ಕಳೆದ ಹಲವು ವರ್ಷಗಳಲ್ಲಿ ಒಂದು ಸಿನಿಮಾದ ಬಗ್ಗೆ ಎಲ್ಲರೂ ತುಂಬಾ ಮಾತಾಡಿದ್ದು ಎಂದರೆ ಅದು ಎಸ್.ಎಸ್. ರಾಜಮೌಳಿ (SS Rajamouli) ಅವರ ನಿರ್ದೇಶನದಲ್ಲಿ ಮೂಡಿ ಬಂದ ಮತ್ತು ನಟ ಪ್ರಭಾಸ್(Prabhas) ಅಭಿನಯದ ‘ಬಾಹುಬಲಿ’ ಸಿನಿಮಾ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಅನೇಕ ವರ್ಷಗಳ ಸತತ ಪ್ರಯತ್ನಗಳನ್ನು ಮಾಡಿ ಚಿತ್ರೀಕರಣವನ್ನು ಮುಗಿಸಿದ ನಂತರ ಬಿಗ್ ಬಜೆಟ್ ಚಿತ್ರವಾದ ಬಾಹುಬಲಿ (Baahubali) ಸಿನಿಮಾ ಬಿಡುಗಡೆಯಾಯಿತು ಮತ್ತು ನಿರೀಕ್ಷೆಗೆ ಮೀರಿದ ಯಶಸ್ಸು ಸಹ ಗಳಿಸಿತು. ದೇಶಾದ್ಯಂತ ಎಲ್ಲಾ ಭಾಷೆಯ (Filmmakers)ಚಿತ್ರೋದ್ಯಮದವರು ತೆಲುಗು ಚಿತ್ರದ ಕಡೆ ಒಮ್ಮೆ ನೋಡುವಂತೆ ಮಾಡಿತ್ತು. ಇದರ ನಂತರ ಅದರ ಬೆನ್ನಲ್ಲೇ ಬಾಹುಬಲಿ 2 ಚಿತ್ರವನ್ನು ಸಹ ಮಾಡಲಾಯಿತು. ಅದು ಕೂಡ ಅಷ್ಟೇ ಹಿಟ್ ಚಿತ್ರವಾಗಿ ಹೊರ ಹೊಮ್ಮಿತು ಎಂದು ಹೇಳಬಹುದು.
ಪ್ರೀಕ್ವೆಲ್ ಸೀರೀಸ್ನ ತಯಾರಿಕೆ
ಬಾಹುಬಲಿ ಎರಡು ಭಾಗಗಳ ಚಿತ್ರಗಳಿಂದ ಗಳಿಸಿದ ಅಪಾರ ಯಶಸ್ಸಿನ ನಂತರ, ಈ ಚಿತ್ರ ತಂಡವು ತನ್ನದೇ ಆದ ಬಾಹುಬಲಿ ಪ್ರೀಕ್ವೆಲ್ ಸೀರಿಸ್ ಅನ್ನು ಶುರು ಮಾಡುವುದಾಗಿ ಒಂದೆರಡು ವರ್ಷಗಳ ಹಿಂದೆ ಘೋಷಿಸಿದ್ದರು. ಆದರೆ ಇನ್ನೂವರೆಗೆ ಅದರ ಬಗ್ಗೆ ಮಾತೇ ಇಲ್ಲ ಎಂದು ನೀವು ಆಲೋಚಿಸುತ್ತಿರಬೇಕಲ್ಲವೇ? ಹೌದು.. ಬಾಹುಬಲಿ ಚಿತ್ರದ ಪ್ರೀಕ್ವೆಲ್ ಸೀರೀಸ್ ಶುರು ಮಾಡುವುದಾಗಿ ಹೇಳಿದ್ದರು, ಆದರೆ ಇತ್ತೀಚಿನ ವರದಿಯ ಪ್ರಕಾರ ಚಿತ್ರದ ಪ್ರೀಕ್ವೆಲ್ ಸೀರೀಸ್ನ ತಯಾರಿಕೆಯನ್ನು ನಿಲ್ಲಿಸಲಾಗಿದೆ ಎಂದು ಹೇಳಲಾಗಿದೆ.
ಈ ಬಾಹುಬಲಿ ಚಿತ್ರದ ಪ್ರೀಕ್ವೆಲ್ ವೆಬ್ ಸೀರಿಸ್ ಅನ್ನು ಆರಂಭದಲ್ಲಿ ನಿರ್ದೇಶಕ ಎಸ್. ಎಸ್. ರಾಜಮೌಳಿ ಅವರೇ ಮಾಡಬೇಕಾಗಿತ್ತು, ಆದರೆ ಈ ಯೋಜನೆಯನ್ನು ನಂತರ ಸಿದ್ಧಾರ್ಥ್ ತಿವಾರಿ ಅವರ ಸ್ವಸ್ತಿಕ್ ಪ್ರೊಡಕ್ಷನ್ಸ್ಗೆ ಹಸ್ತಾಂತರಿಸಲಾಯಿತು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: RRR ಸಿನಿಮಾದಲ್ಲಿ ಆಲಿಯಾ, ಅಜಯ್ ದೇವಗನ್ ಅತಿಥಿ ಪಾತ್ರ: ರಾಜಮೌಳಿ ಮಾತು ಕೇಳಿ ಫ್ಯಾನ್ಸ್ ಶಾಕ್!
ನೆಟ್ಫ್ಲಿಕ್ಸ್ ಸದ್ಯಕ್ಕೆ ನಿಲ್ಲಿಸಿದೆ
ಸುದ್ದಿ ಮಾಧ್ಯಮದ ವರದಿಯ ಪ್ರಕಾರ, ‘ಬಾಹುಬಲಿ-ಬಿಫೋರ್ ದಿ ಬಿಗಿನಿಂಗ್’ ನ ತಯಾರಿಕೆಯನ್ನು ನೆಟ್ಫ್ಲಿಕ್ಸ್ ಸದ್ಯಕ್ಕೆ ನಿಲ್ಲಿಸಿದೆ ಎಂದು ಹೇಳಲಾಗುತ್ತಿದೆ. ಅಮೇರಿಕನ್ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ 2018ರಲ್ಲಿ ಸೀರೀಸ್ ಅನ್ನು ಮತ್ತೆ ಘೋಷಿಸಿತ್ತು. ಐತಿಹಾಸಿಕ ಸಿನಿಮಾ ಮಾಡಲು ಹೆಸರು ವಾಸಿಯಾದ ತಿವಾರಿ ಅವರ ನಿರ್ಮಾಣ ಸಂಸ್ಥೆ ನಿರ್ದೇಶಕ ಕುನಾಲ್ ದೇಶ್ಮುಖ್ ಅವರನ್ನು ತಮ್ಮ ತಂಡದಲ್ಲಿ ಸೇರಿಸಿಕೊಂಡಿದ್ದರು. ಆದರೆ ಅವರು ಈಗ ಈ ಯೋಜನೆಯಿಂದ ಹೊರಗುಳಿದಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ವೆಬ್ ಸೀರಿಸ್ ಗೆ ಹತ್ತಿರವಿರುವ ಮೂಲವೊಂದು ಸುದ್ದಿ ಮಾಧ್ಯಮಕ್ಕೆ "ಈಗ ವಿರಮಿಸಲಾದ ಯೋಜನೆಯು ಬಾಂಬೆ ಫ್ಯಾಬಲ್ಸ್ ಕ್ರಿಯೇಟಿವ್ ನಿರ್ಮಾಪಕರಾಗಿ ಜವಾಬ್ದಾರಿಯನ್ನು ಕೈಗೆತ್ತಿಕೊಂಡಿದ್ದಾರೆ" ಎಂದು ಬಹಿರಂಗಪಡಿಸಿದೆ. ಕುನಾಲ್ ಈ ಯೋಜನೆಯಿಂದ ಹೊರಗುಳಿದ ನಂತರ, ಕೇಸರಿಯಂತಹ ಚಲನಚಿತ್ರಗಳನ್ನು ನಿರ್ದೇಶಿಸಿರುವ ಅನುರಾಗ್ ಸಿಂಗ್ ಅವರು ನಿರ್ಮಾಣ ಸಂಸ್ಥೆಯೊಂದಿಗೆ ಮಾತುಕತೆಯಲ್ಲಿದ್ದರು, ಆದಾಗ್ಯೂ, ಸುದ್ದಿ ಮಾಧ್ಯಮದ ವರದಿಯು ಒಟಿಟಿ ಫ್ಲಾಟ್ಫಾರ್ಮ್ ಅವರೊಂದಿಗೆ ವಿಷಯಗಳು ಕಾರ್ಯರೂಪಕ್ಕೆ ಬರಲಿಲ್ಲ ಎಂದು ಹೇಳುತ್ತದೆ.
ಇದನ್ನೂ ಓದಿ: RRR Movie: ಅಬ್ಬಾ.. ಆ ಒಂದೇ ಒಂದು ಸೀನ್ಗೆ 75 ಲಕ್ಷ ರೂ. ಖರ್ಚು: ರಾಜಮೌಳಿ ಬಿಚ್ಚಿಟ್ಟ ಸತ್ಯ ಕೇಳಿ ಶಾಕ್ ಆದ ಫ್ಯಾನ್ಸ್!
ನಟಿ ನಯನತಾರಾ ಕೂಡ ಭಾಗ
ಈ ಯೋಜನೆಯ ಬಗ್ಗೆ ಸ್ಪಷ್ಟತೆ ಇಲ್ಲದೆ ಇರುವುದರಿಂದ, ಇದರಲ್ಲಿ ನಟಿಸಬೇಕಾಗಿದ್ದ ನಟಿ ಮೃಣಾಲ್ ಠಾಕೂರ್ ಕೂಡ ಈ ಯೋಜನೆಯಿಂದ ಹೊರ ಹೋಗಿದ್ದಾರೆ ಎಂದು ಮನೋರಂಜನೆ ಮಾಧ್ಯಮವೊಂದು ವರದಿ ಮಾಡಿದೆ. ನಟಿ ವಮಿಕಾ ಗಬ್ಬಿ ಕೂಡ ಶಿವಗಾಮಿ ದೇವಿ ಪಾತ್ರವನ್ನು ನಿರ್ವಹಿಸಬೇಕಾಗಿತ್ತು, ಆದರೆ ಅವರು ಇನ್ನೂ ಈ ಪಾತ್ರ ವರ್ಗದ ಭಾಗವಾಗಿದ್ದಾರೆಯೇ ಎಂಬ ವಿಷಯದ ಬಗ್ಗೆ ಯಾವುದೇ ನಿಖರವಾದ ಮಾಹಿತಿ ಇಲ್ಲ. ಈ ನೆಟ್ಫ್ಲಿಕ್ಸ್ ಸೀರಿಸ್ನಲ್ಲಿ ಟಾಲಿವುಡ್ ನಟಿ ನಯನತಾರಾ ಕೂಡ ನಟಿಸಲಿದ್ದಾರೆ. ನಯನತಾರಾ ಇನ್ನೂ ಇದರ ಭಾಗವಾಗಿ ಮುಂದುವರೆದಿದ್ದಾರೆ ಎಂದು ಮನರಂಜನೆ ಮಾಧ್ಯಮವೊಂದು ವರದಿ ಮಾಡಿದೆ.
ಎರಡು ಬಾಹುಬಲಿ ಚಲನಚಿತ್ರಗಳಲ್ಲಿ ತೆಲುಗು ತಾರೆ ಪ್ರಭಾಸ್ ಜೊತೆಗೆ ಅನುಷ್ಕಾ ಶೆಟ್ಟಿ, ಸತ್ಯರಾಜ್, ರಾಣಾ ದಗ್ಗುಬಾಟಿ ಮತ್ತು ರಮ್ಯ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ