• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • 'ಫ್ಯಾಸಿಸಂ ಎಂಬುದು ತಮಾಷೆಯಲ್ಲ': ವಿದ್ಯಾರ್ಥಿಗಳ ಮೇಲಿನ ಹಲ್ಲೆಗೆ ಹಾಲಿವುಡ್ ಬಾಲಿವುಡ್ ನಟ-ನಟಿಯರ ಖಂಡನೆ

'ಫ್ಯಾಸಿಸಂ ಎಂಬುದು ತಮಾಷೆಯಲ್ಲ': ವಿದ್ಯಾರ್ಥಿಗಳ ಮೇಲಿನ ಹಲ್ಲೆಗೆ ಹಾಲಿವುಡ್ ಬಾಲಿವುಡ್ ನಟ-ನಟಿಯರ ಖಂಡನೆ

Vicky-Ayush

Vicky-Ayush

ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಶಾಂತಿಯುತ ಪ್ರತಿಭಟನೆಗೆ ಅವಕಾಶವಿದೆ. ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮತ್ತು ಹಿಂಸಾ ಕೃತ್ಯವನ್ನೂ ಖಂಡಿಸುತ್ತೇನೆ.

  • Share this:

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ವೇಳೆ ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿ ವಿದ್ಯಾರ್ಥಿಗಳ ಮೇಲಿನ ಪೊಲೀಸ ದೌರ್ಜನ್ಯವನ್ನು ಬಾಲಿವುಡ್ ನಟ-ನಟಿಯರು ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಟಿ ಪರಿಣಿತಿ ಚೋಪ್ರಾ "ನಾಗರಿಕನೊಬ್ಬ ತನ್ನ ಅಭಿಪ್ರಾಯ ವ್ಯಕ್ತಪಡಿಸಿದಾಗ ಪ್ರತಿ ಬಾರಿಯೂ ಹೀಗಾಗುವುದಾದರೆ, #ಸಿಎಬಿ ಮರೆತುಬಿಡಿ. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಇನ್ನು ಉಳಿದಿಲ್ಲ ಎಂಬ ಮಸೂದೆಯನ್ನು ಹೊರಡಿಸಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.



ಅಲ್ಲದೆ ಅಭಿಪ್ರಾಯ ವ್ಯಕ್ತಪಡಿಸಿದ ಮುಗ್ಧ ನಾಗರೀಕರ ಮೇಲೆ ಹಲ್ಲೆ ಮಾಡಿರುವುದು ಅಮಾನುಷ ಕೃತ್ಯ ಎಂದು ನಟಿ ಪರಿಣಿತಿ ಚೋಪ್ರಾ ಟ್ವೀಟ್ ಮೂಲಕ ತಿಳಿಸಿದ್ದಾರೆ. ಇನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟರಾದ ಆಯುಷ್ಮಾನ್ ಖುರಾನಾ ಮತ್ತು ವಿಕ್ಕಿ ಕೌಶಲ್ ಕೂಡ ಜಾಮಿಯಾ ಘಟನೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

"ಪ್ರತಿಭಟಿಸಲು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯಕ್ತಪಡಿಸಲು ನಮಗೆಲ್ಲರಿಗೂ ಹಕ್ಕಿದೆ. ಅದಾಗ್ಯೂ, ಪ್ರತಿಭಟನೆಗಳು ಹಿಂಸಾತ್ಮಕವಾಗಿರಬಾರದು. ವಿದ್ಯಾರ್ಥಿಗಳ ಮೇಲೆ ನಡೆದಿರುವ ಹಲ್ಲೆಯನ್ನು ನಾನು ಖಂಡಿಸುತ್ತೇನೆ. ಆದರೆ ಇದು ಗಾಂಧಿಜೀ ಅವರ ಭೂಮಿ. ಅಹಿಂಸೆಯ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿ. ಹಾಗೆಯೇ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿ ಎಂದು ಆಯುಷ್ಮಾನ್ ಖುರಾನಾ ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ.


ವಿದ್ಯಾರ್ಥಿಗಳ ಹಲ್ಲೆಯನ್ನು ಟ್ವೀಟ್ ಮೂಲಕ ಖಂಡಿಸಿರುವ ನಟ ವಿಕ್ಕಿ ಕೌಶಲ್, "ದೇಶದಲ್ಲಿ ನಡೆಯುತ್ತಿರುವುದು ಸರಿಯಾಗಿಲ್ಲ. ಹಾಗೆಯೇ ನಡೆಸುತ್ತಿರುವ ರೀತಿ ಕೂಡ ಸರಿಯಿಲ್ಲ. ತಮ್ಮ ಅಭಿಪ್ರಾಯವನ್ನು ಶಾಂತಿಯುತವಾಗಿ ತಿಳಿಸುವ ಹಕ್ಕನ್ನು ಪ್ರತಿಯೊಬ್ಬರು ಹೊಂದಿದ್ದಾರೆ. ಈ ಹಿಂಸಾಚಾರ ಮತ್ತು ಅಡ್ಡಿಪಡಿಸುವಿಕೆಯು ದುಃಖಕರ. ಪ್ರಜಾಪ್ರಭುತ್ವದ ಮೇಲಿನ ನಮ್ಮ ನಂಬಿಕೆಯನ್ನು ಅಲುಗಾಡಿಸುವಂತಹ ಕೆಲಸವಾಗಬಾರದು'' ಎಂಬಾರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.


ಇನ್ನು ನಟ ರಾಜ್‍ ಕುಮಾರ್ ರಾವ್ ಸಹ ಜಾಮಿಯಾ ವಿದ್ಯಾರ್ಥಿಗಳನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ''ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಶಾಂತಿಯುತ ಪ್ರತಿಭಟನೆಗೆ ಅವಕಾಶವಿದೆ. ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮತ್ತು ಹಿಂಸಾ ಕೃತ್ಯವನ್ನೂ ಖಂಡಿಸುತ್ತೇನೆ. ಹಿಂಸೆ ಯಾವುದಕ್ಕೂ ಪರಿಹಾರವಲ್ಲ'' ಎಂದಿದ್ದಾರೆ.


ಹಾಲಿವುಡ್ ನಟ ಟ್ವೀಟ್..!
ಹಾಲಿವುಡ್ ನಟ ಜಾನ್ ಕ್ಯೂಸೆಕ್ ಕೂಡ ದೆಹಲಿ ಪ್ರತಿಭಟನೆ ಬಗ್ಗೆ ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ. ಫ್ಯಾಸಿಸಂ ಎಂಬುದು ತಮಾಷೆಯ ವಿಷಯವಲ್ಲ. ಆ ಪದವನ್ನು ನಾವು ಮಾರಕ ಎಂಬಾರ್ಥದಲ್ಲಿ ಬಳಸುತ್ತೇವೆ ಎಂದಿದ್ದಾರೆ.


ಅಲ್ಲದೆ ಮತ್ತೊಂದು ಟ್ವೀಟ್​ನಲ್ಲಿ ಮೋದಿಯ ಕ್ರೂರತ್ವದ ವಿರುದ್ಧ ಮುಸ್ಲಿಂ ಸಹೋದರರ-ಸಹೋದರಿಯರು ಹಾಗೂ ವಿದ್ಯಾರ್ಥಿಗಳೊಂದಿಗೆ ಪ್ರತಿಯೊಬ್ಬರು ಒಗ್ಗಟ್ಟಿನಲ್ಲಿ ನಿಲ್ಲುವಂತೆ ಕ್ಯೂಸೆಕ್ ತಿಳಿಸಿದ್ದಾರೆ.

Published by:zahir
First published: