• Home
  • »
  • News
  • »
  • entertainment
  • »
  • Avatar 2 Trailer: ಹಿಟ್‌ಗೇಮ್‌ ನೆನಪಿಸುವ 'ಅವತಾರ್ ದಿ ವೇ ಆಫ್ ವಾಟರ್‌' ಟ್ರೈಲರ್ ರಿಲೀಸ್

Avatar 2 Trailer: ಹಿಟ್‌ಗೇಮ್‌ ನೆನಪಿಸುವ 'ಅವತಾರ್ ದಿ ವೇ ಆಫ್ ವಾಟರ್‌' ಟ್ರೈಲರ್ ರಿಲೀಸ್

ಅವತಾರ್ 2 ಟ್ರೈಲರ್ ರಿಲೀಸ್

ಅವತಾರ್ 2 ಟ್ರೈಲರ್ ರಿಲೀಸ್

ಜೇಮ್ಸ್ ಕ್ಯಾಮರೂನ್ ಮೂಲ ಚಲನಚಿತ್ರವಾದ ಅವತಾರದ ಎರಡನೇ ಭಾಗ 13 ವರ್ಷಗಳ ನಂತರ ಡಿಸೆಂಬರ್ 16 ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಈ ಚಿತ್ರದ ಟ್ರೈಲರ್ ನಮಗೆ ಹಿಟ್ ಗೇಮ್ ಆಫ್ ಥ್ರೋನ್ಸ್ ಮತ್ತು ಇತ್ತೀಚಿನ ಪ್ರಿಕ್ವೆಲ್, ಹೌಸ್ ಆಫ್ ದಿ ಡ್ರ್ಯಾಗನ್ ಸರಣಿಯನ್ನು ನೆನಪಿಸುತ್ತದೆ.

  • Trending Desk
  • Last Updated :
  • Bangalore, India
  • Share this:

ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಅವತಾರ್ 2’ (Avatar 2) ಡಿಸೆಂಬರ್ 16 ರಂದು ತೆರೆಗೆ ಬರಲಿದೆ. ಸದ್ಯ ಚಿತ್ರದ ಅದ್ಭುತ ಟ್ರೈಲರ್ (Trailer) ರಿಲೀಸ್ ಆಗಿದ್ದು, ನೋಡುಗರನ್ನು ಹೊಸ ಲೋಕಕ್ಕೆ ಕರೆದೊಯ್ಯುತ್ತಿದೆ. ಈ ಮೊದಲು ಬಂದ ʼಅವತಾರ್‌ʼ ಚಿತ್ರವನ್ನು ಕಣ್ತುಂಬಿಸಿಕೊಳ್ಳದವರು ಬಹುಶಃ ಯಾರೂ ಇರಲಾರರು. ಚಿತ್ರದಲ್ಲಿನ ಅನಿಮೇಶನ್ ದೃಶ್ಯಾವಳಿಗಳು, ಸುಂದರ ಚಿತ್ರ ಕಥಾ ಹಂದರ, ಪಾತ್ರಗಳ ಅಮೋಘ ಅಭಿನಯ ಚಿತ್ರದಲ್ಲಿ ಅಷ್ಟು ಸೊಗಸಾಗಿ ಮೂಡಿಬಂದಿತ್ತು. ಅಂತೆಯೇ ಇದು ಮಕ್ಕಳು ಸೇರಿದಂತೆ ಹಿರಿಯರನ್ನೂ ರಂಜಿಸಿತ್ತು.


ಚಿತ್ರರಸಿಕರನ್ನು ಮೋಡಿ ಮಾಡುತ್ತಿರುವ ಅವತಾರ್‌ 2 ಟ್ರೈಲರ್


ಅವತಾರ್ ದಿ ವೇ ಆಫ್ ವಾಟರ್‌ನ ಹೊಸ ಟ್ರೇಲರ್ ಮೋಡಿಮಾಡುವ ಟ್ರೈಲರ್. 'ದಿ ವೇ ಆಫ್ ವಾಟರ್' ಸುಲ್ಲಿ ಕುಟುಂಬದ (ಜೇಕ್, ನೈತ್ರಿ ಹಾಗೂ ಅವರ ಮಕ್ಕಳು) ಕಥೆಯ ಜೊತೆಗೆ ಅವರು ಎದುರಿಸಿದ ಸವಾಲುಗಳು, ಪರಸ್ಪರರ ಸುರಕ್ಷತೆಗೆ ಅವರು ಮಾಡಿದ ಸಾಹಸಗಳು, ಜೀವಂತವಾಗಿರಲು ಅವರು ಹೋರಾಡಿದ ಯುದ್ಧಗಳು ಹಾಗೂ ಸಹಿಸಿಕೊಳ್ಳುವ ದುರಂತಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತದೆ.


ಹಿಟ್‌ಗೇಮ್‌ಗಳಂತೆ ಇರೋ ಅವತಾರ್‌ 2 ಚಿತ್ರದ ಟ್ರೈಲರ್


ಜೇಮ್ಸ್ ಕ್ಯಾಮರೂನ್ ಮೂಲ ಚಲನಚಿತ್ರವಾದ ಅವತಾರದ ಎರಡನೇ ಭಾಗ 13 ವರ್ಷಗಳ ನಂತರ ಡಿಸೆಂಬರ್ 16 ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಈ ಚಿತ್ರದ ಟ್ರೈಲರ್ ನಮಗೆ ಹಿಟ್ ಗೇಮ್ ಆಫ್ ಥ್ರೋನ್ಸ್ ಮತ್ತು ಇತ್ತೀಚಿನ ಪ್ರಿಕ್ವೆಲ್, ಹೌಸ್ ಆಫ್ ದಿ ಡ್ರ್ಯಾಗನ್ ಸರಣಿಯನ್ನು ನೆನಪಿಸುತ್ತದೆ. ಏಕೆಂದರೆ ನೀಲಿ ಡ್ರ್ಯಾಗನ್‌ಗಳು ಯುದ್ಧಭೂಮಿಯಲ್ಲಿ ಆಕಾಶವನ್ನು ಆಕ್ರಮಿಸಿ ಸೆಣಸಾಡುವ ದೃಶ್ಯಗಳು ಈ ಚಿತ್ರದಲ್ಲೂ ಸಹ ಇವೆ.


2009 ರಲ್ಲಿ ಅತ್ಯಂತ ಯಶಸ್ವಿ ಚಿತ್ರ ಇದು


ಅವತಾರ್ 2009 ರಲ್ಲಿ ಬಿಡುಗಡೆಯಾಯಿತು ಮತ್ತು ಜಾಗತಿಕವಾಗಿ USD 2.9 ಬಿಲಿಯನ್ ಗಳಿಸುವ ಮೂಲಕ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಚಲನಚಿತ್ರವಾಗಿ ಹೊರಹೊಮ್ಮಿತು. ಮುಂದಿನ ಭಾಗಗಳನ್ನು 2011 ರಲ್ಲಿ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಘೋಷಿಸಿದರು ಆದರೆ ಚಲನಚಿತ್ರವು ಅಂತಿಮವಾಗಿ ಡಿಸೆಂಬರ್ 16 ರಂದು ವಿಶ್ವಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಡಿಸೆಂಬರ್ 16 ರಂದು ಭಾರತದಲ್ಲಿ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಅವತಾರ್ ಮೊದಲ ಭಾಗದಲ್ಲಿ ಪಂಡೋರಾ ಎಂಬ ನಿಗೂಢ ಗ್ರಹವನ್ನೇ ಸೃಷ್ಟಿ ಮಾಡ ಲಾಗಿತ್ತು. ಅಂತೆಯೇ ಈ ಬಾರಿಯೂ ನಿರ್ದೇಶಕರು, ಪ್ರೇಕ್ಷಕರನ್ನು ಸಮುದ್ರದ ಆಳಕ್ಕೆ ಕರೆದುಕೊಂಡು ಹೋಗಲಿದ್ದಾರೆ. ಅವತಾರ್‌ನಲ್ಲಿ ಜೇಕ್ ಸುಲ್ಲಿ ಕಥೆಯನ್ನು ಅತ್ಯದ್ಭುತ ವಾಗಿ ನಿರೂಪಿಸಿದ್ದ ನಿರ್ದೇಶಕರು ಎರಡನೇ ಭಾಗದಲ್ಲಿ ಆತನ ಮಗಳನ್ನು ಪರಿಚಯಿಸಿ ದ್ದಾರೆ.


ಆಧುನಿಕ ತಂತ್ರಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಿದ ಚಿತ್ರತಂಡ


ಅವತಾರ್ ಎರಡನೇ ಭಾಗವನ್ನು ನಿರ್ದೇಶಕರು ಆಧುನಿಕ ತಂತ್ರಜ್ಞಾನದಿಂದ ಕಟ್ಟಿ ಕೊಟ್ಟಿದ್ದಾರೆ, ಕಣ್ಮನ ಸೆಳೆಯುವ ಗ್ರಾಫಿಕ್ಸ್ ಪ್ರೇಕ್ಷಕರನ್ನು ಹೊಸ ಪ್ರಪಂಚಕ್ಕೆ ಕರೆದೊಯ್ಯುತ್ತದೆ. ಅದರಲ್ಲೂ ತ್ರಿಡಿ ತಂತ್ರಜ್ಞಾನದಲ್ಲಿ ಅವತಾರ್ 2 ಕಣ್ತುಂಬಿ ಕೊಳ್ಳುವುದೇ ಹಬ್ಬ. ಈ ಬಾರಿ ಸಮುದ್ರ ಆಳದಲ್ಲಿ ಬಹುತೇಕ ಕಥೆ ನಡೆಯುತ್ತದೆ.


ಇದನ್ನೂ ಓದಿ: Avatar 2 ಟ್ರೈಲರ್​ ರಿಲೀಸ್​, ಅಬ್ಬಬ್ಬಾ.. ಒಂದ್​ ಒಂದು ಫ್ರೇಮ್​ ಅದ್ಭುತ! ಇದು ಸಿನಿಮಾ ಅಲ್ಲ-ಮ್ಯಾಜಿಕ್


ಅದನ್ನು ತೆರೆಯಲ್ಲಿ ನೋಡುವುದು ಇನ್ನೂ ರೋಚಕ ವಾಗಿರುತ್ತದೆ. ಮೊದಲ ಭಾಗದಲ್ಲಿ ವಿಭಿನ್ನ ಪ್ರಪಂಚದಲ್ಲಿ, ವಿಚಿತ್ರ ಜೀವಿಗಳನ್ನುದರ್ಶನ ಮಾಡಿಸಿದ್ದ ಜೇಮ್ಸ್ ಕ್ಯಾಮರೂನ್, ಈ ಬಾರಿ ಅದಕ್ಕಿಂತ ವಿಚಿತ್ರವಾದ ಜೀವಿಗಳನ್ನು ಇಲ್ಲಿ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ.


ಡೈನೋಸಾರ್ ಮಾದರಿಯ ದೈತ್ಯ ಜೀವಿಗಳು ಇಲ್ಲಿವೆ. ಇಲ್ಲಿಯೂ ಬದುಕಿಗಾಗಿ ನಡೆಯುವ ಹೋರಾಟದ ಕಥನ ಹಾಸು ಹೊಕ್ಕಾಗಿದೆ. ಅವತಾರ್ ದಿ ವೇ ಆಫ್ ವಾಟರ್ ಸಿನಿಮಾ ಈ ವರ್ಷದ ಅಂತ್ಯಕ್ಕೆ ಪ್ರೇಕ್ಷಕರ ಮುಂದೆ ಬರಲಿದ್ದು ಆಕ್ಷನ್ ಅಡ್ವೆಂಚರ್ ಜತೆಗೆ ಎಮೋಷನಲ್ ಕಂಟೆಂಟ್ ಅನ್ನು ಹೊತ್ತು ಬರಲಿದೆ. ಸಿಗೋರ್ನಿ ವೇವರ್, ಸ್ಟೀಫನ್ ಲ್ಯಾಂಗ್, ಕ್ಲಿಫ್ ಕರ್ಟಿಸ್, ಜೋಯಲ್ ಡೇವಿಡ್ ಮೂರ್, CCH ಪೌಂಡರ್, ಎಡಿ ಫಾಲ್ಕೊ, ಜೆಮೈನ್ ಕ್ಲೆಮೆಂಟ್ ಮತ್ತು ಕೇಟ್ ವಿನ್ಸ್ಲೆಟ್. ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Published by:Divya D
First published: