ಸಲಿಂಗಿಯಾದ ಆಯುಷ್ಮಾನ್: ವೈರಲ್​ ಆಗುತ್ತಿದೆ ಈ ನಟನ ಲಿಪ್​ಲಾಕ್​ ವಿಡಿಯೋ..!

Ayushman: ಇತ್ತೀಚಿನ ವರ್ಷಗಳಲ್ಲಿ ಭಿನ್ನ, ವಿಭಿನ್ನ ಪಾತ್ರಗಳ ಮೂಲಕ ಹೆಚ್ಚು ಗಮನ ಸೆಳೆದ ಆಯುಷ್ಮಾನ್​ ಈ ವರ್ಷದ ಸ್ಟಾರ್​ ನಟ ಎಂದರೂ ತಪ್ಪಾಗದು. ದೊಡ್ಡ ದೊಡ್ಡ ಸ್ಟಾರ್​ ನಟರ ಸಿನಿಮಾಗಳನ್ನೇ ಮೂಲೆಗೊತ್ತಿ ಹಿಟ್​ ಚಿತ್ರ ಕೊಟ್ಟ ನಟ. ಇಂತಹ ನಟ ಈಗ ಸಲಿಂಗಿಯಾಗಿದ್ದಾರೆ. ಅಲ್ಲದೆ ತಮ್ಮ ಸಹ ನಟನೊಂದಿಗೆ ಮಾಡಿರುವ ಲಿಪ್​ಲಾಕ್​ ವಿಡಿಯೋ ಈಗ ವೈರಲ್​ ಆಗುತ್ತಿದೆ.

Anitha E | news18-kannada
Updated:January 22, 2020, 4:35 PM IST
ಸಲಿಂಗಿಯಾದ ಆಯುಷ್ಮಾನ್: ವೈರಲ್​ ಆಗುತ್ತಿದೆ ಈ ನಟನ ಲಿಪ್​ಲಾಕ್​ ವಿಡಿಯೋ..!
ನಟ ಆಯುಷ್ಮಾನ್​
  • Share this:
ಬಾಲಿವುಡ್ ನಟ ಆಯುಷ್ಮಾನ್ ಖುರಾನ ಅಭಿನಯದ ಜೊತೆಗೆ ಗಾಯನದಲ್ಲೂ ಗುರುತಿಸಿಕೊಂಡವರು. ಕಮರ್ಷಿಯಲ್​ ಸಿನಿಮಾಗಳ ಜೊತೆಗೆ ಪ್ರಯೋಗಾತ್ಮಕ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡ ನಟ.

ಇತ್ತೀಚಿನ ವರ್ಷಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಹೆಚ್ಚು ಗಮನ ಸೆಳೆದ ಆಯುಷ್ಮಾನ್​ ಈ ವರ್ಷದ ಸ್ಟಾರ್​ ನಟ ಎಂದರೂ ತಪ್ಪಾಗದು. ದೊಡ್ಡ ದೊಡ್ಡ ಸ್ಟಾರ್​ ನಟರ ಸಿನಿಮಾಗಳನ್ನೇ ಮೂಲೆಗೊತ್ತಿ ಹಿಟ್​ ಚಿತ್ರ ಕೊಟ್ಟ ನಟ.

Ayushmann Khurranas Shubh Mangal Zyada Saavdhan Trailer Smashes Homophobia
'ಶುಭ್​ ಮಂಗಳ್​ ಜ್ಯಾದಾ​ ಸಾವ್ದಾನ್​' ಸಿನಿಮಾದ ಪೋಸ್ಟರ್​


ಇಂತಹ ನಟ ಈಗ ಸಲಿಂಗಿಯಾಗಿದ್ದಾರೆ. ಅಲ್ಲದೆ ಇವರ ಲಿಪ್​ಲಾಕ್​ ವಿಡಿಯೋ ಈಗ ವೈರಲ್​ ಆಗುತ್ತಿದೆ. ಹೌದು, ಆಯಷ್ಮಾನ್​ ಹೊಸ ಸಿನಿಮಾ 'ಶುಭ್​ ಮಂಗಲ್​​ ಜ್ಯಾದ ಸಾವಧಾನ್​​'ನಲ್ಲಿ ಸಲಿಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಸಿನಿಮಾಗಾಗಿ ಅವರು ಸಹ ಕಲಾವಿದನೊಂದಿಗೆ ಲಿಪ್​ಲಾಕ್​ ಸಹ ಮಾಡಿದ್ದಾರೆ.

Ayushmann Khurranas Shubh Mangal Zyada Saavdhan Trailer Smashes Homophobia
ಆಯುಷ್ಮಾನ್​ ಲಿಪ್​ಲಾಕ್​ ಫೋಟೋ


 

'ಅಂಧಾಧುನ್',  'ವಿಕ್ಕಿ ಡೋನರ್​', 'ಗರ್ಲ್​ ಫ್ರೆಂಡ್​' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಕಳೆದ ವರ್ಷದ ಅಂತ್ಯದಲ್ಲಿ ತೆರೆಕಂಡ 'ಬಾಲ' ಚಿತ್ರದಲ್ಲಿ ಬೊಕ್ಕತಲೆಯ ವ್ಯಕ್ತಿಯಾಗಿ ಮಿಂಚುವ ಮೂಲಕ ಬಾಕ್ಸಾಫಿಸ್​ ಕೊಳ್ಳೆ ಹೊಡೆದಿದ್ದಾರೆ.ಇದನ್ನೂ ಓದಿ: ಫ್ಲಾಪ್​ ಆಗುತ್ತೆ ಅಂತ ಸ್ನೇಹಿತರು ಎಚ್ಚರಿಸಿದರೂ ಸಿನಿಮಾ ಒಪ್ಪಿಕೊಂಡ ಪ್ರಭಾಸ್..!

ಇಂತಹ ನಟ ಈಗ ಸಲಿಂಗಕಾಮಿ ಪಾತ್ರದಲ್ಲಿ ನಟಿಸುವ ಮೂಲಕ ಎಲ್ಲರಿಗೂ ಮತ್ತಷ್ಟು ಶಾಕ್​ ನೀಡಿದ್ದಾರೆ. ಹೌದು, ಹಿತೇಶ್​ ಕೆವಾಲ್ಯಾ ನಿರ್ದೇಶನದ 'ಶುಭ್ ಮಂಗಲ್​ ಜ್ಯಾದಾ ಸಾವಧಾನ್​ ಚಿತ್ರದಲ್ಲಿ ಸಲಿಂಗಿಯಾಗಿ ಅಭಿನಯಿಸಿದ್ದು, ಅದರ ಟ್ರೈಲರ್​ ಇತ್ತೀಚೆಗಷ್ಟೆ ಬಿಡುಗಡೆಯಾಗಿದೆ.ಎಂದಿನಂತೆ ನೈಜವಾಗಿ ನಟಿಸಿರುವ ಆಯುಷ್ಮಾನ್​ ಪ್ರೇಕ್ಷಕರಿಗೆ ಒಂದು ಶಾಕ್​ ಕೂಡ ಕೊಟ್ಟಿದ್ದಾರೆ. ಸಿನಿಮಾದ ಟ್ರೈಲರ್​ನಲ್ಲಿ ಸಹ ಕಲಾವಿದನೊಂದಿಗೆ ಲಿಪ್​ಲಾಕ್​ ಮಾಡಿದ್ದಾರೆ. ಈ ಚಿತ್ರ 2017ರಲ್ಲಿ ತೆರೆಕಂಡ 'ಶುಭ್ ಮಂಗಲ್ ಸಾವಧಾನ್' ಚಿತ್ರದ ಸೀಕ್ವಲ್ ಆಗಿದ್ದು ಇದೇ ಫೆಬ್ರವರಿ 21ರಂದು ತೆರೆಗಪ್ಪಳಿಸಲಿದೆ.

Manvita: ಏನಾಯ್ತು ಕೆಂಡ ಸಂಪಿಗೆಯ ಮಾನ್ವಿತಾಗೆ...!
First published:January 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ