ಅಯೋಗ್ಯ ವಿವಾದ ಅಂತ್ಯ, ಇದು ಕನ್ನಡಿಗರ ಗೆಲುವು: ನಟ ನೀನಾಸಂ ಸತೀಶ್

news18
Updated:August 27, 2018, 5:06 PM IST
ಅಯೋಗ್ಯ ವಿವಾದ ಅಂತ್ಯ, ಇದು ಕನ್ನಡಿಗರ ಗೆಲುವು: ನಟ ನೀನಾಸಂ ಸತೀಶ್
news18
Updated: August 27, 2018, 5:06 PM IST
-ನ್ಯೂಸ್ 18 ಕನ್ನಡ

ನಟ ನೀನಾಸಂ ಸತೀಶ್ ಇತ್ತೀಚೆಗೆ 'ಅಯೋಗ್ಯ' ಚಿತ್ರದ ಪ್ರದರ್ಶನದ ಕುರಿತಾಗಿ ಸಾಮಾಜಿಕ ತಾಣದಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದರು. ರಾಜ್ಯದಲ್ಲಿ 'ಅಯೋಗ್ಯ' ಉತ್ತಮ ಪ್ರದರ್ಶನ ಕಾಣುತ್ತಿದ್ದು, ಆದರೆ ಪಕ್ಕದ ಹೈದರಾಬಾದ್​ನಲ್ಲಿ ಚಿತ್ರಕ್ಕೆ ಬೇಡಿಕೆಯಿದ್ದರೂ ಸಿನಿಮಾ ಬಿಡುಗಡೆ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದರು. ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ದೂರನ್ನು ಸಲ್ಲಿಸಿದ್ದರು.


ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡರು ಹೈದರಾಬಾದ್​ನಲ್ಲಿ ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಡುವಂತೆ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ತೆಲುಗು ಚಿತ್ರ ಮಂಡಳಿ ಮುಂದಿನವಾರದಿಂದ ಅಯೋಗ್ಯ ಸಿನಿಮಾವನ್ನು ಹೈದರಾಬಾದ್ ಮಲ್ಟಿಪ್ಲೆಕ್ಸ್ ಗಳಲ್ಲಿ ರಿಲೀಸ್ ಮಾಡಲು ಅವಕಾಶ ನೀಡಿದೆ.

ಕೇವಲ 9 ದಿನಗಳಲ್ಲಿ 10 ಕೋಟಿ ಕಲೆಕ್ಷನ್ ಮಾಡುವ ಮೂಲಕ ಅಯೋಗ್ಯನ ಆರ್ಭಟ ಕರ್ನಾಟಕದಲ್ಲಿ ಭರ್ಜರಿ ನಡೆಯುತ್ತಿದೆ.  ಇದೀಗ ತಮ್ಮ ಚಿತ್ರವನ್ನು ಹೊರ ರಾಜ್ಯದಲ್ಲಿ ಬಿಡುಗಡೆಯಾಗಲು ಸಾಧ್ಯವಾಗಿರುವುದಕ್ಕೆ ನಟ ಸತೀಶ್, ಇದು ಕನ್ನಡ ಚಿತ್ರರಂಗದ ಗೆಲುವು ಎಂದು ಹರ್ಷ ವ್ಯಕ್ತಡಿಸಿದ್ದಾರೆ.
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...