ಐರನ್ ಮ್ಯಾನ್ ಸರಣಿ ಚಿತ್ರಗಳಲ್ಲಿ ಮಿಂಚುತ್ತಿರುವ ರಾಬರ್ಟ್ ಡೌನಿ ಜೂನಿಯರ್ ಹಾಲಿವುಡ್ನ ಬಹು ನಿರೀಕ್ಷಿತ ಸಿನಿಮಾ 'ಅವೆಂಜರ್ಸ್ ಎಂಡ್ ಗೇಮ್ 'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಇನ್ಮುಂದೆ 'ವಯಸ್ಕರ ಸಿನಿಮಾ'ಗಳನ್ನು ಮಲ್ಟಿಪ್ಲೆಕ್ಸ್ಗಳಲ್ಲಿ ವೀಕ್ಷಿಸಬಹುದು: ಆದರೆ ಷರತ್ತುಗಳು ಅನ್ವಯ..!
ಸದ್ಯ ಈ ಸಿನಿಮಾ ಇದೇ ತಿಂಗಳ 26ಕ್ಕೆ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಐರನ್ ಮ್ಯಾನ್ ಪಾತ್ರದಲ್ಲಿ ಡೌನಿಯನ್ನು ನೋಡಲು ಹಾತೊರೆಯುತ್ತಿದ್ದಾರೆ. ಹೀಗಿರುವಾಗಲೇ ರಾಬರ್ಟ್ ಡೌನಿ ಜೂನಿಯರ್ ಅವರ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೇವಲ ಮೆಟಲ್ ಬಾಡಿತೊಟ್ಟು ಹಾರುವ ಐರನ್ ಮ್ಯಾನ್ ಅನ್ನು ನೋಡಿರುವ ನಿಮಗೆ, ಅವರೇ ಇಂಗ್ಲಿಷ್ ಹಾಡಿಗೆ ಹೆಜ್ಜೆ ಹಾಕೋದನ್ನ ನೋಡಿದರೆ ಹೇಗಿರಬೇಡ.
ಬಣ್ಣದ ಪ್ಯಾಂಟ್ ತೊಟ್ಟು ಕೈಯಲ್ಲಿ ರೇಡಿಯೋ ಹಿಡಿದು ದ ಬಿಟಲ್ಸ್ ಆ್ಯಂಡ್ ಕ್ವೀನ್ ಹಾಡಿನ ತಾಳಕ್ಕೆ ಕುಣಿದಿದ್ದಾರೆ. 'ಅವೆಂಜರ್ಸ್ ಎಂಡ್ ಗೇಮ್'ನ ಪ್ರಚಾರದ ಪ್ರವಾಸದಲ್ಲಿರುವ ಡೌನಿ ಒಮ್ಮೆ ಇದ್ದಕ್ಕಿದ್ದಂತೆ ನೃತ್ಯ ಮಾಡಿದ್ದು, ಇದು ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತಿದೆ.
ಅದರಲ್ಲೂ ಎರಡನೇ ದಿನದ ಪ್ರವಾಸದಲ್ಲಿ ರಾಬರ್ಟ್ ಡೌನಿ ಡಾನ್ಸ್ ಇನ್ನೂ ಸೊಗಸಾಗಿದೆ.
ಮೂರನೇ ದಿನದ ಪ್ರವಾಸದಲ್ಲಿ ಬೀಟಲ್ಸ್ ಹೇ ಜೂಡ್ ಬೀಟ್ಸ್ಗೆ ಈ ಸಲ ಐರನ್ ಮ್ಯಾನ್ (0-(ರಾಬರ್ಟ್ ಡೌನಿ ಜೂನಿಯರ್) ಜತೆಗೆ, ಕ್ಯಾಪ್ಟನ್ ಅಮೆರಿಕ (ಕ್ರಿಸ್ಇವ್ಯಾನ್ಸ್), ಥೋರ್ (ಕ್ರಿಸ್ ಹೆಮ್ಸ್ವರ್ಥ್) ಹಾಗೂ ಹಲ್ಕ್ (ಮಾರ್ಕ್ ರಫೆಲೊ) ಸಹ ಹಾಡುತ್ತಾ ಹೆಜ್ಜೆ ಹಾಕಿದ್ದಾರೆ.
ನಾಲ್ಕನೇ ದಿನ ಮತ್ತೆ ಅವೆಂಜರ್ಸ್ ಹೊಸ ಡಾನ್ಸಿಂಗ್ ಸೆಶನ್ ಜತೆ ಬರಲಿದ್ದಾರೆ ಎಂದು ಪ್ರಕಟಿಸಿದ್ದರು ಡೌನಿ.
ಕಡೆಯ ದಿನದ ಪ್ರವಾಸದಲ್ಲಿ ರಾಬರ್ಟ್ ಡೌನಿ ಜೂನಿಯರ್ ನೃತ್ಯದ ಜತೆಗೆ ಅಭಿಮನಿಗಳಿಗೆ ಸಿಹಿಯಾದ ಮುತ್ತಿನ ಮಳೆಯನ್ನೇ ಸುರಿಸಿದ್ದಾರೆ.
ಬಹು ನಿರೀಕ್ಷಿತ ಚಿತ್ರ 'ಅವೆಂಜರ್ಸ್ ಎಂಡ್ ಗೇಮ್'ಗಾಗಿ ಅಭಿಮಾನಿಗಳು ಮಾತ್ರವಲ್ಲದೇ ಖುದ್ದು ಈ ಚಿತ್ರದ ಸೂಪರ್ ಹೀರೋಗಳು ಕಾತುರರಾಗಿದ್ದಾರೆ.
Lok Sabha Election Voting: ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ಟಾಲಿವುಡ್ ಸಿನಿ ತಾರೆಯರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ