್ ಹಿಂಗಾಗ್ಬಿಟ್ರಿ? ಶಾಲಿನಿ ಫುಲ್ ಚೇಂಜ್
ಪ್ರೀತಿಯ ವಿವೇಕ್ ಅಗ್ನಿಹೋತ್ರಿ ನೀವು ನನ್ನ ಸಹುದ್ಯೋಗಿ. ಹಾಗೆಯೇ ನಿಮ್ಮ ಒತ್ನಿ ಪಲ್ಲವಿ ಅವರನ್ನೂ ಚೆನ್ನಾಗಿ ಗೊತ್ತು. ಆದರೆ ನೀವು ಹೇಳಿರುವ ಕಾರಣದಿಂದ ಇವೆಂಟ್ ಬದಲಾಯಿಸಲು ನಿರ್ಧರಿಸಿದ್ದೀರಿ ಎನ್ನುವುದು ನನಗೆ ಬೇಸರವಾಗಿದೆ ಎಂದಿದ್ದಾರೆ.
I am not helpless.. I was when I was in the communal party @BJP4India which earned me the 'Dangebaaz' title for no fault of mine•Plz come to Kolkata a day earlier•I challenge you that you shall hv the best book release of your life•I shall personally take care•Game? https://t.co/3OWVCA5YH1
— Babul Supriyo (@SuPriyoBabul) April 20, 2023
ಇದಕ್ಕೆ ಉತ್ತರಿಸಿದ ಸುಪ್ರಿಯೋ, ಹೆಲ್ಪ್ಲೆಸ್ ಅಲ್ಲ. ಆದರೆ ನೀವು ದಂಗೇಬಾಜ್ ಎಂಬ ಟೈಟಲ್ ಕೊಟ್ಟಿರುವ ಬಿಜೆಪಿಯಲ್ಲಿರುವಾಗ ನಾನು ಅಸಹಾಯಕ ಎಂದಿದ್ದಾರೆ.
ನಾನು ಅಸಹಾಯಕ ಅಲ್ಲ. ದಯವಿಟ್ಟು ಕೊಲ್ಕತ್ತಾಗೆ ಒಂದು ದಿನ ಮೊದಲೇ ಬನ್ನಿ. ನೀವು ನಿಮ್ಮ ಜೀವನದಲ್ಲಿಯೇ ಬೆಸ್ಟ್ ಬುಕ್ ರಿಲೀಸ್ ಇವೆಂಟ್ ಅನುಭವ ಪಡೆಯುವಿರಿ ಎಂದು ನಾನು ಖಾತರಿಪಡಿಸುತ್ತೇನೆ. ನಾನು ವೈಯಕ್ತಿಕವಾಗಿ ನಿಮ್ಮ ಕಾಳಜಿ ವಹಿಸುತ್ತೇನೆ. ಗೇಮ್ ಎಂದು ಟ್ವೀಟ್ ಮಾಡಿ ಸುಪ್ರಿಯೋ ಚಾಲೆಂಜ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ