ನಟಿ ಆಯೇಷಾ ಟಾಕಿಯಾಗೆ ಬೆದರಿಕೆ : ಸಹಾಯ ಮಾಡುವಂತೆ ಪೊಲೀಸರಿಗೆ ಟ್ವಿಟ್ಟರ್​ನಲ್ಲಿ ಪತಿ ಮನವಿ

news18
Updated:July 4, 2018, 6:40 PM IST
ನಟಿ ಆಯೇಷಾ ಟಾಕಿಯಾಗೆ ಬೆದರಿಕೆ : ಸಹಾಯ ಮಾಡುವಂತೆ ಪೊಲೀಸರಿಗೆ ಟ್ವಿಟ್ಟರ್​ನಲ್ಲಿ ಪತಿ ಮನವಿ
news18
Updated: July 4, 2018, 6:40 PM IST
-ನ್ಯೂಸ್ 18 ಕನ್ನಡ

ಬಾಲಿವುಡ್​ನಲ್ಲಿ ತನ್ನ ಮುದ್ದಾದ ಅಭಿನಯದ ಮೂಲಕ ಮನೆಮಾತಾಗಿದ್ದ ನಟಿ ಆಯೇಷಾ ಟಾಕಿಯಾಗೆ ಬೆದರಿಕೆ ಸಂದೇಶಗಳು ಬರುತ್ತಿದೆ ಎಂದು ನಟಿಯ ಪತಿ ಆರೋಪಿಸಿದ್ದಾರೆ. ತಾಯಿ, ಸಹೋದರಿ ಹಾಗೂ ಪತ್ನಿಗೆ ಬೆದರಿಕೆಯೊಡ್ಡಿ ಸಂದೇಶಗಳನ್ನು ಕಳುಹಿಸಲಾಗುತ್ತಿದೆ ಎಂದು ಆಯೇಷಾ ಪತಿ ಫರ್ಹಾನ್ ಅಜ್ಮಿ ಟ್ವಿಟ್ಟರ್​​ನಲ್ಲಿ ತಿಳಿಸಿದ್ದಾರೆ.

ಪೊಲೀಸ್ ಇಲಾಖೆಯಿಂದ ಯಾವುದೇ ನೆರವು ಸಿಗುತ್ತಿಲ್ಲ ಎಂದು ಟ್ವೀಟ್​ನಲ್ಲಿ ತಿಳಿಸಿರುವ ಅಜ್ಮಿ, ಉನ್ನತ ಅಧಿಕಾರಿಗಳು ಇತ್ತ ಗಮನ ಹರಿಸುವಂತೆ ಕೋರಿಕೊಂಡಿದ್ದಾರೆ. ಅಲ್ಲದೆ ಅಕ್ರಮವಾಗಿ ತಮ್ಮ ಬ್ಯಾಂಕ್​ ಖಾತೆಯನ್ನು ಸ್ಥಗಿತಗೊಳಿಸಿದ್ದು, ಪ್ರಧಾನಿ ಮೋದಿ, ಸುಷ್ಮಾ ಸ್ವರಾಜ್ ಸಹಾಯ ಮಾಡಬೇಕೆಂದು ಹ್ಯಾಶ್​ ಟ್ಯಾಗ್ ಹಾಕಿ ಕೇಳಿಕೊಂಡಿದ್ದಾರೆ.

ಈ ಬಗ್ಗೆ ಪೊಲೀಸ್ ಕಮೀಷನರ್ ಕರೆ ಮಾಡಿದಾಗ ಕರೆ ಸ್ವೀಕರಿಸುತ್ತಿಲ್ಲ ಹಾಗೂ ಯಾವುದೇ ಸಂದೇಶಗಳಿಗೆ ಉತ್ತರಿಸುತ್ತಿಲ್ಲ ಎಂದು ತಿಳಿಸಿರುವ ಫರ್ಹಾನ್ ಅಜ್ಮಿ, ಪೊಲೀಸ್ ಅಧಿಕಾರಿಯ ನೆರವಿನಿಂದ ಅಕ್ರಮವಾಗಿ ತಮ್ಮ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿದ್ದಾರೆ ಎಂದು ಟ್ವಿಟ್ಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Loading...


ಫರ್ಹಾನ್ ಅಜ್ಮಿ ಅವರ ಒಂದು ಕಾಲದ ಉದ್ಯಮಿ ಪಾಲುದಾರ ಖಾಸಿಫ್ ಖಾನ್  ನಡುವೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿದೆ. ಇದರ ನಡುವೆ ಖಾಸಿಫ್ ಖಾನ್ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಬಳಸಿ ತಮ್ಮ ಕುಟುಂಬವನ್ನು ಬೆದರಿಸುತ್ತಿದ್ದಾರೆ ಎಂದು ಫರ್ಹಾನ್ ಆರೋಪಿಸಿದ್ದಾರೆ.


ನನ್ನ ಕುಟುಂಬಕ್ಕೆ ಮತ್ತು ಹೆಂಡತಿಗೆ ಕಿರುಕುಳ ನೀಡಲು ನೀವು ಮತ್ತು ನಿಮ್ಮ ಅಧಿಕಾರಿಗಳು ಸಹಾಯ ಮಾಡುತ್ತಿದ್ದು, ನಾನು ನಿಮಗೆ ಕರೆ ಮಾಡಿದಾಗ ನೀವು ಕರೆ ಸ್ವೀಕರಿಸುತ್ತಿಲ್ಲ ಎಂದು ಡಿ.ಸಿ.ಪಿ ದಹಿಯಾ ಅವರಿಗೆ ಕರೆ ಮಾಡಿದ ಸ್ಕ್ರೀನ್ ಶಾಟ್​ ಅನ್ನು ಸಾಮಾಜಿಕ ತಾಣದಲ್ಲಿ ಆಯೇಷಾ ಟಾಕಿಯಾ ಪತಿ ಹಂಚಿಕೊಂಡಿದ್ದಾರೆ.


ಟ್ವಿಟ್ಟರ್​ನಲ್ಲಿ ನೋವು ತೋಡಿಕೊಂಡಿರುವ ಫರ್ಹಾನ್ ಅಜ್ಮಿ ಮುಂಬೈ ಪೊಲೀಸ್, ಮುಂಬೈ ಕಮೀಷನರ್​ ಮತ್ತು ಐಪಿಎಸ್ ಅಧಿಕಾರಿ ದೇವನ್ ಭಾರ್ತಿ ಅವರನ್ನು ಸಂಪರ್ಕಿಸಲು ಸಹಾಯ ಮಾಡಿ ಎಂದು ಟ್ವಿಟ್ಟಿಗರಲ್ಲಿ ಕೇಳಿಕೊಂಡಿದ್ದಾರೆ.

ಇದರಂತೆ ನ್ಯಾಯ ಕೊಡಿಸುವುದಾಗಿ ತಿಳಿಸಿರುವ ಐಪಿಎಸ್ ಅಧಿಕಾರಿ ದೇವನ್ ಭಾರ್ತಿ ಅವರಿಗೆ ಧನ್ಯವಾದ ತಿಳಿಸಿ ಫರ್ಹಾನ್ ಮತ್ತೊಂದು ಟ್ವೀಟ್​ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮೂರು ಕೊಳೆತ ಸೇಬುಗಳಿಂದ ಒಂದು ಇಲಾಖೆ ಹಾಳಾಗುವುದಿಲ್ಲ ಎಂದು ಪರೋಕ್ಷವಾಗಿ ಖಾಸಿಫ್ ಖಾನ್​ಗೆ ನೆರವಾದ ಅಧಿಕಾರಿಗಳಿಗೆ ಟಾಂಗ್ ನೀಡಿದ್ದಾರೆ.


ಸಲ್ಮಾನ್ ಖಾನ್ ಅಭಿನಯದ ವಾಂಟೆಡ್ ಚಿತ್ರ ಸೇರಿದಂತೆ  ಹಲವಾರು ಬಾಲಿವುಡ್ ಮತ್ತು ಟಾಲಿವುಡ್ ಸಿನಿಮಾಗಳಲ್ಲಿ ನಟಿ ಆಯೇಷಾ ಟಾಕಿಯಾ ಅಭಿನಯಿಸಿದ್ದಾರೆ.
First published:July 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...