ಆಯುಧ ಪೂಜೆಗೆ ‘ಒಡೆಯ‘ನ ದರ್ಬಾರ್​: ಮುದ್ದಾದ ಮಗುವನ್ನು ಎತ್ತಿ ಮುದ್ದಿಸುತ್ತಿರುವ ದರ್ಶನ್​

ಬಹುತೇಕ ಸಿನಿಮಾಗಳಲ್ಲಿ ಮಾಸ್​ ಆ್ಯಂಡ್​ ಕ್ಲಾಸ್​​ ಲುಕ್​ನಲ್ಲಿ ಕಾಣಿಸಿಕೊಂಡಿದ್ದ ಡಿಬಾಸ್​, ಇದೀಗ ಫ್ಯಾಮಿಲಿ ಮ್ಯಾನ್​​ ಆಗಿ ಒಡೆಯ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

news18-kannada
Updated:October 7, 2019, 9:23 AM IST
ಆಯುಧ ಪೂಜೆಗೆ ‘ಒಡೆಯ‘ನ ದರ್ಬಾರ್​: ಮುದ್ದಾದ ಮಗುವನ್ನು ಎತ್ತಿ ಮುದ್ದಿಸುತ್ತಿರುವ ದರ್ಶನ್​
ದಸರಾ ಹಬ್ಬಕ್ಕೆ ಒಡೆಯ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದ ಚಿತ್ರತಂಡ
  • Share this:
ಕುರುಕ್ಷೇತ್ರದ ನಂತರ ಸ್ಯಾಂಡಲ್​ವುಡ್​ ಡಿಬಾಸ್​ ದರ್ಶನ್​ ‘ಒಡೆಯ‘ನಾಗಿ ತೆರೆಯಲು ಬರಲು ಸಿದ್ಧರಾಗಿದ್ದಾರೆ. ಎಂ.ಡಿ ಶ್ರೀಧರ್​ ನಿರ್ದೇಶನದ ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಕಂಪ್ಲೀಟ್​ ಆಗಿದ್ದು, ಬಿಡುಗಡೆ ಅಭಿಮಾನಿಗಳೆದುರು ಅಬ್ಬರಿಸಲು ಮಾತ್ರ ಬಾಕಿಯಿದೆ. ಇದೀಗ ದಸರಾ ವಿಶೇಷವಾಗಿ ಒಡೆಯ ಚಿತ್ರತಂಡ ಟೀಸರ್​ ರಿಲೀಸ್​ ಮಾಡಲು ಸಿದ್ಧತೆ ನಡೆಸಿದೆ. ಆಯುಧ ಪೂಜೆ ವಿಶೇಷವಾಗಿ ಹೊಸದೊಂದು ಪೋಸ್ಟರ್​ ಬಿಡುಗಡೆ ಮಾಡಿದೆ.

ದಸರಾ ವಿಶೇಷವಾಗಿ ಒಡೆಯ ಚಿತ್ರತಂಡ ​ ಪೋಸ್ಟರ್​ವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ದರ್ಶನ್​ ಬಿಳಿ ಬಣ್ಣದ ಅಂಗಿ ತೊಟ್ಟು ಮುದ್ದಾದ ಮಗುವೊಂದನ್ನು ಎತ್ತಿ ಮುದ್ದಿಸುತ್ತಿದ್ದಾರೆ. ಸದ್ಯ ಈ ಪೋಸ್ಟರ್​ ಆಭಿಮಾನಿಗಳಿಂದ ತುಂಬಾ ಮೆಚ್ಚುಗೆ ಪಡೆಯುತ್ತಿದೆ.

 


ಇದನ್ನೂ ಓದಿ: ಸದ್ಯದಲ್ಲೇ ಭಾರತದ ರಸ್ತೆಯಲ್ಲಿ ಧೂಳೆಬ್ಬಿಸಲಿದೆ ಲಂಬೋರ್ಗಿನಿ ‘ಹುರಾಕನ್ ಇವೋ ಸ್ಪೈಡರ್​​‘: ಇದರ ಸ್ಪೀಡ್ ಎಷ್ಟು ಗೊತ್ತಾ?

ಬಹುತೇಕ ಸಿನಿಮಾಗಳಲ್ಲಿ ಮಾಸ್​ ಆ್ಯಂಡ್​ ಕ್ಲಾಸ್​​ ಲುಕ್​ನಲ್ಲಿ ಕಾಣಿಸಿಕೊಂಡಿದ್ದ ಡಿಬಾಸ್​, ಇದೀಗ ಫ್ಯಾಮಿಲಿ ಮ್ಯಾನ್​​ ಆಗಿ ಒಡೆಯ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಅಣ್ಣ- ತಮ್ಮಂದಿರ ಸಿನಿಮವಾಗಿದ್ದು ಚಿತ್ರದಲ್ಲಿ ದರ್ಶನ್​ ಅವರು ಗಜೇಂದ್ರನ ಪಾತ್ರದಲ್ಲಿ ಮಿಂಚಲಿದ್ದಾರೆ.

ಒಡೆಯ ಸಿನಿಮಾ ಕನ್ನಡ ರಾಜೋತ್ಸವದ ವಿಶೇಷವಾಗಿ ತೆರೆಗೆ ಬರುವ ನಿರೀಕ್ಷೆಯಲ್ಲಿದೆ. ಚಿತ್ರದಲ್ಲಿ ನಟ ದರ್ಶನ್​ಗೆ ನಾಯಕಿಯಾಗಿ ರಾಘವಿ ತಿಮ್ಮಯ್ಯ, ಚಿಕ್ಕಣ್ಣ, ಯಶಸ್​​ ಸೂರ್ಯ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

First published:October 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading