ನೆಟ್​ಫ್ಲಿಕ್ಸ್​ನಲ್ಲಿ ಬರಲಿದೆ 'ಬಾಹುಬಲಿ'ಯ ಪ್ರೀಕ್ವೆಲ್​ ಸೀರೀಸ್..!

news18
Updated:August 2, 2018, 6:00 PM IST
ನೆಟ್​ಫ್ಲಿಕ್ಸ್​ನಲ್ಲಿ ಬರಲಿದೆ 'ಬಾಹುಬಲಿ'ಯ ಪ್ರೀಕ್ವೆಲ್​ ಸೀರೀಸ್..!
news18
Updated: August 2, 2018, 6:00 PM IST
ನ್ಯೂಸ್​ 18 ಕನ್ನಡ

ಮೊದಲ ಭಾರತೀಯ ವೆಬ್​ ಸೀರೀಸ್​ 'ಸೆಕ್ರೆಡ್​ ಗೇಮ್ಸ್​' ಅನ್ನು ಪ್ರಸಾರ ಮಾಡಿದ ನೆಟ್​ಫ್ಲಿಕ್ಸ್​ನಲ್ಲಿ ಈಗ 'ಬಾಹುಬಲಿ'ಯ ಪ್ರೀಕ್ವೆಲ್​ ಸೀರೀಸ್​ ನಿರ್ಮಾಣಕ್ಕೆ ಮುಂದಾಗಿದೆ.

ಈ ಪ್ರೀಕ್ವೆಲ್​ ಕಥೆ 'ದ ರೈಸ್​ ಆಫ್​ ಶಿವಗಾಮಿ' ಕಾದಂಬರಿ ಆಧಾರಿತವಾಗಿದ್ದು, ನೆಟ್​ಫ್ಲಿಕ್ಸ್​ ಎಸ್​.ಎಸ್. ರಾಜಮೌಳಿ, ಯೂನಿವರ್ಸ್​ ಹಾಗೂ ಆರ್ಕ ಮೀಡಿಯಾ ವರ್ಕ್ಸ್​ ಜತೆ ಒಪ್ಪಂದ ಮಾಡಿಕೊಂಡಿದೆಎಂದು ಹಾಲಿವುಡ್​ ರಿಪೋರ್ಟರ್​.ಕಾಮ್​ ವರದಿ ಮಾಡಿದೆ.

ಮಾಹಿಷ್ಮತಿ ಸಾಮ್ರಾಜ್ಯದ ಕಥೆಯನ್ನು ಎರಡು ಭಾಗವಾಗಿ ಬೆಳ್ಳಿ ತೆರೆಗೆ ತಂದಿದ್ದರು ರಾಜಮೌಳಿ. 2015ರಲ್ಲಿ 'ಬಾಹುಬಲಿ: ದ ಬಿಗಿನಿಂಗ್​' ಹಾಗೂ 2017ರಲ್ಲಿ 'ಬಾಹುಬಲಿ 2: ದ ಕನ್​ಕ್ಲೂಷನ್​' ಚಿತ್ರ ತೆರೆ ಕಂಡಿತ್ತು. ಈ ಎರಡೂ ಸಿನಿಮಾಗಳು ಭಾರತೀಯ ಸಿನಿಮಾದಲ್ಲೇ ಇತಿಹಾಸ ಸೃಷ್ಟಿಸಿದ್ದವು. ಹಲವಾರು ದಾಖಲೆಗಳನ್ನು ಹುಟ್ಟುಹಾಕಿದ್ದವು.

ಈ  ಸಿನಿಮಾದ ಪ್ರೀಕ್ವೆಲ್ ನೆಟ್​ಫ್ಲಿಕ್ಸ್​ನಲ್ಲಿ ವೆಬ್​ ಸರಣಿಯಾಗಿ ಮೂಡಿಬರಲಿದ್ದು, ಬಾಹುಬಲಿ ಸಿನಿಮಾದ ಅಭಿಮಾನಿಗಳಲ್ಲಿ ಒಂದು ರೀತಿಯ ಸಂತೋಷ ಹಾಗೂ ಕುತೂಹಲ ಹುಟ್ಟುಹಾಕಿದೆ.
First published:August 2, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ