‘ಅಯ್ಯಪ್ಪನುಂ ಕೋಶಿಯುಮ್‘​ ಚಿತ್ರದ ನಿರ್ದೇಶಕನಿಗೆ ಹೃದಯಾಘಾತ!

ಸಿಟಿ ಸ್ಕ್ಯಾನ್​​ ವರದಿಯ ಪ್ರಕಾರ ಸಚ್ಚಿದಾನಂದ್​ ಅವರಿಗೆ ಹೃದಯಘಾತದಿಂದಾಗಿ ಮೆದುಳಿಗೆ ಹಾನಿಯಾಗಿದೆ. ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರಾದರು 72 ದಿನಗಳ ನಂತರವೇ ಅವರ ಆರೋಗ್ಯದ ಬಗ್ಗೆ ಖಚಿತ ಮಾಹಿತಿ ನೀಡಬಹುದು ಎಂದು ವೈದ್ಯರು ತಿಳಿಸಿದ್ದಾರೆ

ಪೃಥ್ವಿ- ಸಚ್ಚಿದಾನಂದ್-ಬಿಜು ಮೆನನ್​

ಪೃಥ್ವಿ- ಸಚ್ಚಿದಾನಂದ್-ಬಿಜು ಮೆನನ್​

 • Share this:
  ಮಾಲಿವುಡ್​ ಅಯ್ಯಪ್ಪನುಂ ಕೋಶಿಯುಮ್ ಚಿತ್ರದ ನಿರ್ದೇಶಕ ಕೆ. ಆರ್​ ಸಚ್ಚಿದಾನಂದ್​ ಅವರಿಗೆ ಜೂ.16ರಂದು ಹೃದಯಾಘಾತ ಸಂಭವಿಸಿದೆ. ಕೇರಳ ತ್ರಿಶೂರಿನಲ್ಲಿರುವ ಖಾಸಗಿ ಆಸ್ಪತ್ರೆಯೊಂದಕ್ಕೆ ಅವರನ್ನು ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಸಚ್ಚಿದಾನಂದ್​ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

  ಸಚ್ಚಿದಾನಂದ್​​ ಅವರಿಗೆ ಜೂನ್​ 16 ರಂದು ಬೆಳಗ್ಗೆ ಹೃದಯಾಘಾತ ಸಂಭವಿಸಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯ, ವೆಂಟಿಲೇಟರ್​ ಮೂಲಕ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

  ಸಿಟಿ ಸ್ಕ್ಯಾನ್​​ ವರದಿಯ ಪ್ರಕಾರ ಸಚ್ಚಿದಾನಂದ್​ ಅವರಿಗೆ ಹೃದಯಘಾತದಿಂದಾಗಿ ಮೆದುಳಿಗೆ ಹಾನಿಯಾಗಿದೆ. ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರಾದರು 72 ದಿನಗಳ ನಂತರವೇ ಅವರ ಆರೋಗ್ಯದ ಬಗ್ಗೆ ಖಚಿತ ಮಾಹಿತಿ ನೀಡಬಹುದು ಎಂದು ವೈದ್ಯರು ತಿಳಿಸಿದ್ದಾರೆ.  ಇತ್ತೀಚೆಗೆ ನಟ ಪೃಥ್ವಿ ಸುಕುಮಾರನ್​ ಮತ್ತು ಬಿಜು ಮೆನನ್​ ಅವರನ್ನು ಹಾಕಿಕೊಂಡು ‘ಅಯ್ಯಪ್ಪನುಂ ಕೋಶಿಯುಮ್’ ಸಿನಿಮಾ ನಿರ್ದೇಶಿಸಿ ಬಿಡುಗಡೆ ಮಾಡಿದ್ದರು. ಈ ಸಿನಿಮಾ ಮಾಲಿವುಡ್​ನಲ್ಲಿ ಹಿಟ್​ ಆಗಿತ್ತು. ಹಿಂದಿ, ತೆಲುಗು ಭಾಷೆಯಲ್ಲಿ ಈ ಸಿನಿಮಾ ರಿಮೇಕ್​ ಆಗುತ್ತಿದೆ.

   

  Video: ಕಿಚ್ಚನ‌ ಜೊತೆ ಮಾತನಾಡಲು ತುದಿಗಾಲಿನಲ್ಲಿ ನಿಂತಿರುವ ಕುವೈತ್ ದೇಶದ ಅಭಿಮಾನಿ!

  ಲವ್ ಮಾಕ್ಟೇಲ್-2 ಸ್ಕ್ರಿಪ್ಟ್ ಪೂರ್ಣಗೊಳಿಸಿದ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್​; ಶೂಟಿಂಗ್ ಯಾವಾಗ?
  First published: