Ayra Yash Birthday: ಯಶ್-ರಾಧಿಕಾ ಪುತ್ರಿ ಆಯ್ರಾಗೆ ಮೊದಲ ಜನ್ಮದಿನದ ಸಂಭ್ರಮ

ರಾಧಿಕಾ-ಯಶ್​ ದಂಪತಿಗೆ ಆಯ್ರಾ ಜನಿಸಿದಾಗಿನಿಂದಲೂ ಅವಳು ಸುದ್ದಿ ಮಾಡುತ್ತಲೇ ಇದ್ದಾಳೆ. ಆಯ್ರಾ ಫೋಟೋ ಹಂಚಿಕೊಂಡಾಗ ಎಷ್ಟು ಕ್ಯೂಟ್​ ಆಗಿದ್ದಾಳೆ ಯಶ್​ ಮಗಳು ಎಂದು ಅನೇಕರು ಹೇಳಿಕೊಂಡಿದ್ದರು. ಇನ್ನು ಹಲವು ಬಾರಿ ಆಯ್ರಾ ವಿಡಿಯೋ ನೋಡಿದ್ದ ಅನೇಕರು ಸಾಕಷ್ಟು ಕ್ಯೂಟ್​ ಆಗುತ್ತಿದ್ದಾಳೆ ಎಂದಿದ್ದಾರೆ.

news18-kannada
Updated:December 2, 2019, 11:23 AM IST
Ayra Yash Birthday: ಯಶ್-ರಾಧಿಕಾ ಪುತ್ರಿ ಆಯ್ರಾಗೆ ಮೊದಲ ಜನ್ಮದಿನದ ಸಂಭ್ರಮ
ಮಗಳು ಆಯ್ರಾ ಜತೆ ಯಶ್​ ಹಾಗೂ ರಾಧಿಕಾ
  • Share this:
ಬೆಂಗಳೂರು(ಡಿ.02): ಸ್ಯಾಂಡಲ್​ವುಡ್​ನ ಯಶ್ ಮತ್ತು ರಾಧಿಕಾರ ಪುತ್ರಿ ಆಯ್ರಾಗೆ 1ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಇಂದು ಯಶ್​​ ಮತ್ತು ರಾಧಿಕಾ ದಂಪತಿ ಭಾರೀ ಸಂಭ್ರಮದಿಂದ ಪುತ್ರಿಯ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಮುಂದಾಗಿದ್ದಾರೆ. ಆಯ್ರಾಳ ಹುಟ್ಟುಹಬ್ಬದ ಸಮಾರಂಭದಲ್ಲಿ ಚಿತ್ರರಂಗದ ಗಣ್ಯರು ಮತ್ತು ಯಶ್​​ ಕುಟುಂಬದ ಆಪ್ತರು ಭಾಗಿಯಾಗಲಿದ್ದಾರೆ.

ಆಯ್ರಾ ತುಂಬಾ ಖುಶಿಯಾಗಿ ಕೇಕ್ ಕತ್ತರಿಸಿದ ತನ್ನೆಲ್ಲ ಸ್ನೇಹಿತರ ಜತೆ ನಲಿದಾಡುತ್ತಾ ಸಂಭ್ರಮಿಸುತ್ತಾಳೆ. ತನ್ನ ತೊದಲು ನುಡಿ ಮೂಲಕ  ಎಂದಿನಂತೆಯೇ ಎಲ್ಲರನ್ನು ರಂಜಿಸಲು ಪ್ರಯತ್ನಿಸುತ್ತಾಳೆ. ಆಯ್ರಾ ತನ್ನ ನಗುವಿನಿಂದಲೇ ಎಲ್ಲರ ಮನಸ್ಸನ್ನು ಕದ್ದಿಯುತ್ತಾಳೆ ಎಂಬುದಂತೂ ಸತ್ಯ. ಇಂದಿಗೆ ಆಯ್ರಾ ಹುಟ್ಟಿ ಒಂದು ವರ್ಷ. ಮಗಳ ಹುಟ್ಟುಹಬ್ಬ ಹೇಗಿರಲಿದೆ ಎಂಬುದು ಯಶ್ ದಂಪತಿ ಇನ್ನೂ ರಿವೀಲ್ ಮಾಡಿಲ್ಲವಾದರೂ, ಗ್ರ್ಯಾಂಡ್ ಆಗಿರಲಿದೆ ಎನ್ನಬಹುದು. ಯಶ್​​-ರಾಧಿಕಾಗೆ ಎಲ್ಲಾ ಹಬ್ಬಕ್ಕಿಂತಲೂ ಇಂದು ಮಹತ್ವದ ದಿನವೂ ಎಂದು ಹೇಳಬಹುದು.

1ನೇ ವರ್ಷಕ್ಕೆ ಕಾಲಿಟ್ಟ ಯಶ್-ರಾಧಿಕಾ ಪುತ್ರಿ ಆಯ್ರಾ
1ನೇ ವರ್ಷಕ್ಕೆ ಕಾಲಿಟ್ಟ ಯಶ್-ರಾಧಿಕಾ ಪುತ್ರಿ ಆಯ್ರಾ

ರಾಧಿಕಾ-ಯಶ್​ ದಂಪತಿಗೆ ಆಯ್ರಾ ಜನಿಸಿದಾಗಿನಿಂದಲೂ ಅವಳು ಸುದ್ದಿ ಮಾಡುತ್ತಲೇ ಇದ್ದಾಳೆ. ಆಯ್ರಾ ಫೋಟೋ ಹಂಚಿಕೊಂಡಾಗ ಎಷ್ಟು ಕ್ಯೂಟ್​ ಆಗಿದ್ದಾಳೆ ಯಶ್​ ಮಗಳು ಎಂದು ಅನೇಕರು ಹೇಳಿಕೊಂಡಿದ್ದರು. ಇನ್ನು ಹಲವು ಬಾರಿ ಆಯ್ರಾ ವಿಡಿಯೋ ನೋಡಿದ್ದ ಅನೇಕರು ಸಾಕಷ್ಟು ಕ್ಯೂಟ್​ ಆಗುತ್ತಿದ್ದಾಳೆ ಎಂದಿದ್ದಾರೆ.
First published: December 2, 2019, 7:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading