ಅನೈತಿಕ ಸಂಬಂಧದ ಆರೋಪ: ಬಾಹುಬಲಿ ನಟನ ಪತ್ನಿ ಆತ್ಮಹತ್ಯೆ..!

BAAHUBALI: ನಿನ್ನೆಯಷ್ಟೇ ಮಧುಗೆ ಕರೆ ಮಾಡಿದ್ದ ಮಡದಿಯು ಮನೆಗೆ ಬರುವಂತೆ ಕೇಳಿಕೊಂಡಿದ್ದರು. ಆದರೆ ಜಿಮ್ ಮತ್ತು ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದ ನಟ ಹೆಂಡತಿಯ ಮಾತನ್ನು ನಿರ್ಲಕ್ಷಿಸಿದ್ದರು.

zahir | news18-kannada
Updated:August 7, 2019, 6:43 PM IST
ಅನೈತಿಕ ಸಂಬಂಧದ ಆರೋಪ: ಬಾಹುಬಲಿ ನಟನ ಪತ್ನಿ ಆತ್ಮಹತ್ಯೆ..!
Madhu-Prakash
  • Share this:
ಟಾಲಿವುಡ್​ ನಟ ಮಧು ಪ್ರಕಾಶ್ ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್​ನಲ್ಲಿನಡೆದಿದೆ. 'ಬಾಹುಬಲಿ' ಚಿತ್ರದ ಪೋಷಕ ಪಾತ್ರದ ಮೂಲಕ ಮುನ್ನಲೆಗೆ ಬಂದಿದ್ದ ಮಧು, ಕೆಲ ಟಿವಿ ಸಿರೀಯಲ್​ಗಳಲ್ಲಿ ಬಣ್ಣ ಹಚ್ಚುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮಧು-ಭಾರತಿ ದಾಂಪತ್ಯದಲ್ಲಿ ವಿರಸ ಮೂಡಿದ್ದು, ಇದರಿಂದ ಪತ್ನಿಯು ಮನನೊಂದು ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆಯಷ್ಟೇ ಮಧುಗೆ ಕರೆ ಮಾಡಿದ್ದ ಮಡದಿಯು ಮನೆಗೆ ಬರುವಂತೆ ಕೇಳಿಕೊಂಡಿದ್ದರು. ಆದರೆ ಜಿಮ್ ಮತ್ತು ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದ ನಟ ಹೆಂಡತಿಯ ಮಾತನ್ನು ನಿರ್ಲಕ್ಷಿಸಿದ್ದರು. ಇದರಿಂದ ಖಿನ್ನತೆಗೆ ಒಳಗಾಗಿದ್ದ ಭಾರತಿ ಸಂಜೆ 7 ಗಂಟೆಯ ವೇಳೆ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಆರೋಪ ಮಾಡಿರುವ ಭಾರತಿ ಕುಟುಂಬಸ್ಥರು, ಮಧುಗೆ ಬೇರೊಬ್ಬಳು ನಟಿಯೊಂದಿಗೆ ಅನೈತಿಕ ಸಂಬಂಧವಿದೆ. ಇದರಿಂದ ಇಬ್ಬರ ನಡುವೆ ವೈಮನಸ್ಸು ಮೂಡಿತ್ತು. ಈ ಬಗ್ಗೆ ಅನೇಕ ಬಾರಿ ಇಬ್ಬರ ನಡುವೆ ಗಲಾಟೆಗಳು ಸಹ ನಡೆದಿದೆ. ಹೀಗಾಗಿ ಇಂದೊಂದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದ್ದಾರೆ.

ಈಗಾಗಲೇ ಮಧು ಪ್ರಕಾಶ್ ರನ್ನು ಹೈದರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

First published:August 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading