Avatar 2 ಟ್ರೈಲರ್​ ರಿಲೀಸ್​, ಅಬ್ಬಬ್ಬಾ.. ಒಂದ್​ ಒಂದು ಫ್ರೇಮ್​ ಅದ್ಭುತ! ಇದು ಸಿನಿಮಾ ಅಲ್ಲ-ಮ್ಯಾಜಿಕ್​

ಇದೀಗ ಈ ಚಿತ್ರದ ಟ್ರೈಲರ್​ ರಿಲೀಸ್​ ಆಗಿದೆ.'ಅವತಾರ್ 2' ಸಿನಿಮಾಕ್ಕೆ 'ದಿ ವೇ ಆಫ್ ವಾಟರ್' ಎಂದು ಅಡಿನಾಮ ನೀಡಲಾಗಿದೆ, ಈ ಬಾರಿ 'ಅವತಾರ್ 2' ನಲ್ಲಿ ಸಮುದ್ರದಾಳದ ಅದ್ಭುತ ಲೋಕವನ್ನು ಪ್ರದರ್ಶಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಅವತಾರ್​ 2 ಟ್ರೈಲರ್​ ರಿಲೀಸ್​​

ಅವತಾರ್​ 2 ಟ್ರೈಲರ್​ ರಿಲೀಸ್​​

  • Share this:
ಬಹು ನಿರೀಕ್ಷಿತ ಅವತಾರ್ 2 (Avatar 2) ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿತ್ತು. ಚಿತ್ರವು ಇದೇ ವರ್ಷ ಡಿಸೆಂಬರ್ 16 (December 16) ರಂದು ವಿಶ್ವಾದ್ಯಂತ 160ಕ್ಕೂ ಹೆಚ್ಚು ಭಾಷೆ (160 More Language) ಗಳಲ್ಲಿ ಬಿಡುಗಡೆಯಾಗುವ ಮೂಲಕ ಪ್ಯಾನ್ ವರ್ಲ್ಡ್ ಸಿನಿಮಾ (Pan World Movies) ವಾಗಲಿದೆ. ಜೇಮ್ಸ್ ಕ್ಯಾಮರೂನ್ (James Cameron) ನಿರ್ದೇಶನದ 2009ರ ಬ್ಲಾಕ್‌ಬಸ್ಟರ್ (Blockbuster) ಅವತಾರ್ ಚಿತ್ರದ 2ನೇ ಭಾಗ 13 ವರ್ಷಗಳ ನಂತರ ತೆರೆಗೆ ಬರುತ್ತಿದೆ. 'ಅವತಾರ್' ಸಿನಿಮಾ 3 ಆಸ್ಕರ್ (Oscar) ಪ್ರಶಸ್ತಿಗಳನ್ನು ಗೆದ್ದುಕೊಂಡಿತು.ಈ ಚಿತ್ರ ಪ್ರಪಂಚದಾದ್ಯಂತ ಡಿಜಿಟಲ್ 3D ಯುಗವನ್ನು ಪ್ರಾರಂಭಿಸಲು ಕಾರಣವಾಯಿತು.

ಅವತಾರ್​ 2 ಸಿನಿಮಾದ ಟ್ರೈಲರ್​ ರಿಲೀಸ್​!

ಇದೀಗ ಈ ಚಿತ್ರದ ಟ್ರೈಲರ್​ ರಿಲೀಸ್​ ಆಗಿದೆ.'ಅವತಾರ್ 2' ಸಿನಿಮಾಕ್ಕೆ 'ದಿ ವೇ ಆಫ್ ವಾಟರ್' ಎಂದು ಅಡಿನಾಮ ನೀಡಲಾಗಿದೆ, ಈ ಬಾರಿ 'ಅವತಾರ್ 2' ನಲ್ಲಿ ಸಮುದ್ರದಾಳದ ಅದ್ಭುತ ಲೋಕವನ್ನು ಪ್ರದರ್ಶಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. 2009ರ ಅವತಾರ್‌ನಲ್ಲಿ ನೀಲಿ ಬಣ್ಣದ, ದೈತ್ಯ ದೇಹಿ ನಾವಿ ಜನರು ವಾಸಿಸುತ್ತಿದ್ದ ಪ್ಯಾಂಡೊರಾ ಎನ್ನುವ ಅದ್ಭುತ ಲೋಕದ ಪರಿಚಯ ಮಾಡಿಸಲಾಗಿತ್ತು. 'ಅವತಾರ್ 2' ನಲ್ಲಿ ನಾವಿ ಜನಗಳು ಅದೇ ಪ್ಯಾಂಡೋರಾನಲ್ಲಿ ವಾಸಿಸುತ್ತಿದ್ದಾರೆ. ಆದರೆ ಈ ಬಾರಿ ಅವರ ನೀರಿನ ಆಕರದ ಮೇಲೆ ದುಷ್ಟರ ಕಣ್ಣು ಬಿದ್ದಿದೆ.

ಟ್ರೈಲರ್​​ನಲ್ಲೇ ಕಮಾಲ್ ಮಾಡಿದ ಅವತಾರ್ 2!

'ಅವತಾರ್ 2' ಟೀಸರ್‌ನಲ್ಲಿ ನೀರಿನಲ್ಲಿ ಹಲವು ಅದ್ಭುತ ದೃಶ್ಯಗಳಿವೆ. ಅವತಾರ್ ಗುಂಪಿನ ನಾಯಕ ಜಾಕ್ ಸೂಲಿ ದೈತ್ಯ ತಿಮಿಂಗಲವೊಂದರ ರೆಕ್ಕೆ ಹಿಡಿದುಕೊಂಡು ಈಜುವ ದೃಶ್ಯ ಮನ ಮೋಹಕವಾಗಿದೆ. ಟ್ರೈಲರ್​ನಲ್ಲೇ ಭಾರಿ ನಿರೀಕ್ಷೆ ಹುಟ್ಟಿಸಿದೆ ಸಿನಿಮಾ. ಪ್ರತಿಯೊಂದು ಫ್ರೇಮ್​ನಲ್ಲೂ ಅದ್ಧೂರಿತನ ಎದ್ದು ಕಾಣುತ್ತಿದೆ. ಯಾವಾಗ ಸಿನಿಮಾ ರಿಲೀಸ್​​ ಆಗುತ್ತಪ್ಪ ಎಂದು ಸಿನಿರಸಿಕರು ಕಾಯುತ್ತಿದ್ದಾರೆ.


ಇದನ್ನೂ ಓದಿ: ಆಗ್ಲೇ ತಮ್ಮ ಮಕ್ಕಳಿಗೆ ಏನು ಹೆಸರಿಡೋದು ಅಂತ ದೊಡ್ಡ ಲಿಸ್ಟ್ ರೆಡಿ ಇಟ್ಕೊಂಡಿದಾರೆ ರಣ್ವೀರ್ ಸಿಂಗ್! ಯಾವಾಗ ಸಿಹಿಸುದ್ದಿ?

ಐದು ಭಾಗಗಳಲ್ಲಿ ರಿಲೀಸ್​ ಆಗ್ತಿದೆ ಅವತಾರ್​ 2!

ಅವತಾರ್ ಚಿತ್ರದ ದೊಡ್ಡ ಯಶಸ್ಸಿನಿಂದಾಗಿ 2016ರಲ್ಲಿ ಅವತಾರ್ 2 ಚಿತ್ರವನ್ನು 5 ಭಾಗಗಳಲ್ಲಿ ಚಿತ್ರೀಕರಿಸಲಾಗುವುದು ಎಂದು ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಘೋಷಿಸಿದ್ದರು. ಸದ್ಯ ಆರು ವರ್ಷಗಳ ಬಳಿಕ ಚಿತ್ರ ಬಹುತೇಕ ಪೂರ್ಣಗೊಂಡಿದ್ದು, 'ಅವತಾರ್ 2' ಸಿನಿಮಾ ಇದೇ ವರ್ಷದ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಅವತಾರ್ 2ನಲ್ಲಿ ಟೈಟಾನಿಕ್ ತಾರೆ ಕೇಟ್ ವಿನ್ಸ್ಲೆಟ್, ಅರ್ನಾಲ್ಡ್ ಶ್ವಾರ್ಜಿನೆಗ್ಗರ್, ವಿನ್ ಡೀಸೆಲ್, ಜೋಯ್ ಸಲ್ಡಾನಾ ಮತ್ತು ಸ್ಯಾಮ್ ವರ್ತಿಂಗ್ಟನ್ ಸೇರಿ ಹಲವರು ನಟಿಸಿದ್ದಾರೆ.

ಇದನ್ನೂ ಓದಿ: ವಿಶ್ವದ ಅತಿ ಹೆಚ್ಚು ಬಜೆಟ್​​ನ ಸಿನಿಮಾಗಳು! ನೀವು ಊಹೆನೂ ಮಾಡಿಕೊಂಡಿರಲ್ಲ, ಅಷ್ಟ್​ ಖರ್ಚಾಗಿದೆ

ಇದೇ ವರ್ಷ ತೆರೆಗೆ ಬರುತ್ತಿದೆ ಅವತಾರ್​ 2!

ಅವತಾರ್ ತೆರೆ ಕಂಡ ನಂತರ ಬಾಕ್ಸ್ ಆಫೀಸ್‌ನಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು ($ 2.4 ಬಿಲಿಯನ್ ಗಳಿಕೆ ಮಾಡಿತ್ತು). ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಹಿಂದಿನ ಟೈಟಾನಿಕ್ ಚಿತ್ರ ಈ ಸಾಧನೆ ಮಾಡಿತ್ತು. ಅವತಾರ್ 2 ರ ಚಿತ್ರೀಕರಣ 2020ರಲ್ಲಿ ಪೂರ್ಣಗೊಳ್ಳಲಿದೆ ಎಂದು ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಘೋಷಿಸಿದ್ದರು. ಅಲ್ಲದೆ, ಅವತಾರ್ 2 2021ರಲ್ಲಿ ಬಿಡುಗಡೆಯಾಗುತ್ತದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು.

160ಕ್ಕೂ ಹೆಚ್ಚು ಭಾಷೆಗಳಲ್ಲಿ ಬಿಡುಗಡೆ

ಅವತಾರ್ 2 ಡಿಸೆಂಬರ್ 16 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದ್ದು, ಸಿನಿಮಾವನ್ನು ಬರೋಬ್ಬರಿ 160ಕ್ಕೂ ಹೆಚ್ಚು ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಪ್ರಪಂಚದ ಅತಿದೊಡ್ಡ ಥಿಯೇಟರ್ ಮಾಲೀಕರ ಸಂಘವಾದ ಸಿನಿಮಾಕಾನ್‌ನಲ್ಲಿ ಅವತಾರ್ 2ರ ಟ್ರೈಲರ್‌ ಪ್ರದರ್ಶನಗೊಂಡಿದೆ. ಸದ್ಯ ಈ ಘೋಷಣೆಯೂ ಸಹ ಸಿನಿಮಾ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
Published by:Vasudeva M
First published: