ಅಮೆಜಾನ್​​ನಲ್ಲಿ ಬಿಡುಗಡೆಯಾಗುತ್ತಿದೆ ಬಿಗ್​ ಬಿ-ಆಯುಷ್ಮಾನ್ ನಟನೆಯ ‘ಗುಲಾಬೋ ಸಿತಾಬೋ‘!

Gulabo Sitabo: ‘ಗುಲಾಬೋ ಸಿತಾಬೋ‘ ಸಿನಿಮಾದಲ್ಲಿ ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್​ ಮತ್ತು ಆಯುಷ್ಮಾನ್​​ ಖುರಾನಾ ನಟಿಸಿದ್ದಾರೆ. ಈ ಮೊದಲು ಶೂಜಿತ್​ ಸರ್ಕಾರ್​ ಯೋಜನೆ ಹಾಕಿಕೊಂಡತೆ ಏಪ್ರಿಲ್​ 17ರಂದು ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಕೊರೋನಾ ಲಾಕ್​ಡೌನ್​ನಿಂದಾಗಿ ಚಿತ್ರ ಬಿಡುಗಡೆಯನ್ನು ಮುಂದೂಡಲಾಯಿತು.

Ayushmann Khurrana confirms Gulabo Sitabo to release on OTT

Ayushmann Khurrana confirms Gulabo Sitabo to release on OTT

 • News18
 • Last Updated :
 • Share this:
  ಲಾಕ್​ಡೌನ್​ನಿಂದಾಗಿ ಚಿತ್ರಮಂದಿರಗಳು ಬಂದ್​ ಆಗಿದೆ. ಸದ್ಯದ ಮಟ್ಟಿಗೆ ಚಿತ್ರಮಂದಿರಗಳ ಬಾಗಿಲು ತೆರೆಯುವುದು ಅನುಮಾನವಾಗಿದೆ. ಹಾಗಾಗಿ ಅನೇಕ ಸಿನಿಮಾ ನಿರ್ದೇಶಕರು ತಮ್ಮ ಸಿನಿಮಾ ಬಿಡುಗಡೆಯನ್ನು ಒಟಿಟಿ ಫ್ಲಾರ್ಟ್​ಫಾರ್ಮ್​ನಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಅಮೆಜಾನ್​ ಪ್ರೈಮ್​, ನೆಟ್​ಫ್ಲಿಕ್ಸ್​ ಮೂಲಕ ಚಿತ್ರ ಬಿಡುಗಡೆ ಮಾಡುವ ಚಿಂತನೆಯಲ್ಲಿದ್ದಾರೆ.

  ಇದೀಗ ಬಾಲಿವುಡ್​ನಲ್ಲಿ ಶೂಜಿತ್​ ಸರ್ಕಾರ್​ ನಿರ್ದೇಶನ ‘ಗುಲಾಬೋ ಸಿತಾಬೋ‘ ಸಿನಿಮಾವನ್ನು ಅಮೆಜಾನ್​ ಪ್ರೈಮ್​ ಮೂಲಕ ಬಿಡುಗಡೆಗೊಳಿಸಲಿದ್ದಾರೆ. ಜೂ 12ರಂದು ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದ್ದಾರೆ. 200ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ‘ಗುಲಾಬೋ ಸಿತಾಬೋ‘ ಸಿನಿಮಾವನ್ನು ಒಟಿಟಿ ಮೂಲಕ ವೀಕ್ಷಿಸಬಹುದಾಗಿದೆ.

  ‘ಗುಲಾಬೋ ಸಿತಾಬೋ‘ ಸಿನಿಮಾದಲ್ಲಿ ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್​ ಮತ್ತು ಆಯುಷ್ಮಾನ್​​ ಖುರಾನಾ ನಟಿಸಿದ್ದಾರೆ. ಈ ಮೊದಲು ಶೂಜಿತ್​ ಸರ್ಕಾರ್​ ಯೋಜನೆ ಹಾಕಿಕೊಂಡತೆ ಏಪ್ರಿಲ್​ 17ರಂದು ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಕೊರೋನಾ ಲಾಕ್​ಡೌನ್​ನಿಂದಾಗಿ ಚಿತ್ರ ಬಿಡುಗಡೆಯನ್ನು ಮುಂದೂಡಲಾಯಿತು.

  ಸಾಕಷ್ಟು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. ಆದರೆ ಸದ್ಯದ ಮಟ್ಟಿಗೆ ಸಿನಿಮಾಗಳನ್ನು ಚಿತ್ರಮಂದಿರಗಳು ಬಿಡುಗಡೆ ಯಾಗುವುದು ಅನುಮಾನ. ಕೊರೋನಾ ಹಾವಳಿ ಸಂಪೂರ್ಣ ಕಡಿಮೆಯಾದ ನಂತರವಷ್ಟೇ ಚಿತ್ರಗಳು ಬಿಡುಗಡೆ ಮಾಡುವ ಮುನ್ಸೂಚನೆ ಕಾಣುತ್ತಿದೆ. ಇನ್ನು ಕೆಲವು ನಿರ್ದೇಶಕರು ಒಟಿಟಿ ಮೂಲಕ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

  ಕನ್ನಡ ಸಿನಿರಂಗಕ್ಕೂ ವಿಶೇಷ ಪ್ಯಾಕೇಜ್​ ಘೋಷಿಸಿ ಎಂದು ಸಿಎಂಗೆ ತಾರಾ ಮನವಿ
  First published: