• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Bala Trailer: 48 ಗಂಟೆಯೊಳಗೆ 1.83 ಕೋಟಿ ವೀಕ್ಷಣೆ ಪಡೆದು ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ ಟಾಪ್​ನಲ್ಲಿದೆ ಈ ವಿಡಿಯೋ

Bala Trailer: 48 ಗಂಟೆಯೊಳಗೆ 1.83 ಕೋಟಿ ವೀಕ್ಷಣೆ ಪಡೆದು ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ ಟಾಪ್​ನಲ್ಲಿದೆ ಈ ವಿಡಿಯೋ

'ಬಾಲಾ' ಸಿನಿಮಾದಲ್ಲಿ ಆಯುಷ್ಮಾನ್​ ಖರಾನಾ ಲುಕ್​

'ಬಾಲಾ' ಸಿನಿಮಾದಲ್ಲಿ ಆಯುಷ್ಮಾನ್​ ಖರಾನಾ ಲುಕ್​

Bala Trailer: ಪ್ರಯೋಗಾತ್ಮಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ನಟ ಆಯುಷ್ಮಾನ್​ ಖುರಾನ ಅಭಿನಯದ ಸಿನಿಮಾ 'ಬಾಲಾ'. ಕೂದಲುದುರುವ ಸಮಸ್ಯೆಯಿಂದಾಗಿ ಅರ್ಧ ತಲೆ ಬೋಳಾಗಿರುವ ನಾಯಕನ ಪಾತ್ರದಲ್ಲಿ ಆಯುಷ್ಮಾನ್​ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದೆ.

 • Share this:

  ಈಗಿರುವ ಒತ್ತಡದ ಜೀವನ ಶೈಲಿ, ಮಾಲಿನ್ಯ ಹಾಗೂ ಇತರೆ ಕಾರಣಗಳಿಂದಾಗಿ ತುಂಬಾ ಜನರಿಗೆ ಕೂದಲುದುರುವ ಸಮಸ್ಯೆ ಹೆಚ್ಚಾಗಿದೆ. ಅದರಲ್ಲೂ ಬೋಳು ತಲೆಯ ಹುಡುಗರಿಗೆ ಮದುವೆಯಅಗಲು ಹುಡುಗಿ ಸಿಗುವುದೇ ಕಷ್ಟವಾಗಿದೆ.

  ಹೌದು, ಬೋಳು ತಲೆಯವರು ಸಾರ್ವಜನಿಕ ಜೀವನದಲ್ಲಿ ಹಾಗೂ ವಿವಾಹದ ವಿಷಯದಲ್ಲಿ ಅನುಭವಿಸುವ ಅವಮಾನ ಹಾಗೂ ನೋವನ್ನು ತೋರಿಸುವ ಸಿನಿಮಾ 'ಒಂದು ಮೊಟ್ಟೆಯ ಕಥೆ' ಈಗಾಗಲೇ ಸ್ಯಾಂಡಲ್​ವುಡ್​ನಲ್ಲಿ ತೆರೆಕಂಡು ಹಿಟ್​ ಆಗಿತ್ತು. ಈಗ ಇದರ ಬೆನ್ನಲ್ಲೇ ಇಂತಹದ್ದೇ ಒಂದು ಸಿನಿಮಾ ಬಾಲಿವುಡ್​ನಲ್ಲೂ ತೆರೆ ಕಾಣಲು ಸಿದ್ಧವಾಗುತ್ತಿದೆ.

  ayushmann-khurrana
  ಆಯುಷ್ಮಾನ್​ ಖುರಾನಾ


  ಪ್ರಯೋಗಾತ್ಮಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ನಟ ಆಯುಷ್ಮಾನ್​ ಖುರಾನಾ ಅಭಿನಯದ ಸಿನಿಮಾ 'ಬಾಲಾ'. ಕೂದಲುದುರುವ ಸಮಸ್ಯೆಯಿಂದಾಗಿ ಅರ್ಧ ತಲೆ ಬೋಳಾಗಿರುವ ನಾಯಕನ ಪಾತ್ರದಲ್ಲಿ ಆಯುಷ್ಮಾನ್​ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದೆ.  2 ನಿಮಿಷ 47 ಸೆಕೆಂಡ್​ ಇರುವ ಈ ಟ್ರೈಲರ್​ಗೆ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ. ಮೊನ್ನೆ ಬಿಡುಗಡೆಯಾಗಿರುವ ಟ್ರೈಲರ್​ ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ ಮೊದಲನೇ ಸ್ಥಾನದಲ್ಲಿದೆ. ಬೋಳು ತಲೆಯ ವ್ಯಕ್ತಿ ಕೂದಲು ಬರಸಿಕೊಳ್ಳಲು ಪಡುವ ಪಾಡು, ಮಾಡುವ ಪ್ರಯತ್ನಗಳನ್ನು ತುಂಬಾ ಸುಂದರವಅಗಿ ಹಾಸ್ಯಮಯವಾಗಿ ಕಟ್ಟಿಕೊಡಲಾಗಿದೆ. ಟ್ರೈಲರ್​ ಬಿಡುಗಡೆಯಾಗಿ 48 ಗಂಟೆ ಕಳೆಯುವಷ್ಟರಲ್ಲೇ  ಇದಕ್ಕೆ 1 ಕೋಟಿ 83 ಲಕ್ಷ ವೀಕ್ಷಣೆ ಸಿಕ್ಕಿದೆ.

  ಇದನ್ನೂ ಓದಿ: ಅರೆಬೆತ್ತಲೆಯಾಗಿ ಪೋಸ್​ ಕೊಟ್ಟ ನಟ: ಪ್ರಪೋಸ್​ ಮಾಡಲು ಹಿಂದೆ ಬಿದ್ದ ಹುಡುಗಿ..!

  ಆಯುಷ್ಮಾನ್​ ಜತೆಗೆ ಈ ಸಿನಿಮಾದಲ್ಲಿ ಭೂಮಿ ಫಡ್ನೇಕರ್ ಹಾಗೂ ಯಾಮಿ ಗೌತಮ್​ ಅಭಿನಯಿಸಿದ್ದಾರೆ. ಜಿಯೊ ಸ್ಟುಡಿಯೋಸ್​ ಹಾಗೂ ದಿನೇಶ್​ ವಿಜನ್​ ನಿರ್ಮಾಣದ ಈ ಚಿತ್ರವನ್ನು ಅಮರ್ ಕೌಶಿಕ್​ ನಿರ್ದೇಶಿಸುತ್ತಿದ್ದಾರೆ.

  'ಸ್ತ್ರೀ', 'ಲುಕಾ ಚುಪ್ಪಿ' ಹಾಗೂ 'ಹಿಂದಿ ಮೀಡಿಯಂ'ನಂತಹ ಸಿನಿಮಾಗಳನ್ನು ಮಾಡಿದ್ದ ಮೇಕರ್ಸ್​ ಈ ಚಿತ್ರವನ್ನು ಪ್ರೇಕ್ಷಕರೆದುರು ತರುತ್ತಿದ್ದಾರೆ. ಮುಂದಿನ ತಿಂಗಳು ನವೆಂಬರ್​ 7ಕ್ಕೆ ಈ ಸಿನಿಮಾ ಬಿಡುಗಡೆಯಾಗಲಿದ್ದು, ಟ್ರೈಲರ್​ ಸಿನಿಮಾ ಕುರಿತಾಗಿ ಪ್ರೇಕ್ಷಕರಲ್ಲಿ ಇದ್ದ ಕುತೂಹಲವನ್ನು ಇಮ್ಮಡಿಗೊಳಿಸಿದೆ.

  Rare Photos Of Rekha: ತೆರೆ ಮೇಲೆ ಸ್ಟಾರ್ ನಟಿ, ನಿಜ ಜೀವನದಲ್ಲಿ ಏಕಾಂಗಿಯಾದ ಚಿರಯೌವ್ವನೆ ರೇಖಾರ ಅಪರೂಪದ ಚಿತ್ರಗಳು..!


   

  First published: