HOME » NEWS » Entertainment » BAARO PAILWAAN SECOND LYRICAL VIDEO SONG HAS BEEN RELEASED FORM SUDEEPS MOVIE AE

Pailwaan Song: ಕುಸ್ತಿ ಗೆದ್ದ ಪೈಲ್ವಾನ್​ಗೆ ಎದುರಿಲ್ಲ: ಮಣ್ಣಲಿ ಎದ್ದ ಸುದೀಪ್​ ಧೂಳೆಬ್ಬಿಸುತ್ತಿದ್ದಾರೆ..!

Baaro Pailwaan: ಡಿ-ಬಾಸ್​ ಅಭಿನಯದ ಕುರುಕ್ಷೇತ್ರ ಹಾಗೂ ಸುದೀಪ್​ ಅವರ ಪೈಲ್ವಾನ್​ ನಡುವೆ ಜೋರಾದ ಸ್ಪರ್ಧೆಯೇ ಏರ್ಪಟ್ಟಂತಿದೆ. ನಿನ್ನೆಯಷ್ಟೆ ಕುರುಕ್ಷೇತ್ರ ಚಿತ್ರದ ಜುಮ್ಮಾ ಜುಮ್ಮಾ.. ಲಿರಿಕಲ್​ ಹಾಡು ರಿಲೀಸ್​ ಆಗಿದ್ದು, ಈಗ ಬಾರೋ ಪೈಲ್ವಾನ.... ಬಿಡುಗಡೆಯಾಗಿದೆ.

Anitha E | news18
Updated:July 30, 2019, 12:04 PM IST
Pailwaan Song: ಕುಸ್ತಿ ಗೆದ್ದ ಪೈಲ್ವಾನ್​ಗೆ ಎದುರಿಲ್ಲ: ಮಣ್ಣಲಿ ಎದ್ದ ಸುದೀಪ್​ ಧೂಳೆಬ್ಬಿಸುತ್ತಿದ್ದಾರೆ..!
ಪೈಲ್ವಾನ್​ ಸಿನಿಮಾದ ಎರಡನೇ ಲಿರಿಕಲ್​ ವಿಡಿಯೋ
  • News18
  • Last Updated: July 30, 2019, 12:04 PM IST
  • Share this:
ಕಿಚ್ಚ ಸುದೀಪ್​ ಅಭಿನಯದ ಬಹು ನಿರೀಕ್ಷಿತ 'ಪೈಲ್ವಾನ್​' ಚಿತ್ರ ಕೇವಲ ರಿಲೀಸ್​ ದಿನಾಂಕದಿಂದಲೇ ಸದ್ದು ಮಾಡುತ್ತಿತ್ತು. ಪದೇ ಪದೇ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುತ್ತಿತ್ತು. ಆದರೆ ಕಡೆಗೂ ಚಿತ್ರತಂಡ ಸಿನಿಮಾದ ಬಿಡುಗಡೆ ದಿನಾಂಕ ಔಟ್ ಆಯಿತು. ಆದರೆ ಇನ್ನೂ ಆಡಿಯೋ ಬಿಡುಗಡೆ ಕಾರ್ಯಕ್ರಮದ ಡೇಟ್​ ಮಾತ್ರ ಹಾಗೇ ಇದೆ.

ಇಷ್ಟೆಲ್ಲ ಬದಲಾವಣೆಗಳ ನಡುವೆ ಈಗ 'ಪೈಲ್ವಾನ್​' ಚಿತ್ರತಂಡ ಈಗ ಎಡರನೇ ಲಿರಿಕಲ್​ ಹಾಡನ್ನು ಬಿಡುಗಡೆ ಮಾಡಿದೆ. ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂನಲ್ಲಿ 'ಬಾರೊ ಪೈಲ್ವಾನ್​' ಲಿರಿಕಲ್​ ಹಾಡನ್ನು ಬಿಡುಗಡೆ ಮಾಡಿದೆ. ​



ಈ ಹಾಡನ್ನು ಬಿಡುಗಡೆ ಮಾಡುವುದಾಗಿ ನಿನ್ನೆಯೇ ಕಿಚ್ಚ ಸುದೀಪ್​ ಟ್ವೀಟ್​ ಮಾಡಿದ್ದರು. ಅದನ್ನು ನೋಡಿದ ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದರು.


ಕನ್ನಡದಲ್ಲಿ 'ಬಾರೋ ಪೈಲ್ವಾನ', ಹಿಂದಿ, ತಮಿಳು ಹಾಗೂ ತೆಲುಗಿನಲ್ಲಿ 'ಜೈ ಹೋ ಪೈಲ್ವಾನ್​' ಹಾಗೂ ಮಲಯಾಳಂನಲ್ಲಿ 'ವಾ ವಾ ಪೈಲ್ವಾನ್​'  ಹಾಡು ಸಖತ್​ ಆಗಿ ಮೂಡಿ ಬಂದಿದೆ.








ಈ ಹಾಡಿನಲ್ಲಿ ಮೇಕಿಂಗ್​ ಜತೆಗೆ ಸುದೀಪ್​ ಅವರ ಸ್ಟೆಪ್ಸ್​ ನೋಡುಗರನ್ನು ಆಕರ್ಷಿಸುತ್ತಿದೆ. ಅರ್ಜುನ್​ ಜನ್ಯ ಸಂಗೀತ ನೀಡಿರುವ ಈ ಸಿನಿಮಾ ಹಾಡನ್ನು ವಿಜಯ್​ ಪ್ರಕಾಶ್​, ಕೈಲಾಶ್​ ಖೇರ್​ ಹಾಗೂ ಚಂದನ್​ ಶೆಟ್ಟಿ ಹಾಡಿದ್ದಾರೆ. ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬಿಡುಗಡೆಯಾದ 15 ನಿಮಿಷಕ್ಕೆ 38 ಸಾವಿರ ವೀಕ್ಷಣೆ ಸಿಕ್ಕಿದೆ.

ಇದನ್ನೂ ಓದಿ: Mahesh Babu: ಮತ್ತೊಂದು ವ್ಯವಹಾರ ಆರಂಭಿಸಿದ ಮಹೇಶ್ ಬಾಬು: ದೇವರಕೊಂಡ, ಪೂರಿ ಜಗನ್ನಾಥ್​ ದಾರಿಯಲ್ಲಿ ಪ್ರಿನ್ಸ್..!​

 

Ileana Hot Photos: ಬಿಕಿನಿಯಲ್ಲಿ ಫೋಟೋಗೆ ಪೋಸ್​ ಕೊಟ್ಟ ಇಲಿಯಾನಾರ ಚಿತ್ರ ವೈರಲ್​..!




 
First published: July 30, 2019, 11:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories