ದೀಪಾವಳಿಗೆ ಸ್ಟಾರ್ ನಟ-ನಟಿಯರು ಶುಭಾಶಯ ಕೋರುತ್ತಿದ್ದಾರೆ. ಬೆಳಕಿನ ಹಬ್ಬವನ್ನು ಸಂಭ್ರಮದಿಂದ ಆಚರಿಸಿ, ಪಟಾಕಿ ಕಡಿಮೆ ಹೊಡೆಯಿರಿ ಎಂದು ಸೆಲೆಬ್ರಿಟಿಗಳು ಕೋರಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಯಶ್ ಕುಟುಂಬ ಕೂಡ ದೀಪಾವಳಿಗೆ ಶುಭಾಶಯ ಕೋರಿದೆ. ಈ ವಿಡಿಯೋದಲ್ಲಿ ಯಶ್ ಪುತ್ರಿ ಆಯ್ರಾ ಹೈಲೈಟ್ ಆಗಿದ್ದಾರೆ.
ಯಶ್ ದೀಪಾವಳಿ ಶುಭಾಶಯ ಕೋರುವ ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋದಲ್ಲಿ ಮೊದಲು ಯಶ್ ‘ಹ್ಯಾಪ್ಪಿ ದೀಪಾವಳಿ ಮಗಳೆ’ ಎಂದಿದ್ದಾರೆ. ನಂತರ ರಾಧಿಕಾ ಪಂಡಿತ್, ‘ಹ್ಯಾಪ್ಪಿ ದೀಪಾವಳಿ’ ಎಂದಿದ್ದಾರೆ. ಈ ವೇಳೆ ಆಯ್ರಾ ತನ್ನದೇ ಮುಗ್ಧ ಭಾಷೆಯಲ್ಲಿ ದೀಪಾವಳಿ ಶುಭಾಶಯ ಕೋರಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗೆ ಆಯ್ರಾಳ ಮುದ್ದಾದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈಗ ಈ ಸಾಲಿಗೆ ಹೊಸದೊಂದು ವಿಡಿಯೋ ಸೇರಿಕೊಂಡಿದೆ. ಯಶ್-ರಾಧಿಕಾ ದಂಪತಿ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ