'Black Widow' ಸ್ಟ್ರೀಮಿಂಗ್‌ನಿಂದ Scarlett Johanssonಗೆ 371 ಕೋಟಿ ರೂ ನಷ್ಟ, Disney ವಿರುದ್ಧ ಹಾಲಿವುಡ್‌ ನಟಿ ಕೇಸ್‌

Scarlett Johansson: ಈ ಚಲನಚಿತ್ರವನ್ನು ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆ ಮಾಡುವ ತನ್ನ ಬದ್ಧತೆಯನ್ನು ಡಿಸ್ನಿ ಗೌರವಿಸಲಿಲ್ಲ ಮತ್ತು ಏಕಕಾಲದಲ್ಲಿ ಅದನ್ನು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಲಭ್ಯವಾಗುವಂತೆ ಮಾಡಿದೆ ಎಂದು ನಟಿ ಮೊಕದ್ದಮೆಯಲ್ಲಿ ಆರೋಪಿಸಿದ್ದಾರೆ

ಬ್ಲಾಕ್ ವಿಡೋ ಪೋಸ್ಟರ್

ಬ್ಲಾಕ್ ವಿಡೋ ಪೋಸ್ಟರ್

 • Share this:

  Scarlett Johansson: ಹಾಲಿವುಡ್‌ನ ಬ್ಲ್ಯಾಕ್ ವಿಡೋ (Black Widow) ಚಿತ್ರದಲ್ಲಿ ನಟಿ ಸ್ಕಾರ್ಲೆಟ್ ಜೋಹಾನ್ಸನ್‌ ಸೂಪರ್ ಹೀರೋ ಪಾತ್ರವನ್ನು ನಿರ್ವಹಿಸಿದ್ದು, ಈ ಚಿತ್ರ ಈಗಾಗಲೇ ಸಾಕಷ್ಟು ಹೆಸರು ಮಾಡಿದೆ. ಆದರೆ, ಈ ನಡುವೆ ವಿವಾದದ ಸ್ವರೂಪವನ್ನೂ ಪಡೆದುಕೊಂಡಿದ್ದು, ಸ್ವತ: ಚಿತ್ರ ನಟಿ ಸ್ಕಾರ್ಲೆಟ್ ಜೋಹಾನ್ಸನ್‌, ಒಪ್ಪಂದ ಉಲ್ಲಂಘನೆ ಆರೋಪದ ಮೇಲೆ ಗುರುವಾರ ಡಿಸ್ನಿ(Disney) ಸಂಸ್ಥೆಯ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಈ ಚಲನಚಿತ್ರವನ್ನು ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆ ಮಾಡುವ ತನ್ನ ಬದ್ಧತೆಯನ್ನು ಡಿಸ್ನಿ ಗೌರವಿಸಲಿಲ್ಲ ಮತ್ತು ಏಕಕಾಲದಲ್ಲಿ ಅದನ್ನು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಲಭ್ಯವಾಗುವಂತೆ ಮಾಡಿದೆ ಎಂದು ನಟಿ ಮೊಕದ್ದಮೆಯಲ್ಲಿ ಆರೋಪಿಸಿದ್ದಾರೆ. ಬ್ಲ್ಯಾಕ್‌ ವಿಡೋ ಚಿತ್ರದ ತನ್ನ ಸಂಭಾವನೆ ಬಾಕ್ಸ್ ಆಫೀಸ್ ಪ್ರದರ್ಶನದ ಮೇಲೆ ನಿಂತಿತ್ತು. ಈ ಹಿನ್ನೆಲೆ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಿಂದಾಗಿ ತಾನು ಆರ್ಥಿಕ ನಷ್ಟವನ್ನು ಅನುಭವಿಸಿದ್ದೇನೆ ಎಂದು ಮೊಕದ್ದಮೆ ಹೂಡಲಾಗಿದೆ.


  ಡಿಸ್ನಿ ಉದ್ದೇಶಪೂರ್ವಕವಾಗಿ ಮಾರ್ವೆಲ್ ಒಪ್ಪಂದದ ಉಲ್ಲಂಘನೆಯನ್ನು ಸಮರ್ಥನೆಯಿಲ್ಲದೆ ಪ್ರೇರೇಪಿಸಿದೆ. ಮಿಸ್ ಜೋಹಾನ್ಸನ್ ಮಾರ್ವೆಲ್ ಜೊತೆಗಿನ ತನ್ನ ಲಾಭದ ಸಂಪೂರ್ಣ ಪ್ರಯೋಜನವನ್ನು ಅರಿತುಕೊಳ್ಳುವುದನ್ನು ತಡೆಯಲು ಈ ರೀತಿ ಮಾಡಲಾಗಿದೆ ಎಂದೂ ದೂರಿನಲ್ಲಿ ಹೇಳಲಾಗಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.


  ಇದರಿಂದ, ಬ್ಲ್ಯಾಕ್‌ ವಿಡೋ ಚಿತ್ರವನ್ನು ಥಿಯೇಟರ್‌ನಲ್ಲಿ ಬಿಡುಗಡೆ ಮಾಡಿದ ಸಮಯದಲ್ಲೇ ಏಕಕಾಲದಲ್ಲಿ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿರುವುದರಿಂದ ನಟಿಗೆ 50 ಮಿಲಿಯನ್ ಡಾಲರ್ ನಷ್ಟಕ್ಕೆ ( ಸುಮಾರು 371 ಕೋಟಿ ರೂ.) ಕಾರಣವಾಗಿದೆ ಎಂದು ಸ್ಕಾರ್ಲೆಟ್‌ನ ಹತ್ತಿರದ ಮೂಲಗಳು ವಾಲ್ ಸ್ಟ್ರೀಟ್ ಜರ್ನಲ್‌ಗೆ ಹೇಳಿವೆ.


  ಇದನ್ನೂ ಓದಿ: Real Estate: ಮನೆ ಖರೀದಿಸಿದ ನಂತರ ಈ ದಾಖಲೆಗಳನ್ನು ತಪ್ಪದೇ ಚೆಕ್ ಮಾಡಿ

  ಆದರೆ, ತಮ್ಮ ಮೇಲೆ ನಟಿ ಸ್ಕಾರ್ಲೆಟ್‌ ಜೋಹಾನ್ಸನ್‌ ಮೊಕದ್ದಮೆ ಹೂಡಿರುವ ಆರೋಪ ತಳ್ಳಿಹಾಕಿದ ಡಿಸ್ನಿಯ ವಕ್ತಾರರು, ಅರ್ಹತೆಯ ಕೊರತೆಯಿರುವ ಇಷ್ಟು ದೊಡ್ಡ ಮೊತ್ತದ ಹಣವನ್ನು ಊಹಿಸಲಾಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಭಯಾನಕ ಮತ್ತು ದೀರ್ಘಕಾಲದ ಜಾಗತಿಕ ಪರಿಣಾಮಗಳಿಗೆ ನಟಿಯ ನಿರ್ಲಕ್ಷ್ಯದ ಬಗ್ಗೆ ವಿಶೇಷವಾಗಿ ದುಃಖ ಮತ್ತು ಸಂಕಟ ಉಂಟಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.


  ಅಲ್ಲದೆ, ಕಂಪನಿಯು ತನ್ನ ಒಪ್ಪಂದವನ್ನು ಸಂಪೂರ್ಣವಾಗಿ ಅನುಸರಿಸಿದೆ ಮತ್ತು ಬ್ಲ್ಯಾಕ್ ವಿಡೋ ಸ್ಟ್ರೀಮಿಂಗ್ ಬಿಡುಗಡೆಯಿಂದ ನಟಿ ಇಲ್ಲಿಯವರೆಗೆ ಪಡೆದ 20 ಮಿಲಿಯನ್‌ ಡಾಲರ್‌ಗಿಂತ ಹೆಚ್ಚಿನ ಪರಿಹಾರವನ್ನು ಗಳಿಸುವ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಿದೆ ಎಂದು ಕಂಪನಿಯ ಪ್ರತಿನಿಧಿ ಹೇಳಿದರು.


  ಸಾಂಕ್ರಾಮಿಕ ರೋಗದಿಂದ ಸಾಕಷ್ಟು ನಷ್ಟ ಅನುಭವಿಸಿರುವ ಚಿತ್ರಮಂದಿರಗಳು ಮುಚ್ಚದಿರಲು ಹೆಣಗಾಡುತ್ತಿರುವ ಸಮಯದಲ್ಲಿ ಸ್ಕಾರ್ಲೆಟ್ ಈ ಮೊಕದ್ದಮೆ ಹೂಡಿದ್ದಾರೆ. ಹೆಚ್ಚಿನ ಸ್ಟುಡಿಯೋಗಳು ಚಲನಚಿತ್ರಗಳನ್ನು ವಿಳಂಬಗೊಳಿಸಲು ಅಥವಾ ಕೆಲ ಲಾಭ ಮರುಪಡೆಯುವ ಪ್ರಯತ್ನದಲ್ಲಿ ಸ್ಟ್ರೀಮಿಂಗ್ ಬಿಡುಗಡೆಯನ್ನು ಆಯ್ಕೆ ಮಾಡಿಕೊಳ್ಳುತ್ತಿವೆ.


  ಇದನ್ನೂ ಓದಿ: ಈ ವರ್ಷದ ಬಿಗ್ ಬಜೆಟ್ ಸಿನಿಮಾಗಳ ಪಟ್ಟಿ ಇಲ್ಲಿದೆ..ಇದರಲ್ಲಿ ನೀವು ಯಾವುದಕ್ಕೆ ಕಾಯ್ತಿದ್ದೀರಾ?

  ಬ್ಲ್ಯಾಕ್ ವಿಡೋ ಚಿತ್ರ ಮೂಲತ: ಮೇ 2020ಕ್ಕೆ ಬಿಡುಗಡೆಯಾಗಬೇಕಿತ್ತಾದರೂ, ಒಂದು ವರ್ಷ ತಡವಾಗಿ ಅಂದರೆ ಜುಲೈ 9, 2021ರಂದು ಥಿಯೇಟರ್‌ಗಳಲ್ಲಿ ಮತ್ತು ಡಿಸ್ನಿ+ ನಲ್ಲಿ (ಹೆಚ್ಚುವರಿ ಶುಲ್ಕಕ್ಕಾಗಿ) ಯುಎಸ್ ಮತ್ತು ಇತರ ಹಲವಾರು ದೇಶಗಳಲ್ಲಿ ಪ್ರಾರಂಭವಾಯಿತು.


  ಇನ್ನು, ''ಚಂದಾದಾರರನ್ನು ಹೆಚ್ಚಿಸಲು ಮತ್ತು ಆ ಮೂಲಕ ಕಂಪನಿಯ ಸ್ಟಾಕ್ ಮೌಲ್ಯ ಹೆಚ್ಚಿಸಿಕೊಳ್ಳಲು ಬ್ಲ್ಯಾಕ್‌ ವಿಡೋದಂತಹ ಚಲನಚಿತ್ರಗಳನ್ನು ಡಿಸ್ನಿ ನೇರವಾಗಿ ಬಿಡುಗಡೆ ಮಾಡುತ್ತಿರುವುದು ರಹಸ್ಯವೇನಲ್ಲ. ಮತ್ತು ಈ ರೀತಿ ಮಾಡಲು ಕೋವಿಡ್ -19ನ ನೆಪವನ್ನು ನೀಡುತ್ತಿದೆ'' ಎಂದು ಹಾಲಿವುಡ್‌ ಖ್ಯಾತ ನಟಿ ಸ್ಕಾರ್ಲೆಟ್‌ ಜೋಹಾನ್ಸನ್‌ ಪರ ವಕೀಲ ಜಾನ್ ಬೆರ್ಲಿನ್ಸ್ಕಿ ಸಿಎನ್ಎನ್ ಬ್ಯುಸಿನೆಸ್‌ಗೆ ತಿಳಿಸಿದರು. ''ಈ ದೂರದೃಷ್ಟಿಯಿಲ್ಲದ ಕಾರ್ಯತಂತ್ರದ ಮುಂದುವರಿಕೆಯಲ್ಲಿ ಅದರ ಚಲನಚಿತ್ರಗಳ ಯಶಸ್ಸಿಗೆ ಕಾರಣವಾದ ಕಲಾವಿದರ ಒಪ್ಪಂದಗಳನ್ನು ನಿರ್ಲಕ್ಷ್ಯ ಮಾಡುವುದು ಅವರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಮತ್ತು ನಾವು ನ್ಯಾಯಾಲಯದಲ್ಲಿ ಇದನ್ನು ಸಾಬೀತುಪಡಿಸಲು ಎದುರು ನೋಡುತ್ತಿದ್ದೇವೆ" ಎಂದೂ ನಟಿಯ ಪರ ವಕೀಲ ಹೇಳಿದ್ದಾರೆ.
  ಈ ಮಧ್ಯೆ, ಬ್ಲ್ಯಾಕ್‌ ವಿಡೋ ಚಿತ್ರ ಭಾರತದಲ್ಲಿ ಇನ್ನೂ ಬಿಡುಗಡೆಯಾಗಿಲ್ಲ. ಆದರೆ, ಪೈರೇಟ್‌ ತಾಣಗಳಲ್ಲಿ ಈಗಾಗಲೇ ಹೈ-ಡೆಫಿನಿಶನ್ ನಲ್ಲಿ ಲಭ್ಯವಿದೆ. ವರದಿಗಳ ಪ್ರಕಾರ, ಅಕ್ಟೋಬರ್‌ನಲ್ಲಿ ಡಿಸ್ನಿ+ ಹಾಟ್‌ಸ್ಟಾರ್‌ ಮೂಲಕ ದೇಶದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

  Published by:Soumya KN
  First published: