ಅವ್ವಾ ಕೇಳೇ.. ತಿಳಿ ನೀಲಿ ಆಗಸದಿ ಎಲ್ಲಿರುವೆ ಹೇಳೇ.. ತಾಯಿಯ ಬಗ್ಗೆ Neenasam Sathish ಹಾಡು

ಅವ್ವಾ ಕೇಳೇ ತಿಳಿ ನೀಲಿ ಆಗಸದಿ ಎಲ್ಲಿರುವೆ ಹೇಳೇ ಹಾಡು. ‘ನಾನು ಕಂಡ ನನ್ನವ್ವನನ್ನು ನಾಲ್ಕು ಪದಗಳಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುವ ಒಂದು ಸಣ್ಣ ಪ್ರಯತ್ನವೇ ಈ ಹಾಡು’ಎಂದು ಹೇಳಿದ್ದಾರೆ ನೀನಾಸಂ ಸತೀಶ್‌.

ನೀನಾಸಂ ಸತೀಶ್‌

ನೀನಾಸಂ ಸತೀಶ್‌

 • Share this:
  ಅವ್ವಾ ಕೇಳೇ... ತಿಳಿ ನೀಲಿ ಆಗಸದಿ ಎಲ್ಲಿರುವೇ ಹೇಳೇ... ಇದು ನೀನಾಸಂ ಸತೀಶ್‌ (Neenasam Sathish) ಅವರ ಭಾವಕೋಶದ ಹಾಡು (Song). ‘ನಾನು ಕಂಡ ನನ್ನವ್ವನನ್ನು (Mother) ನಾಲ್ಕು ಪದಗಳಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುವ ಒಂದು ಸಣ್ಣ ಪ್ರಯತ್ನವೇ ಈ ಹಾಡು’ಎಂದು ಹೇಳಿದ್ದಾರೆ ನೀನಾಸಂ ಸತೀಶ್‌.  ನೀನಾಸಂ ಸತೀಶ್ ಅವರೇ ಸಾಹಿತ್ಯ (Lyric) ಬರೆದು ಅವ್ವಾ ಕೇಳೇ (Avva Kele ) ಸಾಂಗ್ ಹಾಡಿದ್ದಾರೆ. ಸುಮಾರು 4 ನಿಮಿಷಗಳಷ್ಟಿರುವ ಹಾಡನ್ನು ಸಾವಿರಾರು ವೀಕ್ಷಕರು (Viewers) ಈಗಾಗಲೇ ಮೆಚ್ಚಿಕೊಂಡಿದ್ದಾರೆ. ಸತೀಶ್‌ ಅವರ ಆರ್ದ್ರ ಧ್ವನಿಯಲ್ಲಿ ಈ ಹಾಡು ಮೂಡಿ ಬಂದಿದೆ. ಹಾಡಿನ ಜೊತೆ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಸತೀಶ್‌, ಬಯಲು, ಗದ್ದೆ, ಕೆರೆಯಲ್ಲಿ ಏಕಾಂಗಿಯಾಗಿ ಹೋಗುತ್ತಾ ಹಾಡುತ್ತಾ ಸಾಗುತ್ತಿದ್ದಾರೆ.

  ಅವ್ವಾ ಕೇಳೇ.. ತಿಳಿ ನೀಲಿ ಆಗಸದಿ ಎಲ್ಲಿರುವೇ ಹೇಳೇ

  ಅವ್ವಾ ಕೇಳೇ... ತಿಳಿ ನೀಲಿ ಆಗಸದಿ ಎಲ್ಲಿರುವೇ ಹೇಳೇ.. ಇದು ನೀನಾಸಂ ಸತೀಶ್‌ ಅವರ ಭಾವಕೋಶದ ಹಾಡು. ಹಾಡಿನಲ್ಲಿ ತಾಯಿಯ ರೇಖಾ ಚಿತ್ರವೊಂದು ಮೂಡಿ ಮರೆಯಾಗುತ್ತದೆ. ಸತೀಶ್‌ ಆಡಿಯೋ ಹೌಸ್‌ನ ಯುಟ್ಯೂಬ್‌ ಚಾನೆಲ್‌ನಲ್ಲಿ ಈ ಹಾಡು ಬಿಡುಗಡೆಯಾಗಿದೆ. ಸತೀಶ್‌ ಜೊತೆ ಅವರ ಮಗಳು ಮನಸ್ವಿತಾ ಕೂಡ ಹಾಡಿದ್ದಾರೆ. ಪೂರ್ಣ ಚಂದ್ರ‌ ತೇಜಸ್ವಿ ಅವರ ಸಂಗೀತ ಮಾಡಿದ್ದಾರೆ. ಮೋನಿಷ್‌ ಕುಮಾರ್‌ ಈ ಹಾಡಿನ ಪ್ರೋಗ್ರಾಮಿಂಗ್‌ ಮಾಡಿದ್ದಾರೆ. ಧ್ವನಿ ಸಂಯೋಜನೆ  ನವೀನ್‌ ಕುಮಾರ್‌ ಅವರದ್ದು ಆಗಿದೆ. ಈಗಾಗಲೇ ಹಲವು ಚಿತ್ರಗಳಲ್ಲಿ ಸತೀಶ್‌ ಛಾಪು ಮೂಡಿಸಿದ್ದಾರೆ. ಈಗ ಸಾಹಿತ್ಯ, ಗಾಯನದತ್ತಲೂ ಒಲವು ತೋರಿದ್ದಾರೆ.

  ಇದನ್ನೂ ಓದಿ: ‘ಜೇಮ್ಸ್‘ ಪ್ರೀ ರಿಲೀಸ್ ಇವೆಂಟ್; ದೊಡ್ಮನೆ ಕುಟುಂಬ ಸೇರಿದಂತೆ ಹಲವು ತಾರೆಯರು ಭಾಗಿ

  ಮನಮುಟ್ಟುವ ಹಾಡು ಅವ್ವಾ ಕೇಳೇ

  ಇನ್ನು ವಿಡಿಯೋ ಸಾಕಷ್ಟು ವೀವ್ಸ್ ಪಡೆದುಕೊಂಡಿದೆ. ಸಾಕಷ್ಟು ಜನರು ಕಮೆಂಟ್ ಮಾಡಿದ್ದಾರೆ. ಅದ್ಬುತ ಹಾಡು ಸರ್ ಎಂದು ಒಬ್ಬರು ಕಮೆಂಟ್ ಮಾಡಿದರೆ. ಇನ್ನೊಬ್ಬರು ನಿಮಗೆ ಇಂತಹ ಒಂದು ಹಾಡು ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು  ಮನಮುಟ್ಟುವ ಹಾಡು ಎಂದಿದ್ದಾರೆ. ಸತೀಶ್ ರವರು ಪ್ರತಿಭೆಯ ಕಣಜ ತುಂಬಾ ಅರ್ಥಗರ್ಭಿತ ಸಾಲುಗಳು. ಇದು ಪ್ರತಿಯೊಬ್ಬ ಅವ್ವಳ ಕಥೆಯಿದು. ಅವಳಿಗೆ ಅವಳೇ ಸಾಟಿಸುಂದರ ಅಥ೯ವೂಳ್ಳ ಭಾವಮಧುರ ಸಾಹಿತ್ಯ ಅಣ್ಣ ಎಂಬ ಸಾಕಷ್ಟು ಕಮೆಂಟ್ ಗಳು ಕಾಣಿಸುತ್ತವೆ.

  ಸತೀಶ್ ನೀನಾಸಂನಲ್ಲಿ ಇರುವಾಗಲೇ ಹಾಡಿನತ್ತ ಆಸಕ್ತಿ ತೋರಿದ್ದರು. ಅಲ್ಲಿ ಸಾಕಷ್ಟು ರಂಗ ಗೀತೆಗಳನ್ನು ಹಾಡುತ್ತಿದ್ದರು. ಹಾಡುವುದು ವೃತ್ತಿಯಲ್ಲ. ಆದರೂ ಸಹ ಹಾಡುವ ಹವ್ಯಾಸವೇ ಅವರನ್ನು ಮೂರು ಸಿನಿಮಾಗಳಿಗೆ ಹಾಡುವಂತೆ ಮಾಡಿದೆ. ತಮ್ಮದೇ ನಟನೆಯ ‘ಅಂಜದ ಗಂಡು’ಚಿತ್ರಕ್ಕಾಗಿ ಟೈಟಲ್ ಟ್ರ್ಯಾಕ್, ‘ರಾಕೇಟ್  ಚಿತ್ರಕ್ಕಾಗಿ ರಂಗಿ ರಂಗಿ ಮತ್ತು ಡಿ.ಎನ್.ಎ ಚಿತ್ರಕ್ಕಾಗಿ ನಾವ್ಯಾರು ಎಲ್ಲಿಂದ.. ಎನ್ನುವ ಗೀತೆಗಳನ್ನು ಹಾಡಿದ್ದರು.

  ಅಶರೀರವಾಣಿ ಹೆಸರಿನಲ್ಲಿ ರಿಲೀಸ್

  ಅಶರೀರವಾಣಿ ಹೆಸರಿನಲ್ಲಿ ರಿಲೀಸ್ ಆಗಿರುವ ಈ ಹಾಡು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಸಿದ್ಧವಾಗಿದೆ. ಎರಡೂ ಭಾಷೆಯಲ್ಲೂ ಸತೀಶ್ ಅವರೇ ಹಾಡಿದ್ದಾರೆ. ಮೊದಲು ಕನ್ನಡದಲ್ಲಿ ಸಾಂಗ್ ಬಿಡುಗಡೆ ಆಗಿದೆ. ನಂತರದಲ್ಲಿ ತಮಿಳಿನಲ್ಲೂ ಈ ಗೀತೆ ರಿಲೀಸ್ ಆಗಲಿದೆ.

  ಇದನ್ನೂ ಓದಿ: ಸಿನಿ ಪ್ರಿಯರೇ ಗಮನಿಸಿ, ಇದೇ ಏಪ್ರಿಲ್ 1ರಿಂದ ಲೋಕಲ್ ಟ್ರೈನ್ ಸಂಚರಿಸಲಿದೆ

  ಒಂದು ಕಡೆ ಸತೀಶ್ ಅವರ ಆಲ್ಬಂ ರಿಲೀಸ್ ಆಗಿದೆ. ಮತ್ತೊಂದು ಕಡೆ ಕೈ ತುಂಬಾ ಚಿತ್ರಗಳನ್ನಿಟ್ಟುಕೊಂಡು ಸತೀಶ್ ಕೂತಿದ್ದಾರೆ. ಗೋಧ್ರಾ ಮತ್ತು ಪೆಟ್ರೊಮ್ಯಾಕ್ಸ್ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ದಸರಾ ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದೆ. ಸದ್ಯ ಮ್ಯಾಟ್ನಿ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಜತೆಗೆ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರಂತೆ. ಅಂದುಕೊಂಡಂತೆ ಆದರೆ, ಈ ವರ್ಷ ಇವರ ಮೂರು ಚಿತ್ರಗಳ ಬಿಡುಗಡೆ ಆಗಬಹುದು.
  Published by:renukadariyannavar
  First published: