Ayushmann Khurrana: ಫಿಟ್​ನೆಸ್​ಗೆ ಪ್ರತಿದಿನ 'ಅದು' ಬೆಸ್ಟ್​ ಅಂತೆ! ಇದೇನ್​ ಹಿಂಗ್​ ಹೇಳ್ಬಿಟ್ರು ಈ ನಟನ ಹೆಂಡ್ತಿ

ಬಾಲಿವುಡ್ ನಟ (Bollywood Actor) ಆಯುಷ್ಮಾನ್ ಖುರಾನಾ (Ayushmann Khurrana) ಅವರ ಪತ್ನಿ ತಾಹಿರಾ ಕಶ್ಯಪ್ (Tahira Kashyap) ತನ್ನ ಲೈಂಗಿಕ ಜೀವನದ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

ಆಯುಷ್ಮಾನ್ ಖುರಾನಾ, ತಾಹಿರಾ ಕಶ್ಯಪ್

ಆಯುಷ್ಮಾನ್ ಖುರಾನಾ, ತಾಹಿರಾ ಕಶ್ಯಪ್

  • Share this:
ಬೋಲ್ಡ್ (Bold) ಹೇಳಿಕೆಗಳಿಂದಲೇ ಈ ಹಿಂದೆ ಸುದ್ದಿಯಾದ ಬಾಲಿವುಡ್ ನಟ (Bollywood Actor) ಆಯುಷ್ಮಾನ್ ಖುರಾನಾ (Ayushmann Khurrana) ಅವರ ಪತ್ನಿ ತಾಹಿರಾ ಕಶ್ಯಪ್ (Tahira Kashyap) ತನ್ನ ಲೈಂಗಿಕ ಜೀವನದ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ನಟಿ ಶಿಲ್ಪಾ ಶೆಟ್ಟಿ (Shilpa Shetty) ನಡೆಸಿಕೊಡುತ್ತಿರುವ ಶೆಫ್ ಆಫ್‌ ಯು ಕಾರ್ಯಕ್ರಮದಲ್ಲಿ ಸೆಕ್ಸ್ ಬೆಸ್ಟ್ ವರ್ಕೌಟ್ (sec Best Workout) ಎಂದಿದ್ದಾರೆ. ಕೇವಲ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಆಧರಿಸಿದ ಶೇಪ್ ಆಫ್ ಯು ಎಂಬ ಕಾರ್ಯಕ್ರಮವನ್ನು ಶಿಲ್ಪಾ ಶೆಟ್ಟಿ ಹೋಸ್ಟ್ ಮಾಡುತ್ತಿದ್ದಾರೆ. ಕಾರ್ಯಕ್ರಮಕ್ಕೆ ಅವರ ಇತ್ತೀಚಿನ ಅತಿಥಿಯಾಗಿ ಆಯುಷ್ಮಾನ್ ಖುರಾನಾ ಅವರ ಪತ್ನಿ ತಾಹಿರಾ ಕಶ್ಯಪ್ ಆಗಮಿಸಿದ್ದರು.

ತಾಹಿರಾ ತನ್ನ ಲೈಂಗಿಕ ಜೀವನದ ಬಗ್ಗೆ ಮಾತನಾಡುತ್ತಾ, ಇದು ಅತ್ಯುತ್ತಮ ವ್ಯಾಯಾಮ ಎಂದು ಹೇಳಿದ್ದಾರೆ. ಲೈಂಗಿಕ ಜೀವನದ ಬಗ್ಗೆ ಮಾತಾಡುತ್ತಾ, ಇದು ಕ್ಯಾಲೋರಿಗಳನ್ನು ಕರಗಿಸಲು ಸಹಕಾರಿಯಾಗಿದೆ ಎಂದು ಮುಕ್ತವಾಗಿ ಹೇಳಿದ್ದಾರೆ. ಇದಕ್ಕೆ ಶಿಲ್ಪಾ ಶೆಟ್ಟಿ ಆಯುಷ್ಮಾನ್, ನೀವು ಕೇಳಿಸಿಕೊಳ್ಳುತ್ತಿದ್ದೀರಾ..? ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಲೈಂಗಿಕತೆ ಬಗ್ಗೆ ಓಪನ್​ ಆಗಿ ಮಾತನಾಡಿದ ತಾಹಿರಾ!

ಆಯುಷ್ಮಾನ್ ಖುರಾನಾ ಮತ್ತು ತಾಹಿರಾ ಕಶ್ಯಪ್ ಬಾಲಿವುಡ್‌ನ ಮುದ್ದಾದ ಮತ್ತು ಪ್ರೀತಿಯ ಜೋಡಿಗಳಲ್ಲಿ ಒಬ್ಬರು. ಮಿರ್ಚಿಯ ಶೇಪ್ ಆಫ್ ಯುನ ಇತ್ತೀಚಿನ ಸಂಚಿಕೆಯಲ್ಲಿ, ತಾಹಿರಾ ತನ್ನ ಖಾಸಗಿ ಜೀವನದ ಬಗ್ಗೆ ಕೆಲವು ರಸವತ್ತಾದ ವಿವರಗಳನ್ನು ಹಂಚಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ಅವರು ನಿಮ್ಮ ಪುಸ್ತಕದಲ್ಲಿ ಲೈಂಗಿಕತೆಯ ಬಗ್ಗೆ ಎಷ್ಟು ಮುಕ್ತವಾಗಿ ಮತ್ತು ಆರಾಮದಾಯಕವಾಗಿ ಬರೆಯುತ್ತೀರಾ ಎಂಬುದರ ಕುರಿತು ಲೇಖಕಿ ಮತ್ತು ನಿರ್ದೇಶಕಿ ತಾಹಿರಾಗೆ ಕೇಳಿದ್ದಾರೆ.

ಇದನ್ನೂ ಓದಿ: ತೆರೆಗೆ ಬರಲಿದೆ ಕ್ಯಾ.ಗೋಪಿನಾಥ್ ಜೀವನಗಾಥೆ! ಕನ್ನಡಿಗನಾಗಿ ಮಿಂಚಲಿದ್ದಾರೆ ಅಕ್ಷಯ್ ಕುಮಾರ್

ಸೆಕ್ಸ್​ ಬೆಸ್ಟ್ ವರ್ಕೌಟ್ ಎಂದ ನಟನ ಪತ್ನಿ!

ಇದಕ್ಕೆ ಪ್ರತಿಕ್ರಿಯಿಸಿದ ತಾಹಿರಾ, "ಸೆಕ್ಸ್,ಅದ್ಭುತ ಕ್ರಿಯೆ, ಮತ್ತು ಇದು ಒಳ್ಳೆಯದು, ಆದ್ದರಿಂದ ಏಕೆ ಬರೆಯಬಾರದು..!. ಇದು ಅಸಹ್ಯಕರ ಅಲ್ಲ ಎಂದ ತಾಹಿರಾ, ಸೆಕ್ಸ್ ಕ್ಯಾಲೊರಿಗಳನ್ನು ಕರಗಿಸುವ ಅತ್ಯುತ್ತಮ ವ್ಯಾಯಾಮಗಳಲ್ಲಿ ಒಂದಾಗಿದೆ ಎಂದು ವಿವರಿಸಿದ್ದಾರೆ. ಮತ್ತು ತಮ್ಮ ಪತಿ ಆಯುಷ್ಮಾನ್ ಖುರಾನಾ ಅವರ ಜೀವನಶೈಲಿಯ ಬದಲಾವಣೆಗಳು, ವರ್ಕೌಟ್‌ಗಳ ಬಗ್ಗೆಯೂ ತಿಳಿಸಿದರು.

'ನನ್ನ ಪತಿ ಎದೆಹಾಲು ಕುಡಿದಿದ್ದರು'

ಲೇಖಕಿ ತಾಹಿರಾ ಕಶ್ಯಪ್ ಖುರಾನಾ ಅವರು ತಮ್ಮ ಪುಸ್ತಕ "ದಿ 7 ಸಿನ್ಸ್ ಆಫ್ ಬೀಯಿಂಗ್ ಎ ಮದರ್"ನಲ್ಲಿ ಸಹ ತನ್ನ ಜೀವನದ ಕಥೆಗಳನ್ನು ಬಿಚ್ಚಿಟ್ಟಿದ್ದರು. ತಾಹಿರಾ ಸ್ತನ್ಯಪಾನ ಮಾಡಲು ಸಾಧ್ಯವಾಗದಿದ್ದಕ್ಕಾಗಿ ಮತ್ತು ಸಿ-ಸೆಕ್ಷನ್ ಹೆರಿಗೆ ಮಾಡಿಸಿಕೊಂಡಿದ್ದಕ್ಕೆ ನಾನು ಹೇಗೆ ಅವಮಾನಕ್ಕೊಳಗಾಗಿದ್ದೇನೆ ಎಂಬುದರ ಕುರಿತು ಪುಸ್ತಕದಲ್ಲಿ ಬರೆದಿದ್ದರು.

ಪ್ರೋಟೀನ್​ಗಾಗಿ ಎದೆಹಾಲು ಕುಡಿದಿದ್ದರಂತೆ ನಟ!

ತಾಹಿರಾ ಪತಿ ಆಯುಷ್ಮಾನ್ ಅವರೊಂದಿಗೆ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಹೋಟೆಲ್‌ನಲ್ಲಿ ತಂಗಿದ್ದಾಗ, ಪತಿ ಪ್ರೋಟೀನ್‌ಗಾಗಿ ತನ್ನ ಎದೆ ಹಾಲನ್ನು ಕುಡಿದಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಮಗನಿಗಾಗಿ ಎದೆಹಾಲನ್ನು ಬಾಟಲಿಯಲ್ಲಿ ಪಂಪ್ ಮಾಡಿಟ್ಟಿದ್ದೆ, ನಾನು ವಾಶ್‌ರೂಮ್‌ಗೆ ಹೋಗಿ ಬರುವಷ್ಟರಲ್ಲಿ ಆಯುಷ್ಮಾನ್ ಹಾಲನ್ನು ಕುಡಿದಿದ್ದರು ಎಂದು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದರು.

ಇದನ್ನೂ ಓದಿ: ಅಜಯ್‌ ದೇವಗನ್ ಬೆಂಬಲಕ್ಕೆ ನಿಂತ ಕಂಗನಾ! "ಹಿಂದಿ ನಮ್ಮ ರಾಷ್ಟ್ರಭಾಷೆ" ಎಂದ ನಟಿ

ತಾಹಿರಾ ಅವರು ಉತ್ತಮ ಲೇಖಕಿ ಮತ್ತು ನಿರ್ದೇಶಕಿ. ಇವರು ಜಿಂದಗಿ ಇನ್ ಶಾರ್ಟ್ (2020), ಶರ್ಮಾಜೀ ಕಿ ಬೇಟಿ ಮತ್ತು ಟಾಫಿ (2017) ಸಿನಿಮಾಗಳಿಗೆ ಹೆಸರುವಾಸಿಯಾಗಿದ್ದಾರೆ. ಅಲ್ಲದೆ 2018ರಲ್ಲಿ ತಾಹಿರಾ ಸ್ತನ ಕ್ಯಾನ್ಸರ್‌ಗೂ ತುತ್ತಾಗಿದ್ದರು. ಯಾವುದಕ್ಕೂ ಹೆದರದ ತಾಹಿರಾ ಕಾಯಿಲೆ ವಿರುದ್ಧ ಹೋರಾಡಿ ಜಯಿಸಿದರು. ಇದಾದ ನಂತರ ಸಿನಿಮಾಗಳನ್ನು ಮಾಡುತ್ತಾ, ಲೇಖಕಿಯಾಗಿ ಗುರುತಿಸಿಕೊಳ್ಳುತ್ತಾ ಬಂದಿದ್ದಾರೆ.
Published by:Vasudeva M
First published: